Wednesday, February 28, 2018

ಸ್ವವಿವರ

ಸ್ವ ವಿವರ
                  =======

ಹೆಸರು : ಅಪ್ಪಾಜಿ ಎ ಮುಸ್ಟೂರು
ಕಾವ್ಯನಾಮ : ಅಮುಭಾವಜೀವಿ
ಜನ್ಮದಿನಾಂಕ: ೦೧:೦೬:೧೯೭೮
ತಂದೆ : ಅಡಿವಪ್ಪ ಎನ್‌
ತಾಯಿ : ಜಯಮ್ಮ ಹೆಚ್ ಕೆ
ಜನ್ಮಸ್ಥಳ  : ಮುಸ್ಟೂರು, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ .
ವೃತ್ತಿ : ಪ್ರಾಥಮಿಕ ಶಾಲಾ ಶಿಕ್ಷಕ
ಪ್ರವೃತ್ತಿ : ಕಥೆ, ಕವನ ರಚನೆ,ಓದುವುದು,ಮೊಬೈಲ್ ಫೋಟೋಗ್ರಫಿ, ಕಡಿಮೆ ಖರ್ಚಿನಲ್ಲಿ ಪಾಠೋಪಕರಣ ತಯಾರಿಕೆ. ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವುದು.

ಬೆಂಗಳೂರು, ಮೈಸೂರು, ನಾಗಮಂಗಲ, ಮಧುಗಿರಿ, ವಿಜಯಪುರ, ಗದಗ, ರಾಮದುರ್ಗ(ಬೆಳಗಾವಿ) ,ಹಾಸನ, ಹುಣಸೂರು(ಮೈಸೂರು)ಕಡೂರು (ಚಿಕ್ಕ ಮಂಗಳೂರು)ತುಮಕೂರು, ಕೋಡೂರು(ಶಿವಮೊಗ್ಗ),ಜಗಳೂರು, ದಾವಣಗೆರೆ,ಹರಿಹರ,ಸೋಗಿ(ಬಳ್ಳಾರಿ),ರಾಯಚೂರು,ಖಾನಾಹೊಸಹಳ್ಳಿ(ಕೂಡ್ಲಿಗಿ)ಯಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಅಭಿನಂದನೆಗೆ ಪಾತ್ರವಾಗಿರುವೆ.

ದಾವಣಗೆರೆ ಜಿಲ್ಲೆಯ ಪ್ರವಾಸಿ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ "ಹರಿಸಿರಯ್ಯ ಭದ್ರೆಯ" ಎಂಬ ಕವನ ವಾಚನ ಮಾಡಿರುವೆ. ಬೆಳಗಾವಿಯಲ್ಲಿ ನಡೆದ "ವಿಶ್ವ ಕನ್ನಡ ಸಮ್ಮೇಳನ"ದ ಅಂಗವಾಗಿ ನಡೆದ ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಅಭಿನಂದನಾ ಪತ್ರ ಪಡೆದಿರುವೆ.

ನನ್ನ ಕವಿತೆಗಳು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಪ್ರಕಟವಾದ ಕವನ ಸಂಕಲನಗಳಾದ ಬಂಗಾರಪೇಟೆಯಿಂದ ಪ್ರಕಟವಾದ "ಗರಿಬಿಚ್ಚಿದ ಹಕ್ಕಿಗಳು", ಗದಗದಿಂದ ಪ್ರಕಟವಾದ "ಯುವಸಾಹಿತ್ಯ","ಚೆಲುವ ಕನ್ನಡ ನಾಡು","ಹೊಂಬೆಳಕು",ಬೀದರ್ ಇಂದ ಪ್ರಕಟವಾದ  "ಸ್ನೇಹ ಸಾಗರ" ಹಾಗೂ ವಾಟ್ಸಪ್ ಬಳಗದ "ಭಾವದೀಪ್ತಿ", ತುಮಕೂರಿನಿಂದ ಪ್ರಕಟವಾದ "ಹನಿ ಹನಿ ಭಾವಸಿಂಚನ" ಭಾವಗೀತೆ ಸಂಕಲನ, "ನಿಮ್ಮೆಲ್ಲರ ಮಾನಸ" ಮಾಸಿಕ ಬೆಂಗಳೂರು ಇಲ್ಲಿಂದ ಪ್ರಕಟವಾದ "ನೀರೊಳಗಿನ ನೆರಳು" ಹಾಗೂ "ಮಳೆ ಮುಗಿಲ ಮುಗುಳು ನಗೆ" ಕವನ ಸಂಕಲನಲನಗಳಲ್ಲಿ ನನ್ನ ಕವನಗಳು ಪ್ರಕಟಗೊಂಡಿವೆ.

  ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಪ್ ಗಳಲ್ಲಿ ದಿನನಿತ್ಯ ಅನೇಕ ಕವನಗಳನ್ನು ಪ್ರಕಟಿಸಿರುವೆ. ಅಲ್ಲದೆ ವಾಟ್ಸಪಿನಲ್ಲಿ ನಡೆಯುವ ಅನೇಕ ಕವನ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಪ್ರಥಮ ಸ್ಥಾನ ಪಡೆದು ಮೆಚ್ಚುಗೆ ಪಡೆದಿರುವೆ. ಅಂತರ್ಜಾಲ ಪತ್ರಿಕೆಗಳಾದ ಪ್ರತಿಲಿಪಿ, ಅವಧಿ, ಸುರಹೊನ್ನೆ, ಪಂಜು ಪತ್ರಿಕೆಗಳಲ್ಲಿ ನನ್ನ ಕವಿತೆಗಳು ಪ್ರಕಟಗೊಂಡಿವೆ.

    "ಅರಳುವ ಮುನ್ನವೇ" ಎಂಬ ಕವನ ಸಂಕಲನವನ್ನು ಪ್ರಕಟಿಸುವ ಪ್ರಯತ್ನ ನಡೆಯುತ್ತಿದೆ. ಸುಮಾರು ಒಂದೂವರೆ ಸಾವಿರದಷ್ಟು ಕವಿತೆಗಳನ್ನು ಬರೆದಿರುವೆ.

ವಿಳಾಸ : ಅಪ್ಪಾಜಿ ಎ ಮುಸ್ಟೂರು ಶಿಕ್ಷಕರು ಕೇರಾಪ್ ಹೆಚ್ ಎಂ ಶಂಕರಪ್ಪ. ಬ್ಯಾಂಕು ಕಾಲೋನಿ ಚಿತ್ರದುರ್ಗ.
ಫೋನ್ : 8496819281