Saturday, September 28, 2019

ಮಕ್ಕಳನ್ನು ಬೆಳೆಸುವಲ್ಲಿ ತಂದೆ ತಾಯಿಗಳ ಪಾತ್ರ

ಲೇಖನ

*ಮಕ್ಕಳನ್ನು ಬೆಳೆಸುವಲ್ಲಿ ತಂದೆ ತಾಯಿಗಳ ಪಾತ್ರ*

ಮಕ್ಕಳಿಸ್ಕೂಲ್ ಮನೇಲಲ್ವೇ ಎಂಬಂತೆ ಮಕ್ಕಳ ವ್ಯಕ್ತಿತ್ವ ಅರಳಬಲ್ಲದೆ ಎಂದರೆ ಅದು ಮನೆ. ಅದಕ್ಕೆ ಮನೆಯೇ ಮೊದಲ ಶಾಲೆ ಜನನಿ ತಾನೆ ಮೊದಲ ಗುರು ಎಂಬ ಮಾತು ಸಾಮಾನ್ಯವಾಗಿದೆ. ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಮನೆಯ ವಾತಾವರಣ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಅದರಲ್ಲೂ ತಂದೆ ತಾಯಿ ಇಬ್ಬರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಹೆಚ್ಚಿನ ಹೊಣೆಗಾರರಾಗಿರುತ್ತಾರೆ. ಇಲ್ಲಿ ಯಾರೊಬ್ಬರೂ ವಿಮುಖರಾದರು ಕೂಡ ಮಕ್ಕಳ ಭವಿಷ್ಯದ  ಅಭದ್ರವಾಗುತ್ತದೆ. ಅಲ್ಲದೆ ಮಕ್ಕಳು ತಮ್ಮ ಹೆತ್ತವರನ್ನು ಅವಲಂಬಿಸಿರುವುದರಿಂದ ಮತ್ತು ಅನುಕರಣೆ ಮಾಡುವುದರಿಂದ ಅವರ ವ್ಯಕ್ತಿತ್ವ ಉತ್ತಮವಾಗಿರಬೇಕು. ಹೆತ್ತವರ ಭಾಷೆ, ನಡೆನುಡಿ , ಜೀವನಶೈಲಿ , ತಿಳುವಳಿಕೆ, ಪಾಲ್ಗೊಳ್ಳುವಿಕೆ ಎಲ್ಲವೂ ಮಕ್ಕಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

*ತಾಯಿಯ ಪಾತ್ರ* :-
ಮಕ್ಕಳು ಹೆಚ್ಚು ಹೊತ್ತು ತಾಯಿಯ ಮಡಿಲಲ್ಲಿ ಕಳೆಯುತ್ತಾರೆ. ತಾಯಿಯಾದವಳು ತನ್ನ ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು ಹೇಳುತ್ತಾ ಅವರ ಮನಸ್ಸಿನಲ್ಲಿ ಉತ್ತಮ ಅಂಶಗಳನ್ನು ಬಿತ್ತುತ್ತಾ ಹೋಗಬೇಕು. ಜೀಜಾಬಾಯಿ ವಹಿಸಿದ ಜವಾಬ್ದಾರಿಯಿಂದ  ಶಿವಾಜಿಯಂತಹ ಮಹಾನ್ ಶೂರನನ್ನು ರೂಪಿಸಲು ಸಾಧ್ಯವಾಯಿತು. ಹಾಗೆ ತಾಯಿ ತನ್ನ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಈ ಕೆಳಗಿನ ಅಂಶಗಳನ್ನು ಗಮನಿಸುವುದು ಮುಖ್ಯ.
* ತಾಯಿತನ ಮಕ್ಕಳ ಬೇಕು-ಬೇಡಗಳನ್ನು ಅರ್ಥಮಾಡಿಕೊಂಡು ಅವರನ್ನು ಪ್ರೀತಿಯಿಂದ ಬೆಳೆಸಬೇಕು.
* ಮಕ್ಕಳ ವೈಯಕ್ತಿಕ ಸ್ವಚ್ಛತೆಯಿಂದ ಹಿಡಿದು ಅವರ ಜೀವನ ರೂಪಿಸುವಲ್ಲಿ ತಾಯಿಯು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
* ಮಕ್ಕಳಿಗೆ ಒತ್ತಡದ ತಂತ್ರವನ್ನು ಅನುಸರಿಸಿದೆ ಅಕ್ಕರೆಯಿಂದ ಮೆದು ಮಾತುಗಳಿಂದ ಅವರನ್ನು ಪ್ರೋತ್ಸಾಹಿಸಬೇಕು.
* ಕಾಲಕ್ಕೆ ಮಕ್ಕಳ ಹಸಿವನ್ನು ನೀಗಿಸುವ ಜೊತೆಗೆ ಜ್ಞಾನದ ಹಸಿವನ್ನು ನೀಗಿಸುವ ಗಮನಹರಿಸಬೇಕು.
* ತನ್ನ ಕಷ್ಟ ನೋವು ಹತಾಶೆ ಅಸಹಾಯಕತೆಗಳನ್ನು ಮಕ್ಕಳ ಮುಂದೆ ಪ್ರದರ್ಶಿಸಿದೆ ಗೆಲ್ಲುವ ಛಲವನ್ನು ತುಂಬಬೇಕು.
* ಮಕ್ಕಳ ಬಗ್ಗೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೆ ಅವರ ಶಕ್ತಿಯನುಸಾರ ಬೆಳೆಯುವಂತೆ ನೋಡಿಕೊಳ್ಳಬೇಕು.
* ತನ್ನಿಂದ ಸಾಧ್ಯವಾಗದ್ದನ್ನು ನೀವು ಸಾಧ್ಯ ಮಾಡಲೇಬೇಕೆಂದು ಒತ್ತಡ ಹೇರಬಾರದು.
* ತನ್ನ ಬಗ್ಗೆ ಹಾಗೂ ಇತರರ ಬಗ್ಗೆ ಗೌರವವನ್ನು ಬೆಳೆಸುವ ಕೊಳ್ಳುವಂತೆ ಮಗುವಿಗೆ ಮಾರ್ಗದರ್ಶನ ನೀಡಬೇಕು.

*ತಂದೆಯ ಪಾತ್ರ* :-

ತಂದೆ ಮಕ್ಕಳ ಭವಿಷ್ಯದ ಆಧಾರಸ್ತಂಭ. ಆದರೆ ಮಕ್ಕಳು ತಂದೆಯ ಬಳಿ ಬರುವುದು ಮುಕ್ತವಾಗಿ ಹಂಚಿಕೊಳ್ಳುವುದು ಕಡಿಮೆ. ಹಾಗಾಗಿ ತಂದೆಯಾದವನು ತನ್ನ ಮಕ್ಕಳ ಬೆಳವಣಿಗೆಯ ಬಗ್ಗೆ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ.

* ಮಕ್ಕಳಿಗೆ ಉತ್ತಮವಾದ ಅವಕಾಶಗಳನ್ನು ಒದಗಿಸಿ ಕೊಡಬೇಕಾಗುತ್ತದೆ.
* ದುಶ್ಚಟಗಳ ದಾಸನಾದ ಮಕ್ಕಳ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಬೇಕು.
* ಮಕ್ಕಳ ಬೇಡಿಕೆಗಳನ್ನು ಅಗತ್ಯಕ್ಕನುಸಾರವಾಗಿ ಪೂರೈಸುತ್ತಾ ಹೊರಗಿನ ಪ್ರಪಂಚದ ಅರಿವನ್ನು ಮೂಡಿಸುವುದು.
* ಮಕ್ಕಳ ಮನಸ್ಸಿನಲ್ಲಿ ಭಯ ಮೂಡಿಸಿದೆ ಅಂತರ್ಗತ ಪ್ರೀತಿ ಅನಾವರಣಕ್ಕೆ ಅವಕಾಶ ನೀಡಬೇಕು.
* ಸಾಧಕರ ದಾರ್ಶನಿಕರ ಕಥೆಗಳನ್ನು ಹೇಳುವುದು ಮತ್ತು ಪುಸ್ತಕಗಳನ್ನು ತಂದು ಓದಿಸುವುದನ್ನು ರೂಢಿಸಬೇಕು.
* ದುಡಿಯುವೆ ನೆಂಬ ಅಹಂಕಾರಕ್ಕಿಂತ  ಹೊಣೆಗಾರಿಕೆ ಮಹತ್ವವನ್ನು ಅರಿತು ಕರ್ತವ್ಯ ನಿಭಾಯಿಸಬೇಕು.
,* ಮಕ್ಕಳಿಗೆ ಒಳ್ಳೆಯ ಸ್ನೇಹಿತ ಮಾರ್ಗದರ್ಶಕನಾಗಿರಬೇಕು.

      ತಂದೆ ತಾಯಿ ಇಬ್ಬರು ಎರಡು ಕಣ್ಣುಗಳಾಗಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕು. ಎತ್ತು ಏರಿಗೆ ಕೋಣ ನೀರಿಗೆ ಎಂಬಂತಾಗಿದೆ ಸಮಭಾವದಿ  ಹೊಣೆಗಾರಿಕೆಯನ್ನು ಹೊತ್ತು ಮಕ್ಕಳನ್ನು ಬೆಳೆಸಬೇಕು

*ತಂದೆ-ತಾಯಿಗಳ ಜಂಟಿ ಪಾತ್ರ* :-

* ಮಕ್ಕಳ ಎದುರುಗಡೆ ಪರಸ್ಪರ ಜಗಳವಾಡುವುದು ಅಸಹಕಾರ ತೋರಿಸುವುದನ್ನು ಮಾಡಬಾರದು.
* ಹೊಣೆಗಾರಿಕೆಯ ಪರಭಾರೆ ಮಾಡಬಾರದು.
* ತಮ್ಮ ಪಾಲಿನ ಕರ್ತವ್ಯವನ್ನು ತುಂಬಾ ಪ್ರಾಮಾಣಿಕತೆಯಿಂದ ನಿರ್ವಹಿಸುವುದು.
* ವೈಯಕ್ತಿಕ ಬಿನ್ನಬಿಪ್ರಾಯ ಏನೇ ಇದ್ದರೂ ಮಕ್ಕಳ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು.
* ಮಕ್ಕಳಲ್ಲಿ ತಾರತಮ್ಯ ಮಾಡದೆ ಸಮಾನ ಪ್ರೀತಿಯನ್ನು ಹಂಚಬೇಕು.
* ನಮ್ಮ ಸಮಾಜ ಸಂಸ್ಕೃತಿ ಸಂಪ್ರದಾಯ ವೈಜ್ಞಾನಿಕ ಅನ್ವೇಷಣೆಗಳ ಬಗ್ಗೆ ಮಕ್ಕಳಿಗೆ ಸೂಕ್ತ ತಿಳುವಳಿಕೆ ನೀಡಬೇಕು.
* ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಇಬ್ಬರೂ ಸಮ ಪಾಲುದಾರರು ಎಂಬುದನ್ನು ಅರಿತು ಅದರಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡದೆ ಇಬ್ಬರು ಮಕ್ಕಳ ಭವಿಷ್ಯವನ್ನು ರೂಪಿಸಬೇಕು.

ಒಟ್ಟಿನಲ್ಲಿ ಮಗುವಿನ ಉತ್ತಮ ಭವಿಷ್ಯ ರೂಪಿಸುವಲ್ಲಿ ವ್ಯಕ್ತಿತ್ವವನ್ನು ಕಲ್ಪಿಸಿಕೊಡುವಲ್ಲಿ ತಂದೆ-ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾವು ಬದುಕುತ್ತಿರುವುದೇ ಮಕ್ಕಳಿಗಾಗಿ ಎಂದ ಮೇಲೆ ಅವರನ್ನು ಬೆಳೆಸುವಲ್ಲಿಯೂ ಆ ಕಾಳಜಿಯನ್ನು ವಹಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ  ಹೊಣೆಗಾರಿಕೆ ಇಬ್ಬರದ್ದೂ ಆಗಿರುತ್ತದೆ. ಏನೇ ಸಮಸ್ಯೆಗಳಿದ್ದರೂ ಯಾವುದೇ ಕೊರತೆಗಳಾಗದಂತೆ ಎಚ್ಚರವಹಿಸಬೇಕು. ಅನುಕಂಪ ಅಸಹಾಯಕತೆಗಳನ್ನು ಬಂಡವಾಳ ವಹಿಸಿಕೊಳ್ಳದೆ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಹೀಗಾದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಮಕ್ಕಳು ಉತ್ತಮರಾದರೆ ತಂದೆತಾಯಿಗಳ  ಶ್ರಮ ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲಾ ಪೋಷಕರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ತಮ್ಮ ತ್ಯಾಗವನ್ನು ಸಾರ್ಥಕಪಡಿಸಿಕೊಳ್ಳಬೇಕು ಆಗಿದೆ.

ಅಮು ಭಾವಜೀವಿ

No comments:

Post a Comment