ಸ್ತ್ರೀ ಶೋಷಣೆಗೆ ಕೊನೆಯಿಲ್ಲವೇ ?
ಎಲ್ಲಿ ಸ್ತ್ರೀಯರನ್ನು ಗೌರವದಿಂದ ನೋಡುತ್ತಾರೋ, ಅಲ್ಲಿ ದೇವರು ನೆಲೆಸಿರುತ್ತಾನೆ ಎಂದು ಬಲವಾಗಿ ನಂಬಿರುವ ನಮ್ಮ ಭಾರತದ ಸಂಸ್ಕೃತಿ ಸ್ತ್ರೀಕುಲದ ಮುಕುಟಮಣಿಯಾದ ತಾಯಿಯಲ್ಲಿ ದೇವರು ತೋರಿದ ಸಂಸ್ಕೃತಿ. ಭಾರತದ ಈ ನಿಲುವಿಗೆ ಜನರು ಕೂಡ ಸಮ್ಮತಿ ಸೂಚಿಸಿ ಇತ್ತೀಚಿನ ದಿನಗಳಲ್ಲಿ ಭಾರತ ಸಂಸ್ಕೃತಿ ಆಚಾರ-ವಿಚಾರ ವೇಷಭೂಷಣಗಳಿಗೆ ಮಾರುಹೋಗಿದೆ . ಇಂತಹ ಮಹೋನ್ನತ ಸಂಸ್ಕೃತಿಯ ನೆಲದಲ್ಲಿ ಅದೇ ಸ್ತ್ರೀಯನ್ನು ಶೋಷಣೆ ಮಾಡುತ್ತಿರುವುದು ಈ ನಾಡಿನ ಸಂಸ್ಕೃತಿಗೆ ಕಪ್ಪುಮಸಿ ರಾಚುವ ಕೆಲಸ. ಅದು ಇಂಥ ಪ್ರಜ್ಞಾವಂತ ಸಮಾಜ ಅಂತ ಅಮಾನವೀಯ ಕೃತ್ಯ ಎಸಗಿರುವುದು ನಿಜಕ್ಕೂ ತಗ್ಗಿಸುವಂತಹ ವಿಚಾರ.
ಪ್ರಕೃತಿಯಲ್ಲಿ ಮಾನವ ಆವತರಿಸಿರುವುದು ಅದನ್ನು ಅನುಭವಿಸಲು ಅಲ್ಲ, ಅದನ್ನು ಆಳಲು ಎಂಬ ವಾಣಿಯನ್ನು ಗಮನಿಸಿದರೆ ಮಾನವಕುಲಕ್ಕೆ ಸಿಕ್ಕಿರುವ ಅಂತಹ ಮಹೋನ್ನತ ಸ್ಥಾನ ಇಂದಿನ ನಾಗರೀಕ ಮಾನವನ ಪೈಶಾಚಿಕ ವರ್ತನೆಗಳಿಂದ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಆಗಲೇ ಹೇಳಿದಂತೆ ತಾಯಿಯನ್ನು ದೇವರೆಂದು ಪೂಜಿಸುವ ಈ ನೆಲದಲ್ಲಿ ಸ್ತ್ರೀಯರನ್ನು ಶೋಷಿಸುವ, ಅತ್ಯಾಚಾರವೆಸಗುವ ಹೇಯ ಕೃತ್ಯಗಳನ್ನು ನಡೆಸುತ್ತಿರುವುದು ತುಂಬಾ ಖೇದದ ಸಂಗತಿ.
ಶತಮಾನಗಳು ಗತಿಸಿದರು , ಎಲ್ಲ ರಂಗದಲ್ಲಿ ಸ್ತ್ರೀ ತಾನು ಗಂಡಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟರು ಪುರುಷ ಪ್ರಧಾನ ಸಮಾಜದಲ್ಲಿ ಅವಳಿಗಿನ್ನೂ ಸೂಕ್ತ ಸ್ವಾತಂತ್ರ್ಯ ಸಿಕ್ಕಿಲ್ಲ. ಕ್ರೂರ ಸಮಾಜದಲ್ಲಿ ಅವರು ಪ್ರತಿಕ್ಷಣವೂ ಭಯದಿಂದ ಬದುಕುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಚಾರವಾಗಿದೆ. ಹೆಣ್ಣಿಂದಲೇ ಹುಟ್ಟಿ ಬಂದವರೆಲ್ಲ ಕುಲವನ್ನು ಈರೀತಿ ಶೋಷಣೆಗೆ ಗುರಿ ಪಡಿಸುವುದನ್ನು ನೋಡಿದರೆ ನಿಜಕ್ಕೂ ಅಂತಹವರಿಗೆ ಕ್ಷಮೆ ಇರದ ಶಿಕ್ಷೆಯನ್ನು ನೀಡಬೇಕೆಂದು ಅನಿಸುತ್ತದೆ. ಆದರೆ ಆ ಶಿಕ್ಷೆಯನ್ನು ನೀಡುವವರು ಯಾರು? ಕಾನೂನು ನಂಬಿದರೆ ಇಂದು ಆ ಕೆಲಸ ಆಗುವುದು ಸಾಧ್ಯವಿಲ್ಲ ಎನಿಸುತ್ತದೆ. ಏಕೆಂದರೆ ನಮ್ಮ ಕಾನೂನಿನ ಪ್ರಕ್ರಿಯೆ ತುಂಬಾ ನಿಧಾನ. ಅಷ್ಟರೊಳಗೆ ಆಗಲೇ ಆರೋಪಿ ಹಣ ಅಧಿಕಾರ ರಾಜಕೀಯ ಪ್ರಭಾವ ಬಳಸಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅನುವು ಆಗುವುದೇ ವಿನಹ ಸಂತ್ರಸ್ತರಿಗೆ ನ್ಯಾಯ ದೊರಕುವುದು ಕಷ್ಟಸಾಧ್ಯ.
ಇಂತಹ ಕೃತ್ಯಗಳು ಎಸಗದಂತೆ ಮುಂಜಾಗ್ರತೆಯ ಬಯಸಬೇಕು. ಅಲ್ಲದೆ ಇಂತಹ ಸಂತ್ರಸ್ತರಿಗೆ ಪ್ರಜ್ಞಾವಂತ ನಾಗರೀಕರು, ಸ್ತ್ರೀ ಸಂಘಟನೆಗಳು ಬೆಂಬಲವಾಗಿ ನಿಂತು ಅವರಿಗೆ ನ್ಯಾಯ ದೊರಕಿಸಿ ಕೊಡಬೇಕಾಗುತ್ತದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ ದುಷ್ಕರ್ಮಿಗಳಿಗೆ ಸರಿಯಾದ ಪಾಠ ಕಲಿಸಲು ಪ್ರತಿಯೊಬ್ಬರು ಪಣತೊಟ್ಟು ಹೋರಾಟಕ್ಕಿಳಿದರೆ ಇಂತಹ ಶೋಷಣೆಗಳಿಗೆ
ಮುಕ್ತಿ ಸಿಗಬಹುದೇನೋ.
ಕಳೆದ ಶತಮಾನದಲ್ಲಿ ವರದಕ್ಷಿಣೆ ಸಾವಿನಿಂದ ತತ್ತರಿಸಿ ಹೋಗಿದ್ದ ಸ್ತ್ರೀ ಕುಲ ಇಂದಿನ ಆಧುನಿಕ ಯುಗದಲ್ಲಿ ಅದಕ್ಕಿಂತಲೂ ಭಿನ್ನವಾದ ಜೀವಂತ ಶವವಾಗಿಸುವ ಅಥವಾ ಜೀವವನ್ನೇ ತೆಗೆಯುವ ಕೃತ್ಯಗಳು ನಡೆಯುತ್ತಿವೆ. ಅದಕ್ಕೆ ಉದಾಹರಣೆಗಳನ್ನು ದೆಹಲಿಯ ನಿರ್ಭಯಳಿಂದ ಹಿಡಿದು ಇತ್ತೀಚಿನ ದಲಿತ ಯುವತಿಯ ಘಟನೆಗಳನ್ನು ನೋಡಿದಾಗ ಈ ಸಮಸ್ಯೆಯ ಗಂಭೀರತೆ ಅರ್ಥವಾಗುತ್ತದೆ.
ಹೆಣ್ಣು ಸಕಲ ಜೀವರಾಶಿಯ ತಾಯಿಬೇರು. ಹೆಣ್ಣಿಗಾಗಿ ಈ ಶತಮಾನದ ಇತಿಹಾಸಗಳಲ್ಲಿ ಏನೆಲ್ಲ ಘಟನೆಗಳು ನಡೆದು ಹೋಗಿವೆ. ಆದರೆ ಕರುಣಮೂರ್ತಿ ಸಹನಶೀಲ ಹೆಣ್ಣು ತನ್ನ ಮೇಲಾದ ದೌರ್ಜನ್ಯಗಳನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ಹಿಂಜರಿಯುತ್ತಾಳೆ. ಕಾರಣ ತನ್ನ ಮೇಲಾದ ದೌರ್ಜನ್ಯವನ್ನು ಮತ್ತದೇ ಸಮಾಜ ಹೀನ ದೃಷ್ಟಿಯಿಂದ ನೋಡೀತು ಎಂಬ ಭಯ. ನಿನ್ನಿಂದ ಇಂದಿನವರೆಗೂ ಈ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲ. ಪುರುಷ ಪ್ರಧಾನ ಸಮಾಜದ ಹಿಡಿತಕ್ಕೆ ಸಿಕ್ಕ ಸ್ತ್ರೀಕುಲ ನಿಜಕ್ಕೂ ಶೋಚನೀಯ ಸ್ಥಿತಿ ತಲುಪುವುದರಲ್ಲಿ ಎರಡು ಮಾತಿಲ್ಲ. ಆಗಲೇ ಹೇಳಿದ ಹಾಗೆ ಹಿಂದೂ ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ಸಬಲಳಾಗುತ್ತಾ ಇದ್ದಾಳೆ. ಮನೆಯಲ್ಲಿ ಮಕ್ಕಳನ್ನು ಹೆತ್ತು ಹೊತ್ತು ಸಲವುದರಿಂದ ಹಿಡಿದು ಪುರುಷರಿರುವ ಎಲ್ಲಾ ಕ್ಷೇತ್ರಗಳಲ್ಲೂ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಾ ತಾನು ಆರ್ಥಿಕವಾಗಿ ಸಾಮಾಜಿಕವಾಗಿ ಸಾಂಸಾರಿಕವಾಗಿ ಸಮರ್ಥರು ಎಂಬುದನ್ನು ತೋರ್ಪಡಿಸಿದರು ಅಲ್ಲೂ ಅವಳಿಗೆ ಈ ಶೋಷಣೆಯ ಪಿಡುಗು ತಪ್ಪಿದ್ದಲ್ಲ. ಇದನ್ನು ನಿವಾರಿಸಬೇಕಾದರೆ ನಮ್ಮ ಕಾನೂನು ಇನ್ನಷ್ಟು ಬಿಗಿಯಾಗಬೇಕು. ಶೋಷಿಸುವವರನ್ನು ತಕ್ಷಣ ಹಿಡಿದು ಶಿಕ್ಷಿಸುವಂತೆ, ಮತ್ತೆ ಇನ್ನೊಬ್ಬರು ಇಂತಹ ಕೃತ್ಯಗಳನ್ನು ಎಸಗದಂತೆ ಎಚ್ಚರಿಕೆಯ ಗಂಟೆಯಾಗಿ ಕಾನೂನು ತನ್ನ ತೀರ್ಪನ್ನು ನೀಡಬೇಕಾಗಿದೆ.
ಈ ನಿಟ್ಟಿನಲ್ಲಿ ಸಮಾಜ ಸಂಘ ಸಂಸ್ಥೆಗಳು ಸರ್ಕಾರ ಕಾನೂನು ಎಲ್ಲವೂ ಎಚ್ಚೆತ್ತುಕೊಂಡು ಪಾರದರ್ಶಕವಾಗಿ ಸತ್ಯದ ತಳಹದಿಯಲ್ಲೇ ಅಂತಹ ಕೃತ್ಯ ಎಸಗಿದವರನ್ನು ಶಿಕ್ಷಿಸುವ ಮೂಲಕ ಎಲ್ಲಿ ನಲುಗುತ್ತಿರುವ ದೇಗುಲವನ್ನು ರಕ್ಷಿಸಿದ್ದ ಆದರೆ ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳುವುದು ಎಂಬುದನ್ನು ಸಾಬೀತುಪಡಿಸುವಲ್ಲಿ ಎರಡು ಮಾತಿಲ್ಲ.
*ಅಮು ಭಾವಜೀವಿ*
No comments:
Post a Comment