Saturday, September 28, 2019

ಕವಿತೆ

*ಮನದ ಮಾತುಗಳ ಹೇಳಿಬಿಡು*

ಏಕೆ ನೋಯುವೆ ಹೆಗಲಾಗಿರುವೆ
ಈ ಪಯಣದುದ್ದಕ್ಕೂ ನಾನಿರುವೆ

ಯಾರಿಗಿಲ್ಲ ಇಲ್ಲಿ ನೋವು ಸಾವು
ಎಲ್ಲಾ ಸಹಿಸಿ ಬಾಳಬೇಕು ನಾವು
ಇಂದು ನಿನಗೆ ನಾಳೆ ನನಗೆ
ಎಲ್ಲಾ ಇಲ್ಲಿ ನಾವು ಪಡೆದು ಬಂದಂತೆ

ಹೂವು ನಗುತ ಇದ್ದರೂ ಕೂಡ
ಸಂಜೆಗೆ ಬಾಡುವುದಿಲ್ಲವೇ
ಹಾಗೆ ನಮ್ಮ ಬದುಕು
ಇಂದಿನ ನೋವು ನಾಳೆಗಿರದು

ಒಂಟಿಯಲ್ಲ ನೀನು ಇಲ್ಲಿ
ಎಲ್ಲರೂ ತಬ್ಬಲಿಗಳೇ ಬಾಳಲಿ
ಹಂಚಿಕೊಂಡರೆ ಎಲ್ಲಾ ನಮ್ಮವರು
ಮುಚ್ಚಿಟ್ಟರೆ ಅವರೇ ಹೊರಗಿನವರು

ಊರಿಗೊಂದು ಮನೆಕಟ್ಟಲಾಗದು
ಮನಸುಗಳ ನಾವು ಮುಟ್ಟಬೇಕು
ನಾಳೆಯ ಬದುಕಿಗೆ ಹೆದರದೆ
ಇಂದಿನ ಖುಷಿಯ ಸಂಭ್ರಮಿಸಬೇಕು

ಕೈಯ ಮೇಲೆ ಕೈಯಿಟ್ಟು
ಬಾಷೆ ಕೊಡು ನೋಯುವುದಿಲ್ಲೆಂದು
ಮನದ ಮಾತುಗಳ ಹೇಳಿಬಿಡು
ಕೇಳುವ ಕಿವಿ ಬೇಸರಿಸದು ಎಂದೂ

0459ಪಿಎಂ25092019

*ಅಮು ಭಾವಜೀವಿ*

No comments:

Post a Comment