Tuesday, July 25, 2017

ಕವಿತೆಗಳು

[11/07 9:19 am] ಮೃತ್ಯುಂಜಯ ಬಾ ಪಾಟೀಲ್ ಬೈಲಹೊಂಗಲ: 💐⛳ಶುಭೋದಯ*⛳💐

*ಸ್ಪೂರ್ತಿಯ ಪಡೆಯೋಣ*

ಚಂದ್ರನಿಗತ್ತ ಮುಳುಗುವ ತವಕ
ಸೂರ್ಯನಿಗಿತ್ತ ಬೆಳಗುವ ಪುಳಕ
ಇಬ್ಬರ ಬೆಳಕಿನೊಲವ ಪಡೆದ ಭೂಮಿಗೆ
ಕಾಡದು ಕತ್ತಲಿನ ಅಂಜಿಕೆ

ಇರುಳೆಲ್ಲ ಬೆಳದಿಂಗಳು ಚೆಲ್ಲಿ
ದಣಿದ ಚಂದ್ರನಿಗೆ ವಿಶ್ರಾಂತಿ
ರಾತ್ರಿ ಪೂರ ಸವಿನಿದ್ರೆಗೈದ
ಸೂರ್ಯನಲಿ ಹೊಮ್ಮಿತು ಕಾಂತಿ

ತರುಲತೆಗಳ ತಲೆ ನೇವರಿಸಿ
ನೇಸರ ಬಂದನು ಕತ್ತಲೆ ಸರಿಸಿ
ಖಗಮೃಗಗಳ ಮೈದಡವಿ
ಚೇತನ ತುಂಬಿದ ದಿನವಿಡೀ

ಮುಂಜಾನೆಯ ಮಂಜಿನ ತೆರೆ
ಸರಿಸುತ ಮೂಡಿದ ಮೂಡಣದಿ
ಹಗಲಿನ ಹೊದಿಕೆ ಹೊದ್ದು ನಿದ್ರೆಗೆ
ಜಾರಿದ ಶಶಿ ಪಡುವಣದಿ

ಎಂತಹ ಸುಂದರ ಕ್ಷಣವಿದು
ಮುಂಜಾನೆಯು ಹೊಸತನದಿ ಬೀಗಿಹುದು
ಏಳಿರಿ ಎದ್ದೇಳಿರಿ ಸವಿಯೋಣ
ರವಿಚಂದ್ರರ ಸ್ಪೂರ್ತಿಯ ಪಡೆಯೋಣ

ಈ ಪದ್ಯರಚಿಸಿದ *ಅಮುಭಾವಜೀವಿ*ಯವರಿಗೆ ಅಭಿನಂದನೆಗಳು
🤝🤝🤝🤝🤝🤝🤝🤝
ಮೃತ್ಯುಂಜಯ ಬಾ. ಪಾಟೀಲ
ಚನ್ನಮ್ಮ ಪ್ರಿಂಟರ್ಸ
ಕಡಬಿ ಗಲ್ಲಿˌ ˌ ಬೈಲಹೊಂಗಲ
ಬೆಳಗಾವಿ ಜಿಲ್ಲೆ (ಕಿತ್ತೂರ ನಾಡು)
ಮೋ : 09448102066, 09590233113
[11/07 12:18 pm] 🌺ಅಮುಭಾವಜೀವಿ🌼: *ಎಲ್ಲ ಬರಿದಾಗುವ ಮುನ್ನ*

ಕರಿನೆಲವು ಬಾಯಾರಿ /
ಬಿರಿದು ಕರೆದಿದೆ
ಬಾ ಮಳೆಯೇ /
ಈ ಮುನಿಸೇತಕೆ

ಎಷ್ಟೆಂದು ಸಹಿಸುವುದು/
ಒಡಲು ಬರಿದಾಗಿಹುದು
ಕಡಲಿಂದ ಮೇಲೇರಿ /
ಮೇಘಗಳ ಸವಾರಿಯಲಿ
ಮರುಮಾತನಾಡದೆ ಬಂದು ಬಿಡು
ಈ ಭೀಕರತೆಯ ಕಳೆದು ಬಿಡು

ನೆತ್ತಿ  ಒಣಗಿದ ಮರದಿ ಕೂತು
ಹಕ್ಕಿ ರೋಧಿಸುತಿದೆ ಬಿಕ್ಕಿ ಬಿಕ್ಕಿ
ಗುಟುಕರಿಸಲು ಹನಿ ನೀರಿಲ್ಲ
ಕಟುಕರ ಪಾಲಾದವು ಜಾನುವಾರುಗಳೆಲ್ಲ
ಕನಿಕರಿಸು ಮಳೆ ಸುರಿಸು
ಎಲ್ಲ ಬರಿದಾಗುವ ಮುನ್ನ

ರೈತರ ಜೀವವ  ಉಳಿಸು
ಅವರ ಶ್ರಮಕೆ ಫಲವನು ಕೊಡಿಸು
ಬೇಡ ಬೇಡ  ಈ ಕಠೋರ ಮುನಿಸು
ಬರವ ನೀಗಿ ನೀರು ದಯಪಾಲಿಸು
ಬರದ ಭೀಕರತೆಯ ತಪ್ಪಿಸು
ಹರನ ಜಟೆಯಿಂದ ಗಂಗೆಯನು ಹರಿಸು

0540ಪಿಎಂ10072017
*ಅಮುಭಾವಜೀವಿ*

[11/07 6:01 pm] 🌺ಅಮುಭಾವಜೀವಿ🌼: *ಸಂಜೆ ಹಾಯ್ಕುಗಳು*

*ಈ ಸಂಜೆಗೇಕೋ*
*ನೀನಿರದ ಬೇಸರ*
*ಸಿಟ್ಟು ತಂದಿದೆ*

*ತಾರೆಗಳೆಲ್ಲ*
*ಬೆಳ್ದಿಂಗಳ ರಾತ್ರಿಗೆ*
*ಮಬ್ಬಾಗಿಹವು*

*ತಂಗಾಳಿ ತೀಡಿ*
*ಇರುಳ  ಏಕಾಂತಕೆ*
*ಭಂಗ ತಂದಿದೆ*

*ನಿಶಾಚರಿಯ*
*ನಿಗೂಢ ಪಯಣವು*
*ಘಾಸಿಗೊಂಡಿದೆ*

*ಹುಣ್ಣಿಮೆ ಚಂದ್ರ*
*ಮೋಡದ ಮರೆಯಲಿ*
*ಅವಿತುಕೊಂಡ*

*ಮುಂಜಾನೆ ತಾನು*
*ಏನೂ  ಆಗಿಲ್ಲವೆಂದು*
*ಬಯಲಾಗಿಸ್ತು*

0556ಪಿಎಂ11072017
*ಅಮುಭಾವಜೀವಿ*

*ಶುಭಸಂಜೆ ಸ್ನೇಹಿತರೇ* 💐☕🍵
[12/07 7:38 am] 🌺ಅಮುಭಾವಜೀವಿ🌼: *ಆಯನದ ಪಯಣದಲ್ಲಿ*

ನೀಲ ಬಾನಿನ ತುಂಬಾ
ಬೆಳಕಿನಾರಂಭ
ಮುಂಜಾನೆ ಮೂಡುವ ಸಮಯ
ಎಷ್ಟೊಂದು ವಿಸ್ಮಯ /ಪ/

ಬೆಳ್ಮುಗಿಲ ನಡುವಿಂದ
ಇಣುಕೋ ರವಿ ಚಂದ
ಹೊನ್ನಕಿರಣಕೆ ಅರಳಿದ
ಹೂವು ಚೆಂದ
ಆಹಾ! ಎಂಥ ಸೊಗಸು
ಪ್ರಕೃತಿಯ ಮನಸು//  /೧/

ಆಯನದ ಪಯಣದಲ್ಲಿ
ಬದಲಾಗೋ ಋತುಗಳಲ್ಲಿ
ಬದುಕಿನ ರಥ ಸಾಗುತಿದೆ
ಬವಣೆಗಳ ಹವಣಿಕೆಯಲ್ಲಿ
ಕಷ್ಟಗಳ ಕಡುರಾತ್ರಿಯಲ್ಲಿ
ಗೆದ್ದು ಬಂದು ಬೀಗುತಿದೆ ||   /೨/

ವರ್ಷವೆಂಬುದು
ಹರ್ಷವಿಲ್ಲದೆ ಕಳೆದು
ಬರದ ಛಾಯೆಯಡಿ ಸಿಲುಕಿತು
ವರ್ಷಧಾರೆಯ
ಸ್ಪರ್ಶಕಾಗಿ ನಿತ್ಯ ಇಲ್ಲಿ
ಜಗ ಕಾದು ಕುಳಿತಿತು /೩/

0728ಎಎಂ12072017
*ಅಮುಭಾವಜೀವಿ*

*ಶುಭೋದಯ ಸ್ನೇಹಿತರೇ*
[12/07 4:57 pm] 🌺ಅಮುಭಾವಜೀವಿ🌼: *ನೀನಿರದ ಸಂಜೆ*

ನೀನಿರದ ಈ ಸಂಜೆ/ಭಾವವಿಲ್ಲದ ಬಂಜೆ
ಬೇಸರವು ಬೆದರಿಸುತಿದೆ /ಇರುಳಾವರಿಸಿದಂತೆ

ಸಂಭ್ರಮದಿ ಹಾರುತ ಬಾನಲಿ
ಹಕ್ಕಿಗಳು ಮರಳುತಿವೆ ಗೂಡಿಗೆ
ಸವಿ ಭಾವವು ತಾ ಮೂಡದೆ
ಕಾಡಿಸುತಿದೆ ಬಾಳ ಹಾಡಿಗೆ 
ಮೋಡವಿರದ ಬಾನೊಳು ರಂಗೇಕೆ
ನೀನಿಲ್ಲದ  ಈ ಬದುಕ ಹಂಗೇಕೆ /೧/

ನೋಡು ಬಾನೊಳು ಚುಕ್ಕಿ ಚಂದ್ರಮ
ನಮಗೆಂದು ಆಗುವುದೋ ಆ ಸಂಗಮ
ತಂಗಾಳಿ ಬೀಸುತಿದೆ ತಂಬೆಲರು ತೂಗುತಿದೆ
ಎದೆಯ ಭಾವವು ಬಿರಿಯುತಿದೆ
ಬೆಳದಿಂಗಳಂತಾದರೂ ಬಾ ಒಲವೆ
ನಿನಗಾಗಿ ನಾನೀ ಇರುಳ ಗೆಲುವೆ  /೨/

ದಿಕ್ಕೆಟ್ಟು ಅಲೆಯುತಿಹೆ ದಿಕ್ಕು ಕಾಣದೆ
ದಾರಿ ನೂರಿವೆ ಸಾರಿ ಕೂಗಿವೆ
ಯಾವುದರಲಿ ನಡೆಯಲಿ ನಿನ್ನ ಸೇರಲು
ಕಾರಿರುಳು ಮನ ಮರುಳು
ತೂಗುತಿವೆ ಗಿಡ ಮರಗಳು
ಮೂಡಿಸುತ ನನ್ನೊಳಗೆ ದಿಗಿಲು /೩/

೦೬೪೫ಪಿಎಂ೧೦೦೭೨೦೧೭
*ಅಮುಭಾವಜೀವಿ*

ಶುಭಸಂಜೆ ಸ್ನೇಹಿತರೇ
[15/07 3:34 am] 🌺ಅಮುಭಾವಜೀವಿ🌼: *ಮಾಸದ ನೆನಪು*

ವಸಂತ ಚೆಲುವಿನ ಚಿತ್ತಾರ
ಕೋಗಿಲೆ ಹಾಡಿನ ಸುಸ್ವರ
ನಿನ್ನ ನೆನಪು ಮಧುರ
ನೀ ನನ್ನೊಲವಿನ ಅಂಬರ

ಚಿಗುರಿದ ಎಲೆಎಲೆಯ ಮೇಲೆ
ನೀ ಬರೆದ ಒಲವಿನ ಓಲೆ
ಹೊಂಗೆನೆರಳ ತಂಪಿನಂತೆ
ಗರಿಗೆದರಿದ ಭಾವದಲೆ
ಜುಳುಜುಳು ಹರಿದಾಡಿತು
ಬತ್ತದ ಭಾವದೊರತೆಯಂತೆ /೧/

ಈ ಸಂಜೆಯ ಹೊಂಬಣ್ಣವು
ನಿನ್ನೊಲವ ಕಂಡು ನಾಚಿ
ಕರಗುತಿದೆ ಇರುಳಿನತ್ತ
ಹಕ್ಕಿ ಗೂಡಿಗೆ ಮರಳುವಂತೆ
ಮನ ಮುದಗೊಂಡು
ತಿರುಗಿದೆ ಅವಳ ನೆನಪ ಸುತ್ತ /೨/

ಚಂದಿರನಂತವಳ ಪ್ರೀತಿಗೆ
ಸೋತು ಹೋದೆ ಯೋಚಿಸದೆ
ಬೆಳದಿಂಗಳ ಸುರಿದಳು
ಈ ಬಾಲೆ ಬರೆದ  ಓಲೆ
ನನ್ನೆದೆಯ ಮೇಲೆ
ಮಾಸದ ನೆನಪಾಯಿತು /೩/

615ಪಿಎಂ12072017
*ಅಮುಭಾವಜೀವಿ*
[16/07 2:03 pm] 🌺ಅಮುಭಾವಜೀವಿ🌼: *ಮಳೆ ಬಂದ ಮರುದಿನ*

ಮಳೆ ಬಂದ ಮರುದಿನ
ಇಳೆ ತಣಿದ ಆ ಕ್ಷಣ
ತಂಪು ತಂಪು ಚಿತ್ರಣ
ರವಿ ಸೂಸುವ ಹೊಂಗಿರಣ

ಎಲ್ಲ  ಇಲ್ಲದಾಗುವಾಗ
ಮೆಲ್ಲ ಬಂದ ಮಳೆಯ ಯೋಗ
ಹೊಸ ಕನಸುಗಳ ಬಿತ್ತಿತು
ನವಚೈತನ್ಯವ ಮೈದುಂಬಿಕೊಂಡು

ತಂಗಾಳಿ ಕೂಡ ತಣಿದಂತಿದೆ
ಬರಗಾಲವೂ ಮಣಿದಂತಿದೆ
ಬದಲಾಗಬೇಕೀಗ ಭುವಿಯ ಚಿತ್ರಣ
ಕೊನೆಗೊಳ್ಳಲಿ ಆ ಬೇಗೆ ತಂದ ತಲ್ಲಣ

ಹುದುಗಿರುವ ಎಲ್ಲ ನಿರೀಕ್ಷೆಗಳು
ಮೊಳಕೆಯೊಡೆಯಲಿ ಭರವಸೆಗಳು
ರೈತನ ಮೊಗದಿ ನಗುವು ಮೂಡಿ
ಹಸಿರ ಕಣ್ತುಂಬಿಕೊಳ್ಳಲಿ ದುಗುಡ ದೂಡಿ

ಈಗಲಾದರೂ ಕಣ್ತೆರೆಯಿತು
ಬಳಲಿದ್ದ ಮಣ್ತಣಿಯಿತು
ಮತ್ತೆ ಬರದಿರಲಿ ಆ ಬರಗಾಲ
ದೂರಾಗಲಿ ಬಂದ ಸಂಕಷ್ಟಗಳೆಲ್ಲ

0709ಎಎಂ16072017
*ಅಮುಭಾವಜೀವಿ*

*ಶುಭ ಮಧ್ಯಾಹ್ನ ಸ್ನೇಹಿತರೇ*
[17/07 7:28 am] 🌺ಅಮುಭಾವಜೀವಿ🌼: *ತೆರೆದು ನೋಡು*

*ಅಂತರಂಗ*ದ ಕದವನೊಮ್ಮೆ
ತೆರೆದು ನೀ ನೋಡು
ಅಲ್ಲಿ ಕಂಡರೂ ಕಾಣಬಹುದು
ನಿನ್ನೊಲವಿಗೆ ಹಂಬಲಿಸೋ ನನ್ನ ಪಾಡು

ಹಗಲು ಇರುಳಿನ ಲೆಕ್ಕವಿಲ್ಲ
ಹಸಿವು ನಿದ್ರೆಗೆ ಸಮಯ ಸಿಕ್ಕಲಿಲ್ಲ
ನಿತ್ಯ ನಿನ್ನದೇ ಕನವರಿಕೆ
ಕ್ಷಣಕ್ಷಣಕವೂ ಅದೇ ಚಡಪಡಿಕೆ

ಯಾವ ಘಳಿಗೆಯಲಿ ಹೇಗೆ ಬಂದೆಯೋ
ಆಗಲೇ ವಶವಾಗಿ ಹೋದೆ ನಾನು
ನಿನ್ನ ಹಂಬಲಿಸಿ ನನ್ನ ಸಂತೈಸಿ
ನೀ ಬರುವ ದಾರಿ ಕಾಯುತಲಿರುವೆನು

ಪ್ರೀತಿ ಎಂದರೆ ಹೀಗೇನಾ
ಕಾದು ಕಾದು ಸೋತೆ ನಾ
ಎಲ್ಲೇ ಇರು ನೀ ಹೇಗೆ ಇರು
ನನ್ನ ಮೇಲೊಂದಿಷ್ಟು ಕರುಣೆ ತೋರು

ಇನ್ನೂ ಕಾಯಿಸದಿರು ನನ್ನನು
ಕದ ತೆರೆದು ಒಳ ಕರೆದುಕೋ
*ಅಂತರಂಗ*ದ ಮಾತ ಕೇಳಿ ನನ್ನ
ನಿನ್ನೊಲವ ಮಡಿಲಲಿ ಮಲಗಿಸಿಕೋ

0720ಎಎಂ170717

*ಅಮುಭಾವಜೀವಿ*
[18/07 6:14 pm] 🌺ಅಮುಭಾವಜೀವಿ🌼: *ಅರಳು ಮೆಲ್ಲಗೆ*

ಸಂಜೆ ಮಲ್ಲಿಗೆ
ನೀ ಅರಳು ಮೆಲ್ಲಗೆ
ಇರುಳಿಳಿಯುವ ಮೊದಲೇ
ಚೆಲುವ  ಹಂಚು ಲೋಕಕೆ

ಗೋಧೂಳಿಯ ಶುಭಕಾಲವು
ಮೆಲ್ಲ ಜಾರುತಿದೆ ಇರುಳ ತೆಕ್ಕೆಗೆ
ಬಾನಂಚಿನ ರಂಗಿನೋಕುಳಿಯ
ಸ್ವಲ್ಪ ಬಳಿದುಕೋ ಮೈಯಿಗೆ

ಶಶಿಯು ಕಂಡು ನಿನ್ನಂದ
ಬೆಳದಿಂಗಳ ಹೊತ್ತು ಬಂದ
ತಾರೆಗಳ ಜೊತೆಗೆ ನೀನಾಡು
ತಂಗಾಳಿಗೆ ನೀ ಓಲಾಡು

ಮಂಜಿನ ಹನಿಗಳಿಂದ ನಿನ್ನ
ಚಂದದ ಮೊಗವ ತೊಳೆದುಕೋ
ಹಕ್ಕಿ ಹಾಡುವ ಸುಪ್ರಭಾತಕೆ
ಶಿವನ ಮೇಲೆ ನೀ ಕೂತುಕೋ

ಎಷ್ಟು ಚಂದ ಕಾಣುವೆ
ನನ್ನ ನಲ್ಮೆಯ ಮಲ್ಲಿಗೆ
ನೀನೇ ಸ್ಪೂರ್ತಿ ತಾನೇ
ನನ್ನ  ಒಲುಮೆಯ ಬಾಳಿಗೆ

0501ಪಿಎಂ18072017

*ಅಮುಭಾವಜೀವಿ*

*ಶುಭಸಂಜೆ ಸ್ನೇಹಿತರೇ*
[19/07 7:51 am] 🌺ಅಮುಭಾವಜೀವಿ🌼: *ಅಂತೂ ಇಂತೂ ಬಂತು*

ಅಂತೂ ಇಂತೂ ಬಂತು ಮಳೆ
ಜೀವನ ಯಾತ್ರೆಗೆ ತಂತು ಕಳೆ

ಮುಂಗಾರಿನ ಅಭಿಷೇಕವಿಲ್ಲದೆ
ಮಂಕಾಗಿತ್ತು ಇಳೆಯ ಬಾಳು
ಬರದ ಭೀಕರತೆಗೆ ತತ್ತರಿಸಿದ್ದ
ಭುವಿಯಲೀಗ ಮೂಡಿವೆ ಕನಸುಗಳು

ಮಣ್ಣಲ್ಲಿ ಮಣ್ಣಾದ ಗರಿಕೆಗೆ
ಮೊಳೆಯುವ ಹೊಸ ಪುಳಕ
ಬರಡಾದ ಬನದಲ್ಲಿನ ರೆಂಬೆಗೆ
ಹೊಸ ಚಿಗುರಿನ ಹಸಿರು ಕೌತುಕ

ಬೇಸತ್ತ ಹಕ್ಕಿಗಳು ಗೂಡು ಬಿಟ್ಟು ಹಾರಿವೆ
ಬಸವಳಿದ ಜೀವಗಳು ತುಂತುರಿಗೆ ಮೈಯೊಡ್ಡಿವೆ
ಹಿತವಾದ ತಂಗಾಳಿಯೂ ಖುಷಿಯಾಗಿದೆ
ನಿಸರ್ಗವೆ ಸ್ವರ್ಗದ  ಆತಿಥ್ಯ ವಹಿಸಿದೆ

ಮರಗಿಡದ ಮೈನೆನಸಿ ಮುತ್ತಾಗಿ
ಸುರಿಯುತಿವೆ ಮಳೆ ಹನಿಗಳು
ಮೈದುಂಬಿದ ಕಿರುತೊರೆಯಲಿ
ನೀರು ಹರಿಯುತಿದೆ ಜುಳುಜುಳು

ಎಲ್ಲಿತ್ತೋ ಇಷ್ಟು ದಿನ ಈ ಮಳೆ
ಮನತಣಿದು ಸಂಭ್ರಮಿಸಿದೆ ಇಳೆ
ಮತ್ತೆ ನಿಲ್ಲದಂತೆ ಸುರಿಯಲಿ ನಿತ್ಯ
ಮಳೆಯೇ ಜೀವನಾಧರವೆಂಬುದೇ ಸತ್ಯ

0335ಪಿಎಂ18072017
*ಅಮುಭಾವಜೀವಿ*
 
*ಶುಭೋದಯ ಸ್ನೇಹಿತರೇ ಶುಭ ದಿನ*🌺🙏🌼🌨🌨🌧
[20/07 9:05 am] ಮೃತ್ಯುಂಜಯ ಬಾ ಪಾಟೀಲ್ ಬೈಲಹೊಂಗಲ: ಶುಭೋದಯ ಸ್ನೇಹಿತರೇ*

ಇನ್ನೇಕೆ  ಅಳುವೆ*

ಈ *ವಿದಾಯ*ದ ಯಾನದಲ್ಲಿ
ಅಳುಕುವೆ ಏಕೆ ನೀನಿಲ್ಲಿ
ಎಲ್ಲವೂ ವಿಧಿ ಲಿಖಿತ
ಇಲ್ಲಿ ಯಾವುದೂ ಇಲ್ಲ ಶಾಶ್ವತ

ಬರುವಾಗ ಖುಷಿಯ ಸಂಭ್ರಮ
ಬೆಳೆಯುತ್ತ ಬೆಳೆಸುವುದು ಪ್ರೇಮ
ಬದುಕಿನ ಯಾನದಲ್ಲಿ ನಿಲ್ದಾಣ ನೂರು
ಇಳಿದು ಹೋಗಲೆಬೇಕು ಬರಲು ಅವರೂರು

ಬಂಧ ಸಂಬಂಧಗಳ ಅನುಬಂಧಕೆ 
ಇಲ್ಲಿ ನೂರು ಚಿತ್ರ ಸಾವಿರ ಪಾತ್ರ
ಒಂದೊಂದರಲ್ಲೂ ಒಂದೊಂದು ಅನುಭವ
ಹಂಚಿಕೊಂಡು ಬಾಳುವುದೇ ಜೀವನಸೂತ್ರ

ಎನಿತು ಕಾಲ ಜೊತೆಗಿದ್ದರೂ
ಈ ವಿದಾಯ ಅನಿವಾರ್ಯ
ಎಲ್ಲರೊಳಗೊಂದಾಗಿ ಎಲ್ಲರಿಗೂ ಬೇಕಾಗಿ
ಬದುಕುವುದೆ ಜೀವನ ಸೌಂದರ್ಯ

ಇನ್ನೇಕೆ ಅಳುವೆ ಬಿಡು ಅದರ ಗೊಡವೆ
ಕಳಚಿ ಹೋದುದಕೆ ಕೊರಗಬೇಡ
ಹೊಸ ಬಂಧವನು ಆಲಂಗಿಸಿ
ಮರೆತುಬಿಡು ಈ ದುಗುಡ

ಆತ್ಮೀಯ ಸಾಹಿತಿ ಶ್ರೀ ಅಮುಭಾವಜೀವಿ (ಅಪ್ಪಾಜಿ) ರಚಿತ ಕವನ
🙏🙏🙏🙏🙏🙏

ಮೃತ್ಯುಂಜಯ ಬಾ. ಪಾಟೀಲ
ಚನ್ನಮ್ಮ ಪ್ರಿಂಟರ್ಸ
ಕಡಬಿ ಗಲ್ಲಿˌ ˌ ಬೈಲಹೊಂಗಲ
ಬೆಳಗಾವಿ ಜಿಲ್ಲೆ (ಕಿತ್ತೂರ ನಾಡು)
ಮೋ : 09448102066, 09590233113
[21/07 6:59 am] 🌺ಅಮುಭಾವಜೀವಿ🌼: *ಮುಂಜಾನೆಯ ಕವಿತೆ*

ಮೋಡಗಳ ಮರೆಯಲ್ಲಿ
ಹೊಂಗಿರಣ ತಾ ಚೆಲ್ಲಿ
ಬಂದನದೋ ಭಾಸ್ಕರ
ಮುಂಜಾನೆ ಮಂಜಿನಲಿ
ಬಿರಿದ ಸುಮಗಳಲಿ
ಮೊಳಗಿತ್ತು ದುಂಬಿ  ಝೇಂಕಾರ

ತುಂತುರು ಹನಿಗರಿದು
ಹದವಾಗಿ ನೆನೆದ ಮಣ್ಣಲ್ಲಿ
ಹೊಸ ಮೊಳಕೆ ಕಳೆಯೇರಿತ್ತು
ಹಸಿರ ಕಾನನದಲ್ಲಿ
ತಂಗಾಳಿಯು ತೇಲಿ ತೇಲಿ
ಬೆಳಕನೆಲ್ಲ ಜಗಕೆ ಪಸರಿಸಿತು

ಜಗದ ನಿದಿರೆಗೆ ವಿರಾಮವಿತ್ತು
ಜೀವನ ಯಾನಕೆ ಸ್ಪೂರ್ತಿಯಾಯ್ತು
ನೇಸರನ ನವ ಕಿರಣ
ಮೂಕಮನಸಿನಲಿ ಎಲ್ಲ ಗಮನಿಸಿದ
ಕವಿಭಾವಕೆ ಕವಿತೆ ಕಟ್ಟಲು
ಈ ಹೊಸಬೆಳಕಾಯ್ತು ಪ್ರೇರಣ

0639ಎಎಂ21072017
*ಅಮುಭಾವಜೀವಿ*

*ಸವಿಭಾವದ ಶುಭೋದಯ ಸ್ನೇಹಿತರೇ*
[24/07 5:06 pm] 🌺ಅಮುಭಾವಜೀವಿ🌼: *ಯಾರಿಗೆ ಮನಸೋತೆ*

ಕವಿತೆ ನೀನಾರಿಗೆ ಮನಸೋತೆ
ಅವನೋ ಅವಳೋ ನೀನೇ ಹೇಳು

ಚೆಲುವಿನ ಗೆಳತಿಯ ಮುಂಗುರುಳಲ್ಲಿ
ಒಲವಿನ ಓಲೆಯ ಬರೆದೆಯಾ ನೀನು
ಆಕೆಯ ಮುಗ್ದ ನಗುವಿನ ಅಲೆಯಲಿ
ತೇಲಿ ತೇಲಿ ಹೋದೆಯೇನು
ಕೈಬಳೆ ಸದ್ದಿಗೆ ಬುದ್ದಿ  ಒಪ್ಪಿಸಿ
ಕರಗಿ ಬಿಟ್ಟೆಯಾ ನೀನು

ಅವನ  ಆ ಧೃಢ ಕಾಯದಲ್ಲಿ
ನಡೆವ ಗಂಡು ಗತ್ತಿನ ಠೀವಿಯಲಿ
ಕಲ್ಮಶವಿಲ್ಲದ ಕಣ್ಭಾವದ  ಅಮಲಿನಲಿ
ವಶವಾಗಿ ಹೋದೆಯಾ ನೀನು
ಏಕಾಂತದ  ಆಲಿಂಗನಕೆ
ಆಪೋಷನವಾಗಿ ಹೋದೆಯಾ ನೀನು

ಹೆಣ್ಣು ಗಂಡಿನ ಸೆಳೆತವೇ ಕವಿತೆ
ಅದಕ್ಕೆ ನಾನವರಲಿ ಅವಿತು ಕುಳಿತೆ
ಎಂಥಾ ಸವಿಬಾಹು ಬಂಧನ
ಪ್ರೀತಿ ಅದಕೊಂದು ಕಾರಣ
ಈ ತುಡಿತ ಮಿಡಿತಗಳ ಸಹಿತ
ನಾನಿರುವೆ ಅಲ್ಲಿ  ಅನವರತ

0112ಪಿಎಂ 23072017

*ಅಮುಭಾವಜೀವಿ*

ಶುಭಸಂಜೆ ಸ್ನೇಹಿತರೇ
[25/07 6:09 pm] 🌺ಅಮುಭಾವಜೀವಿ🌼: ವಸಂತ ಚೆಲುವಿನ ಚಿತ್ತಾರ
ಕೋಗಿಲೆ ಹಾಡಿನ ಸುಸ್ವರ
ನಿನ್ನ ನೆನಪು ಮಧುರ
ನೀ ನನ್ನೊಲವಿನ ಅಂಬರ

ಚಿಗುರಿದ ಎಲೆಎಲೆಯ ಮೇಲೆ
ನೀ ಬರೆದ ಒಲವಿನ ಓಲೆ
ಹೊಂಗೆನೆರಳ ತಂಪಿನಂತೆ
ಗರಿಗೆದರಿದ ಭಾವದಲೆ
ಜುಳುಜುಳು ಹರಿದಾಡಿತು
ಬತ್ತದ ಭಾವದೊರತೆಯಂತೆ /೧/

ಈ ಸಂಜೆಯ ಹೊಂಬಣ್ಣವು
ನಿನ್ನೊಲವ ಕಂಡು ನಾಚಿ
ಕರಗುತಿದೆ ಇರುಳಿನತ್ತ
ಹಕ್ಕಿ ಗೂಡಿಗೆ ಮರಳುವಂತೆ
ಮನ ಮುದಗೊಂಡು
ತಿರುಗಿದೆ ಅವಳ ನೆನಪ ಸುತ್ತ /೨/

ಚಂದಿರನಂತವಳ ಪ್ರೀತಿಗೆ
ಸೋತು ಹೋದೆ ಯೋಚಿಸದೆ
ಬೆಳದಿಂಗಳ ಸುರಿದಳು
ಈ ಬಾಲೆ ಬರೆದ  ಓಲೆ
ನನ್ನೆದೆಯ ಮೇಲೆ
ಮಾಸದ ನೆನಪಾಯಿತು /೩/

615ಪಿಎಂ12072017
*ಅಮುಭಾವಜೀವಿ*
[25/07 6:10 pm] 🌺ಅಮುಭಾವಜೀವಿ🌼: *ನೀನಿರದ ಸಂಜೆ*

ನೀನಿರದ ಈ ಸಂಜೆ/ಭಾವವಿಲ್ಲದ ಬಂಜೆ
ಬೇಸರವು ಬೆದರಿಸುತಿದೆ /ಇರುಳಾವರಿಸಿದಂತೆ

ಸಂಭ್ರಮದಿ ಹಾರುತ ಬಾನಲಿ
ಹಕ್ಕಿಗಳು ಮರಳುತಿವೆ ಗೂಡಿಗೆ
ಸವಿ ಭಾವವು ತಾ ಮೂಡದೆ
ಕಾಡಿಸುತಿದೆ ಬಾಳ ಹಾಡಿಗೆ 
ಮೋಡವಿರದ ಬಾನೊಳು ರಂಗೇಕೆ
ನೀನಿಲ್ಲದ  ಈ ಬದುಕ ಹಂಗೇಕೆ /೧/

ನೋಡು ಬಾನೊಳು ಚುಕ್ಕಿ ಚಂದ್ರಮ
ನಮಗೆಂದು ಆಗುವುದೋ ಆ ಸಂಗಮ
ತಂಗಾಳಿ ಬೀಸುತಿದೆ ತಂಬೆಲರು ತೂಗುತಿದೆ
ಎದೆಯ ಭಾವವು ಬಿರಿಯುತಿದೆ
ಬೆಳದಿಂಗಳಂತಾದರೂ ಬಾ ಒಲವೆ
ನಿನಗಾಗಿ ನಾನೀ ಇರುಳ ಗೆಲುವೆ  /೨/

ದಿಕ್ಕೆಟ್ಟು ಅಲೆಯುತಿಹೆ ದಿಕ್ಕು ಕಾಣದೆ
ದಾರಿ ನೂರಿವೆ ಸಾರಿ ಕೂಗಿವೆ
ಯಾವುದರಲಿ ನಡೆಯಲಿ ನಿನ್ನ ಸೇರಲು
ಕಾರಿರುಳು ಮನ ಮರುಳು
ತೂಗುತಿವೆ ಗಿಡ ಮರಗಳು
ಮೂಡಿಸುತ ನನ್ನೊಳಗೆ ದಿಗಿಲು /೩/

೦೬೪೫ಪಿಎಂ೧೦೦೭೨೦೧೭
*ಅಮುಭಾವಜೀವಿ*
[25/07 6:11 pm] 🌺ಅಮುಭಾವಜೀವಿ🌼: *ದೀಪವಿರದ ಬಾಳಿನಲ್ಲಿ*

ದೀಪವಿರದ ಬಾಳಿನಲ್ಲಿ /ಜ್ಯೋತಿಯನೆಲ್ಲಿ ತರಲಿ
ಅಂಧಕಾರದ ತಿಮಿರದಲ್ಲಿ/ಪ್ರೀತಿಯನೆಲ್ಲಿ ಹುಡುಕಲಿ//  /ಪ/

ವಿಧಿ ಬರೆದ ನಾಟಕದಲ್ಲಿ/ವಿಧಿಯಿಲ್ಲದೆ ನಟಿಸೋ ಪಾತ್ರ ನಾನು
ಕರುಣೆಯಿರದ ಬದುಕಿನಲ್ಲಿ / ಬಸವಳಿದ ಕರುವು ನಾನು
ಹೇಗೆ ಹೇಳಲಿ ಯಾರ ಕೂಗಲಿ/ಕೈ ಹಿಡಿದು ನಡೆಸುವವರಾರೋ /೧/

ಹರೆಯದಮಲು ನೆತ್ತಿಗೇರಿ/ಹಿರಿಯರ ಮಾತ ಗಾಳಿಗೆ ತೂರಿ
ಪ್ರೀತಿಸಿದೆ ಪರೀಕ್ಷಿಸದೇ/ಪರಿತಪಿಸುತಿಹೆ ನಾನಿಲ್ಲಿ
ಪ್ರೀತಿಯ ನಂಜು ಕೊಲ್ಲುತಿದೆ/ನನ್ನ  ಉಳಿಸಿಕೊಳ್ಳುವವರಾರೋ /೨/

ಎಲ್ಲಿಹುದೋ ಆ ಹಣತೆ /ತರುವುದೇ ನನಗೊಂದು ಘನತೆ
ಸೋತ ಪ್ರೀತಿಯ ಮತ್ತೆ ಪಡೆಯಲು/ಸಂತ ವಸಂತನಾಗುವನೇ
ದಾರಿ ಕಾಣದೂರಿಗೆ ಮತ್ತೆ /ಪ್ರೀತಿಯ ದಾರಿದೀಪ ವಾಗುವವರಾರೋ /೩/
೦೬೫೨ಎಎಂ೦೬೦೭೨೦೧೭

*ಅಮುಭಾವಜೀವಿ*
[25/07 6:12 pm] 🌺ಅಮುಭಾವಜೀವಿ🌼: *ನಿನ್ನ ಹೊರತು*

ಕಣ್ಣಂಚಲಿ ಹನಿಗೂಡಿದೆ
ನಿನ್ನೊಲವಿಗೆ ಮರುಳಾಗಿ
ಹೃದಯದ ಭಾವ ಮೂಡಿದೆ
ಕಣ್ಣೊಳಗಿನ ಬಿಂಬವಾಗಿ 

ನನ್ನ ಕೈ ಹಿಡಿದು ನಡೆಸೋ
ನಾವಿಕ ನೀನಲ್ಲವೆ ಗೆಳೆಯ
ನೀ ಪ್ರೀತಿಯ ಅಂಬಾರಿಯಲಿ
ಕೂತ ನನ್ನ  ಒಡೆಯ

ಬಾಳ ಯಾನದ ಬಳುವಳಿ ನೀನು
ನಾಳೆ ಕನಸುಗಳ ಬಿತ್ತಿದವ ನೀನು
ಬೇಕಿಲ್ಲ ನನಗೇನೂ ನಿನ್ನ ಹೊರತು
ಬದುಕಲಿ ನೀನೇ ನನ್ನ ಗುರುತು

ಜೊತೆಗಾರನಾಗಿ ನೀ ಹಿತವಾದೆ
ದಂತಕಥೆಯಾಗೋಣ ಪ್ರೀತಿಗೆ
ವ್ಯಥೆಗಳ ಕಳೆದು ಶಪಥಗೈದೆ
ಇನ್ನು ಕಷ್ಟಗಳೇ ಇಲ್ಲ ಬಾಳಿಗೆ

ಕಣ್ಣು ಕಣ್ಣು ಕಲೆತ  ಈ ಬಂಧ
ಮಣ್ಣು ಸೇರುವ ತನಕ ಬೆಸೆಯಲಿ
ನಮ್ಮಿಬ್ಬರ ಈ ಅನುಬಂಧಕೆ
ಕಣ್ಣಂಚಿನ ಹನಿ ಸಾಕ್ಷಿಯಾಗಲಿ

0446ಪಿಎಂ05072017

*ಅಮುಭಾವಜೀವಿ*

ಸಿದ್ದೇಶ್ ಅವರ ಪ್ರತಿಕ್ರಿಯೆ

ನಿನ್ನ ಹೊರತು ಯಾರು ಇಲ್ಲ ಭಾವಜೀವಿ .. ಅಮು ಭಾವಜೀವಿ ..ಕಣ್ಣು ನ ಅಂಚಲಿ ಪ್ರೀತಿ ತುಂಬಿದೆ ಸರ್ ..ಶುಭ ಸಂಜೆ

ಚಂದ್ರಶೇಖರಯ್ಯ ರೋಣದ  ಅವರ ಪ್ರತಿಕ್ರಿಯೆ

ಸರ್
ಬೇಕಿಲ್ಲ ನನಗೇನೂ ನಿನ್ನ ಹೊರತು
ಬದುಕಲಿ ನೀನೇ ನನ್ನ ಗುರುತು
ಸುಂದರ ಭಾವ , ಸುಂದರ ನುಡಿ, ಸುಂದರ ಕವಿತೆ. 🙏
[25/07 6:12 pm] 🌺ಅಮುಭಾವಜೀವಿ🌼: ತುಡಿಯುತಿದೆ ಜೀವ
ಮಿಡಿಯುತಿದೆ ಭಾವ
ಒಲವಿನೌತಣ ನೀಡು ಬಾ ಜಾಣ||
ಹರೆಯ ಕೂಗಿದ ದನಿಗೆ
ನದಿಯಾಗಿ ಹರಿದು ಬಾ ಬಳಿಗೆ
ಹಸಿರಾಗಲಿ ಬಾಳ ಈ ತಾಣ||

ಎಲ್ಲ ನೋವುಗಳೆಲ್ಲೆ ಮೀರಲಿ
ನಿನ್ನ ನೆರಳೊಂದೆನಗಿರಲಿ
ಅನುದಿನವೂ ಪ್ರೀತಿ ಸುರಿಸು||
ಆಕಾಶದ  ಆ ನೀಲಿಯಲ್ಲಿ
ಹೊಳೆವ  ಆ ರವಿಯಂತೆ ತೇಲಿ
ಬಂದೆನ್ನ ಬಾಳ ಬೆಳಗಿಸು||

ಹೆಣ್ತನದ ಕೋರಿಕೆಗೆ
ಮಂಜಂತೆ ಕರಿಗಿ
ಒಲಿದು ಬಂದೆ ನಿನ್ನಲ್ಲಿಗೆ||
ಕೈ ಹಿಡಿದು ನಾ ನಡೆವೆ
ಬೇಕಿಲ್ಲ  ಈ ಜಗದ ಗೊಡವೆ
ಪ್ರೀತಿಯೇ ದಾರಿದೀಪ ನಮಗೆ||

1144ಎಎಂ02072017

*ಅಮುಭಾವಜೀವಿ*
[25/07 6:13 pm] 🌺ಅಮುಭಾವಜೀವಿ🌼: ಸುಖದಾ ಸಖ ಅವನಿಲ್ಲ
ನಗುವ ಮುಖ ನನಗಿಲ್ಲ

ಎಷ್ಟೊಂದು ಒಲವನ್ನು / ನೀಡಿದ್ದ  ಅವನನ್ನು
ಮರೆಯಲಿ ಹೇಗೆ /ಮರೀಚಿಕೆಯಂತೆ ಕಾಡಿದೆ

ಅವನಿದ್ದ ಪ್ರತಿ ಘಳಿಗೆ / ಒಲವಿನ ದೀವಟಿಗೆ
ಕತ್ತಲಾಗಿದೆ ಈಗ / ಬೆಳಕಿಲ್ಲದೆ ಬದುಕೆಲ್ಲಿದೆ

ಅವನೊಂದೊಂದು ಮಾತು/ಪೋಣಿಸಿದ ಮುತ್ತು
ಹರಿದು ಹೋಗದೆ ಮುತ್ತಿನಹಾರ/ ಬದುಕು ಈಗ ಬಲು ಭಾರ

ದಿಗಂತದ ಆ ಕಲೆಗೆ / ಏಕಾಂತದ ರಸಘಳಿಗೆಗೆ
ಮುದಗೊಂಡ ಮನಕೀಗ/ ಅವನಿಲ್ಲದ ಬೇಸರ

ಸುಮಕೆ ಹೋಲಿಕೆ ಮಾಡಿ / ಕವಿತೆ ಕಟ್ಟಿ ಹಾಡಿದ
ಸುಮದ ರಾಶಿಯೇ ಇರಲೀಗ/ ಬೇಕೆ ಅವನಿಲ್ಲದ ಶೃಂಗಾರ

ಎಲ್ಲ ಮರೆತಿರುವಾಗ / ಮತ್ತೆ ಮತ್ತೆ ನೆನಪಾದ ನಲ್ಲ
ಮನದ ಮೌನಕೆ ಈಗ/  ಅವನೆಂದೂ ಮಾತಾಗಲಿಲ್ಲ

0750ಎಎಂ29062017

ಅಮುಭಾವಜೀವಿ
[25/07 6:13 pm] 🌺ಅಮುಭಾವಜೀವಿ🌼: ಕಣ್ಣ ತೆರೆಸಿದೆ ನೀನು 
ಋಣವ ಹೊರಿಸಿದೆ ನೀನು
ನನ್ನ ಬಾಳ ಭಾಗ್ಯ ದೇವತೆ
ನಿನ್ನ  ಪ್ರೀತಿಯ ನೆನೆದು
ನಿನ್ನ  ಸ್ಪೂರ್ತಿಯ ಪಡೆದು
ಬರೆದೆ ನಾನು ಕವಿತೆ

ಮೊಡ ಮಳೆಯ ತಂದ ಹಾಗೆ
ಬಾಳಲಿ ಇಲ್ಲ ಬರದ ಬೇಗೆ
ಎಲ್ಲಕ್ಕೂ ಕಾರಣ ನೀನು 
ಒಲವಿನ ಪ್ರಿಯ ಲತೆ
ನೀನಿರಲು ಕಾಡದು ಚಿಂತೆ
ನೀನೆನ್ನ ನೆಮ್ಮದಿಯ ನೆರಳು

ನೋವನೆಲ್ಲ ತಾನೇ ನುಂಗಿ
ನಲಿವಿಗೆನ್ನ  ಆಸರೆಯಾಗಿ
ಚೆಲುವ ಬಾಳ ಸಾರಥಿಯಾದೆ ನೀನು  
ಬರಿಗೈ ಬಿಕಾರಿ ನಾನು
ಸಿರಿವಂತಿಗೆಯ ರಾಣಿ ನೀನು
ಆದರೂ ನಿನ್ನ ಪ್ರೀತಿಗೆ ವಶವಾದೆ ನಾನು

ಸೇರು ಬಾ ನನ್ನೊಲವಿನ ತಾಣ
ತೋರುತ  ಎಲ್ಲೆಲ್ಲೂ ಕರುಣ
ನಾನೊಂದು ಪ್ರೇರಣ
ಯಾವ ಸಿರಿಯೂ ಬೇಡ  ಇನ್ನು
ಒಂಟಿಯಾಗಿ ನಾನಿನ್ನು ಇರೆನು
ನೀನಿರಲು ಅದೇ ಚೇತನ

0211ಪಿಎಂ27062017
ಅಮುಭಾವಜೀವಿ
[25/07 6:14 pm] 🌺ಅಮುಭಾವಜೀವಿ🌼: ಕಾದಿದೆ ರಾಧೆಯ ಜೀವ/ ಎಲ್ಲಿರುವೆ ಬಾರೋ ಮಾಧವ/
ಬೇಡುವೆ ಭಕ್ತಿಯ ರೂಪದಲಿ/ ಹಾಡುವೆ ಹೃದಯದ ಭಾವದಲಿ/
ಸಹಿಸಲಾರೆನು ಈ ವಿರಹ/ ಅದು ಪ್ರೀತಿಯ ವಿಧಿಬರಹ/  /೧/

ಗೋಪಿಯರೆಲ್ಲ ನಗುತಿಹರು/ಈ ಪಾಪಿಯ ಭಾವವನರಿಯದೇ/
ಶಾಪ ವಿಮೋಚನೆ ಮಾಡಲು/ಕೋಪವ ಬಿಟ್ಟು ಬರಬಾರದೇ/
ಕೇಳು ಈ ಪ್ರೇಮ ನಿವೇದನೆ /ಪರಿಹರಿಸು ಬಾ ಮನದ ವೇದನೆ/ ||೨||

ಮೊಸರೊಳದ್ದಿದ ಕಡೆಗೋಲಾಗಿದೆ/ಮನಸಿಗೇಕೋ ತಳಮಳಗೊಂಡಿದೆ/
ಬೆಣ್ಣೆಯಂತೆ ಎದ್ದು ಬಾ/ಕೊರಗುತಿರುವೆ ನೋಡು ಬಾ
ಸಾಕು ಮರೆ ತೋರು ಮೋರೆ / ಈ ದೀನಳ ಸಲಹು ಬಾ ದೊರೆ/  //೩//

0720ಎಎಂ25062017
ಅಮುಭಾವಜೀವಿ

ಜಯಕುಮಾರ್ ಕದಂ ಅವರ ಪ್ರತಿಕ್ರಿಯೆ

ದೀನಳ ಸಲಹು...ಕವಸದಲ್ಲಿ ರಾಧಾಳ ವಿರಹದ ಮನಸ್ಥಿತಿ, ಕಳವಳ, ತಳಮಳ, ಮಾಧವನ ಆಗಮನಕ್ಕಾಗಿ ಪರಿತಪಿಸುವ ರೀತಿ. ದೀನಭಾವದಿಂದ ಕೂಡಿರುವ ವಿರಹ ಗೀತೆ ರಚಿಸಿರುವ ಕವಿಮನ ಕೋಮಲ ಸುಮಧುರ.ಅಮುಭಾವಜೀವಿ ನಿಮ್ಮ ಭಾವಗೀತೆ ಮನಸ್ಸನ್ನು ಸೆರೆಹಿಡಿಯಿತು.
ವಂದನೆಗಳು.
[25/07 6:14 pm] 🌺ಅಮುಭಾವಜೀವಿ🌼: ಬಾರೆ ಗೆಳತಿ/ಭಾವದತಿಥಿ/
ನೀನೆನ್ನ ಬಾಳ ಸ್ಪೂರ್ತಿ
ಎದೆಯ ಭಾವ/ಮಿಡಿದ ಜೀವ/
ನಿನ್ನೊಂದಿಗಿರಲದೇ ಕೀರ್ತಿ

ಯಾವ ನೋವು ಕಾಡದು/ಯಾವ ಕಷ್ಟ ಬಾರದು
ನೀನನ್ನೊಡನಾಡಿಯಾಗಿರಲು
ಯಾವ ತಂತ್ರ ಫಲಿಸದು/ ಪ್ರೇಮ ಸೂತ್ರ ಸೋಲದು
ನೀನನ್ನೊಳಗೆ ಇರಲು 

ನಿನ್ನ ಕಂಡ ಘಳಿಗೆಯಲ್ಲೆ/ನನ್ನ ಪ್ರಾಣ ಹೋಗಲಿ
ಅದೇ ಬಾಳ ಸಾರ್ಥಕತೆ
ನಿನಗೆ ನೋವ ನೀಡದೆ/ ನಿನ್ನೊಂದಿಗೆ ಬದುಕಿದೆ
ನಮ್ಮ ಪ್ರೀತಿ ದಂತಕಥೆ

ಬರವೇ ಬರಲಿ/ವೃಷ್ಠಿಯಾಗಲಿ
ಗಟ್ಟಿ ನಮ್ಮೀ ಸಂಬಂಧ
ತೀರದಲ್ಲಿ ಲೀನವಾಗಿ/ಮತ್ತೆ ಬರುವ ಅಲೆಯಾಗಿ
ನಿತ್ಯ ಹೊಸತು ಈ ಅನುಬಂಧ

ಬಾ ಒಲವೆ ನಾನಿರುವೆ/ಈ ಯಾನವ ಗುರಿ ಮುಟ್ಟಿಸು
ಎಲ್ಲ ಸಾಲಿನಲ್ಲಿ ಮೆಲ್ಲ/ಸೊಲ್ಲನೆತ್ತುವಂತೆ ಪ್ರೋತ್ಸಾಹಿಸು

0742ಎಎಂ25062017
ಅಮುಭಾವಜೀವಿ
[25/07 6:15 pm] 🌺ಅಮುಭಾವಜೀವಿ🌼: ಒಲವಿನ ಮಾಲಿಕಿ / ಹೃದಯದ ನಾಯಕಿ /
ಬದುಕಿನ ಆಸರೆ / ಇವಳೇ ಇವಳೇ /
ಭಾವದ ಗಾಯಕಿ / ನೋವಿನ ಸೇವಕಿ /
ಬಾಳರಥದ ಸಾರಥಿ / ಇವಳೇ ಇವಳೇ /

ಸಹನೆಯ ಮನೆಯಲಿ / ಸ್ನೇಹದ ಕಥೆಯಲಿ /
ಪ್ರೀತಿಯ ಲತೆಯಾದವಳು/ ನಾಳೆಗೆ ಜೊತೆಯಾದವಳು/
ನಲ್ಮೆಯ ಕುಲುಮೆಯೊಳಗೆ/ಒಲುಮೆಯ  ಒಡವೆಯಾದವಳು/  //೧//

ಇರುಳ ಬಾಂದಳದಿ/ಹೊಳೆವ ತಾರೆ ತೆರದಿ/
ಬಾಳಿಗೆ ಬೆಳಕಾಗಲು /ಬೆಳದಿಂಗಳಾಗಿ ಬಂದಳು/
ಉಕ್ಕುವ ಬಯಕೆಯಲೆಗೆ/ಮುತ್ತಿಗೆ ಮರುಳಾದ ತೀರವಾದವಳು/ //೨//

ಮಂಜಾನೆಯ ಮಂಜಂತೆ/ ನಗು ಚೆಲ್ಲಿದಳು ಮುತ್ತಂತೆ /
ಬಾಳಿನುದಯಕೆ/ದಿನದ ಬೇಸರಕೆ/
ಹಕ್ಕಿ ಹಾಡಿನ / ಇಂಪು ಗಾನಕೆ ಮೈ ಮರೆಸಿದವಳು/ //೩//

1140ಪಿಎಂ24062017
ಅಮುಭಾವಜೀವಿ
[25/07 6:15 pm] 🌺ಅಮುಭಾವಜೀವಿ🌼: ಓ ಚಂದಮಾಮ|ಬಾರಯ್ಯ ಬಳಿಗೆ|
ಮಧುರ ಭಾವವ| ತಾರಯ್ಯ ಮನಕೆ|
ವಿರಹವೊಂದು| ಉರುಳಾಗಿದೆ|

ಸಂಜೆ ರಂಗು /ರಕ್ತಕಾರಿದಂತಿದೆ/
ಮನಸಿಗೇಕೋ/ಭಯವು ಕಾಡಿದೆ/
'ಅವನಿ'ಲ್ಲದೆ / ತನು ಸುಡುತಿದೆ/

ತಂಗಾಳಿಗೇಕೋ/ ಮುನಿಸಿದೆ ನನ್ನ ಮೇಲೆ /
ಸವಿಭಾವವೇಕೋ/ಸಪ್ಪೆಯೆನಿಸಿದೆ ಈಗಲೇ/
ಅವನ ಸ್ಪರ್ಶವಿರದ/  ಈ ಸ್ವರ್ಗದಲ್ಲಿ/

ಸಾಗರದಲೆಗಳೆಲ್ಲಾ/ಸಾವಿಗೀಡಾಗಿವೆ/
ಸಾಮಿಪ್ಯವಿರದ ಬದುಕು/ಬರಡಾಗಿ ಹೋಗಿದೆ/
ಅವನಿರದ/  ಈ ಬದುಕಿನಲ್ಲಿ /

ಮುಂಜಾನೆ ಏಕೆ /ನೀ ಬರುವೆ ಬೇಗ/
ಬೆಳದಿಂಗಳಿಗೇ /ತನು ಬಳಲಿದೆ ಈಗ/
ಇರು ದೂರ ನೀನು/ ಅವನು ಬರುವವರೆಗೆ/

ಈ ಪ್ರೇಮಿಗಳ ಹರಸು/ ಓ ಚಂದಮಾಮ /
ಜಗಕೆ ಬೆಳಕಾಗಲಿ/ನಮ್ಮ ಈ ಪ್ರೇಮ /
ಅವನ ಹುಡುಕಿ ತಂದು/ಒಸಗೆ ನೀಡು ನನಗೆ /

0605ಪಿಎಂ24062017
*ಅಮುಭಾವಜೀವಿ*
[25/07 6:21 pm] 🌺ಅಮುಭಾವಜೀವಿ🌼: *ನಂಬಿಕೆಯ ನೆರಳು*

ನೀನಾಗು ಬಾಯಿಲ್ಲಿ 
ನನ್ನೊಳಗಿನ ನೋವಲ್ಲಿ
ನಂಬಿಕೆಯ ನೆರಳು

ನಾ ಬರೆದ ಕವಿತೆಗೆ
ಭಾವ ತುಂಬಿ ಹಾಡಿಗೆ
ನೀನಾಗು ಸವಿಗೊರಳು

ಮುಂಜಾನೆ ಮಂಜಿನಲಿ
ನಂಜೆಂಬುದು ಏನಿಲ್ಲ
ನೀನಾಗು ಹೊಳೆವ ಕಿರಣ

ಅರಳುವ ಸುಮದಿ
ಮಕರಂದವಾಗಿ ಬೆರೆತು
ದುಂಬಿಗಾಗು ನೀ ಪ್ರೇರಣ

ನಾಳೆಗಳು ನರಳದಂತೆ
ಬೆರಳು ಹಿಡಿದು ನಡೆಸು
ನಿನ್ನೊಲವಿಗೆ ಬೆಲೆಯಿದೆ

ಅಂತರಂಗದ ಮಿಡಿತ
ಅರಿತಿರುವೆ ನೀ ಖಚಿತ
ನಿನಗೆ  ಆ ಕಲೆಯಿದೆ

ಬೇಸರದ ಬರದ ಛಾಯೆ
ಆವರಿಸಿರಲು ಮನದಲ್ಲಿ
ನೀನಾಗು ತುಂತುರಿನ ಸೋನೆ

ಹಿತವಾಗಿ ನಾ ನೆನೆದು
ಸುಖವಾಗಿ ನಾನುಳಿದು
ಸದಾ ಅರಾಧಿಸುವೆ  ನಿನ್ನನೇ

ಈ ಬದುಕೆಂಬ ಯಾನದಲ್ಲಿ
ನೀನಿರಲು ಜೊತೆಯಲ್ಲಿ
ಒಂಟಿತನ ನನ್ನ ಬಿಟ್ಟು  ಓಡಿತು

ಇರುವವರೆಗೂ  ಒಲವಿಂದ
ಬದುಕಿಸಿದೆ ನಗುವಿಂದ
ನೀ ನನ್ನನ್ನು ಬೆರೆತು

0631ಎಎಂ16062017

ಅಮುಭಾವಜೀವಿ
[25/07 6:22 pm] 🌺ಅಮುಭಾವಜೀವಿ🌼: *ಹೋಗದರು ಜಾರಿ*

ಹೋಗದಿರು ಸಂಜೆಯೇ ನೀ ಜಾರಿ
ಅವಳ ನೆನಪು ಕಾಡಿದೆ ಬಾರಿ ಬಾರಿ
ಬರುವಳಂತೆ ಅವಳು ಬಳಿಗೆ
ಕತ್ತಲಾದರೆ ಖುಷಿ  ಇಲ್ಲ ನಮಗೆ

ಅವಳ ಮುಂಗುರುಳು
ಈ ತಂಗಾಳಿಯಂತೆ
ಅವಳ ನಗು ಬಾನಿಗೆ
ಹರಡಿದ ರಂಗಂತೆ
ಅವಳ ಬೆರಳು ಗೀಚಿದ ಚಿತ್ತಾರ
ಹೊಂಬಣ್ಣದ ಮೇಘಗಳಂತೆ

ಹಕ್ಕಿ ಗೂಡಿಗೆ ಮರಳುವ ಸಂಭ್ರಮ
ಅವಳೆನ್ನ ಸೇರುವುದೇ ಅನುಪಮ
ಬೇಡ ನಮಗೀಗ ಕತ್ತಲು
ಈ ಸೊಬಗಿರಲಿ ನಮ್ಮ ಸುತ್ತಲೂ
ನೀನೇ ಸ್ಪೂರ್ತಿಯು ನಾವಿಬ್ಬರೂ
ಈಗ  ಒಂದಾಗುತಿರಲು

ನೊಂದುಕೊಳ್ಳುವಳವಳು ಕತ್ತಲೆಗೆ
ಇಂಬುಗೊಡದಿರು ನೀನದಕೆ
ಬಹಳ ದಿನಗಳ ನಂತರದ ಭೇಟಿ
ಸ್ವರ್ಗವೂ ಅದಕಿಲ್ಲ ಸರಿಸಾಟಿ
ನಿಂತು ಹರಸು ನಮ್ಮನು
ಈಡೇರಿಸು ನಮ್ಮೀ ಬೇಡಿಕೆಯನು

0546ಪಿಎಂ10062017
*ಅಮುಭಾವಜೀವಿ*
[25/07 6:50 pm] 🌺ಅಮುಭಾವಜೀವಿ🌼: *ಪ್ರೀತಿಯ ಹೆಸರೇ ನೀನು*

ಎದೆಯ ಗೂಡೊಳಗೆ
ಮೃದುವಾದ ಭಾವವು ಅರಳಿ
ಚೆಲುವು ಕರೆವ  ಆತ್ಮೀಯತೆಯ
ಪ್ರೀತಿಯ ಹೆಸರೇ ನೀನು

ಮುಂಗಾರಿನ ಅಭಿಷೇಕಕೆ
ಮಳೆಬಿಲ್ಲಿನ ಮೈ ಪುಳಕವ ತಂದ
ವರುಣನು ಕರುಣೆಯ ತೋರುವ
ಪ್ರೀತಿಯ ಹೆಸರೇ ನೀನು

ಎಳೆಯ ಗಳಿಕೆಯ ಮೇಲೆ
ಮುತ್ತಿನ ಮಣಿಗಳ ಮಾಲೆ
ತಂದ ಇಬ್ಬನಿಯು ಹೊಳೆವ
ಪ್ರೀತಿಯ ಹೆಸರೇ ನೀನು

ಹಸಿರು ಪೈರಿನ ನಡುವೆ
ಚೆಲ್ಲಾಟವಾಡುವ ತಂಗಾಳಿಯೂ
ಕೂಡ ತಂಪಲ್ಲಿ ಗುನುಗುವ 
ಪ್ರೀತಿಯ ಹೆಸರೇ ನೀನು

ಹರಿವ ನೀರಿನ ಬದುಕುವ
ಜುಳುಜುಳು ನಿನಾದವು
ನುಡಿವ ಮಿಡಿವ ರಾಗಾಲಾಪದ
ಪ್ರೀತಿಯ ಹೆಸರೇ ನೀನು

ಮನದ ಮೂಲೆಯಲೆಲ್ಲೋ
ಹಾಯಾಗಿ ಮಲಗಿರುವ ಭಾವನೆಯ
ಎದೆಯಲ್ಲಿ ಉಲಿವ ಸಂಗೀತದ
ಪ್ರೀತಿಯ ಹೆಸರೇ ನೀನು

0220ಪಿಎಂ16052917
*ಅಮುಭಾವಜೀವಿ*
[25/07 6:51 pm] 🌺ಅಮುಭಾವಜೀವಿ🌼: ಯಾರೇ ನೀನು ಚೆಲುವೆ
ನನ್ನನ್ನು  ಏಕೆ ಸೆಳೆವೆ
ಆ ನಿನ್ನ ನಗುವೇ ಮೋಹಕ
ನನ್ನ ಸೆಳೆಯಿತು ಚುಂಬಕ   //ಪಲ್ಲವಿ//

ಹೆಣ್ಣು :-  

ಹೃದಯದ ಭಾವನೆ ಕೆದಕಿ
ಅರಸುತ ಬಂದೆ ನಿನ್ನನ್ನೇ ಹುಡುಕಿ
ಗೆಳೆಯ ಬಾರೋ ನೀ ಸನಿಹ
ಈ ದೂರವೇಕೆ ಬಾ ಹತ್ತಿರಕ್ಕೆ
ಒಲವಾಲಿಂಗನದಿ ಬಂಧಿಸು
ಹಿತಾನಂದದಿ ನೀಡುವ ಸ್ಪರ್ಶಿಸು

ಗಂಡು:- 

ಏಳೇಳು ಜನ್ಮದ ಕರೆಯೋಲೆಗೆ
ನೀ ಜೊತೆಯಾಗು ಬಾ ನನ್ನೊಂದಿಗೆ
ಬದುಕ ಯಾವುದೇ ಸಂಭ್ರಮಿಸಲು
ನನ್ನಯ ಒಲವ ಸೌಧದೊಳು
ನೀ ಮೊದಲಡಿ ಇರಿಸಿದವಳು
ನನ್ನೀ ಮನೆಮನೆಗೆ ಬೆಳ್ದಿಂಗಳು

ಹೆಣ್ಣು :-

ನನ್ನ ಹಣೆಗೆ ಸಿಂಧೂರ ನೀನು
ಕೊರಳಲಿ ಹೊಳೆವ ಮಾಂಗಲ್ಯ ನೀನು
ನಿನ್ನೀ ಆಸರೆಯೊಂದೇ ಸಾಕು ನನಗೆ
ಬಾಳ ಯಾನದ ಬಳುವಳಿ ನೀನು
ಬೇಸರ ಓಡಿಸೋ ಕಚಗುಳಿ ನೀನು
ನೀನೇ ಜೀವನಸಂಗಾತಿ ಕೊನೆಯವರೆಗೆ

ನಮ್ಮಿಬ್ಬರ ಈ ಸಮಾಗಮ
ಬೆಸೆಯಿತು ನಿರ್ಮಲ ಪ್ರೇಮ
ನಾವೇ ಸುಖಿಗಳು ಜಗದಲ್ಲಿ
ಪ್ರೀತಿಯ ಹೆಸರಲಿ ಒಂದಾಗಿ
ಬದುಕೋಣ ನಾವಿಲ್ಲಿ ಸುಖವಾಗಿ
ಪ್ರೀತಿಯು ತೋರಿದ ಜಾಡಿನಲಿ

1052ಎಎಂ20052017

ಅಮುಭಾವಜೀವಿ
[25/07 6:51 pm] 🌺ಅಮುಭಾವಜೀವಿ🌼: *ನೀನಿಲ್ಲದ ಕೊರತೆ*

ಈ ಏಕಾಂತವು ಕೊಲ್ಲುತಿದೆ
ಸಂಗಾತಿ ನೀ ನನ್ನೊಂದಿಗಿಲ್ಲದೆ
ಈ ಇರುಳು ಕೂಡ ಮರುಗುತಿದೆ
ನೀರಿರದ ಮರಳಿನಂತಾಗಿದೆ

ನಿನ್ನೊಲವಿನ ಸ್ಪರ್ಶ ಇಂದಿಲ್ಲ
ನಿನ್ನ ನಗುವಿನ ಹರ್ಷ ಮರೆತಿಲ್ಲ
ಇರುಳಲಿ ಹೊಳೆವ ತಾರೆಗಳಂತಹ
ಆ ನಿನ್ನ ನಯನಗಳ ಬೆಳಕಿಲ್ಲ

ಹಸಿರು ಪೈರು ನರ್ತಿಸಿದಂತೆ
ತಂಗಾಳಿಗೆ ನಿನ್ನ ಮುಂಗುರುಳ ಲಾಸ್ಯ
ಇಂದೇಕೋ ನನ್ನನೊಂಟಿಯಾಗಿಸಿ
ಸುಯ್ಯೆನ್ನುತ ತಂಗಾಳಿಯೂ ಮಾಡಿದೆ ಅಪಹಾಸ್ಯ

ನೀನಿರದ ಈ ಹಾಸಿಗೆಯಲಿ
ಬರಿ ಮುಳ್ಳಿನ ಕಲರವ ಕೇಳಿದೆ
ನಿದ್ದೆ ಹತ್ತದ ಕಣ್ಣುಗಳಲ್ಲಿ
ನಿನ್ನದೇ ಬಿಂಬ ಮೂಡಿ ಕಾಡಿದೆ

ಬೆಳದಿಂಗಳು ಕೂಡ ಬಿಸಿಯಾಗಿದೆ
ಈ ವಿರಹ ಸವಿನಿದ್ರೆಯ ಕಸಿದಿದೆ
ನಿನ್ನ ನೆನಪಿನ ಕೌದಿ ಹೊದ್ದರೂ
ನೀನಿಲ್ಲದ ಕೊರತೆಯ ಮೊರೆತ ಕೇಳುತಿದೆ

ಸಹಿಸಲಾರೆ ಈ ಒಂಟಿತನ
ಬರಿದಾಗಿದೆ ಹೃದಯ ಸಿಂಹಾಸನ 
ನೀ ಬಂದು ನೀಗು ಈ ವಿರಹ
ಸದಾ ನೀನಿರು  ನನ್ನ ಸನಿಹ

1146ಪಿಎಂ20052017
*ಅಮುಭಾವಜೀವಿ*
[25/07 6:52 pm] 🌺ಅಮುಭಾವಜೀವಿ🌼: ನೋಯುವೆ ಏಕೆ ಜೀವವೇ
ನಗುವಿನ ಸಾಧ್ಯತೆ ಇಲ್ಲವೇ

ಯಾರಿಗಿಲ್ಲ ಹೇಳು ನೋವು  
ಆನೆಗೂ ನೋವಿದೆ ಇರುವೆಗೂ ಸಾವಿದೆ
ಈ ಹತಾಶೆ ನಿನಗೇತಕೆ
ಎಲ್ಲ ತಮಾಷೆ ಎಂದುಕೋ ಬದುಕಿಗೆ
ನೋಯದಿರು ನಾನಿರುವ ತನಕ
ನಿನ್ನ ಮುಂದೆ ನಾನಾಗುವೆ ವಿದೂಷಕ

ಚುಚ್ಚು ಮಾತು ನೂರು ಬರಲಿ
ಮೆಚ್ಚುಗೆ ಮಾತೊಂದೆ ಇರಲಿ
ಸ್ವಚ್ಛ ಮನದಿ ನೀ ಸ್ವೀಕರಿಸು
ಬೇಕಾದ ಮಾತಿಗೆ ಬೆಲೆ ಕೊಡು
ಬೇಡದ ಮಾತನು ಬಿಟ್ಟು ಬಿಡು
ಸಣ್ಣ ಗೆಲುವನೂ ಸಂಭ್ರಮಿಸು

ನನ್ನ ನಿನ್ನ ನಡುವೆ ಇರಲಿ ನಂಬಿಕೆ
ಬೇರೆ ಯಾವುದಕೂ ಬೇಡ  ಅಂಜಿಕೆ
ಬದುಕು ನಮ್ಮದು ನಮ್ಮದೇ ಬದುಕು
ಪ್ರೀತಿ ನಮ್ಮ ಬೆಳಕಾಗಲಿ
ಬದುಕು ಅದಕೆ ಬೆಂಬಲವೀಯಲಿ
ಜಯಿಸಬೇಕು ಬಂದರೇನೇ ತೊಡಕು

0640ಪಿಎಂ23052017
ಅಮುಭಾವಜೀವಿ

No comments:

Post a Comment