*ಗಡುವಿಲ್ಲದ ಬಡತನ*
ಅದೆಷ್ಟು ನೋವುಗಳನಿತ್ತು
ಕಂಗೆಡಿಸುವೆ ಓ ಬದುಕೇ
ಎಲ್ಲದಕ್ಕೂ ಎದೆಗುಂದದ
ಆತ್ಮಸ್ಥೈರ್ಯ ನನ್ನೊಳಿದೆ
ಗಡುವಿಲ್ಲದ ಬಡತನ ನೀಡಿ
ಗರಬಡಿಸಿದೆ ನೀನು
ಮಡುಗಟ್ಟಿದ ಆ ನೋವಲೂ
ನಡು ಮುರಿದು ದುಡಿವೆನು
ಉಳ್ಳವರ ಅಟ್ಟಹಾಸ ತೋರಿಸಿ
ಇಲ್ಲದ ನನ್ನ ಹಂಗಿಸುವೆ
ಅಂಬಲಿಯ ಕುಡಿದಾದರೂ
ಈಜಿ ದಡ ಸೇರುವೆ
ನೆಲೆಯಿಲ್ಲದ ನನ್ನನ್ನ ನೀ ಅಲೆಸಿದೆ
ಆ ಅಲೆಯಲ್ಲೂ ತೇಲಿ ಬರುವೆ
ಸೂರೊಂದನು ಕಟ್ಟಿ ಪಾರಾಗಿ
ನೆಮ್ಮದಿಯ ನೆರಳಲ್ಲಿ ಬಾಳುವೆ
ನಾ ಅಂಜಲಾರೆ ನೀ ಕಷ್ಟ ಕೊಟ್ಟರು
ನನ್ನ ತನ ಮಾಸದು ನೀನೆಷ್ಟೇ ಸುಟ್ಟರು
ಬಂದದ್ದೇ ಭಾಗ್ಯವೆಂದು
ಬದುಕುವ ಬಡವ ನಾನು
ಎದೆಗುಂದುವ ಮಾತೆ ಇಲ್ಲ
ಎದುರೀಜಿ ದುಡಿವೆ ಇನ್ನೂ.
725ಎಎಂ180715
*ಅಮುಭಾವಜೀವಿ*
*ಶುಭೋದಯ ಸ್ನೇಹಿತರೇ*
No comments:
Post a Comment