*ಇನ್ನೇಕೆ ಅಳುವೆ*
ಈ ವಿದಾಯದ ಯಾನದಲ್ಲಿ
ಅಳುಕುವೆ ಏಕೆ ನೀನಿಲ್ಲಿ
ಎಲ್ಲವೂ ವಿಧಿ ಲಿಖಿತ
ಇಲ್ಲಿ ಯಾವುದೂ ಇಲ್ಲ ಶಾಶ್ವತ
ಬರುವಾಗ ಖುಷಿಯ ಸಂಭ್ರಮ
ಬೆಳೆಯುತ್ತ ಬೆಳೆಸುವುದು ಪ್ರೇಮ
ಬದುಕಿನ ಯಾನದಲ್ಲಿ ನಿಲ್ದಾಣ ನೂರು
ಇಳಿದು ಹೋಗಲೆಬೇಕು ಬರಲು ಅವರೂರು
ಬಂಧ ಸಂಬಂಧಗಳ ಅನುಬಂಧಕೆ
ಇಲ್ಲಿ ನೂರು ಚಿತ್ರ ಸಾವಿರ ಪಾತ್ರ
ಒಂದೊಂದರಲ್ಲೂ ಒಂದೊಂದು ಅನುಭವ
ಹಂಚಿಕೊಂಡು ಬಾಳುವುದೇ ಜೀವನಸೂತ್ರ
ಎನಿತು ಕಾಲ ಜೊತೆಗಿದ್ದರೂ
ಈ ವಿದಾಯ ಅನಿವಾರ್ಯ
ಎಲ್ಲರೊಳಗೊಂದಾಗಿ ಎಲ್ಲರಿಗೂ ಬೇಕಾಗಿ
ಬದುಕುವುದೆ ಜೀವನ ಸೌಂದರ್ಯ
ಇನ್ನೇಕೆ ಅಳುವೆ ಬಿಡು ಅದರ ಗೊಡವೆ
ಕಳಚಿ ಹೋದುದಕೆ ಕೊರಗಬೇಡ
ಹೊಸ ಬಂಧವನು ಆಲಂಗಿಸಿ
ಮರೆತುಬಿಡು ಈ ದುಗುಡ
0719ಎಎಂ200717
*ಅಮುಭಾವಜೀವಿ*
No comments:
Post a Comment