Sunday, July 23, 2017

ಕವಿತೆ

ಮೋಡಗಳ ಮರೆಯಲ್ಲಿ ಹೊಂಗಿರಣ ತಾ ಚೆಲ್ಲಿ ಬಂದನದೋ ಭಾಸ್ಕರ ಮುಂಜಾನೆ ಮಂಜಿನಲಿ ಬಿರಿದ ಸುಮಗಳಲಿ ಮೊಳಗಿತ್ತು ದುಂಬಿ ಝೇಂಕಾರ ತುಂತುರು ಹನಿಗರಿದು ಹದವಾಗಿ ನೆನೆದ ಮಣ್ಣಲ್ಲಿ ಹೊಸ ಮೊಳಕೆ ಕಳೆಯೇರಿತ್ತು ಹಸಿರ ಕಾನನದಲ್ಲಿ ತಂಗಾಳಿಯು ತೇಲಿ ತೇಲಿ ಬೆಳಕನೆಲ್ಲ ಜಗಕೆ ಪಸರಿಸಿತು ಜಗದ ನಿದಿರೆಗೆ ವಿರಾಮವಿತ್ತು ಜೀವನ ಯಾನಕೆ ಸ್ಪೂರ್ತಿಯಾಯ್ತು ನೇಸರನ ನವ ಕಿರಣ ಮೂಕಮನಸಿನಲಿ ಎಲ್ಲ ಗಮನಿಸಿದ ಕವಿಭಾವಕೆ ಕವಿತೆ ಕಟ್ಟಲು ಈ ಹೊಸಬೆಳಕಾಯ್ತು ಪ್ರೇರಣ 0639ಎಎಂ21072017 *ಅಮುಭಾವಜೀವಿ*

No comments:

Post a Comment