Sunday, July 23, 2017

ಕವಿತೆ

*ಸೂರಿಲ್ಲದ ತವರು* ಮಲಗಿಕೋ ತಮ್ಮ ನಿನಗಾದರೂ ನನ್ನ ಮಡಿಲಿದೆ ಸೂರಿಲ್ಲದ ತವರು ನನ್ನ ಒಡಲು ಈ ಹರುಕು ಮುಸುಕು ವಸ್ತುಗಳು ನಮ್ಮ ಬಾಲ್ಯದ ಆಟಿಕೆಗಳು ಅಳಿದುಳಿದ ಪಾಳು ಜಾಗವೇ ಮಹಲು ಭಿಕ್ಷೆ ಬೇಡಿ ತರುವೆ ನಿನಗೂ ಹಂಚಿ ಕೊಡುವೆ ನನ್ನ ನೋವೇನಿದ್ದರೂ ನಿನ್ನ ಸುಖಕ್ಕೆ ಶ್ರಮಿಸುವೆ ಹೆತ್ತವರಾರೋ ಗೊತ್ತಿಲ್ಲ ಬಿಟ್ಟು ಹೋದರೇಕೋ ತಿಳಿದಿಲ್ಲ ಆದರೂ ಬದುಕಬೇಕು ನಾವಿಲ್ಲಿ ಬಡತನದ ಬೇಗೆಯ ಕುಲುಮೆಯಲ್ಲಿ ಮಾಸಿದ ಬಟ್ಟೆಯನುಟ್ಟು ಕೆದರಿದ ಕೂದಲನು ಬಿಟ್ಟು ಕನಿಕರವಿಲ್ಲದ ಹಸಿವ ನೀಡಲು ಧನಿಕರ ಮುಂದೆ ಕೈಯೊಡ್ಡಿ ತಂದು ತಿನಿಸುವೆ ಯಾರ ಶಾಪವೋ ನಮ್ಮ ಮೇಲೆ ಕೋಪವಾಗಿ ಸುರಿದಿದೆ ಅಗ್ನಿಜ್ವಾಲೆ ಕೊಚ್ಚೆ ನಾರುವ ಕೇರಿಯೊಳಗೆ ರಚ್ಚೆ ಹಿಡಿಯದೆ ಮಲಗು ಮಗುವೆ ಕಾಯೋಣ ನಮಗೂ ಬರಲೊಂದು ಕಾಲ ನಿರ್ಗತಿಕ ಬದುಕು ಸೋಲಿಸುವ ಛಲ ನಮ್ಮೊಳಗೆ ಜಾಗೃತವಾಗಿರಲಿ ಇನ್ನಾರಿಗೂ ನಮ್ಮ ಸ್ಥಿತಿ ಬರದಿರಲಿ 0153ಪಿಎಂ22072017 *ಅಮುಭಾವಜೀವಿ*

No comments:

Post a Comment