Thursday, August 6, 2020

ಗಜಲ್

*ಗಜಲ್*


ಭಾವ ಬುತ್ತಿಯಲ್ಲಿ ತುತ್ತಾಗು ಬಾ ಕಾವ್ಯ ಕನ್ನಿಕೆ
ಎದೆಯ ಭಿತ್ತಿಯಲ್ಲಿ ಚಿತ್ರವಾಗು ಬಾ ಕಾವ್ಯ ಕನ್ನಿಕೆ 

ನೂರು ನೋವುಗಳ ಕಂಡು ಸೋತಿರುವೆ 
ಮುಂಜಾನೆ ಮಂಜಿನ ನಗುವಾಗು ಬಾ ಕಾವ್ಯ ಕನ್ನಿಕೆ

ಅವಹೇಳನದ ಹೊಡೆತಕ್ಕೆ ಮೈ ಮನ ನೊಂದಿದೆ 
ನಿನ್ನೊಲವಿನ ಸ್ಪರ್ಶದ ಮದ್ದಾಗು ಬಾ ಕಾವ್ಯ ಕನ್ನಿಕೆ

ತುಳಿಯುವವರ ಅಟ್ಟಹಾಸಕ್ಕೆ ನಲುಗಿರುವೆ
ಮೆಟ್ಟಿ ನಿಲ್ಲಲು ಸ್ಫೂರ್ತಿಯಾಗು ಬಾ ಕಾವ್ಯ ಕನ್ನಿಕೆ 

ಹೃದಯ ಬಟ್ಟಲು ಹಿಡಿದು ಬರುತಿಹನು ಅಮು
ನಿರ್ದಯಿ ಜಗದಿ ಬದುಕಿಸುವ ತಾಯಾಗು ಬಾ ಕಾವ್ಯ ಕನ್ನಿಕೆ 

೦೫೦೪ಎಎಂ೦೭೦೮೨೦೨೦
*ಅಮುಭಾವಜೀವಿ ಮುಸ್ಟೂರು*