ನಿಲ್ಲಲಿ ಸಿಡಿಮದ್ದಿನ ಹಾವಳಿ
ಬೆಳಗಲಿ ದೀಪ ಮನೆಮನಗಳಲಿ
ಜ್ಞಾನವೆಂಬುದು ಜ್ಯೋತಿಯಂತೆ
ನಿಶ್ಯಬ್ದದ ಆಶಾಕಿರಣ
ಅಜ್ಞಾನವು ಪಟಾಕಿಯಂತೆ
ಶಬ್ದಗಳದ್ದೇ ಆಕ್ರಂದನ
ನಿಸರ್ಗದ ಎಲ್ಲಾ ಸಾಧನೆ
ಶಬ್ದರಹಿತ ಆರಾಧನೆ
ಮನುಜ ನಿನ್ನೀ ಶೋಧನೆ
ಜೀವಸಂಕುಲಕೆ ನರಕಯಾತನೆ
ಬೆಂಕಿಯನ್ನೂ ಬೆಳಕಾಗಿ
ಕಂಡಿದ್ದು ನಮ್ಮ ಸಂಸ್ಕೃತಿ
ಬೆಂಕಿ ಸೋಕಿ ಶಬ್ದವಾಗಿ
ಮಾಡಿದ್ದು ವಿಕೃತಿ
ದೀಪದೀಪವ ಬೆಳಗಿ
ಕೋಪತಾಪವೆಲ್ಲಾ ಮುಳುಗಿ
ಪ್ರಶಾಂತತೆಯ ಪುಳಕವಾಗಿ
ಸಂಭ್ರಮಿಸಲಿ ದೀಪಾವಳಿ
ತೊಂದರೆಗಳು ದೂರವಾಗಿ ತತ್ವಾದರ್ಶಗಳು ನಮ್ಮ ಬೆಳಗಿ
ಮನದ ತಮವ ನೀಗಿ
ಪ್ರಜ್ವಲಿಸಲಿ ಬದುಕು ಹಬ್ಬವಾಗಿ
0757ಎಎಂ251016
ಅಮುಭಾವಜೀವಿ