Saturday, October 22, 2016

ಈ ಹೊತ್ತಿನ ತಲ್ಲಣ

ನ್ಯಾಯ ಸಿಗದ ಆಕ್ರೋಶದಲ್ಲಿ ಆಡಳಿತಶಾಹಿ ದಬ್ಬಾಳಿಕೆಯಲ್ಲಿ ಅಸಹಾಯಕರನ್ನಾಗಿಸಿದೆ
ಈ ಹೊತ್ತಿನ ತಲ್ಲಣ

ಬರಗಾಲ ತಂದ ಭೀಕರ ಕ್ಷಾಮ
ಜಗದಿ ಇಲ್ಲವಾಗಿದೆ ಕ್ಷೇಮ
ಸತ್ತ ಮಾನವ ಪ್ರೇಮವೇ
ಈ ಹೊತ್ತಿನ ತಲ್ಲಣ

ಭ್ರಷ್ಟರ ಕೂಟದಲ್ಲಿ
ನಿಷ್ಠರ ಪರದಾಟ ನೋಡಿಲ್ಲಿ
ದಕ್ಷತೆಯ ಆತ್ಮಹತ್ಯೆಯೇ
ಈ ಹೊತ್ತಿನ ತಲ್ಲಣ

ನೀರಿಗಾಗಿ ಹಂಬಲಿಸುವ
ನ್ಯಾಯಕ್ಕಾಗಿ ಹಲುಬುವ
ಬಡಪಾಯಿಗೆ ಬಿದ್ದ ಏಟುಗಳೇ
ಈ ಹೊತ್ತಿನ ತಲ್ಲಣ

ಬರ ಬಂದು ಬಾಯಾರಿ
ರೈತ ಸಾಲದ ಶೂಲಕೇರಿ
ತಬ್ಬಲಿ ಮಕ್ಕಳ ಆಕ್ರಂದನವೇ
ಈ ಹೊತ್ತಿನ ತಲ್ಲಣ

ಅಬಲೆಯರ ಮೇಲೆ ಅತ್ಯಾಚಾರ ಕಂದಮ್ಮಗಳ ಮೇಲೆ ವಾಮಾಚಾರ ರಕ್ಷಿಸುವವನಿಂದಲೇ ಭ್ರಷ್ಟಾಚಾರವೇ
ಈ ಹೊತ್ತಿನ ತಲ್ಲಣ

ಆಧುನಿಕತೆಯ ಆಡಂಬರದಿ ಸೋಮಾರಿತನದ ವಿಡಂಬನೆಯ ವೃದ್ಧಾಶ್ರಮದಿ ಹೆತ್ತವರ ರೋಧನೆಯೇ
ಈ ಹೊತ್ತಿನ ತಲ್ಲಣ

ಸಾಕಿನ್ನು ಈ ತಲ್ಲಣ
ಬದುಕಾಗಲಿ ಸವಿಯೂರಣ
ಸಾಮರಸ್ಯವೇ ಜೀವನ
ಸಹಬಾಳ್ವೆಯೇ ಸವಿಭೋಜನ 0240ಪಿಎಂ221016

ಅಮುಭಾವಜೀವಿ ಅಪ್ಪಾಜಿ ಎ ಮುಸ್ಟೂರು (ಅಮುಭಾವಜೀವಿ )

No comments:

Post a Comment