*ಯೋಧರ ಬದುಕು ಬವಣೆ*
*ಸಂಚಿಕೆ 4*
*ಎರಡು ಹೊತ್ತಿನ ಗಂಜಿಗಾಗಿ ಯೋಧರಾದರೆ........*
ಜೀವನದಲ್ಲಿ ಕಷ್ಟಗಳು ಪ್ರತಿಯೊಬ್ಬರಿಗೂ ಸಹಜವಾಗಿಯೇ ಇರುತ್ತವೆ . ಆದರೆ ಕಷ್ಟಗಳನ್ನು ಮೆಟ್ಟಿನಿಂತು, ಬದುಕಿಗೊಂದು ಆಧಾರವನ್ನು ಹುಡುಕಿಕೊಳ್ಳುವುದು ಪ್ರತಿಯೊಬ್ಬ ಮನುಷ್ಯನ ಹಕ್ಕು ಮತ್ತು ಕರ್ತವ್ಯ. ಸಾಮಾನ್ಯವಾಗಿ ಸ್ವಾಭಿಮಾನಿಯಾಗಿ ಬದುಕಬೇಕಾದರೆ ಮನುಷ್ಯನಿಗೆ ಊಟ ಬಟ್ಟೆ ವಸತಿ ಹಾಗೂ ಶಿಕ್ಷಣ ಇವುಗಳನ್ನು ಪಡೆಯುವುದು ಜೀವನದ ಮುಖ್ಯ ಗುರಿಯಾಗಿರುತ್ತದೆ. ಆದರೆ ಅದಕ್ಕೆಂದು ಯಾರೊಬ್ಬರೂ ತನ್ನ ಪರಿಸ್ಥಿತಿಯನ್ನು ಹಳಿದುಕೊಂಡು ಬದುಕುವುದಿಲ್ಲ ಅವರ ಕೈಲಾದ ಮಟ್ಟಿಗೆ. ಜೀವನವನ್ನು ಸಾಗಿಸುತ್ತಿರುತ್ತಾರೆ.
ಒಬ್ಬ ಸೈನಿಕ ದೇಶದ ಹೆಮ್ಮೆಯ ಪುತ್ರ. ಅವನು ಹುಟ್ಟಿದ ಮನೆಯಲ್ಲಿ ಬಡತನವಿರಬಹುದು. ಆದರೆ ಸ್ವಾಭಿಮಾನ ದಲ್ಲಿ, ಆತ್ಮ ವಿಶ್ವಾಸದಲ್ಲಿ ಅವನೆಂದೂ ಬಡವನಲ್ಲ. ನಮ್ಮ ವ್ಯವಸ್ಥೆಗಳು ಸಮಾನತೆ ಹೆಸರಿನಲ್ಲಿ ನೂರಾರು ವರ್ಷಗಳಿಂದ ಬಡತನದ ಬಗ್ಗೆ ಬರಿ ಮಾತಿನಲ್ಲೇ ಎಲ್ಲವನ್ನೂ ಸಾಧಿಸಿದ್ದೇವೆ ಎಂದು ಹೇಳಿಕೊಂಡು ಬಂದರು ಇಂದಿಗೂ ದೇಶದಲ್ಲಿ ಬಡತನ ತಾಂಡವವಾಡುತ್ತಿದೆ. ಉಳ್ಳವರ ಕಪಿಮುಷ್ಠಿಯಲ್ಲಿ ಇಲ್ಲದವರ ಗೊಣಗುವಿಕೆ ಇನ್ನೂ ನಿಂತಿಲ್ಲ . ನಮ್ಮನ್ನು ಆಳುವ ಸರ್ಕಾರಗಳು ಕೇವಲ ಅಧಿಕಾರಕ್ಕಾಗಿ ಬಡತನವನ್ನು ಬಳಸಿಕೊಂಡವೇ ಹೊರತು ಬಡತನ ನಿರ್ಮೂಲನೆಗೆ ಒತ್ತು ಕೊಡಲೇ ಇಲ್ಲ.
ನಮ್ಮಲ್ಲಿ ಒಂದು ಅಲಿಖಿತ ಶಾಸನವಿದೆ ಅದೇನೆಂದರೆ ಶ್ರೀಮಂತರ ಮಕ್ಕಳು ಯಾರು. ಸೇನೆಗೆ ಸೇರುವುದಿಲ್ಲ ,ಬದಲಾಗಿ ಬಡ ಕುಟುಂಬದಿಂದ ಬಂದ ಯುವಕರು ಜೀವನ ನಿರ್ವಹಣೆಗಾಗಿ ಸೇನೆಯನ್ನು ಸೇರಿರುತ್ತಾರೆ. ಇದು ನಿಜ ಇರಬಹುದು ಏಕೆಂದರೆ ಸುಖದಲ್ಲಿ ಬದುಕಿದವರಿಗೆ ಯಾರಿಗೂ ಸೇವಾ ಮನೋಭಾವ ಬರುವುದು ಕಷ್ಟ . ಆದರೆ ಬಡತನದಲ್ಲಿ ಹುಟ್ಟಿದವನಿಗೆ ಬದುಕುವ ರೀತಿ ಅದು ಎಷ್ಟೇ ಕಷ್ಟವಾಗಿದ್ದರೂ ಸಹಿಸಿಕೊಳ್ಳುವ ಛಾತಿ ಇರುತ್ತದೆ. ಬಡತನ ಅವನಲ್ಲಿ ಸ್ವಾಭಿಮಾನವನ್ನು ಬೆಳೆಸುತ್ತದೆ. ಅದರ ಜೊತೆಗೆ ದೇಶ ಸೇವೆಗಾಗಿ ತನ್ನನ್ನು ಅರ್ಪಿಸಿಕೊಂಡವನಿಗೆ ಅವನ ಮನೆಯ ಬಡತನ ಎಂದು ಕಾಡುವುದಿಲ್ಲ . ಅದು ಅವನಲ್ಲಿ ಕೀಳರಿಮೆಯನ್ನು ತರುವುದಿಲ್ಲ ಬದಲಾಗಿ ಈ ಬಡತನ ಇದ್ದುದರಿಂದಲೇ ದೇಶ ಸೇವೆ ಮಾಡುವ ಅವಕಾಶ ದಕ್ಕಿದ್ದು ಎಂದು ಹೆಮ್ಮೆ ಪಡುತ್ತಾನೆ. ನಮ್ಮ ಸರ್ಕಾರಗಳು ಬಡತನವೇ ಇಲ್ಲದಂತೆ ನಿರ್ಮೂಲನೆ ಮಾಡಿದರೆ ದೇಶದ ಗಡಿ ಕಾಯುವ ಸೈನಿಕರನ್ನು ಆಮದು ಮಾಡಿಕೊಳ್ಳಬೇಕಾಗಿರುತ್ತಿತ್ತು.
ಬಡತನ ಎರಡು ಹೊತ್ತು ಗಂಜಿ ಕೊಡಿಸಿದರು ಅವರಲ್ಲಿ ಗಟ್ಟಿತನ, ಸ್ವಾಭಿಮಾನ, ಅರ್ಪಣಾ ಮನೋಭಾವ, ಮಾನವೀಯತೆ, ಸೇವಾ ಮನೋಭಾವ, ನಮ್ಮದು ಎಂಬ ವಿಶಾಲ ಹೃದಯ ವೈಶಾಲ್ಯತೆಯನ್ನು ಬೆಳೆಸುತ್ತದೆ ಅದಕ್ಕಾಗಿ ಎಂತಹ ಕಷ್ಟದ ಪರಿಸ್ಥಿತಿಯಲ್ಲೂಯೂ ನಮ್ಮ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ಶತೃಗಳ ಎದೆ ನಡುಗಿಸಿ ಹಿಮ್ಮೆಟ್ಟಿಸಿ ದೇಶಕ್ಕೆ ಜಯವನ್ನು ತಂದು ಕೊಡು ತ್ತಿದ್ದಾರೆ. ಹಿಮಪಾತ, ಬಿಸಿಲು ,ಗಾಳಿ, ಮಳೆ ,ಪ್ರವಾಹ ಎನ್ನದೆ ಬೆನ್ನ ಮೇಲೆ ಹತ್ತಾರು ಕೆಜಿ ತೂಕದ ಸಾಮಗ್ರಿಗಳನ್ನು ಕೊಂಡು ಕಣಿವೆ ಮರುಭೂಮಿ ಸಾಗರ ಗಿರಿ ಶಿಖರಗಳನ್ನು ಏರಿ ಹೋಗಿ ಶತ್ರುಗಳನ್ನು ಸದೆ ಬಡಿಯುವ ನಮ್ಮ ಸೈನಿಕರು ನಿಜಕ್ಕೂ ಅಭಿನಂದನಾರ್ಹರು. ಅವರ ಸೇವೆಯಲ್ಲಿ ಬಡತನ ಎಂದಿಗೂ ಅವರನ್ನು ಕಟ್ಟಿ ಹಾಕುವುದಿಲ್ಲ ಬದಲಾಗಿ ಅವರಲ್ಲಿ ಎಂಥದೇ ಸನ್ನಿವೇಶದಲ್ಲಿ ಆದರೂ ಬದುಕಿ ದೇಶ ರಕ್ಷಣೆ ಗೋಸ್ಕರ ತ್ಯಾಗ ಮನೋಭಾವನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸೈನಿಕರ ಬದುಕು ಬವಣೆಗಳ ಬಗ್ಗೆ ನಮ್ಮನ್ನು ಆಳುವ ಜನರು ಇಲ್ಲ ಸಲ್ಲದ ಕೆಸರೆರಚಾಟದಲ್ಲಿ ದೇಶಪ್ರೇಮಿಗಳ ಸ್ವಾಭಿಮಾನಕ್ಕೆ ಕುತ್ತು ತರುತ್ತಿರುವುದು ಖೇದದ ಸಂಗತಿ. ಬಡವನಾದರೆ ಏನು ತನಗೆ ಇಲ್ಲದಿದ್ದರೂ ಇದ್ದುದರಲ್ಲಿ ಹಂಚಿ ತಿನ್ನುವ ಮನೋಭಾವ ಹೊಂದಿರುವ ಮಾನವೀಯ ಗುಣವುಳ್ಳವರು. ಅಂತಹ ಸ್ವಾಭಿಮಾನಿ ಸೈನಿಕರಿಗೆ ಒಂದು ಸಲಾಂ.
06:44 ಪಿಎಂ 13 4 2019
*ಅಮುಭಾವಜೀವಿ*