*ಭ್ರಷ್ಟ ಕೊಳೆ*
ಅಲ್ಲಿ ಚುನಾವಣೆಯಲ್ಲಿ
ಸೋಲು ಗೆಲುವಿನ ಲೆಕ್ಕಾಚಾರ
ಇಲ್ಲಿ ಓಡುವ ಸ್ಪರ್ಧೆಯಲ್ಲಿ
ಗೆಲುವು ಸೋಲಿನ ನಿರ್ಧಾರ
ನೀರಿಗಾಗಿ ಇಲ್ಲಿ ಆಹಾಕಾರ
ಬರ ರೈತರ ಬದುಕಿಗೆ ತಂದಿದೆ ಸಂಚಕಾರ
ಜಲ ಬತ್ತಿದರೂ ಹರಿಯುತಿದೆ
ಕಪ್ಪುಹಣ ಹೊಳೆ
ಯಾವಾಗ ಕೊಚ್ಚಿ ಹೋಗುವುದೋ
ಜಗದಿ ಹೆಚ್ಚಿದ ಭ್ರಷ್ಟ ಕೊಳೆ
*ಅಮುಭಾವಜೀವಿ*
No comments:
Post a Comment