ವಿಷಯ_ - *ಸಧೃಡ ಭಾರತ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ*
ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಮಾನವಸಂಪನ್ಮೂಲದ ಸದ್ಬಳಕೆ ಅತ್ಯಂತ ಅವಶ್ಯಕವಾಗಿರುತ್ತದೆ. ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಅಭಿವೃದ್ಧಿಯ ಮಾನದಂಡವಾಗಿ ಅಲ್ಲಿನ ಯುವ ಸಮುದಾಯ ಹೆಚ್ಚಿನ ಜವಾಬ್ದಾರಿಯನ್ನು ಬರಬೇಕಾಗುತ್ತದೆ. ಇದನ್ನು ಜಾಗರೂಕತೆಯಿಂದ ಯಶಸ್ವಿಯಾಗಿ ಬಳಸಿಕೊಳ್ಳುವ ಹೊಣೆಗಾರಿಕೆ ಸರ್ಕಾರದ್ದಾಗಿರುತ್ತದೆ.
ಒಂದು ದೇಶ ಸದೃಢವಾಗಬೇಕಾದರೆ ಆ ದೇಶದಲ್ಲಿ ಇರುವ ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಗಳು ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಯುವಕರನ್ನು ಇಲ್ಲಿ ತೊಡಗಿಸಿಕೊಂಡಾಗ ಮಾತ್ರ ದೇಶದ ರಕ್ಷಣೆ ಆರ್ಥಿಕತೆ ಸಾಮಾಜಿಕ ಮೌಲ್ಯಗಳು ಅತ್ಯಂತ ಹೆಚ್ಚು ಪ್ರಬಲಗೊಂಡಾಗ ದೇಶ ತಾನೇತಾನಾಗಿ ಸದೃಢವಾಗುತ್ತದೆ.
ನಮ್ಮ ದೇಶ ಆಪಾರ ಮಾನವ ಸಂಪನ್ಮೂಲವನ್ನು ಹೊಂದಿದ್ದರೂ ಸಹ ಅಭಿವೃದ್ಧಿಯಲ್ಲಿ ಇನ್ನೂ ಹಿನ್ನಡೆ ಸಾಧಿಸಲು ಮೂಲಕಾರಣ ನಮ್ಮ ಯುವಸಮುದಾಯ ಕೇವಲ ಸರ್ಕಾರಿ ಕೆಲಸವನ್ನು ಮಾತ್ರ ನಂಬಿಕೊಂಡಿರುವುದೇ ಆಗಿದೆ . ಅದರ ಬದಲಿಗೆ ತಮ್ಮ ಕೌಶಲ್ಯದ ಆಧಾರದ ಮೇಲೆ ವೃತ್ತಿಯನ್ನು ಕಂಡುಕೊಂಡು ಅದನ್ನು ರಯ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾವಹಾರಿಕ ಜ್ಞಾನದಿಂದ ಹೆಚ್ಚು ಸಂಪಾದನೆ ಯಾಗುವಂತೆ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ನಮ್ಮ ಯುವ ಸಮುದಾಯ ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗಿದೆ.
*ನಮ್ಮ ಯುವಕರು ಮೊದಲು ದೇಶಕ್ಕಾಗಿ ನಾನು ಏನಾದರೂ ಮಾಡಬೇಕೆಂಬ ಬೆಳೆಸಿಕೊಳ್ಳಬೇಕು.*
*ತಾನು ಪಡೆದ ಶಿಕ್ಷಣ ತನ್ನ ದೇಶಕ್ಕಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು.*
*ಸರ್ಕಾರ ಕೊಡುವ ಉಚಿತ ಶಿಕ್ಷಣವನ್ನು ಪಡೆದುಕೊಂಡು ಸ್ವಂತ ಉದ್ಯೋಗ ಕೈಗೊಂಡು ದೇಶದ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸುವುದು.*
*ಜ್ಞಾನ ಪಲಾಯನವನ್ನು ತಪ್ಪಿಸಿ ಅದನ್ನು ದೇಶಕ್ಕಾಗಿ ಮುಡಿಪಾಗಿಡಬೇಕು.*
*ಪ್ರತಿಯೊಬ್ಬ ಯುವಕರು ತನ್ನದೇ ಆದ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಂಡು ಅದನ್ನೇ ಬಂಡವಾಳವಾಗಿಸಿಕೊಳ್ಳುವತ್ತ ಗಮನಹರಿಸಬೇಕು.*
*ಎಲ್ಲಕ್ಕೂ ಸರ್ಕಾರವನ್ನು ಅವಲಂಬಿಸಿದೆ ಸ್ವ ಉದ್ಯೋಗ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು.*
*ವ್ಯವಸ್ಥೆಯನ್ನು ದೂರುವ ಬದಲು ವ್ಯವಸ್ಥೆಯನ್ನೇ ಬದಲಾಯಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.*
*ದೇಶಕ್ಕಾಗಿ ನಾನು ಪರಿಕಲ್ಪನೆ ಎಲ್ಲರ ಮನಸ್ಸಿನಲ್ಲಿ ಮೂಡಬೇಕು.*
*ಸಾಮಾಜಿಕ ಸ್ಥಿತ್ಯಂತರಗಳನ್ನು ಮೆಟ್ಟಿನಿಂತು ಬೆಳೆಯಬೇಕು.*
ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬ ಯುವಕರು ದೇಶದ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿ, ಮಾನವ ಸಂಪನ್ಮೂಲ ಸದ್ಬಳಕೆಯಾಗುವಂತೆ ಎಲ್ಲರೂ ಯೋಜನೆಗಳನ್ನು ರೂಪಿಸಿಕೊಂಡು ದೇಶದ ಪ್ರಗತಿಗೆ ತಮ್ಮ ಅಳಿಯ ಸೇವೆಯನ್ನು ಸಲ್ಲಿಸಿದಾಗ ಮಾತ್ರ ಈ ದೇಶ ಸಮರ್ಥ ಸದೃಢ ದೇಶ ವಾಗುವುದರಲ್ಲಿ ಎರಡು ಮಾತಿಲ್ಲ
*ಅಮುಭಾವಜೀವಿ*
ಅತ್ಯಂತ ಅರ್ಥಗರ್ಭಿತವಾಗಿದೆ.ಯುವಶಕ್ತಿ ತನ್ನ ಜವಾಬ್ದಾರಿ ಅರಿಯಬೇಕು ಅದರಂತೆ ಯುವಶಕ್ತಿಯ ಸದ್ಬಳಕೆ ಸರಿಯಾದ ರೀತಿಯಲ್ಲಿ ನಡೆಯಬೇಕು.ಆಗ ಮಾತ್ರ ಸದೃಢ ದೇಶದ ನಿರ್ಮಾಣ ಸಾಧ್ಯ.
ReplyDelete