ಕಾಣಿಸದೆ ನನ್ನೀ ವಿರಹದ ಭಾವ
ಮೊಸರಿನ ಗಡಿಗೆ ಹೊತ್ತು
ನಾ ಬಂದೆನೋ ನಿನಗಾಗಿ
ನಾ ಬರುವುದ ತಿಳಿದಿದ್ದರೂ
ಎಲ್ಲಿ ಹೋದೆ ನೀ ಮರೆಯಾಗಿ
ಏತಕ್ಕೆ ನಿನಗೀ ಹುಡುಗಾಟ
ಎಲ್ಲಿಯವರೆಗೂ ನನ್ನೀ ಹುಡುಕಾಟ
ತುಳಸಿ ಮಾಲೆಯ ಕಟ್ಟಿ ತಂದಿರುವೆ
ಏತಕ್ಕೆ ನೀನು ಮರೆಯಾಗಿರುವೆ
ವಿರಹದಿ ನಾನು ಬೆಂದಿರುವೆ
ನಿನ್ನ ಕಾಣದೆ ನಾನು ನೊಂದಿರುವೆ
ಮತ್ತೆ ಮತ್ತೆ ನೀ ನೋಯಿಸುವೆ ಏಕೆ
ಏನು ಹೇಳು ನಿನ್ನ ಮನದ ಬೇಡಿಕೆ
ರಾಧೆಯು ನಾನು ನೀರಾದೆನು ಇನ್ನೂ
ರಮಿಸಲು ಬಾರೋ ಮಾಧವ
ನಿನ್ನ ಕೊಳಲ ದನಿಯ ಕೇಳಿದೆ ನಾನು
ಕಂಗಾಲಾಗಿರುವೆ ಚಡಪಡಿಸಿ ಜೀವ
ನೀನಿಲ್ಲದ ಬದುಕು ಸಾವಿಗೆ ಸಮಾನ
ನಿನ್ನ ಕಾಣದೆ ಸತ್ತರೆ ಸಾವಿಗೂ ಅವಮಾನ
ಕಣ್ಣ ಮುಂದೆ ಬಂದು ಬಿಡು ಈಗಲೇ
ಸಾವು ಬಂದು ನನ್ನ ಕರೆದೊಯ್ಯುವ ಮೊದಲೇ
ರಾಧೆಯ ಜೀವ ಜೀವನ ಕೃಷ್ಣಗೆ ಮುಡಿಪು
ನಿನ್ನ ಕಂಡರೆ ತಾನೆ ಮನಸ್ಸಿಗೆ ತಂಪು
0619ಎಎಂ11062022
*ಅಮುಭಾವಜೀವಿ ಮುಸ್ಟೂರು*
No comments:
Post a Comment