Sunday, July 23, 2023

ಕವನ

*ಬಾಳ ಪಥದ ಸಾರಥಿ*

ಪ್ರೀತಿಯ ರೂಪವೇ ನೀನು
ಖುಷಿಯ ಕಾರಣವೇ ನೀನು
ಬಾಳಿನ ಪಥಕೆ ಸಾರಥಿ ನೀನು
ನಿನ್ನೀ ಮಡಿಲೊಳಗೆ ಮಗುವಾಗಲೇನು ?

ನಿನ್ನೆಯ ಅನುಭವವು ನೀನು
ನಾಳೆಯ ಭರವಸೆಯೂ ನೀನು
ಇಂದಿನ ವಾಸ್ತವದರಿವು ನೀನು
ಸೋತ ಬದುಕಿನೊಳಗೆ ಗೆಲುವು ತಂದೆ ಇನ್ನು

ಉಸಿರಿನ ಅಭಿಮಾನ ನೀನು
ಬಾಳಿನ ಸ್ವಾಭಿಮಾನ ನೀನು
ಸಾಧನೆಗೆ ಅವಮಾನ ಮೆಟ್ಟಿಲೆಂದ ನೀನು
ಬೆನ್ನ ಹಿಂದೆ ನಿಂತು ಸಾಧಕನನ್ನಾಗಿಸಿದೆ ನನ್ನನ್ನು

ಆಡಿಕೊಳ್ಳುವವರ ಮಾತಿಗೆ ಕಿವುಡಾಗೆಂದೆ ನೀನು
ಕೂಡಿಕೊಳ್ಳದವರ ಬಿಟ್ಟು ಬದುಕೆಂದೆ ನೀನು
ನೋಡುವವರ ನೋಟ ಬದಲಾಗುವ ಹಾಗೆ
ನನ್ನೊಳಗೆ ಸರ್ವ ಬದಲಾವಣೆಗಳ ತಂದೆ ನೀನು

ನನ್ನ ಹೂವ ಮಾಡಿ ಮುಳ್ಳಂತೆ ನಿಂತು ಕಾಪಾಡಿದೆ ನೀನು
ನನ್ನ ನಂದಾದೀಪವಾಗಿಸಿ ಬತ್ತಿಯಂತೆ ಉರಿದೆ ನೀನು
ನನ್ನೊಳಗೆ ಆತ್ಮವಿಶ್ವಾಸ ತುಂಬಿ ನೆರಳಂತೆ ಕಾಯ್ದೆ ನೀನು
ನನ್ನ ಸಲಹಿ ನೀನು ಎಲೆ ಮರೆಯಕಾಯಾಗಿ ಉಳಿದೆ ಏನು ?

೦೫೧೧ಪಿಎಂ೨೩೦೭೨೦೨೩
*ಅಮುಭಾವಜೀವಿ ಮುಸ್ಟೂರು*

Thursday, July 13, 2023

ಕವನ

ಓಂ ಗುಣವಂತೆ
ನೀ ನನ್ನ ಬಾಳ ದೇವತೆ
ಪ್ರೀತಿಯ ಬತ್ತದ ಒರತೆ
ಎಷ್ಟು ಬರೆದರೂ ಸಾಲದು ಕವಿತೆ

ಭಾಷೆಗೂ ಮೀರಿದ ಭಾವ ನೀನು
ಸೋಲಲ್ಲೂ ಗೆಲ್ಲುವ ಗುರಿಯು ನೀನು
ಬಾಳ ನೊಗವ ಹೊತ್ತು ನಡೆವ
ಚಿತ್ತ ವಿಚಲಿತಗೊಳ್ಳದ ಶಕ್ತಳು ನೀನು

ನೋವುಗಳ ಸಹಿಸಿಕೊಳ್ಳುವ
ನಲಿವ ಗುಲಾಬಿ ಹೂ ನೀನಲ್ಲವೇ
ಅವಮಾನಗಳ ಅಭಿಮಾನಿಸುವ
ಸ್ವಾಭಿಮಾನಿ ಸಂಗಾತಿ ನಿನಗೆ ಸಾಟಿಯಿಲ್ಲವೇ

ಸುಖವನೆಂದಿಗೂ ನಿರೀಕ್ಷಿಸದೆ
ಕಷ್ಟಗಳ ಪರೀಕ್ಷೆಗೊಡ್ಡಿಕೊಂಡು
ಬಾಳ ದೀಕ್ಷೆಯ ಯಶಸ್ವಿಗೊಳಿಸಲು
ಕಂಕಣ ತೊಟ್ಟ ದಿಟ್ಟ ಹೆಣ್ಣು ನೀನು

ನನ್ನ ಸೋಲಿನೊಂದಿಗೆ ಬದುಕುತ
ಪ್ರತಿ ಕ್ಷಣ ಹೆಗಲಿಗೆ ಹೆಗಲಾಗಿ ನಿಂತ
ಹಗಲಿರುಳು ದಣಿಯದೆ ದುಡಿವ
ನಿಸ್ವಾರ್ಥ ಸೇವಕಿ ಈ ಬಾಳನಾಯಕಿ

೧೦೩೪ಪಿಎಂ೧೬೦೬೨೦೨೩
*ಅಮುಭಾವಜೀವಿ ಮುಸ್ಟೂರು*

ಬಾಳ ಹಾದಿಯ ಬೆಳಕು ನೀನಪ್ಪ
ದಣಿವಿರದೆ ದುಡಿದು ನೆರಳಿಯುವೆಯಪ್ಪ
ನಿನ್ನ ಶ್ರಮದ ಸಾಧನೆ ನಮ್ಮ ಬದುಕಪ್ಪ
ನಿನ್ನ ಪ್ರೀತಿಗೆ ಸಮ ಯಾವುದೂ ಇಲ್ಲಪ್ಪ

ಗದರುವ ದನಿಯ ಗಾಂಭೀರ್ಯ ನಿನ್ನದಪ್ಪ
ಕಣ್ಣಿಗೆ ಕಾಣದೊಲವು ನಿನದಪ್ಪ
ಭಯದ ಹಿಂದಿನ ಪ್ರೀತಿಯ ಪರ್ವತ ನೀನಪ್ಪ
ನಿನ್ನ ಕಾಳಜಿಯ ಋಣ ತೀರಿಸಲು ಜನ್ಮ ಸಾಲದಪ್ಪ

ಸವೆದ ಚಪ್ಪಲಿ ಹರಿದ ಬಟ್ಟೆ ನಿನ್ನ ಆಸ್ತಿಯಪ್ಪ
ಹಣದಿ ಬಡವನಾದರೂ ಗುಣದಿ ನೀ ಕುಬೇರನಪ್ಪ
ನಮ್ಮ ಹಸಿವ ನೀಗುವಲ್ಲಿ ನಿನ್ನ ಹಸಿವು ಮರೆತೆಯಪ್ಪ
ನಮ್ಮ ಖುಷಿಯಲ್ಲಿ ನಿನ್ನ ದಣಿವ ನಿತ್ಯ ಮರವೆಯಪ್ಪ

ಕಣ್ಣೊಳಗೆ ಸಿಟ್ಟಿದ್ದರು ಎದೆಯೊಳಗೆ
ಪ್ರೀತಿಯ ಮಂಜು ಹನಿ ನಿನ್ನದಪ್ಪ
ಹೀಗೆ ಕುಟುಂಬದ ಆಧಾರವಾಗಿ
ದುಡಿಯಲು ನಿನಗೆ ಸ್ಪೂರ್ತಿ ಅದಾರಪ್ಪ

ಹೆಜ್ಜೆ ಹೆಜ್ಜೆಗೂ ಬದುಕುವ ರೀತಿ ಕಲಿಸಿದೆಯಪ್ಪ
ಹೆಚ್ಚು ಕಡಿಮೆ ಆಗದ ಹಾಗೆ ನಮ್ಮನ್ನು ನೀನು ಬೆಳೆಸಿದೆಯಪ್ಪ
ತಾಯಿ ನೀಡಿದ ಉಸಿರು ತಂದೆ ಹರಿಸಿದ ಬೆವರು
ನಮ್ಮ ಇಡೀ ಬದುಕಿನ ಬೆಂಗಾವಲು ನೀವಪ್ಪ

ಅಪ್ಪ ಎನ್ನುವ ಪದವೇ ಶಿಸ್ತಿನ ರೂಪ
ಅಪ್ಪ ನೀನಿರಲು ನಮಗೆಲ್ಲ ಸಿಕ್ಕುವುದಪ್ಪ
ಅಪ್ಪ ಎಂದರೆ ಕಷ್ಟಗಳೆಲ್ಲ ಓಡುವುದಪ್ಪ
ಅಪ್ಪ ಅಮ್ಮ ನಮ್ಮ ಪಾಲಿನ ನಿಜದ ದೇವರುಗಳಪ್ಪ

೦೩೦೮ಎಎಂ೧೯೦೬೨೦೨೩
*ಅಮುಭಾವಜೀವಿ ಮುಸ್ಟೂರು*
,*ತನಗ*

ಮಳೆಗೇಕೋ ಮುನಿಸು
ಇಳೆಗಿಲ್ಲ ಸೊಗಸು
ಬರಗಾಲದ ಭೀತಿ
ಬದುಕಿಗೆ ಫಜೀತಿ

ಬೆಳೆಯಿಲ್ಲದೆ ರೈತ
ಕಂಗಾಲಾಗಿ ಕೈಹೊತ್ತ
ಖಚಿತತೆ ಇಲ್ಲದೆ
ಕುಸಿದಿದೆ ಬದುಕು

೦೮೫೨ಎಎಂ೨೦೦೬೨೦೨೩
*ಅಮುಭಾವಜೀವಿ ಮುಸ್ಟೂರು*

ಬಾ ಎಂದು ಕರೆಯಲೇ ಇಲ್ಲ
ಆದರೂ ಬಂದೆ ನೀ ಬಾಳಲಿ
ಪ್ರೀತಿಯ ಬಲೆಯಲಿ ಸಿಕ್ಕಿಸಿ
ಬಲಿಗೈದೆ ನನ್ನ ನೆಮ್ಮದಿಯನಲ್ಲಿ
ಖುಷಿ ಇದ್ದ ಬದುಕಿನಲಿ
ನೀನದನು ಕಸಿದು ಕೊಂಡೊಯ್ದೆ
ನೀನೊಬ್ಬ ಅವಕಾಶವಾದಿ
ಬಲು ದೊಡ್ಡ ಪಾಠ ಕಲಿಸಿದೆ ಜೀವನದಿ

೦೨೧೩ಎಎಂ೨೫೦೬೨೦೨೩
*ಅಮುಭಾವಜೀವಿ ಮುಸ್ಟೂರು*

ತನಗ

ಬಂಧನದಾಚೆ ಚೆಂದ
ಸ್ಪರ್ಶಾಸಾಧ್ಯ ನಿನ್ನಿಂದ
ದುಗುಡ ಕಳೆಯದು
ಮನ ಅಳುತಿಹುದು

ಹೊರಗೆ ತಿಳಿಗೊಳ
ಒಳಗಿಲ್ಲ ನಿರುಮ್ಳ
ಅರಮನೆ ಸುಖ್ವಿಲ್ಲ
ಸೆರೆಮನೆ ಹಿತ್ವಿಲ್ಲ

ಕನ್ನಡಿಯೊಳಗಂಟು
ಸೆರೆಮನೆಯಾ ನಂಟು
ತನ್ನವರಿಂದ ದೂರ
ಮನಸೇತಕೋ ಭಾರ

ಭಾವ ಬತ್ತಿಹ ಮನ
ನೋವ ನುಂಗಿ ದಿನ
ಕಾಯ್ತಿರುವೆ ಬಿಡ್ಗಡೆ
ಕಳಚದು ಬಂಧನ

ಹೆಣ್ಣ ಬದುಕೇ ಹೀಗೆ
ಸದಾ ಬಂಧನ ಬೇಗೆ
ಒಂಟಿತನ ಶಿಕ್ಷೆಯ
ಬೇಕು ಸ್ವತಂತ್ರ ಜೀವ್ನ

೦೨೪೮ಎಎಂ೨೫೦೬೨೦೨೩
*ಅಮುಭಾವಜೀವಿ ಮುಸ್ಟೂರು*

Thursday, July 6, 2023

ಕವನ

ಓಂ ಗುಣವಂತೆ
ನೀ ನನ್ನ ಬಾಳ ದೇವತೆ
ಪ್ರೀತಿಯ ಬತ್ತದ ಒರತೆ
ಎಷ್ಟು ಬರೆದರೂ ಸಾಲದು ಕವಿತೆ

ಭಾಷೆಗೂ ಮೀರಿದ ಭಾವ ನೀನು
ಸೋಲಲ್ಲೂ ಗೆಲ್ಲುವ ಗುರಿಯು ನೀನು
ಬಾಳ ನೊಗವ ಹೊತ್ತು ನಡೆವ
ಚಿತ್ತ ವಿಚಲಿತಗೊಳ್ಳದ ಶಕ್ತಳು ನೀನು

ನೋವುಗಳ ಸಹಿಸಿಕೊಳ್ಳುವ
ನಲಿವ ಗುಲಾಬಿ ಹೂ ನೀನಲ್ಲವೇ
ಅವಮಾನಗಳ ಅಭಿಮಾನಿಸುವ
ಸ್ವಾಭಿಮಾನಿ ಸಂಗಾತಿ ನಿನಗೆ ಸಾಟಿಯಿಲ್ಲವೇ

ಸುಖವನೆಂದಿಗೂ ನಿರೀಕ್ಷಿಸದೆ
ಕಷ್ಟಗಳ ಪರೀಕ್ಷೆಗೊಡ್ಡಿಕೊಂಡು
ಬಾಳ ದೀಕ್ಷೆಯ ಯಶಸ್ವಿಗೊಳಿಸಲು
ಕಂಕಣ ತೊಟ್ಟ ದಿಟ್ಟ ಹೆಣ್ಣು ನೀನು

ನನ್ನ ಸೋಲಿನೊಂದಿಗೆ ಬದುಕುತ
ಪ್ರತಿ ಕ್ಷಣ ಹೆಗಲಿಗೆ ಹೆಗಲಾಗಿ ನಿಂತ
ಹಗಲಿರುಳು ದಣಿಯದೆ ದುಡಿವ
ನಿಸ್ವಾರ್ಥ ಸೇವಕಿ ಈ ಬಾಳನಾಯಕಿ

೧೦೩೪ಪಿಎಂ೧೬೦೬೨೦೨೩
*ಅಮುಭಾವಜೀವಿ ಮುಸ್ಟೂರು*

ಬಾಳ ಹಾದಿಯ ಬೆಳಕು ನೀನಪ್ಪ
ದಣಿವಿರದೆ ದುಡಿದು ನೆರಳಿಯುವೆಯಪ್ಪ
ನಿನ್ನ ಶ್ರಮದ ಸಾಧನೆ ನಮ್ಮ ಬದುಕಪ್ಪ
ನಿನ್ನ ಪ್ರೀತಿಗೆ ಸಮ ಯಾವುದೂ ಇಲ್ಲಪ್ಪ

ಗದರುವ ದನಿಯ ಗಾಂಭೀರ್ಯ ನಿನ್ನದಪ್ಪ
ಕಣ್ಣಿಗೆ ಕಾಣದೊಲವು ನಿನದಪ್ಪ
ಭಯದ ಹಿಂದಿನ ಪ್ರೀತಿಯ ಪರ್ವತ ನೀನಪ್ಪ
ನಿನ್ನ ಕಾಳಜಿಯ ಋಣ ತೀರಿಸಲು ಜನ್ಮ ಸಾಲದಪ್ಪ

ಸವೆದ ಚಪ್ಪಲಿ ಹರಿದ ಬಟ್ಟೆ ನಿನ್ನ ಆಸ್ತಿಯಪ್ಪ
ಹಣದಿ ಬಡವನಾದರೂ ಗುಣದಿ ನೀ ಕುಬೇರನಪ್ಪ
ನಮ್ಮ ಹಸಿವ ನೀಗುವಲ್ಲಿ ನಿನ್ನ ಹಸಿವು ಮರೆತೆಯಪ್ಪ
ನಮ್ಮ ಖುಷಿಯಲ್ಲಿ ನಿನ್ನ ದಣಿವ ನಿತ್ಯ ಮರವೆಯಪ್ಪ

ಕಣ್ಣೊಳಗೆ ಸಿಟ್ಟಿದ್ದರು ಎದೆಯೊಳಗೆ
ಪ್ರೀತಿಯ ಮಂಜು ಹನಿ ನಿನ್ನದಪ್ಪ
ಹೀಗೆ ಕುಟುಂಬದ ಆಧಾರವಾಗಿ
ದುಡಿಯಲು ನಿನಗೆ ಸ್ಪೂರ್ತಿ ಅದಾರಪ್ಪ

ಹೆಜ್ಜೆ ಹೆಜ್ಜೆಗೂ ಬದುಕುವ ರೀತಿ ಕಲಿಸಿದೆಯಪ್ಪ
ಹೆಚ್ಚು ಕಡಿಮೆ ಆಗದ ಹಾಗೆ ನಮ್ಮನ್ನು ನೀನು ಬೆಳೆಸಿದೆಯಪ್ಪ
ತಾಯಿ ನೀಡಿದ ಉಸಿರು ತಂದೆ ಹರಿಸಿದ ಬೆವರು
ನಮ್ಮ ಇಡೀ ಬದುಕಿನ ಬೆಂಗಾವಲು ನೀವಪ್ಪ

ಅಪ್ಪ ಎನ್ನುವ ಪದವೇ ಶಿಸ್ತಿನ ರೂಪ
ಅಪ್ಪ ನೀನಿರಲು ನಮಗೆಲ್ಲ ಸಿಕ್ಕುವುದಪ್ಪ
ಅಪ್ಪ ಎಂದರೆ ಕಷ್ಟಗಳೆಲ್ಲ ಓಡುವುದಪ್ಪ
ಅಪ್ಪ ಅಮ್ಮ ನಮ್ಮ ಪಾಲಿನ ನಿಜದ ದೇವರುಗಳಪ್ಪ

೦೩೦೮ಎಎಂ೧೯೦೬೨೦೨೩
*ಅಮುಭಾವಜೀವಿ ಮುಸ್ಟೂರು*
,*ತನಗ*

ಮಳೆಗೇಕೋ ಮುನಿಸು
ಇಳೆಗಿಲ್ಲ ಸೊಗಸು
ಬರಗಾಲದ ಭೀತಿ
ಬದುಕಿಗೆ ಫಜೀತಿ

ಬೆಳೆಯಿಲ್ಲದೆ ರೈತ
ಕಂಗಾಲಾಗಿ ಕೈಹೊತ್ತ
ಖಚಿತತೆ ಇಲ್ಲದೆ
ಕುಸಿದಿದೆ ಬದುಕು

೦೮೫೨ಎಎಂ೨೦೦೬೨೦೨೩
*ಅಮುಭಾವಜೀವಿ ಮುಸ್ಟೂರು*

ಬಾ ಎಂದು ಕರೆಯಲೇ ಇಲ್ಲ
ಆದರೂ ಬಂದೆ ನೀ ಬಾಳಲಿ
ಪ್ರೀತಿಯ ಬಲೆಯಲಿ ಸಿಕ್ಕಿಸಿ
ಬಲಿಗೈದೆ ನನ್ನ ನೆಮ್ಮದಿಯನಲ್ಲಿ
ಖುಷಿ ಇದ್ದ ಬದುಕಿನಲಿ
ನೀನದನು ಕಸಿದು ಕೊಂಡೊಯ್ದೆ
ನೀನೊಬ್ಬ ಅವಕಾಶವಾದಿ
ಬಲು ದೊಡ್ಡ ಪಾಠ ಕಲಿಸಿದೆ ಜೀವನದಿ

೦೨೧೩ಎಎಂ೨೫೦೬೨೦೨೩
*ಅಮುಭಾವಜೀವಿ ಮುಸ್ಟೂರು*

ತನಗ

ಬಂಧನದಾಚೆ ಚೆಂದ
ಸ್ಪರ್ಶಾಸಾಧ್ಯ ನಿನ್ನಿಂದ
ದುಗುಡ ಕಳೆಯದು
ಮನ ಅಳುತಿಹುದು

ಹೊರಗೆ ತಿಳಿಗೊಳ
ಒಳಗಿಲ್ಲ ನಿರುಮ್ಳ
ಅರಮನೆ ಸುಖ್ವಿಲ್ಲ
ಸೆರೆಮನೆ ಹಿತ್ವಿಲ್ಲ

ಕನ್ನಡಿಯೊಳಗಂಟು
ಸೆರೆಮನೆಯಾ ನಂಟು
ತನ್ನವರಿಂದ ದೂರ
ಮನಸೇತಕೋ ಭಾರ

ಭಾವ ಬತ್ತಿಹ ಮನ
ನೋವ ನುಂಗಿ ದಿನ
ಕಾಯ್ತಿರುವೆ ಬಿಡ್ಗಡೆ
ಕಳಚದು ಬಂಧನ

ಹೆಣ್ಣ ಬದುಕೇ ಹೀಗೆ
ಸದಾ ಬಂಧನ ಬೇಗೆ
ಒಂಟಿತನ ಶಿಕ್ಷೆಯ
ಬೇಕು ಸ್ವತಂತ್ರ ಜೀವ್ನ

೦೨೪೮ಎಎಂ೨೫೦೬೨೦೨೩
*ಅಮುಭಾವಜೀವಿ ಮುಸ್ಟೂರು*