Sunday, July 23, 2023

ಕವನ

*ಬಾಳ ಪಥದ ಸಾರಥಿ*

ಪ್ರೀತಿಯ ರೂಪವೇ ನೀನು
ಖುಷಿಯ ಕಾರಣವೇ ನೀನು
ಬಾಳಿನ ಪಥಕೆ ಸಾರಥಿ ನೀನು
ನಿನ್ನೀ ಮಡಿಲೊಳಗೆ ಮಗುವಾಗಲೇನು ?

ನಿನ್ನೆಯ ಅನುಭವವು ನೀನು
ನಾಳೆಯ ಭರವಸೆಯೂ ನೀನು
ಇಂದಿನ ವಾಸ್ತವದರಿವು ನೀನು
ಸೋತ ಬದುಕಿನೊಳಗೆ ಗೆಲುವು ತಂದೆ ಇನ್ನು

ಉಸಿರಿನ ಅಭಿಮಾನ ನೀನು
ಬಾಳಿನ ಸ್ವಾಭಿಮಾನ ನೀನು
ಸಾಧನೆಗೆ ಅವಮಾನ ಮೆಟ್ಟಿಲೆಂದ ನೀನು
ಬೆನ್ನ ಹಿಂದೆ ನಿಂತು ಸಾಧಕನನ್ನಾಗಿಸಿದೆ ನನ್ನನ್ನು

ಆಡಿಕೊಳ್ಳುವವರ ಮಾತಿಗೆ ಕಿವುಡಾಗೆಂದೆ ನೀನು
ಕೂಡಿಕೊಳ್ಳದವರ ಬಿಟ್ಟು ಬದುಕೆಂದೆ ನೀನು
ನೋಡುವವರ ನೋಟ ಬದಲಾಗುವ ಹಾಗೆ
ನನ್ನೊಳಗೆ ಸರ್ವ ಬದಲಾವಣೆಗಳ ತಂದೆ ನೀನು

ನನ್ನ ಹೂವ ಮಾಡಿ ಮುಳ್ಳಂತೆ ನಿಂತು ಕಾಪಾಡಿದೆ ನೀನು
ನನ್ನ ನಂದಾದೀಪವಾಗಿಸಿ ಬತ್ತಿಯಂತೆ ಉರಿದೆ ನೀನು
ನನ್ನೊಳಗೆ ಆತ್ಮವಿಶ್ವಾಸ ತುಂಬಿ ನೆರಳಂತೆ ಕಾಯ್ದೆ ನೀನು
ನನ್ನ ಸಲಹಿ ನೀನು ಎಲೆ ಮರೆಯಕಾಯಾಗಿ ಉಳಿದೆ ಏನು ?

೦೫೧೧ಪಿಎಂ೨೩೦೭೨೦೨೩
*ಅಮುಭಾವಜೀವಿ ಮುಸ್ಟೂರು*

No comments:

Post a Comment