Sunday, September 24, 2023

ಕವಿತೆ

ಬರದ ಛಾಯೆ ಎಲ್ಲೆಲ್ಲೂ ಕವಿದು
ಧರೆಯಾಗುತ್ತಿದೆ ಎಲ್ಲಾ ಬರಿದು

ಮೌನ ತಡೆಗ ಮೋಡಗಳೇ
ಒಮ್ಮೆ ಕೇಳಿ ರೈತ ಮಕ್ಕಳ ಅಳಲು
ಏನಾಗಿದೆಯೋ ನಿಮಗೆ
ಇಲ್ಲಿ ಬಂದು ನಾಲ್ಕನಿಯ ಚೆಲ್ಲಿ ಹೋಗಲು

ಬೆಳೆದ ಬೆಳೆ ಅರ್ಧಕ್ಕೆ ಅಸುನೀಗಿದೆ
ಬಿತ್ತಿದ ರೈತನಾಗಿ ಕೂತು ತಂದಿದೆ
ಸಾಲದ ಶೂಲ ಕೇಕೆ ಹಾಕಿ ನಕ್ಕಿದೆ
ನೇಣಿನ ಕುಣಿಕೆಯೊಳಗೆ ರೈತನ ಕತ್ತು ಸಿಕ್ಕಿಕೊಂಡಿದೆ

ಒಡೆಯಲಿಲ್ಲದ ಮನೆಯ ಮೇಲೆ
ನೂರಾರು ಸಂಕಷ್ಟಗಳು ಎರಗಿ ಬಿದ್ದಿವೆ
ಬಡತನದ ಬೇಗೆಯ ಜೊತೆಗೆ
ಸಾವು ನೋವುಗಳ ಸರಮಾಲೆಗೆ ಸೋತು ಹೋಗಿವೆ

ಎಲ್ಲಕ್ಕೂ ಉಪಶಮನ ಮಳೆಯ ಹನಿಯಿಂದ
ಜಗಕ್ಕೆ ಜೀವ ಚೇತನ ಮಳೆ ಹನಿಯಿಂದ
ಮುನಿದು ಕೂರದೆ ಕನಿಕರ ತೋರಿಸಿ
ನಿಮ್ಮನೆ ನಂಬಿದ ಜನಜಾನುವಾರುಗಳ ರಕ್ಷಿಸಿ

ಅಲ್ಲೆಲ್ಲೋ ಸುರಿದು ವ್ಯರ್ಥವಾಗಿ ಹರಿದು
ಸಾಗರದ ಉಪ್ಪಾಗುವ ಬದಲು
ಬಯಲು ಸೀಮೆಯ ಬರಿದಾದ ಬದುಕಿಗೆ
ಒಮ್ಮೆ ಬಂದು ಬಿಡಿ 
__RECORD__
ಮರುಪೂರಣಗೈಯಲು

0525 ಪಿಎಂ 23092023
ಅಮುಭಾವಜೀವಿ ಮುಸ್ಟೂರು

ಮೋಸ ಹೋಯಿತು ಹೃದಯ
ಅರಿಯದೆ ಅವಳ ಆಂತರ್ಯ

ಅವಳ ಪ್ರೀತಿಯ ಆಟಕ್ಕೆ ಬಲಿಯಾದೆ
ಅದರಿಂದ ಜಗದೆದುರು ಖಳನಾದೆ
ಇದರಿಂದ ಬಹುದೊಡ್ಡ ಪಾಠ ಕಲಿತೆ
ಇದಕ್ಕೆ ಕಾರಣ ಅಲ್ಲಿತ್ತು ನಂಬಿಕೆಯ ಕೊರತೆ

ಎಲ್ಲ ಚೆನ್ನಾಗಿರುವಾಗ ಇತ್ತು ನಂಬಿಕೆ
ಭಿನ್ನ ರಾಗಕೆ ಮುರಿದುಬಿತ್ತು ಒಡಂಬಡಿಕೆ
ಆಗಲೇ ಆವರಿಸಿತು ಅನುಮಾನ
ಅದರ ಬೆನ್ನಲ್ಲೇ ಮಾಡಿದ್ದು ಅವಮಾನ

ಬದುಕಿನ ಸ್ವಚ್ಛಂದದ ಕೊಳಕ್ಕೆ ಕಲ್ಲೆಸೆದಳು
ಎಲ್ಲದರ ಮೂಲ ನೀನೆಂದು ಗೂಬೆ ಕೂರಿಸಿ
ಅವರಿವರು ಆಡಿಕೊಳ್ಳುವರೆಂದು ದೂರತಳ್ಳಿ
ನಂಬಿದ ಹೃದಯಕ್ಕೆ ಇಟ್ಟು ಹೋದಳು ಕೊಳ್ಳಿ

ಜೀವನದ ಈ ಓಟದಲ್ಲಿ ಸೋತೆ
ಕಂಗಾಲಾಗಿ ದಾರಿ ಕಾಣದೆ ಕುಳಿತೆ
ಮೋಸ ಹೋದ ಪ್ರೀತಿಗೆ ಹೊಸ ನಿದರ್ಶನವಾದೆ
ದೀಪದ ಬೆಳಕಿಗೆ ಮೈಸುಟ್ಟು ಪತಂಗವಾದೆ

ಸಂಪೂರ್ಣ ಅರಿತುಕೊಳ್ಳದೆ 
ಮನಸ್ಸು ಮಾತು ಕೊಡದಿರಿ
ಆಕರ್ಷಣೆಗೆ ಬಲಿಯಾಗಿ
ಬದುಕಲ್ಲಿ ಮೂರ್ಖರಾಗದಿರಿ
0548ಪಿಎಂ23092023
*ಅಮುಭಾವಜೀವಿ ಮುಸ್ಟೂರು*

*ತನಗ*

ಬದುಕಿನ ಗತಿಯು
ಬಯಸಿದೆ ಪ್ರೀತಿಯ
ಬಳಲಿದ ಹೃದಯ
ಬೇಡಿದೆ ಶುಭಾಶಯ

ಹಾದಿಗೊಬ್ಬ ಸಂಗಾತಿ
ಸಿಕ್ರೆ ಬಾಳ್ಗೆ ಸಂತೃಪ್ತಿ
ಆಡುವ ಪ್ರೀತಿ ಮಾತು
ಕಳೆವುದು ಆ ಸುಸ್ತು

ಮುಸ್ಸಂಜೆಯ ಗೋಧೂಳಿ
ಒಲವಿನ ತಂಗಾಳಿ
ಏಕಾಂತ ಕಚಗುಳಿ
ಪ್ರೀತಿಯ ಬಳುವಳಿ

೦೬೧೩ಪಿಎಂ೨೩೦೯೨೦೨೩
*ಅಮುಭಾವಜೀವಿ ಮುಸ್ಟೂರು*

ಭಾದ್ರಪದದ ಚೌತಿಗೆ ಬಂದು
ಕಾಯ್ಕಡಬು ಹೊಟ್ಟೆ ತುಂಬ ತಿಂದು
ಮೂಷಕನ ಮೇಲೆ ಖುಷಿಯಿಂದ ಹೊರಟ
ಶಿವಸುತ ಪಾರ್ವತಿ ಪುತ್ರ ಗಣಪ

ಬೀದಿ ಬೀದಿಯಲ್ಲಿ ಅಂದ ಚಂದದ ಮಂಟಪ
ನಿತ್ಯ ಪೂಜೆ ಮಾಡುವರು ಭಕ್ತರು ಹಚ್ಚಿ ಧೂಪ
ಆ ಬಾಲ ವೃದ್ಧರ ಪ್ರೀತಿಯ ದೈವ
ಮನೆ ಮನೆಯಲ್ಲಿ ವಿಜೃಂಭಿಸಿದೆ ಗಣೇಶೋತ್ಸವ

ಮೋದಕ ಪ್ರಿಯ ಗಜವದನ
ಆದಿ ಪೂಜಿತ ಗಜಾನನ
ತಾಯಿ ಗೌರಿಯೊಂದಿಗೆ ಬರುವ
ಸುಬ್ರಹ್ಮಣ್ಯನಗ್ರಜ ಗಣಪ

ನಗುವ ಚಂದ್ರಗೆ ಶಾಪವಿತ್ತ ಅಂದು 
ಕೃಷ್ಣನ ಶಾಪವಿಮೋಚನೆ ಮಾಡಿದ ಬಂದು
ವಿಘ್ನ ನಿವಾರಕ ವಿಘ್ನೇಶ ದೇವ
ಹರಸಿಹೋಗು ಈ ನಮ್ಮ ಜಗವ

ಸ್ವಾತಂತ್ರ್ಯ ಚಳುವಳಿಯ ಸಂಘಟಕ
ಸ್ವಾಭಿಮಾನದ ಸರ್ವಶ್ರೇಷ್ಠ ವಿನಾಯಕ
ಕಲಿಯುವ ಮನಸ ಹರಸು ವಿದ್ಯಾ ಪ್ರದಾಯಕ
ಕರುನಾಡಿನ ಮನೆ ಮಗ ಮೂಷಿಕ ವಾಹನ

೦೯೧೯ಪಿಎಂ೨೩೦೯೨೦೨೩
*ಅಮುಭಾವಜೀವಿ ಮುಸ್ಟೂರು*

Thursday, September 14, 2023

ಕವಿತೆ

#ಅಮುಭಾವಸ್ಫುರಣ ೨೦

*ಅಬಾಬಿ ೦೧*

ಸೋಲುಗಳೆಲ್ಲ ಪಾಠಗಳಾಗಿ
ಗೆಲುವಿಗೆ ಮೆಟ್ಟಿಲಾಗಬೇಕೆಂದರೆ
ಅನುಭವಗಳ ಮೂಟೆ ಹೊರು
ಅಮು
ಅನುಸಂಧಾನದ ಅವಶ್ಯಕತೆ ಇಲ್ಲ

೦೮೦೮ಪಿಎಂ೧೧೦೯೨೦೨೩
*ಅಮುಭಾವಜೀವಿ ಮುಸ್ಟೂರು*

#ಅಬಾಬಿ ೦೨

ಯಾವ ಧರ್ಮವೂ ಕೂಡ
ಕಷ್ಟದಲ್ಲಿರುವಾಗ ಕೈಹಿಡಿಯಲಿಲ್ಲ
ಆಳುವವರ ಅಧಿಕಾರಕ್ಕಷ್ಟೆ ಮೀಸಲಾಯ್ತು
ಅಮು
ಮಾನವ ಧರ್ಮ ದೊಡ್ಡದಲ್ಲವೇ

೦೮೨೯ಪಿಎಂ೧೧೦೯೨೦೨೩
*ಅಮುಭಾವಜೀವಿ ಮುಸ್ಟೂರು*




ಸುಪ್ತ ಮನದ ಭಾವಕೆ
ಆಪ್ತವೆನಿಸುವ ಮಾತು ಹೇಳಿದಾಕೆ
ಹೃದಯದ ನೆಲದಿ ಪ್ರೀತಿಯ ಬಿತ್ತಿ
ಒಲವಿನ ಬೆಳೆ ಬೆಳೆವವಳು ನನ್ನಾಕೆ

ಅಂತರಂಗದ ಮಡಿಲು ಇವಳು
ಅನುಬಂಧದ ಕಡಲು ಇವಳು
ಅಭಿಮಾನದ ಆಸ್ತಿ ನನ್ನವಳು
ಅವಮಾನಕ್ಕೆ ಶಾಸ್ತಿ ಮಾಡಿದವಳು

ಬದುಕಿನ ಬಂಡಿಗೆ ಹೆಗಲಾದವಳು
ನನ್ನೊಲುವಿನ ಕುಡಿಯ ಹೆತ್ತವಳು
ಪ್ರೀತಿಯ ಹಂಬಲಕ್ಕೆ ಬೆಂಬಲವಾದವಳು
ನಡೆನುಡಿಗೆ ಸ್ಪೂರ್ತಿಯಾದವಳು

ಉಸಿರಿನ ಜೊತೆಗೆ ಉಸಿರಾದವಳು
ಬಾಳಿಗೆ ಹಸಿರಿನ ಸಿರಿ ತಂದವಳು
ಹರೆಯದೂರಲಿ ಸಿಕ್ಕ ಅಭಿಮಾನಿ ಇವಳು
ಬರೆವ ಪ್ರತಿ ಸಾಲಿನ ಅರ್ಥ ನನ್ನವಳು

ಒಂಟಿತನದ ಬೇಸರ ನೀಗಲು
ಪೂರ್ಣಚಂದ್ರನಂತೆ ಬಂದ ಬೆಳದಿಂಗಳು
ಪ್ರತಿಕ್ಷಣವೂ ಪ್ರತಿಗೆ ಹೆಜ್ಜೆಗೂ ಜೊತೆಯಾದ
ಉಸಿರೊಡನೆ ಬೆರೆತ ಸಂಗಾತಿ ನನ್ನವಳು

೦೪೦೩ಪಿಎಂ 10.09.2023
ಅಮುಭಾವಜೀವಿ ಮುಸ್ಟೂರು

ನೋಡಿಯೂ ನೋಡದಂತೆ ಇರುವ
ನಿನ್ನ ಬೇಜವಾಬ್ದಾರಿತನಕೊಂದು ಧಿಕ್ಕಾರವಿರಲಿ
ತೊರೆದು ಹೋಗುವ ಮೊದಲು
ಕೊಟ್ಟ ಮಾತು ಮರೆತು ಹೋದೆಯಾ
ಕಾಯುವ ಜೀವದ ತಳಮಳ ಅರಿಯದಾದೆಯಾ?
ಈ ಅಗಲಿಕೆಯ ಹಿಂದಿನ ಉದ್ದೇಶವೇನು ಅರಿಯದಾದೆ
ನೀ ಮರೆತರೂ ನಾ ಮರೆಯಲಾರೆ
ಅದುವೇ ಸ್ನೇಹದನುಬಂಧದ ಸಂಸ್ಕಾರ
ಎಲ್ಲಿದ್ದರೂ ಹೇಗಿದ್ದರೂ ಒಮ್ಮೆ ಮಾತಾಡಿ ನೋಡು
ಬಡಜೀವದ ಖುಷಿಯ ಕ್ಷಣಕೆ ಸಹಕರಿಸು

೦೮೩೭ಪಿಎಂ೧೦೦೯೨೦೨೩
*ಅಮುಭಾವಜೀವಿ ಮುಸ್ಟೂರು*



ಹಾಲೆರೆವವರ ಮೇಲೆರಗುವ
ವಿಷ ಸರ್ಪದ ರೂಪ ನೀನು
ಮಾತಲ್ಲಿಯೇ ವಿಷ ಬೆರೆಸಿ
ಕತ್ತು ಹಿಸುಕಿ ಕೊಂದೆ ನೀನು

ನಿನ್ನದೆಂತಹ ಎದೆಗಾರಿಕೆ
ಇಲ್ಲವೇ ಇಲ್ಲ ನಿನಗೆ ಹಿಂಜರಿಕೆ
ಎದೆ ಭಾವಗಳಿಗೆ ನೇಣು ಬಿಗಿದು
ಗೋಣು ಹಿಡಿದು ಅಣಕಿಸುತ್ತಿರುವೆ

ಬೆಲ್ಲ ಬೆರೆತ ಹಾಲಿನಂತ ಸ್ನೇಹದಿ
ಒಲ್ಲದ ಹುಳಿ ಹಿಂಡಿ ಹಾಳು ಮಾಡಿದೆ
ಪ್ರೀತಿಯ ಮುಸುಕು ಮರೆಯಿಂದ
ಹೃದಯವ ಚುಚ್ಚಿ ಘಾಸಿಗೊಳಿಸಿದೆ

ನಿನ್ನ ನೀಚ ತನದ ಸಂಗ ಬಯಸಿ
ನನ್ನ ಸಾಚಾತನಕ್ಕೆ ಮಸಿ ಬಡಿದುಕೊಂಡೆ
ಸ್ವೇಚ್ಛಾಚಾರದ ನಿನ್ನ ವ್ಯಭಿಚಾರದಿಂದ
ನನ್ನ ಬಾಳಿಗೆ ಸಂಚಕಾರ ತಂದುಕೊಂಡೆ

ಮತ್ತೆ ಬರದಿರು ಬದುಕೊಳಗೆ
ಖಾಲಿ ಜಾಗವಿಲ್ಲ ಎದೆಯೊಳಗೆ
ನೋವ ತುಂಬಿ ಹೋದ ಕಾರಣ
ಸಾವಿಗಾಗಿ ಹಂಬಲಿಸಿದೆ ಪ್ರತಿ ಘಳಿಗೆ

0400 ಪಿಎಂ 03092023
ಅಮುಭಾವಜೀವಿ ಮುಸ್ಟೂರು


ಹೆಣ್ಣನ್ನು ಗೌರವಿಸಿದ 
ಮಣ್ಣಾಯಿತೆ ಭರತ ಭೂಮಿ
ವಿಕೃತಿಯ ಮನಸ್ಥಿತಿಯಲ್ಲಿ
ಬೀದಿಯಲ್ಲಿ ಬೆತ್ತಲಾಗಿಸುವರಲ್ಲ ಸ್ವಾಮಿ

ಹೆಣ್ಣು ಮಾನ ಹರಣಗೈಯುವುದು
ಪುರುಷ ನಿನ್ನ ಪೌರುಷಕ್ಕೆ ತಕ್ಕುದಲ್ಲ
ನಿನ್ನ ಮನೆಯ ಹೆಣ್ಣಿಗೆ ಈ ಗತಿ ಬರಲು
ಪ್ರೇಮವಿಲ್ಲದೆ ಕಾಮಿಸುವ ನೀ ಮನುಷ್ಯನಲ್ಲ

ಮೈ ಮೇಲಿನ ಗಾಯ ಮಾಯಬಹುದು
ಮನಸಿಗಾದ ನೋವಿಗೆ ಮದ್ದಿಲ್ಲ
ಇಂದ್ರಿಯಗಳ ನಿಗ್ರಹಿಸದ ಗಂಡೇ
ನಿನ್ನ ಷಂಡತನವ ದಂಡಿಸಬೇಕಲ್ಲ

ಎಲ್ಲಾ ಹೆಣ್ಣು ನಿನ್ನ ತಾಯಂತಲ್ಲವೇ
ನಮ್ಮಂತ ಮಗಳು ಸೋದರಿ ನಿಮಗಿಲ್ಲವೇ
ನಿಮ್ಮ ಹುಚ್ಚುತನಕ್ಕೆ ಕಡಿವಾಣವಿರಲಿ
ಅತಿಯಾದರೆ ವಿಷವಾಗುವುದು ನೆನಪಿರಲಿ

ಇವರ ದಂಡಿಸಲಾರರಾದಿರೇಕೆ ಆರಕ್ಷಕರೇ
ಇದನ್ನು ಖಂಡಿಸದಾದರೇಕೆ ನಾಯಕರೇ
ನಿಮ್ಮದೇ ಕುಲವೆಂಬ ವ್ಯಾಕುಲವೇ
ಜಾಲತಾಣದಿ ಹರಿದಾಡುವ ಸತ್ಯ ಸಾಕ್ಷಿಯಾಗದೆ

ಭಾರತಾಂಬೆಯ ರಕ್ಷಿಸುವ ಮನಸಿದ್ದರೆ
ಮೊದಲು ನಮ್ಮ ಕುಲವ ರಕ್ಷಿಸಿರಿ
ಜಗವೆ ಹೆಮ್ಮೆ ಪಡುವ ಸಂಸ್ಕೃತಿ ನಮ್ಮದು
ಹೆಣ್ಣನ್ನು ಪೂಜಿಸುವೆಡೆ ದೇವರಿರುವನು ನಂಬಿರಿ
339 ಪಿಎಂ 3 9 2023
ಅಮುಭಾವಜೀವಿ ಮುಸ್ಟೂರು



ಹೆಣ್ಣು ನಾನಲ್ಲವೇ
ನಿಮಗದು ತಿಳಿದಿಲ್ಲವೇ
ಮನೆ ಬೆಳಗ ಬಂದವಳು ನಾನು
ಹೀಗೆ ಬೆತ್ತಲಾಗಿಸಿ ಅವಮಾನಿಸೋದು ಸರಿಯೇನು

ಹೆತ್ತವರ ತವರಲ್ಲಿ ಬಿಟ್ಟು
ಬಂಧು ಬಾಂಧವರನೆಲ್ಲ ಮರೆತು
ತಾಳಿಗಾಗಿ ತಾಳಿಕೊಂಡು ಬಾಳುವೆ
ಸಂಸ್ಕಾರದಿ ಸಂಸಾರವ ನಾ ನಡೆಸುವೆ

ಬಡವರೆಂದು ಅಡವಿಟ್ಟಿಲ್ಲ ನನ್ನ
ಸ್ವಾಭಿಮಾನದ ಪಾಠ ಕಲಿತಿರುವೆ ಬಲ್ಲೆಯ ನನ್ನ
ಅಬಲೆಯಲ್ಲ ನನ್ನ ಕುಲ ಸಬಲವಾಗಿಹುದು
ಹೆಣ್ಣನು ಗೌರವಿಸದಿದ್ದರೆ ನಿನ್ನ ಕುಲ ಉಳಿಯದು

ಪ್ರೀತಿ ಕೊಟ್ಟು ಪ್ರೀತಿ ಪಡೆವ ಹಂಬಲ
ಪತಿ ನೀನು ಸತಿಗೆ ನೀಡು ಸದಾ ಬೆಂಬಲ
ಮನೆಯ ಜ್ಯೋತಿ ನಾನು ಬೆಳಗಬೇಕಲ್ಲವೇ
ಮನವ ನೋಯಿಸಿ ನೀ ಹೀಗೇಕೆ ಹಿಂಸಿಸುವೆ

ಕಾನೂನಿನ ತಾಯಿ ನಿನ್ನ 
ಕಣ್ಣ ಪಟ್ಟಿ ತೆರೆದು ನೋಡು
ಕುಡಿಯ ತುಳಿಯುವ ಇವರಿಗೆ 
ಕಠಿಣ ಶಿಕ್ಷೆ ನೀಡಿ ನನ್ನ ಕಾಪಾಡು

3:35 ಪಿಎಂ ೦೩೦೯೨೦೨೩
ಅಮುಭಾವಜೀವಿ ಮುಸ್ಟೂರು

ಏಕೆ ಬೇಕಂತವಳ ಸಹವಾಸ
ಬಲು ನಯವಾಗಿ ನೀಡಿದಳು
ಬೇಡವೆಂಬ ತಿರಸ್ಕೃತ ಸಂದೇಶ
ಎಲ್ಲೋ ಇದ್ದು ಹೇಗೋ ಬಂದು
ಜೊತೆಯಾದವಳಿಗಿಂದು ಸ್ನೇಹ
ಉಸಿರುಗಟ್ಟಿಸಿತೆಂದು ತೊರೆದಳು

ಒಲ್ಲದ ಮನಸ್ಷೆಂದೆಂದಿಗೂ
ಮೊಸರಲಿ ಕಲ್ಲುಡುಕುವುದುವುದು ಸಹಜ
ಈಗರಿವಾಯಿತು ಅದುವೇ ನಿಜ
ಹೃದಯದ ಕೋರಿಕೆ ಅರಿಯದ
ಬಂಧ ಅನೈತಿಕವಾಗುವುದಾದರೆ
ಅಂತಹ ಸ್ನೇಹ ಕೊಡುವುದು ನೋವಿನ ಸಜ

ಅವಮಾನಿಸಿದವಳ ಅವಲಂಬನೆ
ನಿನಗೇಕೆ ತೊರೆದು ಹೊರ ಬಾ ಮನವೆ
ಬೇಲಿಯ ಹೂ ತಾವರೆಗೆ ಸಮವೇ ?
ಕ್ಷಮೆ ಕೋರಿದರೂ ಕರಗದ ಶಿಲೆಯೊಳು
ಶಿಲ್ಪವಿದೆಯೆಂಬ ನಂಬಿಕಯೇಕೆ
ಕಲ್ಲು ಕಡೆವ ಹುಚ್ಚು ಬಿಡು ಹೃದಯವೇ !

ದೂರುವುದ ಬಿಟ್ಟು ದೂರ ಹೋಗು
ದಾರಿ ನೂರಿವೆ ನೆಮ್ಮದಿ ಕಾಣಲು
ಮರೆತು ಬದುಕುವುದು ಅನಿವಾರ್ಯವಲ್ಲ
ಇನ್ನೆಂದೂ ಅತ್ತ ಸುಳಿಯದಿರು
ಹೀಗಾಯಿತೆಂದು ಕೊರಗಿ ಕೂರದಿರು
ಹೊಸ ಭಾವಗಳಲಿ ಕಾಣು ಸೌಂದರ್ಯವನೆಲ್ಲ

೧೦೦೬ಪಿಎಂ೧೦೦೯೨೦೨೩
*ಅಮುಭಾವಜೀವಿ ಮುಸ್ಟೂರು*


ಬರುವ ಸಂಕಷ್ಟಕಗಳಿಗಿಂತ ನಿನ್ನ
ಮರೆತು ಬಿಡುವುದೇ ವಾಸಿ
ತೊರೆದು ಹೋಗಿ ಬಿಡು
ಓ ನನ್ನ ಹೃದಯವಾಸಿ
ಒಂದು ಬಂಧ ಆನಂದ ತರಬೇಕು
ಅವಮಾನಿಸುವ ಸಂಬಂಧ ನನಗೆ ಬೇಕು

ಬಾಳಲ್ಲಿ ನಮಗೊಂದು
ಹೊಣೆಗಾರಿಕೆಯುಂಟು
ಬೇಡ ನಮಗೆ ಅದಕ್ಕೆ
ಕುತ್ತು ತರುವ ಈ ನಂಟು
ಸಹಿಸಲಾರೆ ಆ ಅವಮಾನ
ಅದಕೊಪ್ಪದು ಸ್ವಾಭಿಮಾನ

ದೂರುವ ಬಂಧಕ್ಕಿಂತ
ದೂರವಿರುವುದೇ ಲೇಸು
ದಾರಿ ತಪ್ಪಿದ ಬದುಕಿನಲ್ಲಿ
ಕಾಣಸಿಗದು ಯಶಸ್ಸು
ನಿನ್ನ ದಾರಿಗೆ ನೀನೆ ಮಾದರಿ
ನನ್ನ ಪಾಡಿಗೆ ನಾನಿರುವುದೇ ಸರಿ

ನೋಡುವವರ ನೋಟಗಳಿಗೆ 
ಆಹಾರವಾಗುವ ಬದಲು
ಆದರ್ಶಗಳ ಬೆನ್ನತ್ತಿ ಹೋದರೆ
ಅದೇ ರಹದಾರಿ ಸಾಧಿಸಲು
ಬೆರಳು ತೋರಿ ನಗುವಂತಾಗದೆ
ಬೆರಳಿಟ್ಟುಕೊಳ್ಳುವಂತೆ ಬಾಳಬೇಕು

೦೮೩೩ಎಎಂ೧೪೦೯೨೦೨೩
*ಅಮುಭಾವಜೀವಿ ಮುಸ್ಟೂರು*

ನೆನಪಿನ ದೋಣಿಯ
 ನಾವಿಕ ನೀನು
ಹೃದಯದ ಕೋರಿಕೆಯ 
ಈಡೇರಿಸು ನೀನು
ಪ್ರೀತಿಯ ಅಲೆಯಲ್ಲಿ ತೇಲುತ್ತಿರುವೆ 
ದಡ ಸೇರಿಸು ನನ್ನನು
ನದಿಯ ದಡದಲ್ಲಿ ಕುಳಿತು
ನಿನ್ನ ನೆನೆವೆ ನಿತ್ಯ
ಹರಿವ ಮನದ ಲಹರಿಯ 
ಭಾವನೆಗಳು ಸತ್ಯ
ಈ ಏಕಾಂತದ ಸಂಜೆಯಲಿ
ನೀ ಜೊತೆಯಾದರೆಷ್ಟು ಚಂದ

1027ಎಎಂ14092023
*ಅಮುಭಾವಜೀವಿ ಮುಸ್ಟೂರು*

ದೂರದ ಬೆಟ್ಟದ ನುಣುಪಿಗೆ
ಮನಸೋತು ಮೋಸ ಹೋದೆ
ಹತ್ತಿಯ ಹಣ್ಣು ಸವಿಯಲು
ಹೋಗಿ ಬರೀ ಹುಳು ಕಂಡು ಪೆಚ್ಚಾದೆ

ಬಂಧನದೊಳಗಿರುವ ಹಕ್ಕಿಯ
ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದೆ
ಹಾವಿಗೆ ಹಾಲೆರೆಯಲು ಹೋಗಿ
ಕಚ್ಚಿಸಿಕೊಂಡು ವಿಲವಿಲ ಒದ್ದಾಡದೆ

ಅಂಬರದ ಮಳೆಬಿಲ್ಲ ಬಣ್ಣವ
ಮೋಹಿಸಿ ಪಾತಾಳಕೆ ಜಾರಿದೆ
ಬೆಳದಿಂಗಳೆಂದು ಹತ್ತಿರ ಹೋಗಿ
ರೆಕ್ಕೆ ಸುಟ್ಟ ಚಿಟ್ಟೆಯಂತಾದೆ

ನದಿಯ ಬಳುಕು ಕಂಡು ಧುಮುಕಿದೆ
ಆದರಲ್ಲಿ ಸುಳಿಗೆ ಸಿಕ್ಕು ನಾ ಮುಳುಗಿದೆ
ಮುಂಗಾರಿನ ಮಿಂಚೆಂದು ಬಯಸಿದೆ
ಬರಸಿಡಿಲ ಹೊಡೆತಕ್ಕೆ ನಲುಗಿದೆ

ಇಷ್ಟೆಲ್ಲಕೂ ಕಾರಣ ಹರೆಯದ ಮೋಹ
ಅರಿಯದೆ ಬಯಸಿ ಬಿಕಾರಿಯಾದೆ
ದೂರದ ಬೆಟ್ಟದ ಒಳಗುಟ್ಟು ತಿಳಿಯದೆ
ಗೋರಿ ಸೇರುವ ಸ್ಥಿತಿ ತಲುಪಿದೆ

ಬೇಡ ಇಂತಹವರ ಸಹವಾಸ
ಅದಕೆ ನನ್ನ ಬದುಕಾಗಲಿ ಸಂದೇಶ
ತಲೆ ತೆಗಿಯುವವರ ಸಂಘ ಬೇಡ
ತಲೆಯಿಂದಲೇ ತೆಗೆದು ಹಾಕಿ ನೋಡ

0133ಪಿಎಂ14092023
ಅಮುಭಾವಜೀವಿ ಮುಸ್ಟೂರು