Sunday, September 24, 2023

ಕವಿತೆ

ಬರದ ಛಾಯೆ ಎಲ್ಲೆಲ್ಲೂ ಕವಿದು
ಧರೆಯಾಗುತ್ತಿದೆ ಎಲ್ಲಾ ಬರಿದು

ಮೌನ ತಡೆಗ ಮೋಡಗಳೇ
ಒಮ್ಮೆ ಕೇಳಿ ರೈತ ಮಕ್ಕಳ ಅಳಲು
ಏನಾಗಿದೆಯೋ ನಿಮಗೆ
ಇಲ್ಲಿ ಬಂದು ನಾಲ್ಕನಿಯ ಚೆಲ್ಲಿ ಹೋಗಲು

ಬೆಳೆದ ಬೆಳೆ ಅರ್ಧಕ್ಕೆ ಅಸುನೀಗಿದೆ
ಬಿತ್ತಿದ ರೈತನಾಗಿ ಕೂತು ತಂದಿದೆ
ಸಾಲದ ಶೂಲ ಕೇಕೆ ಹಾಕಿ ನಕ್ಕಿದೆ
ನೇಣಿನ ಕುಣಿಕೆಯೊಳಗೆ ರೈತನ ಕತ್ತು ಸಿಕ್ಕಿಕೊಂಡಿದೆ

ಒಡೆಯಲಿಲ್ಲದ ಮನೆಯ ಮೇಲೆ
ನೂರಾರು ಸಂಕಷ್ಟಗಳು ಎರಗಿ ಬಿದ್ದಿವೆ
ಬಡತನದ ಬೇಗೆಯ ಜೊತೆಗೆ
ಸಾವು ನೋವುಗಳ ಸರಮಾಲೆಗೆ ಸೋತು ಹೋಗಿವೆ

ಎಲ್ಲಕ್ಕೂ ಉಪಶಮನ ಮಳೆಯ ಹನಿಯಿಂದ
ಜಗಕ್ಕೆ ಜೀವ ಚೇತನ ಮಳೆ ಹನಿಯಿಂದ
ಮುನಿದು ಕೂರದೆ ಕನಿಕರ ತೋರಿಸಿ
ನಿಮ್ಮನೆ ನಂಬಿದ ಜನಜಾನುವಾರುಗಳ ರಕ್ಷಿಸಿ

ಅಲ್ಲೆಲ್ಲೋ ಸುರಿದು ವ್ಯರ್ಥವಾಗಿ ಹರಿದು
ಸಾಗರದ ಉಪ್ಪಾಗುವ ಬದಲು
ಬಯಲು ಸೀಮೆಯ ಬರಿದಾದ ಬದುಕಿಗೆ
ಒಮ್ಮೆ ಬಂದು ಬಿಡಿ 
__RECORD__
ಮರುಪೂರಣಗೈಯಲು

0525 ಪಿಎಂ 23092023
ಅಮುಭಾವಜೀವಿ ಮುಸ್ಟೂರು

ಮೋಸ ಹೋಯಿತು ಹೃದಯ
ಅರಿಯದೆ ಅವಳ ಆಂತರ್ಯ

ಅವಳ ಪ್ರೀತಿಯ ಆಟಕ್ಕೆ ಬಲಿಯಾದೆ
ಅದರಿಂದ ಜಗದೆದುರು ಖಳನಾದೆ
ಇದರಿಂದ ಬಹುದೊಡ್ಡ ಪಾಠ ಕಲಿತೆ
ಇದಕ್ಕೆ ಕಾರಣ ಅಲ್ಲಿತ್ತು ನಂಬಿಕೆಯ ಕೊರತೆ

ಎಲ್ಲ ಚೆನ್ನಾಗಿರುವಾಗ ಇತ್ತು ನಂಬಿಕೆ
ಭಿನ್ನ ರಾಗಕೆ ಮುರಿದುಬಿತ್ತು ಒಡಂಬಡಿಕೆ
ಆಗಲೇ ಆವರಿಸಿತು ಅನುಮಾನ
ಅದರ ಬೆನ್ನಲ್ಲೇ ಮಾಡಿದ್ದು ಅವಮಾನ

ಬದುಕಿನ ಸ್ವಚ್ಛಂದದ ಕೊಳಕ್ಕೆ ಕಲ್ಲೆಸೆದಳು
ಎಲ್ಲದರ ಮೂಲ ನೀನೆಂದು ಗೂಬೆ ಕೂರಿಸಿ
ಅವರಿವರು ಆಡಿಕೊಳ್ಳುವರೆಂದು ದೂರತಳ್ಳಿ
ನಂಬಿದ ಹೃದಯಕ್ಕೆ ಇಟ್ಟು ಹೋದಳು ಕೊಳ್ಳಿ

ಜೀವನದ ಈ ಓಟದಲ್ಲಿ ಸೋತೆ
ಕಂಗಾಲಾಗಿ ದಾರಿ ಕಾಣದೆ ಕುಳಿತೆ
ಮೋಸ ಹೋದ ಪ್ರೀತಿಗೆ ಹೊಸ ನಿದರ್ಶನವಾದೆ
ದೀಪದ ಬೆಳಕಿಗೆ ಮೈಸುಟ್ಟು ಪತಂಗವಾದೆ

ಸಂಪೂರ್ಣ ಅರಿತುಕೊಳ್ಳದೆ 
ಮನಸ್ಸು ಮಾತು ಕೊಡದಿರಿ
ಆಕರ್ಷಣೆಗೆ ಬಲಿಯಾಗಿ
ಬದುಕಲ್ಲಿ ಮೂರ್ಖರಾಗದಿರಿ
0548ಪಿಎಂ23092023
*ಅಮುಭಾವಜೀವಿ ಮುಸ್ಟೂರು*

*ತನಗ*

ಬದುಕಿನ ಗತಿಯು
ಬಯಸಿದೆ ಪ್ರೀತಿಯ
ಬಳಲಿದ ಹೃದಯ
ಬೇಡಿದೆ ಶುಭಾಶಯ

ಹಾದಿಗೊಬ್ಬ ಸಂಗಾತಿ
ಸಿಕ್ರೆ ಬಾಳ್ಗೆ ಸಂತೃಪ್ತಿ
ಆಡುವ ಪ್ರೀತಿ ಮಾತು
ಕಳೆವುದು ಆ ಸುಸ್ತು

ಮುಸ್ಸಂಜೆಯ ಗೋಧೂಳಿ
ಒಲವಿನ ತಂಗಾಳಿ
ಏಕಾಂತ ಕಚಗುಳಿ
ಪ್ರೀತಿಯ ಬಳುವಳಿ

೦೬೧೩ಪಿಎಂ೨೩೦೯೨೦೨೩
*ಅಮುಭಾವಜೀವಿ ಮುಸ್ಟೂರು*

ಭಾದ್ರಪದದ ಚೌತಿಗೆ ಬಂದು
ಕಾಯ್ಕಡಬು ಹೊಟ್ಟೆ ತುಂಬ ತಿಂದು
ಮೂಷಕನ ಮೇಲೆ ಖುಷಿಯಿಂದ ಹೊರಟ
ಶಿವಸುತ ಪಾರ್ವತಿ ಪುತ್ರ ಗಣಪ

ಬೀದಿ ಬೀದಿಯಲ್ಲಿ ಅಂದ ಚಂದದ ಮಂಟಪ
ನಿತ್ಯ ಪೂಜೆ ಮಾಡುವರು ಭಕ್ತರು ಹಚ್ಚಿ ಧೂಪ
ಆ ಬಾಲ ವೃದ್ಧರ ಪ್ರೀತಿಯ ದೈವ
ಮನೆ ಮನೆಯಲ್ಲಿ ವಿಜೃಂಭಿಸಿದೆ ಗಣೇಶೋತ್ಸವ

ಮೋದಕ ಪ್ರಿಯ ಗಜವದನ
ಆದಿ ಪೂಜಿತ ಗಜಾನನ
ತಾಯಿ ಗೌರಿಯೊಂದಿಗೆ ಬರುವ
ಸುಬ್ರಹ್ಮಣ್ಯನಗ್ರಜ ಗಣಪ

ನಗುವ ಚಂದ್ರಗೆ ಶಾಪವಿತ್ತ ಅಂದು 
ಕೃಷ್ಣನ ಶಾಪವಿಮೋಚನೆ ಮಾಡಿದ ಬಂದು
ವಿಘ್ನ ನಿವಾರಕ ವಿಘ್ನೇಶ ದೇವ
ಹರಸಿಹೋಗು ಈ ನಮ್ಮ ಜಗವ

ಸ್ವಾತಂತ್ರ್ಯ ಚಳುವಳಿಯ ಸಂಘಟಕ
ಸ್ವಾಭಿಮಾನದ ಸರ್ವಶ್ರೇಷ್ಠ ವಿನಾಯಕ
ಕಲಿಯುವ ಮನಸ ಹರಸು ವಿದ್ಯಾ ಪ್ರದಾಯಕ
ಕರುನಾಡಿನ ಮನೆ ಮಗ ಮೂಷಿಕ ವಾಹನ

೦೯೧೯ಪಿಎಂ೨೩೦೯೨೦೨೩
*ಅಮುಭಾವಜೀವಿ ಮುಸ್ಟೂರು*

No comments:

Post a Comment