ಕನ್ನಡ ನನ್ನುಸಿರು
ಕರುನಾಡು ನನ್ನ ಹೆಸರು
ಪ್ರೀತಿ ಕೊಟ್ಟ ನಾಡಿಗೆ
ಜೀವ ಕೊಡುವೆ ಭಾಷೆಗೆ
ತಾಯ ಗರ್ಭದಿಂದ ಬಂದ
ತಾಯ್ನುಡಿಯ ನಂಟಿದು
ಉಸಿರಿರುವ ತನಕ ಜೊತೆ ಬರುವ
ಅಕ್ಷರದನುಬಂಧವಿದು
ಕಬ್ಬಿಗರೆದೆಯಲಿ ಬಿದ್ದ ಭಾವ
ಅಕ್ಕರದ ರೆಕ್ಕೆ ಬಿಚ್ಚಿ ಹಾರಿದೆ
ನಾಡು ನುಡಿಯ ನಲುಮೆ ಸಿರಿಯ
ಧಾರೆಯೆರೆದು ನನ್ನ ಸೇರಿದೆ
ಕೆಂಪು ಹಳದಿ ತೊಟ್ಟು
ಅಭಿಮಾನದಿ ಹಾರಾಡುವೆ
ಭಾಷೆಗಾಗಿ ಎಂದೆಂದಿಗೂ
ಈ ಜೀವನ ಮುಡಿಪಿಡುವೆ
ಹರಸು ತಾಯಿ ಭುವನೇಶ್ವರಿ
ಕುವರ ನಾ ತೋರು ಸರಿದಾರಿ
ಸಿರಿಗನ್ನಡ ನುಡಿಯಲಿ ನಾಲಿಗೆ
ಸಿರಿ ತುಂಬಲಿ ನನ್ನೀ ನಾಡಿಗೆ
೦೪೦೩ಪಿಎಂ೦೫೧೧೨೦೨೨
*ಅಮುಭಾವಜೀವಿ ಮುಸ್ಟೂರು*
No comments:
Post a Comment