Saturday, November 26, 2016

ಕವಿತೆ 1 ಬದುಕಲು ಬಿಡಿ ^^^^^^^^^^^^ ಕೊಲ್ಲಬೇಡಿ ನನ್ನನ್ನು ಅಮ್ಮನೊಡಲಲ್ಲೇ ಬದುಕಲು ಬಿಡಿ ನನ್ನನ್ನು ಅಮ್ಮನ ಮಡಿಲಲ್ಲಿ ಹೆಣ್ಣೆಂಬ ಕಾರಣಕ್ಕೆ ನನ್ನ ಹುಣ್ಣೆಂದು ಭಾವಿಸಬೇಡಿ ಹೆಣ್ಣಾದರೇನಂತೆ ಸಾಧಿಸುವೆ ನನಗೊಮ್ಮೆ ಅವಕಾಶ ಕೊಡಿ ಅತ್ತೆ ಮಾವರಿಗಂಜಿ ನನ್ನನ್ನು ಹತ್ಯೆ ಮಾಡಬೇಡಿ ನನ್ನ ಹುಟ್ಟಿಗೆ ಕಾರಣ ಅಪ್ಪ ನನ್ನಮ್ಮನಿಗೆಂದೂ ಕಿರುಕುಳ ನೀಡಬೇಡಿ ನನ್ನ ಸಾಮರ್ಥ್ಯವೇನೆಂದರಿಯದೆ ಅಲ್ಲೇ ಚಿವುಟೋ ಮನಸೇಕಾಗಿದೆ ನೀವು ಹಾರೈಕೆ ಮಾಡಿ ಪೊರೆಯದೆ ನನ್ನಸ್ತಿತ್ವವ ಹೇಗೆ ಉಳಿಸಿಕೊಳ್ಳಲಿ ಯಾರದೋ ಮಾತಿಗೆ ಹೆದರಿ ಕೊಡಲಿಯ ನೀವು ಬೀಸದಿರಿ ಹೆಮ್ಮರವಾಗಿ ಬೆಳೆದು ನೀಡುವೆ ನೆರಳು ಅದಕ್ಕೆ ನೀವಿಡಿದು ನಡೆಸಿ ಬೆರಳು ಹೆತ್ತವರು ನೀವೇ ನನ್ನ ಕತ್ತ ಹಿಸುಕಿದರೆ ಬದುಕೋ ನನ್ನ ಹೋರಾಟಕ್ಕೆ ಯಾರು ನನಗಿನ್ನು ಆಸರೆ ***************************** ಕವಿತೆ 2 ಈ ಹೊತ್ತಿನ ತಲ್ಲಣ ^^^^^^^^^^^^^^^ ನ್ಯಾಯ ಸಿಗದ ಆಕ್ರೋಶದಲ್ಲಿ ಆಡಳಿತಶಾಹಿ ದಬ್ಬಾಳಿಕೆಯಲ್ಲಿ ಅಸಹಾಯಕರನ್ನಾಗಿಸಿದೆ ಈ ಹೊತ್ತಿನ ತಲ್ಲಣ ಬರಗಾಲ ತಂದ ಭೀಕರ ಕ್ಷಾಮ ಜಗದಿ ಇಲ್ಲವಾಗಿದೆ ಕ್ಷೇಮ ಸತ್ತ ಮಾನವ ಪ್ರೇಮವೇ ಈ ಹೊತ್ತಿನ ತಲ್ಲಣ ಭ್ರಷ್ಟರ ಕೂಟದಲ್ಲಿ ನಿಷ್ಠರ ಪರದಾಟ ನೋಡಿಲ್ಲಿ ದಕ್ಷತೆಯ ಆತ್ಮಹತ್ಯೆಯೇ ಈ ಹೊತ್ತಿನ ತಲ್ಲಣ ನೀರಿಗಾಗಿ ಹಂಬಲಿಸುವ ನ್ಯಾಯಕ್ಕಾಗಿ ಹಲುಬುವ ಬಡಪಾಯಿಗೆ ಬಿದ್ದ ಏಟುಗಳೇ ಈ ಹೊತ್ತಿನ ತಲ್ಲಣ ಬರ ಬಂದು ಬಾಯಾರಿ ರೈತ ಸಾಲದ ಶೂಲಕೇರಿ ತಬ್ಬಲಿ ಮಕ್ಕಳ ಆಕ್ರಂದನವೇ ಈ ಹೊತ್ತಿನ ತಲ್ಲಣ ಅಬಲೆಯರ ಮೇಲೆ ಅತ್ಯಾಚಾರ ಕಂದಮ್ಮಗಳ ಮೇಲೆ ವಾಮಾಚಾರ ರಕ್ಷಿಸುವವನಿಂದಲೇ ಭ್ರಷ್ಟಾಚಾರವೇ ಈ ಹೊತ್ತಿನ ತಲ್ಲಣ ಆಧುನಿಕತೆಯ ಆಡಂಬರದಿ ಸೋಮಾರಿತನದ ವಿಡಂಬನೆಯ ವೃದ್ಧಾಶ್ರಮದಿ ಹೆತ್ತವರ ರೋಧನೆಯೇ ಈ ಹೊತ್ತಿನ ತಲ್ಲಣ ಸಾಕಿನ್ನು ಈ ತಲ್ಲಣ ಬದುಕಾಗಲಿ ಸವಿಯೂರಣ ಸಾಮರಸ್ಯವೇ ಜೀವನ ಸಹಬಾಳ್ವೆಯೇ ಸವಿಭೋಜನ 0240ಪಿಎಂ221016 ಅಮುಭಾವಜೀವಿ ಅಪ್ಪಾಜಿ ಎ ಮುಸ್ಟೂರು (ಅಮುಭಾವಜೀವಿ ) ಮುಸ್ಟೂರು ಅಂಚೆ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ ಪಿನ್ 577528 ಮೊಬೈಲ್ 9964707871

Sunday, November 20, 2016

ಬದುಕಿನ ತಿರುಳು

ಪಂಥೀಯ ಭೇದ ನನಗೇಕೆ
ನಾ ಬಂದಿಹೆ ಸಹಪಂಕ್ತಿ ಭೋಜನ ಮಾಡೋಕೆ
ಯೋಚನೆಗಳಾಚೆಗೆ ಬದುಕಬೇಕು
ನಾ ಸಮಾಜದೊಳಗೆ ಇರಬೇಕು

ಅವನೂ ಬೇಕು ಇವನೂ ಬೇಕು
ಮೊದಲು ನಾನು ನಾನಾಗಿರಬೇಕು
ಎಡಗಡೆ ಬಂಧು ಬಲಗಡೆ ಗೆಳೆಯ
ಎರಡರ ನೋಟ ಒಂದಾಗದೇ ಪ್ರಳಯ

ಕರಿಯನಲ್ಲ ನಾನು ಬಿಳಿಯನಲ್ಲ
ಮೊದಲು ಮಾನವನಾಗಬೇಕು ನಾನು ಸ್ಪೃಶ್ಯನೋ ಅಸ್ಪೃಶ್ಯನೋ
ಈ ತಾರತಮ್ಯ ನಿಲ್ಲಲೇಬೇಕು

ನಡೆವ ದಾರಿಗೆ ಕಾಲೇ ಮುಖ್ಯ
ಅರಿತು ನಡೆಯೆ ಸೌಖ್ಯ
ಎಡಬಲದ ಹಂಗೇಕೆ
ಬಂದು ಬದುಕಿ ಹೋಗೋಕೆ

ಗುಡಿ ಗೋಪುರವಿರಲಿ
ಚರ್ಚು ಮಸೀದಿಯೇ ಇರಲಿ
ನಂಬಿಕೆಯಲಿ ದೇವರು ಒಬ್ಬನೇ
ದಾರಿ ಬೇರೆಯಾದರೂ ಒಂದೇ ಚಿಂತನೆ

ನನಗಿಲ್ಲ ಅವರವರ ಪಂಥೀಯ ಗೀಳು ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು
ಇದೇ ನನ್ನ ಬದುಕಿನ ತಿರುಳು ಅದನುಳಿದೆಲ್ಲಾ ಮರುಳು

0924ಪಿಎಂ111116
ಅಮುಭಾವಜೀವಿ

ಪವನ್ ಕುಮಾರ್ ಅವರ ವಾದ ಕಾವ್ಯಕ್ಕೆ ವಿಷಯದ ಸರಕು ಯಾವುದೂ ಸಿಗಲಿಲ್ಲವೇ ಬೌದ್ಧಿಕ ಧಾರಿದ್ರ್ಯವೇ? ವಗ೯ ಸಂಘರ್ಷದಿಂದ ಹೊರ ಬನ್ನಿ ಜನಾಂಗೀಯ ಏಕ ಮುಖ ಬಾವ ಪೂರ್ವಗ್ರವ ಪೀಡಿತ ಸಂಕುಚಿತ ಮನೋಭಾವದಿಂದ ಹೊರಬನ್ನಿ ಎಂದು ಅರ್ಥ.

ನನ್ನ ಪ್ರತಿಕ್ರಿಯೆ

ಸಂಕುಚಿತ ಇಲ್ಲ ನನ್ನದು ವಿಶಾಲ ಮನೋಭಾವ. ಸರ್ವರೊಳಗಿದ್ದು ಬಾಳಬೇಕು

Tuesday, November 15, 2016

ಮಾತು ಮಥಿಸಿ ಮೌನ ಗತಿಸಿ ನನ್ನ ನಿನ್ನ ನಡುವೆ ಹಮ್ಮು ಬೆಳೆದಿದೆ ಪ್ರೀತಿಯ ಹೂವ ಕಿತ್ತು ನೆಮ್ಮದಿಯ ದಳ ಬತ್ತಿ ಹೋಗಿದೆ ಮಾತು ಮಾತಿಗೂ ಇಲ್ಲಿ ಬೇರೊಂದು ಅರ್ಥ ಬರುತಿದೆ ತಾಳ್ಮೆ ಎಂಬುದು ಕಳೆದುಹೋಗಿ ಕೋಪ ತಾಂಡವವಾಡಿದೆ ಕಣ್ಣು ನೋಡಲು ಹವಣಿಸಿ ಕಿವಿಯು ಕೇಳಲು ಕಾತರಿಸಿ ಬಾಹುಬಂಧದಲಿ ಎಂಥ ಹಿತವಿತ್ತೆ ಈಗದೆಲ್ಲಾ ಎಲ್ಲಿ ಮಾಯವಾಗಿ ? ನೀನೆಲ್ಲಿ ಇರುವೆ ನಾ ಇಲ್ಲಿ ಕರೆವೆ ಮತ್ತೆ ಒಲವ ನಾ ಸುರಿವೆ ಮತ್ತೆ ಮಾತಿಗೆ ಮಣಿವೆ ಬಾ ನಿನ್ನೊಲವಲೀಗ ನಾ ತಣಿವೆ ಹಮ್ಮುಬಿಮ್ಮಿನಾಚೆಗೂ ಉಳಿಯಲಿ ನಮ್ಮ ಈ ಪ್ರೀತಿ ನಮ್ಮ ನಡುವೆ ಕತ್ತಲು ಕವಿಯದೆ ಕಣ್ಣಲ್ಲಿ ಹೊಮ್ಮಲಿ ಒಲವ ಜ್ಯೋತಿ ಈ ದೂರ ಸರಿದು ಬಿಡಲಿ ಮಾತುಮೌನಗಳೇ ನಮ್ಮನಾಳಲಿ ಹಿಂದಿನಂತೆಯೇ ಮತ್ತೆ ಚಿಮ್ಮಲಿ ನನ್ನ ನಿನ್ನ ಜೀವಭಾವ ಒಂದಾಗಲಿ 0244ಎಎಂ151116 ಅಮುಭಾವಜೀವಿ

Wednesday, November 9, 2016

ಅತ್ತಿದ್ದು ಸಾಕು

ಅತ್ತಿದ್ದು ಸಾಕು ಅಮ್ಮ ನೀನಿನ್ನು ನಾನಿರುವೆ ಒರೆಸಲು ಕಣ್ಣ ನೀರನ್ನು ಹೆಣ್ಣಾಗಿ ಹುಟ್ಟಿ ನೀ ಪಟ್ಟ ಪಾಡು ಬೇಡ ಬೇರಾರಿಗೂ ಅಪ್ಪ ಎನ್ನುವ ಪಟ್ಟ ಹೊತ್ತವ ದುಷ್ಟ ಬೇಡ ಬೇರಾರಿಗೂ ನಿನ್ನ ಬಳಸುವಾಗಿದ್ದ ಕಾಳಜಿ ನಮ್ಮಿಬ್ಬರ ಬದುಕಿಸುವಾಗ ಅವನಿಗಿಲ್ಲ ಹೆಣ್ಣಾಗಿ ಬದುಕುವುದೇ ಕಷ್ಟವಿರುವಾಗ ತಾಯಿ ಪಟ್ಟ ಕಟ್ಟಿ ಬಿಟ್ಟು ಹೋದನಲ್ಲ ಬೀದಿಯಲ್ಲೇ ನಮ್ಮಿಬ್ಬರ ಬದುಕು ನನಗೆ ನೀನು ನಿನಗೆ ನಾನು ಎಲ್ಲದಕ್ಕೂ ನೋಯದಿರು ತಾಯಿ ನೀನು ಸದಾ ನೆರಳಾಗಿರುವೆ ನಾನು ಮೈಗೆ ಬಟ್ಟೆ ಇರದಿದ್ದರೇನು ನಿನ್ನೊಲವ ಬಿಸಿಯಪ್ಪುಗೆ ಇರಲು ಹಸಿದ ಹೊಟ್ಟೆ ಹಪಹಪಿಸಿದರೂ ಹಂಚಿ ತಿನ್ನುವ ನಿನ್ನ ಮನವಿರಲು ನಿನ್ನ ನೋಯಿಸಿದ ಜಗಕ್ಕಿರಲಿ ನನ್ನದೂ ಒಂದು ದಿಕ್ಕಾರ ನೀ ಅನುಭಿಸಿದೆಲ್ಲಾ ಅನುಮಾನವ ಅಭಿಮಾನವಾಗಿಸಿಕೊಂಡು ಪಡೆವೆ ಸಂಸ್ಕಾರ ತಲೆ ತಗ್ಗಿಸಿ ನಿಲ್ಲಬೇಕು ಸಮಾಜ ನಮ್ಮದು ಪರಿಸ್ಥಿತಿಯ ಕಂಡು ತಲೆ ಎತ್ತಿ ಬಾಳಿ ಬಾಳಿಸುವೆ ಅಮ್ಮ ನಿನ್ನೊಲವಾಮೃತ ಉಂಡು 1156ಎಎಂ07112016 ಅಮುಭಾವಜೀವಿ