Tuesday, November 15, 2016

ಮಾತು ಮಥಿಸಿ ಮೌನ ಗತಿಸಿ ನನ್ನ ನಿನ್ನ ನಡುವೆ ಹಮ್ಮು ಬೆಳೆದಿದೆ ಪ್ರೀತಿಯ ಹೂವ ಕಿತ್ತು ನೆಮ್ಮದಿಯ ದಳ ಬತ್ತಿ ಹೋಗಿದೆ ಮಾತು ಮಾತಿಗೂ ಇಲ್ಲಿ ಬೇರೊಂದು ಅರ್ಥ ಬರುತಿದೆ ತಾಳ್ಮೆ ಎಂಬುದು ಕಳೆದುಹೋಗಿ ಕೋಪ ತಾಂಡವವಾಡಿದೆ ಕಣ್ಣು ನೋಡಲು ಹವಣಿಸಿ ಕಿವಿಯು ಕೇಳಲು ಕಾತರಿಸಿ ಬಾಹುಬಂಧದಲಿ ಎಂಥ ಹಿತವಿತ್ತೆ ಈಗದೆಲ್ಲಾ ಎಲ್ಲಿ ಮಾಯವಾಗಿ ? ನೀನೆಲ್ಲಿ ಇರುವೆ ನಾ ಇಲ್ಲಿ ಕರೆವೆ ಮತ್ತೆ ಒಲವ ನಾ ಸುರಿವೆ ಮತ್ತೆ ಮಾತಿಗೆ ಮಣಿವೆ ಬಾ ನಿನ್ನೊಲವಲೀಗ ನಾ ತಣಿವೆ ಹಮ್ಮುಬಿಮ್ಮಿನಾಚೆಗೂ ಉಳಿಯಲಿ ನಮ್ಮ ಈ ಪ್ರೀತಿ ನಮ್ಮ ನಡುವೆ ಕತ್ತಲು ಕವಿಯದೆ ಕಣ್ಣಲ್ಲಿ ಹೊಮ್ಮಲಿ ಒಲವ ಜ್ಯೋತಿ ಈ ದೂರ ಸರಿದು ಬಿಡಲಿ ಮಾತುಮೌನಗಳೇ ನಮ್ಮನಾಳಲಿ ಹಿಂದಿನಂತೆಯೇ ಮತ್ತೆ ಚಿಮ್ಮಲಿ ನನ್ನ ನಿನ್ನ ಜೀವಭಾವ ಒಂದಾಗಲಿ 0244ಎಎಂ151116 ಅಮುಭಾವಜೀವಿ

No comments:

Post a Comment