Wednesday, November 9, 2016

ಅತ್ತಿದ್ದು ಸಾಕು

ಅತ್ತಿದ್ದು ಸಾಕು ಅಮ್ಮ ನೀನಿನ್ನು ನಾನಿರುವೆ ಒರೆಸಲು ಕಣ್ಣ ನೀರನ್ನು ಹೆಣ್ಣಾಗಿ ಹುಟ್ಟಿ ನೀ ಪಟ್ಟ ಪಾಡು ಬೇಡ ಬೇರಾರಿಗೂ ಅಪ್ಪ ಎನ್ನುವ ಪಟ್ಟ ಹೊತ್ತವ ದುಷ್ಟ ಬೇಡ ಬೇರಾರಿಗೂ ನಿನ್ನ ಬಳಸುವಾಗಿದ್ದ ಕಾಳಜಿ ನಮ್ಮಿಬ್ಬರ ಬದುಕಿಸುವಾಗ ಅವನಿಗಿಲ್ಲ ಹೆಣ್ಣಾಗಿ ಬದುಕುವುದೇ ಕಷ್ಟವಿರುವಾಗ ತಾಯಿ ಪಟ್ಟ ಕಟ್ಟಿ ಬಿಟ್ಟು ಹೋದನಲ್ಲ ಬೀದಿಯಲ್ಲೇ ನಮ್ಮಿಬ್ಬರ ಬದುಕು ನನಗೆ ನೀನು ನಿನಗೆ ನಾನು ಎಲ್ಲದಕ್ಕೂ ನೋಯದಿರು ತಾಯಿ ನೀನು ಸದಾ ನೆರಳಾಗಿರುವೆ ನಾನು ಮೈಗೆ ಬಟ್ಟೆ ಇರದಿದ್ದರೇನು ನಿನ್ನೊಲವ ಬಿಸಿಯಪ್ಪುಗೆ ಇರಲು ಹಸಿದ ಹೊಟ್ಟೆ ಹಪಹಪಿಸಿದರೂ ಹಂಚಿ ತಿನ್ನುವ ನಿನ್ನ ಮನವಿರಲು ನಿನ್ನ ನೋಯಿಸಿದ ಜಗಕ್ಕಿರಲಿ ನನ್ನದೂ ಒಂದು ದಿಕ್ಕಾರ ನೀ ಅನುಭಿಸಿದೆಲ್ಲಾ ಅನುಮಾನವ ಅಭಿಮಾನವಾಗಿಸಿಕೊಂಡು ಪಡೆವೆ ಸಂಸ್ಕಾರ ತಲೆ ತಗ್ಗಿಸಿ ನಿಲ್ಲಬೇಕು ಸಮಾಜ ನಮ್ಮದು ಪರಿಸ್ಥಿತಿಯ ಕಂಡು ತಲೆ ಎತ್ತಿ ಬಾಳಿ ಬಾಳಿಸುವೆ ಅಮ್ಮ ನಿನ್ನೊಲವಾಮೃತ ಉಂಡು 1156ಎಎಂ07112016 ಅಮುಭಾವಜೀವಿ

No comments:

Post a Comment