Thursday, December 13, 2018

ನೆನಪುಗಳ ನೌಕಾಯಾನ

ಭರವಸೆಯ ಬೆನ್ನಮೇಲೆ
ನೆನಪುಗಳ ನೌಕಾಯಾನ
ಕನಸುಗಳ ಕಡಲತೀರಕ್ಕೆ
ನನಸುಗಳ ಆಲಿಂಗನ

ನಗುವೆಂಬ ಚಂದಿರನ
ಕಂಡಾಗ ಶೃಂಗಾರ ತಾಣ
ಮೌನದ ಪಲ್ಲಂಗದಲ್ಲಿ
ಉಕ್ಕುವ ತೆರೆಗಳ ಸವಿಗಾನ

ಯೌವ್ವನದ ಅಬ್ಬರಕ್ಕೆ
ಎದೆ ತೀರದ ಮೌನದೊಪ್ಪಿಗೆ
ಯಾನದ ಅಡೆತಡೆಗೆ
ಮಾನ ಸ್ವಾಭಿಮಾನಗಳ ರಕ್ಷೆ ನಮಗೆ

ಸುಳಿಗಳ ಭಯವಿಲ್ಲ
ಸಮಯದ ವ್ಯಯವಲ್ಲ
ಸಹನೆಯ ಶ್ರಮಕಿಲ್ಲಿ
ಒಲವಿನ ಬಹುಮಾನ

ಸಂಕಲ್ಪ ಸಾಧನೆಗೆ
ಸ್ಪಂದನ ಭಾವನೆಗೆ
ಸ್ವಾಭಿಮಾನ ಬದುಕಿಗೆ
ಪ್ರೀತಿಯೊಂದೇ ವಿಶ್ವಕ್ಕೆ

ಅಮುಭಾವಜೀವಿ

ಭವಾನಿ ಶಂಕರ್ ಅವರ ಪ್ರತಿಕ್ರಿಯೆ

*ಕವನ ಉತ್ತಮವಾಗಿ ಮೂಡಿಬಂದಿದೆ.*
*ಉತ್ತಮ ಅಂಶಗಳು*👇
೧. ಕವನವನ್ನು ಚೆನ್ನಾಗಿ ಪ್ರಸ್ತುತ ಪಡಿಸಿದ್ದಿರಿ.
೨. ಪದಪುಂಜ ಮತ್ತು ಪದಜೋಡಣೆ ಚೆನ್ನಾಗಿದೆ.
೩. ಭರವಸೆ, ನೆನಪು,ಕನಸು ನನಸುಗಳ ಸಾಲಂಕೃತವನ್ನು ಪ್ರಜ್ಞಾಪೂರ್ಣವಾಗಿ ವ್ಯಕ್ತಪಡಿಸಿದ್ದಿರಿ.
೪. ಮಾನ ಸ್ವಾಭಿಮಾನವನ್ನು ರಕ್ಷೆಯಾಗಿ ಬಿಂಬಿಸಿದ ರೀತಿ ಸೂಪರ್ಬ್.

*ಉತ್ತಮವಾದ ಕವನಕ್ಕೆ ವಂದನೆಗಳು.*
*ವಿಮರ್ಶೆ: 🐿ಶಂಕರ್ ಗುರು*

No comments:

Post a Comment