ನನಗೂ ಒಂದು ಬಾಲ್ಯವಿತ್ತು
ಅಲ್ಲಿ ಎಲ್ಲವೂ ಚಂದವಿತ್ತು
ಹೆತ್ತವರ ಪ್ರೀತಿ ಸಿಕ್ಕಿತ್ತು
ಬಾಲ್ಯ ಕಳೆದು ಯೌವನಕ್ಕೆ
ಕಾಲಿಡುತ್ತಿದ್ದಂತೆ ಸಿಡಿಲು ಬಡಿಯಿತು
ಗಂಡಿನೊಳಗಡೆ ಹೆಣ್ಣಾಗಿ ಬದಲಾದೆ
ಲೋಕ ನೋಡುವ ದೃಷ್ಟಿಯೂ ಬದಲಾಯ್ತು
ಹೆತ್ತವರು ಹೊರದೂಡಿದರು
ನೆರೆಹೊರೆಯವರು ಕುಹಕವಾಡಿದರು
ಸ್ನೇಹಿತರು ಸಂಗ ತೊರೆದರು
ಎಲ್ಲ ಸೇರಿ ನನ್ನ ತಿರಸ್ಕರಿಸಿದರು
ಹೊಟ್ಟೆ ಹೊರೆಯಃವುದೇ ಕಷ್ಟವಾಗಿ
ಭಿಕ್ಷೆ ಬೇಡುವುದು ಆನಿವಾರ್ಯವಾಗಿ
ಕೀಳು ಮಟ್ಟದ ಮಾತು ಕೇಳಿ
ಹಿಂಜರಿಕೆಯಲಿ ಬದುಕುತಿರುವೆನು
ಪ್ರಕೃತಿ ಕೊಟ್ಟ ಶಾಪವಿದು
ಎಲ್ಲರ ಪ್ರೀತಿಯಿಂದ ವಂಚಿತವಾಗಿ
ಹಾಳು ಗುಡಿಯ ಪಾಳು ಜಾಗದಿ
ಬದುಕ ಸವೆಸುತಿಹೆನು
ಹೆಸರಿಗೆ ಮಂಗಳ ಮುಖಿ
ಆದರೆ ನಾನಲ್ಲ ನಿತ್ಯ ಸುಖಿ
ನನ್ನದಲ್ಲದ ತಪ್ಪಿಗೆ ಪಶ್ಚಾತ್ತಾಪ
ಪಡುವುದೊಂದೆ ನನ್ನ ದೌರ್ಭಾಗ್ಯವು
1032ಪಿಎಂ03012019
ಅಮು ಭಾವಜೀವಿ
ಅನ್ಸಾಲ್ ಅವರ ಅಭಿಪ್ರಾಯ
ಮಂಗಳ ಮುಖಿ ಮನಸಿನ ವೇಧನೆ ಕವಿಯ ಕವಿತೆಯಲ್ಲಿ ಭಾವನಾತ್ಮಕವಾಗಿ ಮೂಡಿದೆ.....
ಒಂದು ಕಾಲ ಇತ್ತು ಮಂಗಳ ಮುಖಿ ಅಂದ್ರೆ ಒಂಥರ ತಾತ್ಸಾರ..... ಈಗ ಬದಲಾಗಿದೆ...ಮಂಗಳ ಮುಖಿಯರನ್ನ ನೋಡಿ ನಾವು ಕಲಿಯಬೇಕಾಗಿದೆ..... ಐ ಪಿ ಎಸ್...ಪೊಲೀಸ್ ಮತ್ತು ಸಮಾಜ ಕಾರ್ಯಕರ್ತರು ಕೂಡ ಆಗಿದ್ದಾರೆ........
ಕವಿತೆ ಸುಂದರವಾಗಿದೆ ಸಾರ್.
No comments:
Post a Comment