*ಬೆಳಗ ಬೆರಗು*
ಇರುಳ ಹೊದ್ದು ಮಲಗಿದ
ಜಗದ ನಿದ್ರೆಗೆ ವಿರಾಮ ಹೇಳಿ
ಉಷಾ ಕಿರಣ ಹರಡಿದಾಗ
ಉದಯ ಕಾಲದಿ ಕೂಗಿತು ಕೋಳಿ
ಚಳಿಯ ನಡುಕದಲ್ಲಿ
ಇಬ್ಬನಿಯ ಮುಖದೊಳೆದು
ಪ್ರಕೃತಿಯ ಪ್ರೇರೇಪಿಸಿತು
ಬೆಳಗಾಯಿತು ಏಳೆಂದು
ದಳ ಬಿರಿದ ಮೊಗ್ಗುಗಳೆಲ್ಲ
ಲತೆಯ ಮೇಲೆ ನರ್ತಿಸುವಾಗ
ದುಂಬಿಗಳು ಆನಂದದಿ ಬಂದು
ಝೇಂಕರಿಸಿವೆ ಮಧು ಹೀರುತ
ಗೂಡೋಳಗಿಂದ ಗರಿ ಬಿಚ್ಚಿ
ನಭಕೆ ಜಿಗಿದ ಪಕ್ಷಿ ಸಂಕುಲ
ಸುಪ್ರಭಾತವ ಹಾಡುತ
ಸ್ವಾಗತ ಕೋರಿದವು ದಿನಕರಗೆ
ತಂಗಾಳಿ ಮೆಲ್ಲ ಬೀಸಿ
ಹಸಿರ ಪೈರು ನಲಿದಾಡಿ
ನಿಸರ್ಗದ ಮಡಿಲಲ್ಲಿ
ಮುಂಜಾನೆ ಸಂಭ್ರಮಿಸಿತು
ದಿನದಾರಂಭಕೆ ಭಗಿನಿಯರೆಲ್ಲ
ಕಸ ಗುಡಿಸಿ ರಂಗೋಲಿ ಬಿಡಿಸಿ
ತುಳಸಿಯ ಪೂಜಿಸಲು
ಬೆಳಗಿದು ಬೆರಗು ತಂತು
0908ಎಎಂ04012018
*ಅಮು ಭಾವಜೀವಿ*
No comments:
Post a Comment