ಎಷ್ಟೊಂದು ಉರಿ ಬಿಸಿಲು
ಸಾಕಾಗಿದೆ ಇಂದು ಹಗಲು
ತಂಪೆರೆವ ವರುಣ ಎಲ್ಲಿಹನೋ?
ಬಿರು ಬೇಸಿಗೆಯ ಹೊತ್ತಲ್ಲಿ
ಕಾದು ಕೆಂಡದಂತಾದ ಭೂಮಿಯಲ್ಲಿ
ತಂಪು ತಂಗಾಳಿ ಬೇಕಾಗಿರುವುದು
ತಾಪಮಾನದ ಈ ಹೆಚ್ಚಳ
ನೀಡುತಿದೆ ಬಾರಿ ಉಪಟಳ
ಸಹಿಸುವುದೆಂತು ಈ ಬಿಸಿಲ ಝಳ
ಪ್ರಕೃತಿಯ ನಾಶದ ಪ್ರತಿಫಲ
ಸಹಿಸದೇ ವಿಧಿಯಿಲ್ಲ ಬಿಸಿಲ
ಮರ-ಗಿಡಗಳೇ ನೀಡಿ ಸಲಹಿ ನೆರಳು
ಮಳೆಗಾಲಕಿನ್ನು ಸಮಯ ಕೂಡಿ ಬಂದಿಲ್ಲ
ಬೀಸೋ ಗಾಳಿಯೂ ಬಿಸಿಯಾಗಿ ಹೋಗಿದೆಯಲ್ಲ
ಹೇಗೆ ಬದುಕುಳಿಯುವುದು ತಿಳಿಯುತ್ತಿಲ್ಲ
ನಾವೇ ಮಾಡಿದ ತಪ್ಪಿಗೆ ಈ ಶಿಕ್ಷೆ
ಮರಗಳ ಕಡಿದಿದ್ದೇವೆ ಇನ್ನೆಲ್ಲಿ ರಕ್ಷೆ
ಬಿಸಿಲಲ್ಲಿ ಬೆಂದುಳಿಯಬೇಕು ಬೇರೆ ಪರಿಹಾರವಿಲ್ಲ.
ಬನ್ನಿ ಈಗಲಾದರೂ ಬೆಳೆಸೋಣ ಗಿಡ ಮರಗಳ
ಆಗಲಾದರೂ ಕಡಿಮೆಯಾಗಬಹುದು ಒಂದಿಷ್ಟು ಬಿಸಿಲ ಝಳ
ಪ್ರಕೃತಿ ಉಳಿದರೆ ತಾನೆ ನಾವು ಉಳಿಯುವುದು
ಸಾಕು ಮಾಡಿ ಪ್ರಕೃತಿಯ ಮೇಲಿನ ಅತ್ಯಾಚಾರ
ಅದರ ಕೋಪಕ್ಕೆ ತುತ್ತಾಗಿ ಈ ಸಂಚಕಾರ
ಹಸಿರಿಗೆ ಉಸಿರು ನೀಡುವುದೊಂದೇ ಇದಕ್ಕೆ ಪರಿಹಾರ
೦೬೦೭ಪಿಎಂ೦೬೦೪೨೦೨೩
*ಅಮು ಭಾವಜೀವಿ ಮುಸ್ಟೂರು*
No comments:
Post a Comment