ಬರೆದಷ್ಟು ಬಲವಾಯ್ತು
ನನ್ನ ಕವಿತೆ ಬರೆವ ಗೀಳು
ಆದರೂ ಯಾರೂ ನನ್ನನ್ನು
ಗುರುತಿಸಲೇ ಇಲ್ಲ ಅದೇ ನನ್ನ ಗೋಳು
ಆದರೇನಂತೆ ಬರೆದುಕೊಳ್ಳುವೆ
ನನ್ನ ಆತ್ಮದ ತೃಪ್ತಿಗೆ
ಒಂದಲ್ಲ ಒಂದು ದಿನ
ಕವಿಯಾಗುವೆನೆಂಬ ಆಸೆಗೆ
ಮರುಭೂಮಿಯ ಓಯಸೀಸ್ನಂತೆ
ಹಾಗೋಹೀಗೋ ಕಾಣಿಸಿಕೊಂಡೆ
ಚಿಗುರಿದಾಗ ಆಸೆಗಳೆಲ್ಲಾ
ಬಬಿತ್ತುವ ಮತ್ತೆ ಬರ ಬಂದಂತೆ
ಏನೇ ಆಗಲಿ ಏನೇ ಹೋಗಲಿ
ಬರೆಯುವುದ ನಿಲ್ಲಿಸಲಾರೆ
ನೀವಿರುವಿರಿ ಬೆಳೆಸುವಿರಿ
ಎಂಬ ಆ ಸ್ಪೂರ್ತಿಯಿಂದೆ.
ಉತ್ತಿ ಬಿತ್ತುವೆ ಭಾವಗಳ
ಎದೆಗುಂದದೆ ರೈತನಾಗಿ
ಫಸಲು ಬರಲಿ ಬಿಡಲಿ
ಕಾಯಕ ಮಾಡಿವೆ ತೃಪ್ತಿಗಾಗಿ
0933ಪಿಎಂ26092016
*ಅಮುಭಾವಜೀವಿ*
No comments:
Post a Comment