ಮಾನವ ತೋಟದ
ಸುಂದರ ಸುಮಗಳು
ಕಲ್ಮಶವಿಲ್ಲದೆ ಅರಳಿದ
ಈ ಮುದ್ದು ಮಕ್ಕಳು
ಮಗುವಿನ ಮುಗ್ಧತೆಗೆ
ಜಗವೇ ಶರಣಾಗಿದೆ
ಬಾಲ್ಯದ ಆಟಗಳೆಲ್ಲಾ
ಕಣ್ಣ್ಮುಂದೆ ಬಂದಿವೆ
ಅಪ್ಪ ಅಮ್ಮನ ಮುದ್ದಿನ ಕೂಸು
ತುಂಟಾಟದಲೇ ಎನಿತು ಸೊಗಸು
ಬಾಲಚಂದಿರನ ಸುಂದರ ರೂಪು
ಬಾಲಗೋಪಾಲನ ಅಂದದ ಛಾಪು
ಮಕ್ಕಳಿರಲಿ ಮನೆತುಂಬ
ಕಳೆವುದೆಲ್ಲರ ಒಣಜಂಭ
ಮಕ್ಕಳ ನಗು ಸ್ವರ್ಗ ಸಮಾನ
ಮರೆಸುವರೆಲ್ಲರ ನೋವನ್ನ
ಕಮರದೇ ಅರಳಲಿ ಬಾಲ್ಯ
ಮಕ್ಕಳು ಬಾಳಿನ ಶೃಂಗಾರ ಕಾವ್ಯ
ಮಕ್ಕಳು ನೀಡುವ ಅನುಭವ ನವ್ಯ
ಬೆಸೆವರು ಮಕ್ಕಳು ಮಧುರ ಬಾಂಧವ್ಯ
0721ಎಎಂ141116
ಎಲ್ಲರಿಗೂ *ಚಾಚಾನೆಹರು* ಹಾಗೂ *ಮಕ್ಕಳ ದಿನ*ದ ಶುಭಾಶಯಗಳು 💐💐💐
No comments:
Post a Comment