Saturday, November 26, 2016
Sunday, November 20, 2016
ಬದುಕಿನ ತಿರುಳು
ಪಂಥೀಯ ಭೇದ ನನಗೇಕೆ
ನಾ ಬಂದಿಹೆ ಸಹಪಂಕ್ತಿ ಭೋಜನ ಮಾಡೋಕೆ
ಯೋಚನೆಗಳಾಚೆಗೆ ಬದುಕಬೇಕು
ನಾ ಸಮಾಜದೊಳಗೆ ಇರಬೇಕು
ಅವನೂ ಬೇಕು ಇವನೂ ಬೇಕು
ಮೊದಲು ನಾನು ನಾನಾಗಿರಬೇಕು
ಎಡಗಡೆ ಬಂಧು ಬಲಗಡೆ ಗೆಳೆಯ
ಎರಡರ ನೋಟ ಒಂದಾಗದೇ ಪ್ರಳಯ
ಕರಿಯನಲ್ಲ ನಾನು ಬಿಳಿಯನಲ್ಲ
ಮೊದಲು ಮಾನವನಾಗಬೇಕು ನಾನು ಸ್ಪೃಶ್ಯನೋ ಅಸ್ಪೃಶ್ಯನೋ
ಈ ತಾರತಮ್ಯ ನಿಲ್ಲಲೇಬೇಕು
ನಡೆವ ದಾರಿಗೆ ಕಾಲೇ ಮುಖ್ಯ
ಅರಿತು ನಡೆಯೆ ಸೌಖ್ಯ
ಎಡಬಲದ ಹಂಗೇಕೆ
ಬಂದು ಬದುಕಿ ಹೋಗೋಕೆ
ಗುಡಿ ಗೋಪುರವಿರಲಿ
ಚರ್ಚು ಮಸೀದಿಯೇ ಇರಲಿ
ನಂಬಿಕೆಯಲಿ ದೇವರು ಒಬ್ಬನೇ
ದಾರಿ ಬೇರೆಯಾದರೂ ಒಂದೇ ಚಿಂತನೆ
ನನಗಿಲ್ಲ ಅವರವರ ಪಂಥೀಯ ಗೀಳು ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು
ಇದೇ ನನ್ನ ಬದುಕಿನ ತಿರುಳು ಅದನುಳಿದೆಲ್ಲಾ ಮರುಳು
0924ಪಿಎಂ111116
ಅಮುಭಾವಜೀವಿ
ಪವನ್ ಕುಮಾರ್ ಅವರ ವಾದ ಕಾವ್ಯಕ್ಕೆ ವಿಷಯದ ಸರಕು ಯಾವುದೂ ಸಿಗಲಿಲ್ಲವೇ ಬೌದ್ಧಿಕ ಧಾರಿದ್ರ್ಯವೇ? ವಗ೯ ಸಂಘರ್ಷದಿಂದ ಹೊರ ಬನ್ನಿ ಜನಾಂಗೀಯ ಏಕ ಮುಖ ಬಾವ ಪೂರ್ವಗ್ರವ ಪೀಡಿತ ಸಂಕುಚಿತ ಮನೋಭಾವದಿಂದ ಹೊರಬನ್ನಿ ಎಂದು ಅರ್ಥ.
ನನ್ನ ಪ್ರತಿಕ್ರಿಯೆ
ಸಂಕುಚಿತ ಇಲ್ಲ ನನ್ನದು ವಿಶಾಲ ಮನೋಭಾವ. ಸರ್ವರೊಳಗಿದ್ದು ಬಾಳಬೇಕು
Tuesday, November 15, 2016
Wednesday, November 9, 2016
ಅತ್ತಿದ್ದು ಸಾಕು
Monday, October 24, 2016
ಶಬ್ದರಹಿತ ಆರಾಧನೆ
ನಿಲ್ಲಲಿ ಸಿಡಿಮದ್ದಿನ ಹಾವಳಿ
ಬೆಳಗಲಿ ದೀಪ ಮನೆಮನಗಳಲಿ
ಜ್ಞಾನವೆಂಬುದು ಜ್ಯೋತಿಯಂತೆ
ನಿಶ್ಯಬ್ದದ ಆಶಾಕಿರಣ
ಅಜ್ಞಾನವು ಪಟಾಕಿಯಂತೆ
ಶಬ್ದಗಳದ್ದೇ ಆಕ್ರಂದನ
ನಿಸರ್ಗದ ಎಲ್ಲಾ ಸಾಧನೆ
ಶಬ್ದರಹಿತ ಆರಾಧನೆ
ಮನುಜ ನಿನ್ನೀ ಶೋಧನೆ
ಜೀವಸಂಕುಲಕೆ ನರಕಯಾತನೆ
ಬೆಂಕಿಯನ್ನೂ ಬೆಳಕಾಗಿ
ಕಂಡಿದ್ದು ನಮ್ಮ ಸಂಸ್ಕೃತಿ
ಬೆಂಕಿ ಸೋಕಿ ಶಬ್ದವಾಗಿ
ಮಾಡಿದ್ದು ವಿಕೃತಿ
ದೀಪದೀಪವ ಬೆಳಗಿ
ಕೋಪತಾಪವೆಲ್ಲಾ ಮುಳುಗಿ
ಪ್ರಶಾಂತತೆಯ ಪುಳಕವಾಗಿ
ಸಂಭ್ರಮಿಸಲಿ ದೀಪಾವಳಿ
ತೊಂದರೆಗಳು ದೂರವಾಗಿ ತತ್ವಾದರ್ಶಗಳು ನಮ್ಮ ಬೆಳಗಿ
ಮನದ ತಮವ ನೀಗಿ
ಪ್ರಜ್ವಲಿಸಲಿ ಬದುಕು ಹಬ್ಬವಾಗಿ
0757ಎಎಂ251016
ಅಮುಭಾವಜೀವಿ
Saturday, October 22, 2016
ಈ ಹೊತ್ತಿನ ತಲ್ಲಣ
ನ್ಯಾಯ ಸಿಗದ ಆಕ್ರೋಶದಲ್ಲಿ ಆಡಳಿತಶಾಹಿ ದಬ್ಬಾಳಿಕೆಯಲ್ಲಿ ಅಸಹಾಯಕರನ್ನಾಗಿಸಿದೆ
ಈ ಹೊತ್ತಿನ ತಲ್ಲಣ
ಬರಗಾಲ ತಂದ ಭೀಕರ ಕ್ಷಾಮ
ಜಗದಿ ಇಲ್ಲವಾಗಿದೆ ಕ್ಷೇಮ
ಸತ್ತ ಮಾನವ ಪ್ರೇಮವೇ
ಈ ಹೊತ್ತಿನ ತಲ್ಲಣ
ಭ್ರಷ್ಟರ ಕೂಟದಲ್ಲಿ
ನಿಷ್ಠರ ಪರದಾಟ ನೋಡಿಲ್ಲಿ
ದಕ್ಷತೆಯ ಆತ್ಮಹತ್ಯೆಯೇ
ಈ ಹೊತ್ತಿನ ತಲ್ಲಣ
ನೀರಿಗಾಗಿ ಹಂಬಲಿಸುವ
ನ್ಯಾಯಕ್ಕಾಗಿ ಹಲುಬುವ
ಬಡಪಾಯಿಗೆ ಬಿದ್ದ ಏಟುಗಳೇ
ಈ ಹೊತ್ತಿನ ತಲ್ಲಣ
ಬರ ಬಂದು ಬಾಯಾರಿ
ರೈತ ಸಾಲದ ಶೂಲಕೇರಿ
ತಬ್ಬಲಿ ಮಕ್ಕಳ ಆಕ್ರಂದನವೇ
ಈ ಹೊತ್ತಿನ ತಲ್ಲಣ
ಅಬಲೆಯರ ಮೇಲೆ ಅತ್ಯಾಚಾರ ಕಂದಮ್ಮಗಳ ಮೇಲೆ ವಾಮಾಚಾರ ರಕ್ಷಿಸುವವನಿಂದಲೇ ಭ್ರಷ್ಟಾಚಾರವೇ
ಈ ಹೊತ್ತಿನ ತಲ್ಲಣ
ಆಧುನಿಕತೆಯ ಆಡಂಬರದಿ ಸೋಮಾರಿತನದ ವಿಡಂಬನೆಯ ವೃದ್ಧಾಶ್ರಮದಿ ಹೆತ್ತವರ ರೋಧನೆಯೇ
ಈ ಹೊತ್ತಿನ ತಲ್ಲಣ
ಸಾಕಿನ್ನು ಈ ತಲ್ಲಣ
ಬದುಕಾಗಲಿ ಸವಿಯೂರಣ
ಸಾಮರಸ್ಯವೇ ಜೀವನ
ಸಹಬಾಳ್ವೆಯೇ ಸವಿಭೋಜನ 0240ಪಿಎಂ221016
ಅಮುಭಾವಜೀವಿ ಅಪ್ಪಾಜಿ ಎ ಮುಸ್ಟೂರು (ಅಮುಭಾವಜೀವಿ )
Wednesday, October 19, 2016
Tuesday, October 18, 2016
ಹುಣ್ಣಿಮೆಯ ರಾತ್ರಿಯಲಿ
ಹುಣ್ಣಿಮೆಯ ರಾತ್ರಿಯಲಿ
ತಣ್ಣನೆಯ ವೇಳೆಯಲಿ
ತೇಲಿ ಬಂತು ನಿನ್ನ ನೆನಪು
ಬೆಳದಿಂಗಳು ಚೆಲ್ಲಿದಂತೆ
ಆಸೆಗಳು ಅರಳಿದವು
ಕನಸುಗಳು ಮರಳಿದವು
ನನ್ನೀ ಹೃದಯ ಹಾಡಿತು
ನೀನೇನೇ ನನ್ನವಳೆಂದು
ತಾರೆಗಳು ನಗುತಿರಲು
ನಿನ್ನ ಗುಳಿ ಕೆನ್ನೆಯೊಳು
ತಂಗಾಳಿ ತುಸು ಮೆಲ್ಲ ಬೀಸಲು ಲಾಸ್ಯವಾಡಿದೆ ನನ್ನೀ ಮುಂಗುರುಳು
ಕಾಲ ಹೀಗೆ ಕಳೆದ್ಹೋಯ್ತು
ಬೆಳ್ಳಂಬೆಳಕು ಈಗಾಯ್ತು
ನಿನ್ನಿಂದ ಮೇಲೆ ಮುತ್ತಿನ ಹನಿ
ಸಾಲುಗಟ್ಟಿ ನಿಂತು ನೋಡಿದೆ ಇಬ್ಬನಿ
ನಲ್ಲೆ ನೀನು ಪ್ರಕೃತಿ
ನಿನ್ನಿಂದ ನನಗೊಂದು ಸಂಸ್ಕೃತಿ
ಕಾರಣ ಅದುವೇ ಈ ಪ್ರೀತಿ
ನಾನು ನೀನು ಬಾಳಸಂಗಾತಿ
0821ಪಿಎಂ161016
ಅಮುಭಾವಜೀವಿ
ಹೆಮ್ಮೆಗೆ
ಹೆಮ್ಮೆಗೆ
ಭಾರತೀಯ ನಾನೆಂಬ ಹೆಮ್ಮೆಗೆ
ಬಲ ನೀಡಲಿ ಅಭಿಮಾನ
ಭಾರತೀಯತೆಯ ಎತ್ತಿ
ಹಿಡಿಯಲಿಸ್ವಾಭಿಮಾನ
ವಿವಿಧತೆಯಲ್ಲಿ ಏಕತೆ ಸಾಧಿಸಿ
ಜಾತ್ಯಾತೀತೆಯಲ್ಲಿ ಸಮರಸ ಬೆರೆಸಿ
ಅಖಂಡತೆಯ ಬುನಾಧಿ ಮೇಲೆ
ತೆರೆದಿದೆ ಸಾಮರಸ್ಯದ ಬಾಗಿಲೆ
ದಾರ್ಶನಿಕರ ದಾರಿ ದೀವಿಗೆ
ನಡೆಸಿಕೊಂಡು ಬಂದಿದೆ ನಮ್ಮನಿಲ್ಲಿಗೆ
ಸ್ವಾತಂತ್ರ್ಯದ ಈ ಅರಮನೆಯಲ್ಲಿ
ಪಾರತಂತ್ರಕೆ ಅವಕಾಶವಿನ್ನೆಲ್ಲಿ
ಧರ್ಮದ ತಳಹದಿಯಲ್ಲಿ
ಜ್ಞಾನದ ಪ್ರಖರತೆಯಲ್ಲಿ
ಸಂವಿಧಾನದ ಅನುಸಂಧಾನ
ಅದು ಈ ಭಾರತೀಯನಿಗೆ ತಂದ ಬಿಗುಮಾನ
ಗುರುತಿಸಿಕೊಳ್ಳ ಬೇಕು ನಾನಿಲ್ಲಿ
ನಿಜ ಭಾರತೀಯನೆಂಬ ಹೆಮ್ಮೆಯಲಿ
ಜನನಿ ಜನ್ಮ ಭೂಮಿಗೆ
ತನುಮನ ಮುಡಿಪವಳ ಸೇವೆಗೆ
ಧನ್ಯ ಜನ್ಮ ಜನಿಸಿದುದಕಿಲ್ಲಿ
ಮಾನ್ಯನೆನಿಸಿದೆ ಜಗದಲ್ಲಿ
ಪುಣ್ಯ ಪಡೆದೆ ಅವಳ ಮಡಿಲಲಿ
ಕಾರುಣ್ಯ ಬೀರಿದೀ ಗುಡಿಯಲಿ.
[1109am180215]
ಅಮುಭಾವಜೀವಿ
ಬತ್ತಿದ ಮರದಲಿ
ಬತ್ತಿದ ಮರದಲಿ
ಸತ್ತಿದೆ ಬದುಕು
ಕಟ್ಟಿದ ಗೂಡಿಗೆ
ಉರಿಬಿಸಿಲ ತೊಡಕು
ಮಳೆಯೇ ಮಾಯವಾಗಿ
ಹಸಿರು ತಾ ನಾಶವಾಗಿ
ನೆರಳೇ ನರಳಾಡಿದೆ
ಬದುಕೇ ಬರಡಾಗಿದೆ
ಮಾನವನ ಅತಿಯಾಸೆಗೆ
ಪರಿಸರ ನಾಶವಾಯ್ತು
ಮುಗಿಲು ಬಂಜೆಯಾಗಿ
ಅಂತರ್ಜಲ ಪಾತಾಳ ಸೇರಿತು
ನಿತ್ಯವೂ ಇಲ್ಲಿ ಹೋರಾಟ
ಹೇಳತೀರದು ಆ ಸಂಕಟ ಮರುಭೂಮಿಯಲಿಷ್ಟು ತಂಪಿರಬಹುದು ಸಮೃದ್ಧ ಈ ಭೂಮಿ ಸುಡುತಿಹುದು
ಬರ ಬಂದಿದೆ ಈಗ ಎಲ್ಲೆಲ್ಲೂ
ಪರದಾಡಿದೆ ಜೀವ ಹಗಲಿರುಳು ಏನಾಗುವುದೋ ಈಗ ಬದುಕು ಯಾಕಾಗೆಯೋ ಈ ಕೆಡುಕು
1253ಪಿಎಂ151016
ಅಮುಭಾವಜೀವಿ