[8/1, 8:57 AM] ಅಮು ಭಾವಜೀವಿ: *ನಮ್ಮ ಅನ್ನದಾತ*
ರೈತ ನಮ್ಮ ಅನ್ನದಾತ
ಆದರೆ ಇಂದು ಅವನು ಶೋಷಿತ
ಮಳೆಗಾಗಿ ಕಾದು ಕುಳಿತು
ಬಂದ ಒಡನೆ ಉಳುಮೆಗೈದು
ಬೀಜ ಬಿತ್ತಿ ಮೊಳೆಯುವಾಗ
ಮತ್ತೆ ಮುಗಿಲ ಬೇಡುವನು
ಬೆಳೆದ ಬೆಳೆಗೆ ಬೆಲೆಯಿಲ್ಲದೆ
ಸಾಲದ ಶೂಲಕೆ ಕೊರಳೊಡ್ಡಿ
ಬೇಸಾಯದೊಂದಿಗೆ ಸಾಯುವ
ಹತಭಾಗ್ಯ ಭೂತಾಯಿಯ ಮಗ
ಸುಳ್ಳು ಭರವಸೆಗಳ ನಂಬಿ
ಎಲ್ಲಾ ಹುಸಿಯಾಗಲು ಕುಗ್ಗಿ
ನಂಬಿದವರನೆಲ್ಲ ಅನಾಥರಾಗಿಸಿ
ಆತ್ಮಹತ್ಯೆಗೆ ಶರಣಾದನು
ಭೂಮಿ ಉಳುವವನಿಗೆ
ಬೆಲೆ ಸಿಗಲೇಬೇಕು
ರೈತ ಬೆಳೆದರೆ ತಾನೆ
ನಮಗೆಲ್ಲ ನೆಮ್ಮದಿಯ ಬದುಕು
ವ್ಯವಸಾಯವೇ ಅಭಿವೃದ್ಧಿಯ
ಮಂತ್ರವಾಗಬೇಕು
ವ್ಯವಸ್ಥೆಯಲ್ಲಿ ರೈತನಿಗೆ
ಮೊದಲ ಆದ್ಯತೆ ನೀಡಬೇಕು
0854ಎಎಂ01082018
*ಅಮು ಭಾವಜೀವಿ*
ಚಿತ್ರದುರ್ಗ
[8/1, 5:39 PM] ಅಮು ಭಾವಜೀವಿ: *ಸಾವಿರದ ಮನೆ*
ಸಾವು ಕಾಯುವುದು ಎಲ್ಲರ ಮನೆ
ಅದು ಕರೆದಾಗ ಹೋಗಲೇಬೇಕು ಸುಮ್ಮನೆ
ಬಡವನಿರಲಿ ಬಲ್ಲಿದನೇ ಆಗಲಿ
ಸಮಾನತೆಯೇ ಅದರ ನೀತಿಯಲಿ
ನೋವಾಗುವುದೆಂದು ಅದು ಅಂಜದು
ನರಳಾಟಕೆಂದೂ ಅದು ಕರಗದು
ಒಳ್ಳೆಯದು ಕೆಟ್ಟದ್ದರ ತುಲನೆ
ಹೆಸರುಳಿವುದು ಮಾಡದಿದ್ದರೆ ನಟನೆ
ಸಾವಿರದ ಮನೆ ಯಾವುದೂ ಇಲ್ಲ
ಅರಸನಾದರೂ ನೋಯದೆ ವಿಧಿಯಿಲ್ಲ
ಬೇರೆಯವರಿಗೆ ಹೇಳುವಾಗಿನ ಧೈರ್ಯ
ನಮಗೇ ಆದಾಗ ಕಳೆದುಕೊಳ್ಳುವೆವು ಸ್ಥೈರ್ಯ
ನಾನೆಂದೂ ಮೆರೆದವನೂ ಮಣ್ಣಾದ
ಇಲ್ಲಿ ಬಾಗಿ ಬೀಗಿದವ ಹಣ್ಣಾದ
ಸಾವು ತಟ್ಟುವುದು ಎಲ್ಲರ ಮನೆ ಬಾಗಿಲು
ಹಾಗೆಂದು ಪಟ್ಟುಕೊಳ್ಳಬಾರದು ದಿಗಿಲು
ಅಹಂಕಾರವನು ದೂರ ತಳ್ಳಿ
ಸಂಸ್ಕಾರವನು ಪಡೆದು ಉಳಿ
ಬೇರೆಯವರ ನೋವಿಗೆ ಸ್ಪಂದಿಸು
ಆಗ ಜಗ ನಿನ್ನ ಸಾವನೆಂದೂ ಆನಂದಿಸದು
0514ಎಎಂ31072016
ಅಮುಭಾವಜೀವಿ
[8/2, 6:18 AM] ಅಮು ಭಾವಜೀವಿ: *ಅಖಂಡ ಕರ್ನಾಟಕ*
ಅಖಂಡ ಕರ್ನಾಟಕದ
ಈ ನೆಲದಲ್ಲಿ ಬೇಡವೇ ಬೇಡ
ಪ್ರತ್ಯೇಕತೆಯ ಕೂಗು
ಏಕತೆಯೊಂದೆ ಕನ್ನಡದ ಸೊಬಗು
ಉತ್ತರ ದಕ್ಷಿಣ ಪೂರ್ವ ಪಶ್ಚಿಮ
ಕೂಡಿ ಆದುದು ಈ ಕರ್ನಾಟಕ
ಹಲವು ಸಂಸ್ಕೃತಿಗಳ ಭಿನ್ನ
ಆಚರಣೆಗಳ ಸುಂದರ ನಾಡು ಕರ್ನಾಟಕ
ನಾಡು ಕಟ್ಟಲು ಜೀವ ತೆತ್ತವರ
ಬಲಿದಾನದ ಕುರುಹು ಕರ್ನಾಟಕ
ಕನ್ನಡವೆಂದರೆ ಎಲ್ಲರೆದೆಯ
ಅಭಿಮಾನದ ಹೆಮ್ಮೆ ಕರ್ನಾಟಕ
ಹರಿಯುವ ನದಿಗಳೆಲ್ಲ ಸೇರುವ
ಸಾಗರವೊಂದೇ ನಮ್ಮ ಈ ಕರ್ನಾಟಕ
ಹರಳುವ ಹೂಗಳ ಪರಿಮಳದ
ಕಂಪಿನ ಪೆಂಪದು ಕರ್ನಾಟಕ
ಸಾಹಿತ್ಯದ ಸುಧೆಯಲಿ ಹೊಮ್ಮಿದ
ಸಂಪತ್ತಿಗೆ ಪೀಠವು ಕರ್ನಾಟಕ
ಎಲ್ಲ ಕಲೆಗಳ ನೆಲೆಯಾದ
ಸ್ವಾಭಿಮಾನಿ ನಮ್ಮ ಕರ್ನಾಟಕ
ಅಭಿವೃದ್ಧಿಯ ಕಡೆಗಣಿಸಿದವರಿಗೆ
ಬುದ್ದಿಯ ಕಲಿಸಲು ಬರುವುದು ಕಾಲ
ಅಲ್ಲಿಯವರೆಗೂ ಕುಗ್ಗದಿರಲಿ
ಅಖಂಡ ಕರ್ನಾಟಕದ ಬಲ
0604ಎಎಂ02082018
*ಅಮು ಭಾವಜೀವಿ*
ಚಿತ್ರದುರ್ಗ
[8/2, 4:49 PM] ಅಮು ಭಾವಜೀವಿ: *ಸಾವೆಂದರೆ*
ಸಾವನ್ನ ಸಂಭ್ರಮಿಸಲಿ ನಾನೇಕೆ
ಸಾವೆಂದರೆ ನನಗೂ ಇದೆ ಅಂಜಿಕೆ
ಹುಟ್ಟಿನಷ್ಟೇ ಖಚಿತ ಸಾವು
ಅಷ್ಟರೊಳಗೆಲ್ಲ ಸಾಧಿಸಬೇಕು ನಾವು
ಹುಟ್ಟಿದಾಗ ಮನೆಯಲ್ಲಾ ನಗುವುದು
ಸತ್ತಾಗ ಸಹಜ ನೋವಾಗುವುದು
ಬದುಕಿನ ಈ ಪಾಠದಲಿ
ನಮ್ಮದು ಬರಿಯ ಆಟ
ಫಲವನು ಬಯಸದೇ
ಕಾಲವನು ಸದ್ವ್ಯೆಯಿಸಬೇಕು
ನಿನ್ನೆ ಹೇಗೊ ಕಳೆಯಿತು
ನಾಳೆ ಹೇಗೋ ಯಾರಿಗೆ ಗೊತ್ತು
ಇಂದಿನ ಬದುಕು ನಮ್ಮ ಸ್ವತ್ತು
ಅದರಲಿ ಯಶಸ್ವಿಯಾದಾಗಲೇ ಸಂಪತ್ತು
ಎಲ್ಲರೊಳು ಅನುರಾಗಿಯಾಗಿ
ಎತ್ತರಕ್ಕೆ ಬೆಳೆದರೂ ಬಾಗಿ
ಬಾಳಬೇಕು ಕರ್ಮಯೋಗಿಯಾಗಿ
ತೆರಳಬೇಕು ಸುಖದಿ ಬೀಗಿ
ಸಾವೆಂಬುದು ಅವಸಾನವಲ್ಲ
ಇಡೀ ಬದುಕಿಗೆ ಕೊಟ್ಟ ಬಹುಮಾನ
ಗೆಲ್ಲುವ ಭರವಸೆಯೇ ಬದುಕು
ಸೋಲು ಎಂದೂ ಆಗದು ಕೆಡುಕು.
1145ಎಎಂ02082016
*ಅಮುಭಾವಜೀವಿ*
*ಎರಡು ವರ್ಷಗಳ ಹಿಂದೆ ಬರೆದ ಕವಿತೆ*
[8/2, 9:13 PM] ಅಮು ಭಾವಜೀವಿ: *ನಾವು ಸೇರುವ ಘಳಿಗೆ*
ಕಾರ್ಮೋಡ ಕರಗಿ
ಮಳೆ ಬಿಲ್ಲು ಬಾಗಿ
ನಿನ್ನ ನೆನಪು ತಂತು
ಮನದ ಮಲ್ಲೆ ಅರಳಿ
ಮರೆತ ನೆನಪು ಮರಳಿ
ನಿನ್ನ ಕೂಗಿ ಕರೆಯಿತು
ಯಾವ ಮೋಡದ ಮರೆಯಲಿ
ಅವಿತು ಕೂತಿರುವೆ ನೀನು
ಬೆಳದಿಂಗಳಾಗಿ ಬಂದುಬಿಡು
ಯಾರ ಹಂಗೂ ನಮ್ಮ
ಪ್ರೀತಿಗಿರದು ಬಂದು
ನನ್ನ ಆಲಿಂಗಿಸಿಬಿಡು
ಇಷ್ಟು ದಿನದ ಗ್ರಹಣ ಸಾಕು
ಇಷ್ಟ ಪುಟ್ಟ ನೀನು ಬೇಕು
ನೀ ಬರುವ ದಾರಿ ಕಾದಿದೆ ಬದುಕು
ಕಷ್ಟ ಎನೇ ಬಂದರೂ
ನಿನ್ನ ಜೊತೆ ನಾನಿರುವೆ
ನೀ ನನಗೆ ಬೆಂಬಲವಾಗಿರು ಸಾಕು
ಒಲವಿನ ಜೀವವೇ ಬಾ ಬಳಿಗೆ
ನೀನಲ್ಲವೇ ಸ್ಪೂರ್ತಿ ಬಾಳಿಗೆ
ನಾವಿಬ್ಬರೂ ಸೇರುವ ಘಳಿಗೆ
ಆಷಾಢದ ಸವಿ ಹೋಳಿಗೆ
0614ಪಿಎಂ02082018
*ಅಮು ಭಾವಜೀವಿ*
ಚಿತ್ರದುರ್ಗ
[8/4, 6:04 AM] ಅಮು ಭಾವಜೀವಿ: *ಧ್ಯಾನಸ್ಥ*
ಶ್...! ಸದ್ದು ಮಾಡದಿರು
ಉಧ್ಯಾನವನವಿದು
ಧ್ಯಾನಸ್ಥ ಸ್ಥಿತಿಯಲಿಹುದು
ಆ ಶಾಂತತೆಯ ಸವಿದು ನೀ ಹೋಗು
ಮುಂಜಾನೆಯ ಮಂಜಿನಲ್ಲಿ
ಹಕ್ಕಿಗಳಿಂಚರದ ಮಂತ್ರದಲ್ಲಿ
ಹೂವು ಅರಳುವ ವೇಳೆಯಲ್ಲಿ
ಮನುಜ ನಿನ್ನ ಕೃತಕತೆ ಬದಿಗಿಡು
ನಿಸರ್ಗದ ಸ್ವರ್ಗವಿದು
ಸೊಬಗಿನ ಆಗರವಿದು
ಸೋಜಿಗದ ಜಾಗವಿದು
ಮನುಜ ನಿನ್ನ ಮೋಜನಿಲ್ಲಿ ಮುಚ್ಚಿಡು
ಬೆಳಗಲೆಂದು ಬರುವ ರವಿ
ಮಾಡನಿಲ್ಲಿ ಒಂದಿನಿತು ಸದ್ದು
ಆ ಬೆಳಕಿನಲ್ಲಿ ಬಾಳುವ
ಮನುಜ ನಿನ್ನದೇನಿದು ಗತ್ತು
ನೀನೂ ಕಣ್ಮುಚ್ಚಿ ಆಲಿಸು
ಪ್ರಕೃತಿಯ ಆ ಪಿಸುಮಾತು
ಕ್ರೋಧ ಕ್ರೌರ್ಯಗಳು ತಲೆಯೆತ್ತವು
ನಿನ್ನ ಜೀವಿತದೊಳಗೆ ಯಾವೊತ್ತು
0559ಎಎಂ04082018
*ಅಮು ಭಾವಜೀವಿ*
ಚಿತ್ರದುರ್ಗ
*ಶುಭೋದಯದೊಂದಿಗೆ*
[8/5, 5:56 AM] ಅಮು ಭಾವಜೀವಿ: *ಅನುಬಂಧಕೊಂದು ಹೆಸರು*
ಸ್ನೇಹ ಎಂಬುದೊಂದು ಭಾವ
ಅದು ಮರೆಸುವುದೆಲ್ಲ ನೋವ
ಆತ್ಮೀಯತೆ ಅದರ ಉಸಿರು
ಈ ಚಂದ ಅನುಬಂಧಕೊಂದು ಹೆಸರು
ಎಲ್ಲೋ ಇದ್ದವರು
ಯಾರೋ ಆಗಿದ್ದವರು
ಒಮ್ಮೆ ಬೆಸೆದ ಕೊಂಡಿಯೊಳಗೆ
ಸದಾ ಉರಿವ ಹಣತೆಗಳು
ಸ್ನೇಹ ಎಂಬುದೊಂದು ವರ
ಆ ಬಾಂಧವ್ಯವೇ ಸುಂದರ
ನಂಬಿಕೆಯೇ ಸ್ನೇಹದ ಜೀವ
ಪರಸ್ಪರರು ಒಂದೇ ಎಂಬ ಭಾವ
ನೋವುಗಳನೆಲ್ಲ ತಡೆದು
ನಲಿವಾಗಿಸುವ ಶಕ್ತಿ ಇದು
ಬೇಕು ಬೇಡಗಳ ಗೊಂದಲಕೆ
ಉತ್ತರವಾಗುವ ಹತ್ತಿರವಿದು
ಜಗವೆಲ್ಲ ಸ್ನೇಹಮಯ
ಅದಕೆ ಅದು ಶೃಂಗಾರ ಮಯ
ಸ್ನೇಹ ಬಂಧ ಬದುಕಿನಾನಂದ
ಜೇನುಗೂಡೊಳಗಿನ ಮಕರಂದ
ಬಾಳೋಣ ನಾವೆಲ್ಲಾ ಸ್ನೇಹಿತರಾಗಿ
ಸವಿಯೋಣ ಸ್ನೇಹಾಮೃತ ಖುಷಿಯಾಗಿ
ಸ್ನೇಹವೇ ಬದುಕಿನ ಬೆಂಬಲ
ಸ್ನೇಹ ಉಳಿಯಲಿ ಚಿರಕಾಲ
0530ಎಎಂ05082018
*ಅಮು ಭಾವಜೀವಿ*
ಚಿತ್ರದುರ್ಗ
*ಸ್ನೇಹಿತರ ದಿನದ ಹಾರ್ದಿಕ ಶುಭಾಶಯಗಳೊಂದಿಗೆ* 🤝🤝🤝🤝🤝🤝
*ನನ್ನೆಲ್ಲಾ ಮಿತ್ರರಿಗೆ ಈ ಕವಿತೆಯನ್ನು ಅರ್ಪಿಸುತಿರುವೆ*
[8/6, 5:43 PM] ಅಮು ಭಾವಜೀವಿ: *ಓ ಸಾವೇ*
ನಿತ್ಯ ತೂಗುಗತ್ತಿಯ ಹಾಗೆ
ಕಾದು ಕೂತಿದ ಸಾವು
ಅದು ಬಂದೆರಗುವಾಗ
ಅಸಹಾಯಕರು ನಾವು ನೀವು
ಯಾವ ರೂಪದಲಿ,
ಯಾವ ಮನೆಯೊಳಗೆ
ಹೇಗೆ ನುಸುಳುವುದೋ
ಸಾವಿಲ್ಲದ ಮನೆಯ ಖ್ಯಾತಿ ಅದರದು
ಜನನದಾ ಖುಷಿಯನ್ನು
ಮರಣ ತಾ ಕಸಿಯುವುದು
ಸುಖದ ಸಾಮ್ರಾಜ್ಯವ ಕ್ಷಣದಿ
ದುಃಖ ಆಕ್ರಮಿಸಿ ಆಳುವುದು
ಕುಟುಂಬದ ಆಧಾರವೆನ್ನುವಂತಿಲ್ಲ
ಅದನೇ ಹೆಕ್ಕಿ ಹೊತ್ತೊಯ್ಯುವುದು
ಉರಿವ ದೀಪವನೇ ನಂದಿಸಿ
ಕತ್ತಲಾವರಿಸಿ ಸುಖಿಸುವುದು
ಬೆಳೆವುದಳಿಯಲೇ ಬೇಕು
ಅಳಿವು ಸಾರ್ಥಕವಾಗಬೇಕು
ಆದರಿಲ್ಲಿ ಹಸನಾದ ಬಾಳಲೆರಗಿ
ಏಕೆ ಧ್ವಂಸಗೈವೆ ಓ ಸಾವೆ ನೀನು
ನಿನ್ನ ಕಾರುಬಾರಲಿ ಕರುಣೆ ತೋರು
ಸಾಕೆನಿಸಿದವರ ನೀ ಹೊರು
ಸಹಜವಿರಲಿ ನಿನ್ನ ಹಾದಿ
ಮನುಜ ನಾ ಬೇಡುವೆ ಜತನದಿ
0625ಎಎಂ060815
*ಅಮು ಭಾವಜೀವಿ*
*ಮೂರು ವರ್ಷಗಳ ಹಿಂದೆ ಬರೆದ ಕವಿತೆ*
[8/6, 7:02 PM] ಅಮು ಭಾವಜೀವಿ: *ಸೇರಿದ ಕಾರಣ*
ಮುಸ್ಸಂಜೆಯ ಹೊತ್ತಲ್ಲಿ
ತಂಗಾಳಿಯು ತೀಡುತಲಿ
ನೀನಿರಲು ಜೊತೆಯಲ್ಲಿ
ಗೋಧೂಳಿಯ ಸಡಗರ
ತುಂತುರು ಹನಿಗಳು
ಮುತ್ತನು ಸುರಿವಾಗ
ಆಲಿಂಗನದಿ ಮೈಮರೆಯಲು
ಸ್ವರ್ಗ ಸಮಾನವೀ ಸಮಯ
ಚಂದಿರನಂತೆ ನಾನು
ತಾರೆಗಳಂತೆ ನೀನು
ಕಣ್ಣ ಬೆಳಕಿನಲಿ ತಂಪು
ವೇಳೆಯಲಿ ಸುಖದಾನಂದ ಸವಿದೆ
ಶ್ರಾವಣದ ಸಂಜೆಯಿದು
ಯೌವನದ ಬಯಕೆಯಿದು
ನನ್ನ ನಿನ್ನ ಈ ಮಿಲನ
ಎಂದೂ ಮರೆಯದ ಕವನ
ಇರಲಿ ಹೀಗೆ ಜೀವನ
ನೆರಳಾಗಲಿ ಪ್ರೀತಿ ಯಾನ
ಬದುಕೊಂದು ಸುಂದರ ತಾಣ
ನಾನು ನೀನು ಸೇರಿದ ಕಾರಣ
0657ಪಿಎಂ06082018
*ಅಮು ಭಾವಜೀವಿ*
ಚಿತ್ರದುರ್ಗ
[8/7, 1:00 PM] ಅಮು ಭಾವಜೀವಿ: ಮೂರು ವರ್ಷಗಳ ಹಿಂದೆ ಬರೆದ ಕವಿತೆ
*ಕವಿತೆ*
ಹಣತೆ ಹಚ್ಚಿಟ್ಟಂತೆ
ಬೆಳಕಾಗಲಿ ಕವಿತೆ
ಗಾಳಿಯಲಿ ಗಂಧ ಪಸರಿಸುವಂತೆ
ವ್ಯಾಪಿಸಲಿ ಅದರ ಘನತೆ
ಹೂವಿನಂತರಳಲಿ
ಸಾಹಿತ್ಯ ವನದಲಿ ಕವಿತೆ
ಮಧು ಹೀರುವ ದುಂಬಿಗೆ
ಹಿತವೆನಿಸಲಿ ಆ ಮಾಧುರ್ಯತೆ
ಹೊಳೆಯಾಗಿ ಹರಿಯಲಿ
ಬಳಲಿದಿಳೆಯ ತಣಿಸಲಿ
ಸಮೃದ್ದಿಯ ಸಾಂಗತ್ಯದಿ
ಸಂತೈಸಲಿ ಕವಿತೆ
ಇರುಳ ತಾರೆಯಂದದಿ ಮಿನುಗಿ
ಹಕ್ಕಿಗೊರಲಾಗಿ ಗುನುಗಿ
ಇಳೆಗೆ ಮಳೆಯಂದದಿ ಸುರಿದು
ಸೆಳೆಯಲಿ ಈ ಕವಿತೆ
ನೊಂದ ಮನಕೆ ನೆರಳಾಗಿ
ಕಂಡ ಕನಸು ಕೈಗೂಡಿ
ತಾನೊಂಟಿಯೆಂಬ ಭಾವ ದೂರಾಗಿ
ಬದುಕ ಬೆಂಬಸಲಿ ಕವಿತೆ
655ಎಎಂ070815
*ಅಮುಭಾವಜೀವಿ*
[8/9, 1:08 PM] ಅಮು ಭಾವಜೀವಿ: *ನಮಗೇಕೆ ಹಂಗು*
ನಮಗೇಕೆ ಹಂಗು
ಇನ್ನೊಬ್ಬರಾ ಗುಂಗು
ನಮ್ಮಂತೆ ನಾವಿರೋಣ
ಹೂವಾಗಿ ಅರಳೋಣ
ಯಾರಿಗಾಗೋ ಮೋಡ ಕಟ್ಟಿಲ್ಲ
ಅವರ ಕೇಳಿ ಮಳೆ ಸುರಿಯೋಲ್ಲ
ನಮ್ಮಂತೆ ನಾವಿರೋಣ
ಮಳೆಯಾಗಿ ಬಾಳ ಬೆಳೆಯೋಣ
ಕತ್ತಲಿಗೆಂದೂ ಸಂಜೆ ಹೆದರುವುದಿಲ್ಲ
ಬೆಳಗಾಯ್ತೆಂದು ಕತ್ತಲು ಕೊರಗುವುದಿಲ್ಲ
ನಮ್ಮಂತೆ ನಾವಿರೋಣ
ಬೆಳಕು ಕತ್ತಲಾಟದಿ ಮೈಮರೆಯೋಣ
ಹರಿಯಲೇಬೇಕೆಂದು ನದಿ ಓಡೊಲ್ಲ
ತೀರ ಸೇರಲೆಂದು ಅಲೆ ಬರೊಲ್ಲ
ನಮ್ಮಂತೆ ನಾವಿರೋಣ
ನದಿಯಾಗಿ ಸೇರಿ ಅಲೆಯಾಗಿ ಉಕ್ಕೋಣ
ಹುಟ್ಟು ಅನಿವಾರ್ಯವಾದರೂ
ಸಾವು ನಿಶ್ಚಿತವಾದರೂ
ನಮ್ಮಂತೆ ನಾವಿರೋಣ
ಹುಟ್ಟುಸಾವಿನಾಚೆಗೂ ನಾವ್ ಉಳಿಯೋಣ.
*ಅಮುಭಾವಜೀವಿ*
*ಮೂರು ವರ್ಷಗಳ ಹಿಂದೆ ಬರೆದ ಕವಿತೆ*
[8/9, 4:54 PM] ಅಮು ಭಾವಜೀವಿ: *ನೆಟ್ಟು ಹೋಗಿರುವೆ*
ನಾ ನೆಟ್ಟು ಹೋಗಿರುವೆ
ಚಿಕ್ಕ ಸಸಿಯನೊಂದು
ಬೆಳಸಿಕೊಂಡರೆ ಮರವಾಗುವುದು
ಉಳಿಸಿಕೊಂಡೇ ನೆರಳೀಯುವುದು
ಅದಕೆ ಬೇಕು ನಿಮ್ಮೊಲವಿನ
ಪೋಷಣೆಯ ನೀರು ಗೊಬ್ಬರ
ಅದರ ಜೊತೆಗೊಂದಿಷ್ಟು
ನಿಮ್ಮ ಹೊಣೆತನದ ಆಧಾರ
ನಿಮ್ಮ ವಿಶ್ವಾಸಕೆ ಅದು
ಎಂದೆಂದೂ ಶ್ವಾಸವಾಗುವುದು
ನಿಮ್ಮ ಋಣ ತೀರಿಸಲು
ಹಣ್ಣುಹಂಪಲಿನ ಸವಿ ನೀಡುವುದು
ನಿಮ್ಮ ಆಸರೆಯಿಂದಲೇ
ಭದ್ರವಾಗುವುದದರ ಬೇರು
ನೀವು ಬಯಸಿದರೆ
ನಿಮಗಾಗುವುದದು ಸೂರು
ಕಾಯುವವರು ಕರಪಿಡಿಯುವವರು
ನೀವೇ ಆಗಿರುವ ತನಕ
ಅದಕಿಲ್ಲ ಯಾವ ಭಯ ಅಂಜಿಕೆ
ಹಸಿರು ಹೆಸರಾಗುವುದು ಕೊನೆತನಕ
0831ಎಎಂ09082018
*ಅಮು ಭಾವಜೀವಿ*
ಚಿತ್ರದುರ್ಗ
[8/11, 6:58 AM] ಅಮು ಭಾವಜೀವಿ: *ಬೆಳಗು ಮೂಡಿತು*
ಮೂಡುತಿದೆ ಬೆಳಗು
ನೋಡದರ ಸೊಬಗು
ಮುಂಜಾನೆಯ ಹೊತ್ತು
ಪ್ರಕೃತಿಯ ಸಂಪತ್ತು
ಎಲೆಗಳ ಒಡಲ ಮೇಲೆ
ಹೊಳೆವ ಇಬ್ಬನಿ ಮಾಲೆ
ಉಲಿವ ಹಕ್ಕಿಗಳಿಂಚರ
ಸುಪ್ರಭಾತದ ಸುಸ್ವರ
ತಂಗಾಳಿಗೆ ತಣಿದ ಇರುಳಿಗೆ
ವಿಶ್ರಾಂತಿಯ ಜೋಗುಳ
ದಿನ ತೆರೆಯಿತು ಇನ ಬರಲು
ಇನ್ನಿಲ್ಲ ಕತ್ತಲಿನ ಉಪಟಳ
ಜೀವ ಚೇತನದ ಮುಂಜಾವು
ಭಾವ ಹೊಮ್ಮಿಸುತಿಹ ಸುಮವು
ಇನ್ನು ದಿನವೆಲ್ಲ ಹೊಸತನ
ಕಾಯಕಕೆ ಅಣಿಗೊಳಿಸುವ ಕ್ಷಣ
0630ಎಎಂ11082018
*ಅಮು ಭಾವಜೀವಿ*
[8/13, 8:42 AM] ಅಮು ಭಾವಜೀವಿ: *ಭಾವವಿರದ ಹಾಡಿನಲ್ಲಿ*
ಭಾವವಿರದ ಹಾಡಿನಲ್ಲಿ
ಶೃತಿ ತಪ್ಪಿತು ಜೀವನ
ನೋವು ತುಂಬಿದ ಹಾಳೆಯಲ್ಲಿ
ಮೂಡಿತು ಕಂಬನಿಯ ಕವನ
ನೊಂದ ಹೃದಯ ಮಿಡಿದ
ಅಪಸ್ವರದ ಆಲಾಪ
ಕೊಂದ ಪ್ರೀತಿಯನೆಂದೂ
ಮರೆಯಲಾಗದ ಸಂತಾಪ
ಮನದ ಮೂಲೆಯಲ್ಲಿ ಎಲ್ಲೋ
ಉಳಿದ ಮಾತುಗಳು ನೂರು
ಬೇಸರದ ಬಿರುಗಾಳಿಗೆ ಏಕೋ
ಹಾರಿ ಹೋಯಿತು ನಂಬಿಕೆಯ ಸೂರು
ಮತ್ತೆ ಮತ್ತೆ ಕಾಡುತಿದೆ
ಆಪತ್ತಿನಲಿ ತಬ್ಬಲಿ ಭಾವ
ಹಳಿ ತಪ್ಪಿದ ಬದುಕಲಿ ಎಲ್ಲೋ
ಅಪಘಾತ ಘಟಿಸುವ ಸಂಭವ
ಎಲ್ಲಿದೆಯೋ ನೋವ
ನೀಗುವ ಆ ಆಶಾಕಿರಣ
ಕಾಯುವಿಕೆಯ ಕನವರಿಕೆಯಲ್ಲಿ
ದೂಡುತಿಹೆ ಬಾಳ ಪಯಣ
10082018
*ಅಮು ಭಾವಜೀವಿ*
[8/15, 5:23 AM] ಅಮು ಭಾವಜೀವಿ: *ಸ್ವಾತಂತ್ರ್ಯ ಹಬ್ಬ*
ಬಂತಪ್ಪ ಬಂತು ಸ್ವಾತಂತ್ರ್ಯದ ಹಬ್ಬ
ತ್ಯಾಗ ಬಲಿದಾನಗಳ ನೆನಪಿಸೋ ಹಬ್ಬ
ಭಾರತ ಮಾತೆಯ ಬಿಡುಗಡೆಗೊಳಿಸಿ
ಭಾರತವನ್ನು ಸ್ವತಂತ್ರಗೊಳಿಸಿ
ರಾಷ್ಟ್ರಾಭಿಮಾನದ ಜ್ಯೋತಿ ಬೆಳಗಿದ
ನಮ್ಮಯ ಹೆಮ್ಮೆಯ ರಾಷ್ಟ್ರೀಯ ಹಬ್ಬ
ಸಂಭ್ರಮದ ಆಚರಣೆಯಲ್ಲ
ರಾಷ್ಟ್ರಪ್ರೇಮಕೆ ಪ್ರೇರಣೆಯು
ನಮ್ಮವರ ಹೋರಾಟಕೆ ಇಂದು
ರಾಷ್ಟ್ರ ತೋರುವ ಮನ್ನಣೆಯು
ಸತ್ಯಾಗ್ರಹದ ಅಸ್ತ್ರಗಳಿಂದ
ಶಾಂತಿ ಸಾರಿದ ತಾಳ್ಮೆಯಿಂದ
ಕ್ರಾಂತಿ ಕಹಳೆ ಮಾರ್ದನಿಸಲು
ಬಂಧ ಮುಕ್ತಿಯ ಮಹಾ ಸಂಭ್ರಮ
ಏಕತೆಯ ಮಂತ್ರ ಹಾಡಿ
ಭಿನ್ನತೆಯ ಹೊರದೂಡಿ
ವಂದೇ ಮಾತರಂ ಮೊಳಗಿದ
ಜನಗಣಮನ ಅಭಿಮಾನದ ಹಬ್ಬ
ಜೈ ಹಿಂದ್ ಘೋಷ ವಾಕ್ಯ
ಒಗ್ಗೂಡಿಸಿದ ರಾಷ್ಟ್ರ ನಮ್ಮದು
ಸ್ವಾತಂತ್ರ್ಯದ ಸವಿಯನುಂಡು
ಪ್ರಗತಿ ಕಂಡ ದೇಶವಿದು
0844ಎಎಂ14082018
*ಅಮು ಭಾವಜೀವಿ*
ಚಿತ್ರದುರ್ಗ
🇮🇳🇮🇳🇮🇳🇮🇳🇮🇳🇮🇳🇮🇳🇮🇳
[8/16, 11:30 AM] ಅಮು ಭಾವಜೀವಿ: *ಮರೀಚಿಕೆ*
ಭಾವ ಬತ್ತುತಿದೆ
ಬೇಸರ ಕುತ್ತು ತಂದಿದೆ
ಬಯಕೆಗಳೊಳಗೆಲ್ಲ
ನಿರಾಸೆಯ ಪ್ರವಾಹ ನುಗ್ಗಿದೆ
ಕಣ್ಣು ಕನಸನೇ ಮರೆತು
ಮನವು ವ್ಯಸನಕೆ ಸಿಕ್ಕು
ತನುವು ಕೃಶವಾಗಿ
ಕುಸಿಯುತಿದೆ ಬದುಕು
ನಂಬಿಕೆಯ ಸೂರು ಕುಸಿದು
ಅಭಿಮಾನದ ಬೇರು ಕಡಿದು
ಸ್ವಾಭಿಮಾನವ ಅವಮಾನಿಸಿ
ಸೋಲಿಗೆ ಶರಣಾಯ್ತು ಭವಿಷ್ಯ
ಎಲ್ಲ ಇಲ್ಲಗಳು ಸಲ್ಲದಂತಾಗಿಸಿ
ಬದುಕ ಭರವಸೆಯನ್ನು ಕಸಿದು
ಎಡವಿ ಬಿದ್ದಿರಲು ಎತ್ತದೆ
ತುಳಿದು ಅಳಿಸಿ ಹಾಕಿತು
ಹೋರಾಟದ ಹಾದಿಯಲಿ
ಜಯವಿನ್ನು ಮರೀಚಿಕೆ
ಗೆಲುವು ಇಲ್ಲದ ಬದುಕಿನಲಿ
ಇರದು ನೆಮ್ಮದಿಯ ಕಾಣಿಕೆ
0928ಎಎಂ16082018
*ಅಮು ಭಾವಜೀವಿ*
[8/16, 8:06 PM] ಅಮು ಭಾವಜೀವಿ: *ಓ ಅಜಾತಶತ್ರುವೇ*
ಅಶ್ರುತರ್ಪಣ ನಿಮಗೆ
ಓ ಅಜಾತಶತ್ರುವೇ
ಹೃದಯ ಭಾರವಾಗಿದೆ
ಬೀಳ್ಕೊಡಲು ನಿಮ್ಮನೀಗಲೇ
ಮೃದು ಮಾತಿನ ಧೃಢತೆ
ದೇಶಕ್ಕೆ ನಿಮ್ಮಿಂದಲೇ ಘನತೆ
ಕವಿ ಹೃದಯದ ಭಾವಜೀವಿ
ಮರೆಯಾದಿರಾ ವಾಜಪೇಯಿ
ಅಟಲ್ ಎಂಬ ದಿಟ್ಟ ವ್ಯಕ್ತಿ
ಅಚಲ ನಿಲುವಿನ ಮೂರ್ತಿ
ಶತ್ರುವಿಗೂ ಸ್ನೇಹ ಹಸ್ತ ಚಾಚಿ
ಹೆಮ್ಮೆಯ ನೇತಾರರೆನಿಸಿದ ವಾಗ್ಮಿ
ವಿಜ್ಞಾನದ ಮುನ್ನಡೆಗೆ ಪ್ರೋತ್ಸಾಹಿಸಿ
ದೇಶದ ಆರ್ಥಿಕ ಸ್ಥಿತಿ ಬಲಪಡಿಸಿ
ಭಾರತ ಪ್ರಕಾಶಿಸಿದ ಸೂರ್ಯ
ಅಧಿಕಾರದ ಅಮಲೇರದ ಗಾಂಭೀರ್ಯ
ರಾಜಕಾರಣಕೊಂದು ಘನತೆ ನಿಮ್ಮಿಂದ
ರಾಜತಾಂತ್ರಿಕತೆಯಲಿ ಮೂಡಿತು ಸಂಬಂಧ
ಭಾರತ ಸಂತ ಸುತ ನಿಮಗಿದೋ ನಮನ
ಕಂಬನಿಯಲಿ ಮೂಡಿದ ಶ್ರದ್ಧಾಂಜಲಿ ಕವನ
0614ಪಿಎಂ16082018
*ಅಮು ಭಾವಜೀವಿ*
ಚಿತ್ರದುರ್ಗ
*ಅಟಲ್ ಜಿ ಅಮರವಾಗಲಿ*
[8/17, 6:39 PM] ಅಮು ಭಾವಜೀವಿ: *ಬೇಡ ಈ ದುಗುಡ*
ಈ ದುಗುಡ ನಿನಗೆ
ಬೇಡ ಗೆಳತಿ
ಮೌನ ತೊರೆದು ಮಾತಾಡು
ಏನೇ ಕಷ್ಟಗಳು ಬರಲಿ
ನೆರಳಾಗುತೀನಿ ನಾನು
ಪ್ರತಿ ನರಳಾಟಕೂ
ಕೊರಳಾಗುತೀನಿ ನಾನು
ಬದುಕಿನ ಪ್ರತಿ ಹೋರಾಟಕೂ
ಹಸಿರಾಗುತೀನಿ ನಾನು
ನಿನಗೆ ಸಿರಿಯನ್ನು ತರಲು
ಹೆದ್ದಾರಿಯಾಗುತೀನಿ ನಾನು
ನಿನ್ನ ಗುರಿಯನ್ನು ಸೇರಲು
ಛಲದಿಂದ ಚಲಿಸು
ಫಲವನ್ನು ನಿರೀಕ್ಷಿಸದೇ
ಒಂದಡಿಯೂ ಮುಂದಿಡಬೇಡ
ನಿನ್ನ ದಾರಿಯನು ಪರೀಕ್ಷಿಸದೆ
ಆಸರೆಯ ಸೂರು ನಾನಾಗುವೆ
ಭೂಮಿಗೆ ಅಂಬರದಂತೆ
ಅಂದ ಆನಂದದ ಗಣಿಯಾಗು
ಇರುಳಿನ ಆ ಚಂದಿರನಂತೆ
30082003
*ಅಮು ಭಾವಜೀವಿ*
[8/19, 6:25 AM] ಅಮು ಭಾವಜೀವಿ: *ಯಾರ ಶಾಪ*
ಏಕೆ ಈ ವಿಕೋಪ
ಯಾರದೋ ಈ ಶಾಪ
ಬದುಕಿನ ಆಧಾರವನ್ನೇ ಕಸಿದು
ಭರವಸೆಯ ಮಹಲೇ ಕುಸಿದು
ಗುರಿಯ ದಾರಿಯೇ ಕಾಣದಾಗಿ
ಕಂಗಾಲಾಗಿದೆ ಭವಿಷ್ಯವು
ಹರಿವ ನೀರೊಳಗೆ ಎಲ್ಲಾ
ಆಸೆಗಳು ಕೊಚ್ಚಿ ಹೋಗಿ
ನಿರಾಸೆಯ ಕೊಚ್ಚೆಯಲ್ಲಿ
ಮತ್ತೆ ಕಟ್ಟಿಕೊಳ್ಳ ಬೇಕಿದೆ ಬದುಕು
ಕಂಡ ಕನಸುಗಳನೆಲ್ಲ
ಹೊತ್ತೊಯ್ಯಿತು ಪ್ರವಾಹ
ಮುಳುಗಿದ ಬದುಕ ಕಂಡು
ಚಡಪಡಿಸುತಿದೆ ಬಡಜೀವ
ನೆರೆಯ ಆಕ್ರೋಶಕೆ
ನೆರೆಹೊರೆಯೂ ನರಳಾಡಿದೆ
ನಂಬಿಕೆಯ ನೆಲವೇ
ಕಾಲಡಿಯಲಿ ಕುಸಿಯುತಿದೆ
ಸಾಕು ಮಾಡು ಕಷ್ಟಗಳ ಮಳೆಯೇ
ಹಸಿವಿಂದ ನಿದ್ರೆಯಿರದೆ ಬಳಲಿರುವೆ
ಕಡಿಮೆ ಮಾಡಿಕೋ ನಿನ್ನ ಕೋಪವ
ಗಂಜಿಯ ಕುಡಿದಾದರೂ ಬದುಕುವೆ
0617ಎಎಂ19082018
*ಅಮು ಭಾವಜೀವಿ*
ಚಿತ್ರದುರ್ಗ
ಶುಭೋದಯ
[8/20, 6:32 PM] ಅಮು ಭಾವಜೀವಿ: *ಶಾಂತವಾಗಿ ಮೇಘವೇ*
ಓ ಮೇಘಗಳೆ ಇದು ನ್ಯಾಯವೇ
ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ
ಅನಾವೃಷ್ಟಿ ಇದು ಸರಿಯೇ
ಕೊಡಗನ್ನೇ ಮಡುವಾಗಿಸಿ
ಬದುಕನ್ನೇ ನುಂಗಿಹಾಕಿ
ಪ್ರವಹಿಸಿದೆ ಘೋರ ಪ್ರವಾಹ
ಬೆಟ್ಟ ಗುಡ್ಡಗಳೆಲ್ಲ ಕುಸಿದು
ಬದುಕಿನ ನೆಮ್ಮದಿಯ ಕಸಿದು
ಬೀದಿಗೆ ತಂದ ನಿನ್ನದೆಂತ ದಾಹ
ಬಯಲು ಸೀಮೆಯ ಮರೆತು
ಅಲ್ಲೇ ನೀವು ನೆಲೆ ನಿಂತು
ಶಿಕ್ಷಿಸೋ ಕಾರಣವೇನು
ಜಲದಿಗ್ಬಂಧನ ವಿಧಿಸಿ
ಹೊಲಗದ್ದೆಗಳ ಮುಳುಗಿಸಿ
ಗೆದ್ದು ಬೀಗುವೆ ನೀನು
ಮುನಿಯದಿರು ಮೇಘವೆ
ಬದುಕಲು ಬಿಡು ನಮ್ಮನು
ಮನ್ನಿಸಿ ನಮ್ಮ ತಪ್ಪನು
ಸಾವನ್ನೇ ಕಣ್ಣ ಮುಂದಿರಿಸಿ
ಎಚ್ಚರಿಕೆಯ ನೀ ನೀಡಿದೆ
ಕನಿಕರಿಸಿ ರಕ್ಷಿಸು ನಮ್ಮನು
ತೃಣ ಜೀವವು ನಮ್ಮದು
ಹೆಣಗಾಡುತಲಿಹುದು
ಶಾಂತವಾಗೆಂದು ಬೇಡುತ
0627ಪಿಎಂ20082018
*ಅಮು ಭಾವಜೀವಿ*
ಚಿತ್ರದುರ್ಗ
[8/21, 6:10 AM] ಅಮು ಭಾವಜೀವಿ: *ತಲ್ಲಣಿಸಿತು ಬದುಕು*
ಎಂಥಾ ಸಂಕಷ್ಟವ
ತಂದೊಡ್ಡಿದೆ ಮಳೆರಾಯ
ಆಶ್ರಿತ ಬದುಕನ್ನೇ ಮುಳುಗಿಸಿ
ನಿರಾಶ್ರಿತನ್ನಾಗಿಸಿದೆ ಇದು ಸರಿಯಾ?
ನಿನ್ನ ಆಕ್ರೋಶಕೆ ಅದೆಷ್ಟೋ
ಸಂಬಂಧಗಳ ಕೊಂಡಿ ಕಳಚಿತು
ನೀ ತಂದ ಈ ವಿಕೋಪಕ್ಕೆ
ನೆಮ್ಮದಿಯ ಬದುಕು ತಲ್ಲಣಿಸಿತು
ಹರಿವ ಪ್ರವಾಹದ ಜೊತೆಗೆ
ಕುಸಿದವು ಬೃಹತ್ ಬೆಟ್ಟಗಳು
ರದ್ದಾದವು ಅದೆಷ್ಟೋ ರಸ್ತೆಗಳು
ನೆಮ್ಮದಿಯ ಸೂರು ಸಮಾಧಿಯಾದವು
ಪ್ರಕೃತಿ ಪ್ರಕೃತಿಯ ನಡುವೆ
ಏಕೆ ಇಷ್ಟೊಂದು ಕದನ
ತೃಣ ಜೀವಗಳು ಅಲ್ಲಿ ಸಿಲುಕಿ
ತತ್ತರಿಸಿದವು ಕಂಡು ಆ ರುದ್ರನರ್ತನ
ಇನ್ನಾದರೂ ಮುನಿಸ ತಗ್ಗಿಸಿ
ಮನ್ನಿಸೋ ಓ ಮಳೆರಾಯ
ಮತ್ತೆ ಬದುಕ ಕಟ್ಟಿ ಕೊಳ್ಳಬೇಕಿದೆ
ಅದಕೆ ಬೇಕು ನಿನ್ನ ಸಹಾಯ
0520ಎಎಂ21082018
*ಅಮು ಭಾವಜೀವಿ*
ಚಿತ್ರದುರ್ಗ
*ಶುಭೋದಯ ಶುಭದಿನ*
[8/21, 8:59 PM] ಅಮು ಭಾವಜೀವಿ: *ಖಾಲಿತನ*
ಭಾವ ಬರಿದಾಗುತಿದೆ
ನೋವು ಇನ್ನೂ ಉಳಿದಿದೆ
ನೀ ಕೊಟ್ಟ ಪ್ರೀತಿಗೆ
ಸಾಟಿ ಏನಿದೆ ಜಗದಿ
ಪ್ರವಾಹದಿ ಸಿಲುಕಿದವಗೆ
ನೀನಾದೆ ಹುಲ್ಲುಕಡ್ಡಿ ಆಸರೆ
ಬೀದಿಯಲಿ ಬಿದ್ದ ಬದುಕಿಗೆ
ನೀನೊಂದು ಸೂರಾಗಿ ಸಲಹಿದೆ
ಬರೀ ಕಂಬನಿಯೇ ತುಂಬಿದ
ಬದುಕಲಿ ಸವಿಜೇನ ಉಣಬಡಿಸಿದೆ
ಕಂಡ ಕಂಡವರ ಬಾಯಿಗೆ
ಆಹಾರವಾದ ನನಗೆ
ನೀ ಅಭಿಮಾನದ ಕವಚವಾಗಿ
ಉತ್ತರ ಕೊಟ್ಟೆ ಅವರಿಗೆ
ನೀನಲ್ಲದೆ ಇನ್ನೇನು ಬೇಡ
ಎಂದು ಬಂದೆ ನೀನಿರುವಲ್ಲಿಗೆ
ವಿಧಿಯ ಪ್ರವಾಹಕೆ ಸಿಲುಕಿ
ಬಿಟ್ಟು ಹೋದೆ ನೀನಲ್ಲಿಗೆ
ಇನ್ನು ನನಗಿಲ್ಲ ಬದುಕು
ಮತ್ತೆ ಗೆದ್ದಿತು ಆ ಕೆಡುಕು
ನೊಂದು ಬೆಂದು ಬರಿದಾದೆ
ನೀನಿಲ್ಲದ ಖಾಲಿತನಕೆ ಶರಣಾದೆ
0918ಎಎಂ21082018
*ಅಮು ಭಾವಜೀವಿ*
ಜಗಳೂರು
[8/27, 5:26 AM] ಅಮು ಭಾವಜೀವಿ: *ಬದುಕಿನ ಒತ್ತಾಸೆ*
ಕನಸುಗಳು ನೂರು ಕಮರಿದವು
ಸಮತೋಲನದ ಬದುಕಿನಲ್ಲಿ
ಬಂಧ ಸಂಬಂಧಗಳು ಅಳಿದುಳಿದವು
ಇಂಥ ಇಕ್ಕಟ್ಟಿನ ಸ್ಥಿತಿಯಲ್ಲಿ
ನಡೆವ ಹಾದಿಗೆ ಎಲ್ಲವೂ ಮುಖ್ಯ
ಅಲ್ಲಿ ಸಿಗಬೇಕು ಸಹಪಯಣಿಗರ ಸಖ್ಯ
ಕೈಹಿಡಿದು ಕರೆದೊಯ್ಯುವವರು
ಹಾದಿ ತಪ್ಪಿಸಲು ಬಾಳಲ್ಲಿಲ್ಲ ಸೌಖ್ಯ
ನಂಬಿಕೆಯ ನೆರಳಿನಲಿ
ಅರಳಿದ ಹೊತ್ತು
ಅಂಜಿಕೆಯ ನರಳಿಕೆಯಲ್ಲಿ
ನೆಲಕಚ್ಚಿಸಿತು ಆಪತ್ತು
ಕಳೆಯುತಿದೆ ವಯಸ್ಸು
ಕಡಿಮೆಯಾಗುತಿದೆ ಆಯಸ್ಸು
ಸಿಕ್ಕ ಸ್ವಲ್ಪ ಸಮಯದಲಿ
ಕಟ್ಟಿಕೊಳ್ಳಬೇಕು ಭವಿಷ್ಯ
ಬಯಸಿದುದೆಲ್ಲ ಕೈಜಾರುವಾಗ
ಕಂಗಾಲಾದ ಬದುಕಿಗೇಕೋ
ಮತ್ತೆ ಕಟ್ಟಿಕೊಳ್ಳವ ಭರವಸೆ
ಬದುಕಿನದು ಎಂತಹ ಒತ್ತಾಸೆ
0513ಎಎಂ26082018
*ಅಮು ಭಾವಜೀವಿ*
ಮುಸ್ಟೂರು
*ಶುಭೋದಯದೊಂದಿಗೆ*
[8/29, 6:34 AM] ಅಮು ಭಾವಜೀವಿ: *ಬಯಲು ಸೀಮೆಯ ಮಲೆನಾಡು*
ಬಯಲು ಸೀಮೆಯ ಮಲೆನಾಡು
ಜೋಗಿಮಟ್ಟಿಯ ಗುಡ್ಡ ಕಾಡು
ಹಸಿರ ಸಿರಿಗೆ ಮೇಘಸ್ಪರ್ಶ
ನೋಡುವ ಕಣ್ಣಿಗೆ ಬಲು ಹರ್ಷ
ಬಳುಕುವ ದಾರಿಯಲಿ ನಡೆದು
ಸುತ್ತ ಹಸಿರಲಿ ಮುದದಿ ಮಿಂದು
ತಂಪು ಗಾಳಿಗೆ ಮೈಯೊಡ್ಡಿ
ಸಂಭ್ರಮಿಸಿದೆ ಮನ ಸೋತು
ನವಿಲುಗಳ ಚಂದದ ನರ್ತನ
ಹಕ್ಕಿಗಳಿನಿದನಿ ಕೂಜನ
ನರಿ ಕರಡಿಗಳ ಚಲನವಲನ
ಚಿರತೆಗೂ ಕೊರತೆಯಾಗದ ಕಾನನ
ಬರದ ನಾಡಲ್ಲಿ ಮೈದಳೆದ
ಪ್ರಕೃತಿಯ ಸೊಬಗ ನೋಡಬನ್ನಿ
ಬಸವನ ಬಾಯೊಳಗೆ ನೀರುಕ್ಕುವ
ಕ್ಷೇತ್ರ ದರ್ಶನದಿ ಪುನೀತರಾಗೋಣ ಬನ್ನಿ
ಚಾರಣದ ಪ್ರೇರಣ ತಾಣ
ವಾಯುವಿಹಾರ ಧಾಮ
ಮನ ತಣಿದ ಸಂಭ್ರಮದ ಕ್ಷಣ
ಮರೆಯಲಾಗದ ನಿಸರ್ಗ ಪ್ರೇಮ
0621ಎಎಂ29082018
ಅಮು ಭಾವಜೀವಿ
ಚಿತ್ರದುರ್ಗ
*ಬಯಲು ಸೀಮೆಯ ಊಟಿ ಎಂದು ಪ್ರಸಿದ್ಧಿ ಪಡೆದ ಚಿತ್ರದುರ್ಗದ ಜೋಗಿಮಟ್ಟಿ ಗಿರಿಧಾಮ ಕುರಿತ ಕವಿತೆ*
[8/30, 8:45 AM] ಅಮು ಭಾವಜೀವಿ: *ದಮನಿತರು ನಾವು*
ಊರ ಕಸವನೆಲ್ಲ
ಎತ್ತಿ ಒಯ್ಯುವ
ಶ್ರಮಿಕರು ನಾವು
ಸ್ವಚ್ಛತೆಗಾಗಿ ನಮ್ಮ
ಶುಚಿತ್ವವನೇ ಮರೆತ
ಬಡಪಾಯಿಳು ನಾವು
ದಿನದ ಕೂಳಿಗಾಗಿ
ಪ್ರತಿದಿನವೂ ಕೆಲಸ
ಮಾಡುವ ದಿನಗೂಲಿಯವರು ನಾವು
ಬೀದಿಯ ಕಸವ ಗುಡಿಸಿ
ಬೀಡಿ ಸೇದುತ್ತ ಕುಡಿದು
ಬೀದಿಯಲಿ ಬಿದ್ದವರು ನಾವು
ಅಂಗಡಿ ಮನೆ ಗುಡಿ
ಗಟಾರಗಳ ಗಲೀಜನು ಹೊತ್ತು
ತುತ್ತು ಅನ್ನಕಾಗಿ ಹಸಿದವರು ನಾವು
ನಮ್ಮನಾಳುವವರ ಕೈಗೊಂಬೆಯಾಗಿ
ಅವರ ಶೋಷಣೆಗೆ ದನಿಯಿಲ್ಲದವರಾಗಿ
ದಬ್ಬಾಳಿಕೆಯ ದಮನಿತರು ನಾವು
ಕಿಂಚಿತ್ತೂ ಗೌರವವಿಲ್ಲದ
ಸ್ವಚ್ಛಂದ ಬದುಕಿಲ್ಲದ
ಸ್ವಚ್ಛ ಭಾರತದ ಸಫಾಯಿಗಳು ನಾವು
0838ಎಎಂ30082018
*ಅಮು ಭಾವಜೀವಿ*
ಚಿತ್ರದುರ್ಗ
*ನಮ್ಮ ಊರನ್ನು ಸ್ವಚ್ಛ ಮಾಡುವ ಎಲ್ಲಾ ಸಫಾಯಿ ಕರ್ಮಚಾರಿಗಳಿಗೆ ಈ ಕವಿತೆಅರ್ಪಿಸುತ್ತಿದ್ದೇನೆ*
[8/30, 4:51 PM] ಅಮು ಭಾವಜೀವಿ: *ಕಣ್ಣ ಹನಿಯೊಂದು*
ಕಣ್ಣ ಹನಿಯೊಂದು ಜಾರುತಿರೆ
ನೋವು ಮಾಗಿದ ಕವನ
ಕಂಬನಿಯ ಧಾರೆ ಹರಿದರೆ
ನೊಂದ ಭಾವವೊಂದು ಸಂಕಲನ
ಮಿಡಿವ ಮನವು ಮುದುಡಿ
ಮೌನ ದಾಳಿಗೆ ಮೊಗವು ಬಾಡಿ
ಹೃದಯದಾಳದ ಮಿಡಿತ
ಮಥಿಸಿದ ಭಾವ ಅದಕೆ ಕಾರಣ
ಮಾತು ಹೇಳದ ನೂರು ಭಾವ
ಕಣ್ಣೀರಲಿ ದಂಡಿಯಾಗಿ ಕಂಡಿತು
ಯಾವ ಕಾರಣಕೋ ಹೊರ ಬರದ
ವೇದನೆಯು ಕಣ್ಣ ಬಿಂದಾಗಿ ಉದುರಿತು
ಕಾರ್ಮೋಡ ಕವಿದಾಗ ಸುರಿವ
ಜೋರು ಮಳೆ ಈ ಕಂಬನಿ
ಬದುಕ ಬವಣೆಯ ತಣಿಸುವ
ಮನದ ಸಾಂತ್ವಾನದ ದನಿ
ಅಳುವ ಕಣ್ಣಿನೊಳಗೆ
ಖಾಲಿ ಆಗದ ಒರತೆಯಿದು
ನೋವಿಗೊಂದು ಬಂಧುವಾಗಿ
ಮರೆಸುವುದದನೆಲ್ಲ ಜೊತೆಗಿದ್ದು
ಕಣ್ಣು ಮನದ ಕನ್ನಡಿ
ನೋವಿಗೂ ನಲಿವಿಗದುವೆ ಮನ್ನುಡಿ
ಕಂಬನಿಯ ವೇದನೆಯು
ಜಾರಲಿ ಆ ನೋವ ಮರೆಸಲು
0205ಪಿಎಂ30082018
*ಅಮು ಭಾವಜೀವಿ*
[9/3, 7:40 AM] ಅಮು ಭಾವಜೀವಿ: *ಕಾಲ*
ಕಾಲ ಸರಿಯುತಿದೆ
ನಾಳೆ ಬರುವುದಿದೆ
ಈ ದಿನ ನಮ್ಮದಾಗಲು
ನಮ್ಮ ತನವು ಅರಳಬೇಕಿದೆ
ಯಾರಿಗಾಗೂ ನಿಲ್ಲದು ಕಾಲ
ಅದರ ಬೆನ್ನತ್ತಿ ಓಡುತಿದೆ ಎಲ್ಲಾ
ಬಳಸಿಕೊಂಡರೆ ಒಳ್ಳೆಯದು
ಕಳೆದುಕೊಂಡರು ಮತ್ತೆ ಸಿಗದು
ಸೋಲು ಗೆಲುವುಗಳ
ನಿರ್ಧರಿಸುವುದು ಕಾಲ
ಸೋಮಾರಿಯನು ಅಲ್ಲೇ ಬಿಟ್ಟು
ಸಾಧಕರನಷ್ಟೇ ಕರೆದೊಯ್ಯುವುದು
ಇಂದು ನೆನ್ನೆಯಾಗುವುದು
ನಾಳೆ ಇಂದು ಆಗುವುದು
ಕಾಲದ ಈ ಓಟದಲ್ಲಿ
ನಿಲ್ಲದ ಪಯಣ ನಮ್ಮದಾಗಲಿ
ವರ್ತಮಾನವು ಭೂತದೊಳು
ಅವಿತು ಹೋಗುವುದು
ಭವಿಷ್ಯ ವರ್ತಮಾನವಾಗಿ
ಅವಕಾಶದ ಕದ ತೆರೆವುದು
ಬಂದದ್ದು ಬಳಸಿಕೊಂಡು
ನಾವಳಿಯದೆ ಉಳಿಯಬೇಕು
ಕಾಲದ ಈ ಯಾನದಲ್ಲಿ
ಸಾಧನೆಯೊಂದು ಧ್ಯಾನವಾಗಬೇಕು
1108ಎಎಂ02092018
*ಅಮು ಭಾವಜೀವಿ*
ಚಿತ್ರದುರ್ಗ
*ಶುಭೋದಯ ಶುಭ ದಿನ*
[9/3, 10:06 PM] ಅಮು ಭಾವಜೀವಿ: *ನಾ ಸುಂದರನಲ್ಲ*
ನಾ ಸುಂದರನಲ್ಲ
ನಾ ಚಂದಿರನಲ್ಲ
ಇದ್ದಿಲಾ ಕುಲದವನು
ನನಗಿಲ್ಲ ಯಾರ ಬೆಂಬಲ
ನನ್ನದೊಂದೇ ಹಂಬಲ
ನಾನಾಗಬೇಕೆಲ್ಲರಿಗೂ ಬೇಕಾದವನು
ನನ್ನ ಹೊರಗಿಡಿ ಬೇಜಾರಿಲ್ಲ
ನಾನ್ಯಾವ ಗಡಿ ದಾಟುವುದಿಲ್ಲ
ಎಲ್ಲರೊಳಗೊಂದಾಗಿರುವೆನು
ನಿಮ್ಮ ಸ್ನೇಹಕ್ಕೆ ಹಿತವಾಗಿ
ಪ್ರೀತಿಗೆ ಪ್ರತಿಯಾಗಿ
ನನ್ನೆದೆಯಲಿ ಗುಡಿ ಕಟ್ಟಿ ಪೂಜಿಪೆನು
ಹಣವು ನನ್ನೊಳಿಲ್ಲ
ಗುಣಕೆ ನನ್ನೊಳು ಕೊರತೆಯಿಲ್ಲ
ಬೇಡಿ ಪಡೆವ ಬಡವ ನಾನು
ಹಂಗಿಸಿ ಆದರೆ ಕುಗ್ಗಿಸಬೇಡಿ
ಪ್ರೀತಿಸಿ ಆದರೆ ದ್ವೇಶಿಸಬೇಡಿ
ಸದಾ ನಿಮ್ಮ ಋಣಿ ನಾನು
ಆಸರೆಗೆ ಕೈ ನೀಡಿ
ನಡೆವ ಕಾಲೆಳೆಯಬೇಡಿ
ಏನಿಲ್ಲದಿದ್ದರೂ ನನ್ನಂತೆ ನಾನಿರುವೆ
ಹರಸಿ ಸಾಕು ನನ್ನೇಳ್ಗೆಗೆ
ಬುತ್ತಿ ಕಟ್ಟಿಕೊಳ್ವೆ ಬಾಳಿಗೆ.
0532ಎಎಂ030915
*ಅಮುಭಾವಜೀವಿ*
*ಹಳೆಯದು*
*ಶುಭ ರಾತ್ರಿ*
[9/5, 9:07 AM] ಅಮು ಭಾವಜೀವಿ: *ಗುರುವಿಗೆ ವಂದನೆ*
ಬದುಕಿನ ಪುಟದೊಳಗೆ
ದಿಟದಿ ಜಾಗ ಪಡೆದ
ಶಿಷ್ಯನಿಗೆ ಮಾರ್ಗದರ್ಶನ
ನೀಡಿದ ಗುರುವೆ ನಿಮಗೆ ವಂದನೆ
ಮಾಂಸದ ಮುದ್ದೆಯಂತಹ
ಜೀವಕೆ ಮಾನವೀಯ ಮೌಲ್ಯಗಳ
ಬಿತ್ತಿ ಬೆಳೆದ ಮಹಾ ಪೋಷಕ
ಗುರುವೆ ನಿಮಗೆ ವಂದನೆ
ಅಜ್ಜಾನದ ತಿಮಿರ ಕಳೆದು
ಸುಜ್ಞಾನದ ಬೆಳಕನಿತ್ತು
ಪ್ರಜ್ಞಾವಂತ ಪ್ರಜೆಯನ್ನಾಗಿಸಿದ
ಮಹಾ ಗುರುವೆ ನಿಮಗೆ ವಂದನೆ
ತನ್ನ ಶಿಷ್ಯರ ಶಿಖರದ ಕಳಸವಾಗಿಸಿ
ತಾನು ಮಾತ್ರ ಬುಡದಲುಳಿದು
ಹೆಮ್ಮೆ ಪಡುವ ನಿಸ್ವಾರ್ಥ
ಗುರುವೆ ನಿಮಗೆ ವಂದನೆ
ಮೇಲುಕೀಳುಗಳ ಅಂತರ ತೋರದೆ
ಜಾತಿ ಧರ್ಮಗಳ ಭೇದ ಮಾಡದೆ
ಸಮಸಮಾಜದ ನಿರ್ಮಾತೃ
ಶ್ರೀಗುರುವೆ ನಿಮಗೆ ವಂದನೆ
ಹಣತೆಯಂತೆ ತಾ ಉರಿದು
ಪ್ರಣತಿಯನ್ನು ಜಗಕೆರೆದು
ತಾನಿರುವಲ್ಲೇ ಕಳೆದು ಹೋದ
ಗುರುವೆ ನಿಮಗೆ ವಂದನೆ
0904ಎಎಂ05092018
*ಅಮು ಭಾವಜೀವಿ*
ಚಿತ್ರದುರ್ಗ
*ಸರ್ವರಿಗೂ ಶಿಕ್ಷಕರ ದಿನದ ಶುಭಾಶಯಗಳು*
[9/6, 4:08 PM] ಅಮು ಭಾವಜೀವಿ: *ನನ್ನ ತಪ್ಪೇನಿದೆ*
ಬಾಲ್ಯದಲ್ಲಿ ನಾನು ಕೂಡ
ಬಾಲಕನಾಗಿಯೇ ಇದ್ದೆ
ಬೆಳೆಯುತ ಬೆಳೆಯುತ
ನಾನೆಕೋ ಬಾಲೆಯಾಗಿ ಬದಲಾದೆ
ಗಂಡು ದನಿಯು
ಹೆಣ್ಣಿನ ವೈಯಾರವು
ನನ್ನಲೇನೋ ಬದಲಾವಣೆ ತಂದಿತು
ನನ್ನೊಳಗೆ ನನಗೇ ಖುಷಿಯ ನೀಡಿತು
ಹೆತ್ತ ಅಪ್ಪ ಅಮ್ಮ ನನ್ನ
ಮನೆಯಾಚೆ ಹಾಕಿದರು
ನನ್ನ ನೋಡಿ ನೋಡಿ
ಊರ ಜನರು ನಗುತಲಿದ್ದರು
ನಾನೂ ಕೂಡ ಮನುಜನೆಂಬುದ
ಈ ಲೋಕ ಮರೆಯಿತು
ಪ್ರಾಣಿಗಿಂತಲೂ ಕೀಳಾಗಿ
ನಿತ್ಯ ನನ್ನ ಕಂಡಿತು
ಪ್ರಕೃತಿ ಕೊಟ್ಟ ರೂಪದಲ್ಲಿ
ನನ್ನ ತಪ್ಪದೇನು ಇದೆ
ನೊಂದ ಮನವು ನಿದ್ದೆಗೆಟ್ಟು
ಬರೀ ನೋವನುಂಡಿದೆ
ಬದುಕುವೆನು ನಾನೂ ಕೂಡ
ಎಲ್ಲರಂತೆ ಜಗದಲಿ
ನನಗೂ ಒಂದು ಅಸ್ತಿತ್ವವಿದೆ
ಎಂದು ತಿಳಿದಾಗ ನೀವೆಲ್ಲ
ಮಂಗಳದ ಮುಖ ನನ್ನದು
ತಿಂಗಳನೂ ನಾಚುವಂತದು
ನನಗೆ ನೀವು ನೆರಳಾಗಿ
ಬಾಳಲು ನಾ ಮನುಜನಾಗಿ
0300ಪಿಎಂ04092018
*ಅಮು ಭಾವಜೀವಿ*
[9/8, 6:43 PM] ಅಮು ಭಾವಜೀವಿ: *ನಿನ್ನಂತೆಯೇ ನಾನು*
ಓ ಇಬ್ಬನಿಯೇ ನೀನು
ಸೂರ್ಯಕಾಂತಿಗೆ ಕರಗುವೆ
ಹೆಣ್ಣಾಗಿ ಹುಟ್ಟಿ ನಾನು
ಕಿರುಕುಳಕ್ಕೆ ಕಮರಿರುವೆ
ಓ ಸುಮಗಳೇ ನೀವು
ಅಂದವಾಗಿ ಅರಳಿ ಬೀಗುವಿರಿ
ಸ್ತ್ರೀ ಕುಲದಿ ಬೆಳೆದ ನಾನು
ಅಸ್ಥಿರ ಬಾಳಲ್ಲಿ ಬಾಗಿರುವೆನು
ಹರಿಯುವ ಓ ನೀರೆ
ನೀ ಎಲ್ಲರ ಕೊಳೆಯ ತೊಳೆಯುವೆ.
ನಿನ್ನಂತೆಯೇ ನಾನು ನೀರೆ
ಆದರೆ ಎಲ್ಲರ ಕಾಮ ದೃಷ್ಟಿಗೆ ಬಳಲಿರುವೆ
ಓಡುವ ಮೋಡವೆ ನಿನಗಿಲ್ಲ ಗೊಡವೆ
ನೀ ಮಳೆಯಾಗಿ ಸುರಿದುಎಲ್ಲ ಮರೆವೆ
ನಿತ್ಯ ನನ್ನ ದುಗುಡ ಕಳೆಯದೆ
ಮಹಿಳೆಯಾಗಿ ಎಲ್ಲ ಸಹಿಸಿ ಮೆರೆವೆ
ಇಂದಿಗೆ ಕೊನೆ ನನ್ನ ಈ ವೇದನೆ
ಯಾರಿಂದ ಪಡೆಯಲಿ ನಾ ರಕ್ಷಣೆ
ಸಾಕಾಗಿದೆ ಹೆಣ್ಣೆಂಬ ಈ ಬಾಳು
ದಿನದಿನಕೂ ಹೆಚ್ಚಾಗಿದೆ ದೌರ್ಜನ್ಯದ ಗೋಳು
*ಅಮು ಭಾವಜೀವಿ*
[9/10, 6:11 AM] ಅಮು ಭಾವಜೀವಿ: *ಇರುವ ಮೂರು ದಿನದೊಳಗೆ*
ಏಕೆ ಬೇಕು ಪಂಥಗಳು
ಏಕೆ ಬೇಕು ಮತಧರ್ಮಗಳು
ಪ್ರಾಣಿಗಳಿಗಿಂತಲೂ ಕೀಳಾಗಿ
ನಡೆಸಿಕೊಳ್ಳುವ ನರಜನ್ಮದ
ನಮ್ಮವರೇ ಮಾಡಿದ ಕಟ್ಟುಕಟ್ಟಳೆಗಳು
ಎಂದಿಗೂ ನಮ್ಮ ಬದುಕ ಬದಲಿಸಲಿಲ್ಲ
ಹಸಿವು ನಮ್ಮನು ಕಿತ್ತು ತಿನ್ನುವಾಗ
ಯಾವ ಪಂಥವೂ ಪಂಕ್ತಿಭೋಜನ
ಮಾಡಿಸಿ ಹಸಿವ ನೀಗಿಸಲಿಲ್ಲ
ಚಿಂದಿ ಬಟ್ಟೆಯ ತೊಟ್ಟು
ಬೀದಿಯಲ್ಲಿ ಬಿದ್ದಿರಲು ಯಾವ ಧರ್ಮವೂ
ಬಂದು ಪೀತಾಂಬರ ಉಡಿಸಿ
ಪಟ್ಟಕ್ಕೇರಿಸಿ ಕೂಡಿಸಲಿಲ್ಲ
ಜಾತಿ ಧರ್ಮ ಮತ ಪಂಥಗಳು
ಸಮಾಜವನು ವಿಭಾಗ ಮಾಡಿ
ಬದುಕನ್ನು ತಿಂದು ತೇಗುವ
ಬಡತನಕೆ ಬಂದ ಶಾಪವದು
ಹೋರಾಟ ಪ್ರತಿಭಟನೆಗಷ್ಟೇ
ಸೀಮಿತವಾದ ಪಾಪಕೂಪಗಳು
ಮನುಷ್ಯ ಮನುಷ್ಯರರಂತೆ
ಬದುಕಲು ಬಿಡದೆ ಪಶುವಾಗಿಸಿ
ಶೋಷಿಸಿ ಹಿಂಸಿಸಿ ಸಾಯಿಸುವ
ಇವೆಲ್ಲ ಬೇಕಿಲ್ಲ ನಮಗೆ
ಬದುಕಬೇಕಿದೆ ನಾವೆಲ್ಲಾ
ಇದ್ದು ಹೋಗುವ ಮೂರು ದಿನದೊಳಗೆ
1130ಪಿಎಂ09092018
*ಅಮು ಭಾವಜೀವಿ*
ಚಿತ್ರದುರ್ಗ
[9/11, 7:08 AM] ಅಮು ಭಾವಜೀವಿ: *ಹೋರಾಟದ ಬದುಕು*
ಕಟ್ಟು ಕಟ್ಟಳೆಗಳ ಕಿತ್ತೆಸೆದು
ಕಟ್ಟುಪಾಡುಗಳ ಕುಟ್ಟಿ ಕೆಡವಿ
ದಿಟ್ಟ ಹೆಜ್ಜೆ ಇಟ್ಟು ನಡೆಯೋಣ
ನಮ್ಮದೇ ಬದುಕ ಕಟ್ಟಿ ಕೊಳ್ಳೋಣ
ರಾಜಕೀಯಯದ ದೊಂಬರಾಟ
ನಮ್ಮ ಹೊಟ್ಟೆಯ ತುಂಬಿಸುವುದಿಲ್ಲ
ಕೋಟಿಗಳ ಲೂಟಿ ಹೊಡೆದು ಅವರು
ಮೆರೆಯುವರು ಮತ ಕೊಟ್ಟವರ ಹಿತ ಮರೆತು
ಸಮಸ್ಯೆಯ ಆಳಕೆ ಇಳಿಯುವುದಿಲ್ಲ
ಅದಕೆ ಪರಿಹಾರವನೂ ನೀಡುವುದಿಲ್ಲ
ಒಬ್ಬರಿಗೊಬ್ಬರ ಮುಖಸ್ತುತಿಯಲ್ಲಿ
ಬೆಪ್ಪಾಗಿ ಸುಸ್ತಾಗಿ ಬಿದ್ದ ನಾವು ಕಾಣಲೇ ಇಲ್ಲ
ಶ್ರಮ ನಮಗೆಂದೂ ತಪ್ಪದು
ನಮ್ಮ ಅನ್ನದ ಹೊಣೆ ನಮ್ಮದು
ನಾವು ನಾವೇ ಕೈಜೋಡಿಸಿ
ಬಲಗೊಳ್ಳದೇ ಇಲ್ಲಿ ನಮಗೆ ಬದುಕಿಲ್ಲ
ಧರ್ಮ ಜಾತಿ ಮತಗಳಾವುವೂ
ನಮ್ಮ ಬಡತನ ನೀಗಿ ಕಾಪಾಡುವುದಿಲ್ಲ
ಎಲ್ಲಾ ಅಧಿಕಾರ ಲಾಲಸೆಯವರ
ಬೀದಿ ಬಯಲಾಟಗಳು ನಮಗದರಿಂದ ಸುಖವಿಲ್ಲ
ನಮಗೆ ನಾವೇ ಇಲ್ಲಿ ರಾಜರಾಗೋಣ
ನಮ್ಮ ಬವಣೆಗಳ ಸಂಕೋಲೆ ಕಳಚೋಣ
ಹೋರಾಟದ ಬದುಕು ನಮ್ಮದು
ದುಡಿಮೆಯೊಂದೆ ನಮ್ಮ ಕೈ ಹಿಡಿವುದು
0552ಎಎಂ11092018
*ಅಮು ಭಾವಜೀವಿ*
ಚಿತ್ರದುರ್ಗ
[9/11, 4:53 PM] ಅಮು ಭಾವಜೀವಿ: *ರೈತ ಸಾಯಬಾರದು*
ಮತ್ತೆ ರೈತರ ಕತ್ತು
ಹಿಡಿದು ದಾಹ ತಂದೆ
ಓ ಮಳೆರಾಯ
ರೈತರ ಮೇಲೆ ನಿನಗೆ
ಏಕಿಷ್ಟು ತಾತ್ಸಾರವೋ
ನಿನ್ನ ಮನೆಕಾಯ
ಸಾಲ ಮಾಡಿ ಬಿತ್ತಿದ
ಬೆಳೆ ಕೈಗೆ ಬರದೆ
ಕಂಗಾಲಾಗಿಹನವನು
ನಿನ್ನತ್ತ ದೈನ್ಯತೆಯಲಿ
ದೃಷ್ಟಿ ನೆಟ್ಟು ಕಾಯುವ
ಅವನಿಗೆ ತಂದೆ ನಿರಾಸೆಯನು
ಹೊಲದಲ್ಲಿ ಬೆಳೆ ಮೆಲ್ಲ
ಒಣಗಿದಂತೆ ತಾನೂ
ಒಳಗೊಳಗೇ ಕರುಬಿದನು
ಎಲ್ಲೋ ಕೊಚ್ಚಿ ಹೊತ್ತೊಯ್ಯೋ
ಬದಲು ಇಲ್ಲೊಂದಿಷ್ಟು
ಚೆಲ್ಲಬಾರದೇ ಮಳೆಯನು
ನೀ ಕೈಬಿಟ್ಟರೆ ಅವನಿಗೆ
ಸಾವು ಒಂದೇ ಗತಿ
ರೈತ ಸಾಯಬಾರದು
ಎಲ್ಲಾ ಕೋಪವನು ಮರೆತು
ಬದುಕಿಸು ಈ ಬಡವನನು
ನಾಲ್ಕು ಹನಿಯನಿಲ್ಲಿ ಸುರಿದು
0450ಪಿಎಂ11092018
*ಅಮು ಭಾವಜೀವಿ*
ಜಗಳೂರು
[9/12, 6:26 AM] ಅಮು ಭಾವಜೀವಿ: *ಹೊಸ ಮೆರುಗು*
ಮೂಡಣದ ಬಾಗಿಲಿಂದ
ಉಷೆಯ ಕಿರಣ ಸೂಸಲು
ಬೆಳಕಿನ ಆಗವನೇ ಹೊತ್ತು
ಬಂದ ನೇಸರ ಕಳೆದು ಕತ್ತಲು
ತಾರೆಗಳು ಮೆಲ್ಲ ಮರೆಯಾಗಿ
ಹಕ್ಕಿಗಳಿನಿದನಿಯಲಿ ಕೂಗಿ
ಮೊಗ್ಗುಗಳು ಬಿರಿದರಳಿ
ಸ್ವಾಗತಿಸಿದವು ಇನನ
ಬಾನಬೀದಿಯ ತುಂಬ
ಬೆಳಕು ತಂತು ಆನಂದ
ಜಗವೆಲ್ಲ ಎಚ್ಚರಗೊಂಡು
ಜೀವ ಚೈತನ್ಯ ಪಡೆಯಿತು
ಇಬ್ಬನಿಯು ಸಿಂಗರಿಸಿಕೊಂಡು
ಎಲೆಗಳ ಮೇಲೆ ವೈಯಾರ ತೋರಿ
ಭಾಸ್ಕರನಿಗಾರತಿಯಾಯ್ತು
ಭಾವ ಬಿಂದುವಾಗಿ ದಾರಿತು
ಅಲೆಗಳ ಶೃಂಗಾರದ ಚೆಲ್ಲಾಟ
ತೀರದ ಮೌನ ಸಂಪುಟ
ಎಲ್ಲಾ ಸಂಭ್ರಮಿಸಿದವು
ಮುಂಜಾನೆಗಾಗಿ ಮೈತೆರೆದವು
ಪ್ರಕೃತಿಯ ಮಡಿಲಲ್ಲಿ ನಿತ್ಯ
ಪ್ರತಿ ಬೆಳಗು ಹೊಸ ಸೊಬಗು
ಸವಿಯಬೇಕು ಸವೆಸಬೇಕು
ತರಲು ಜೀವನಕೆ ಹೊಸ ಮೆರುಗು
0624ಎಎಂ12092018
*ಅಮು ಭಾವಜೀವಿ*
ಚಿತ್ರದುರ್ಗ
*ಶುಭೋದಯ ಶುಭದಿನ*🌻🌞💐
[9/14, 7:13 AM] ಅಮು ಭಾವಜೀವಿ: *ನೀನೇ ಮಾರ್ಗದರ್ಶಕ*
ಬಂದದ್ದು ಬರಲೆಂದು
ಎದ್ದು ಹೊರಡು ಬುದ್ಧನಂತೆ
ಗುರಿ ಮುಟ್ಟುವ ತನಕ ನಡೆ
ಮರೆತು ನಿನ್ನ ನೂರು ಚಿಂತೆ
ನಿನ್ನ ಈ ಹಾದಿಗೆ ನೀನೇ
ನಿಜವಾದ ಮಾರ್ಗದರ್ಶಕ
ನಡೆವ ಹಾದಿ ಗುರಿ ಮುಟ್ಟಿದರೆ
ನೀನೇ ಆಗ ನಿಜದ ಸಾಧಕ
ಯಾರ ಅಂಜಿಕೆಗೂ ನಿಲ್ಲದಿರು
ಹರಿವ ನೀರು ದಾರಿ ಹುಡುಕಿಕೊಂಡಂತೆ
ಎಲ್ಲ ಸೋಲುಗಳ ಮೆಟ್ಟಿಲಾಗಿಸಿಕೋ
ಆಗ ನೀ ಹೊಳೆವ ಕಳಶದಂತೆ
ಜಗದ ಎಲ್ಲಕೂ ಅದರದೇ
ಗುರಿಯ ಗಮ್ಯತೆಯಿದೆ
ಮನುಜ ನೀನು ಮೆರೆಯದೇ
ಬಾಳು ಇಲ್ಲಿ ಬರೀ ರಮ್ಯತೆಯಿದೆ
ಒಂದಷ್ಟು ಪ್ರೀತಿ ಹಂಚು
ಬಹಳಷ್ಟು ಪ್ರೀತಿ ಪಡೆವೆ
ಎಲ್ಲದರಲ್ಲೂ ಸ್ನೇಹ ಗಳಿಸು
ಆಗ ನಿನ್ನೊಂಟಿತನವ ಕಳೆವೆ
0711ಎಎಂ14092018
*ಅಮು ಭಾವಜೀವಿ*
ಚಿತ್ರದುರ್ಗ
*ಶುಭದ ಮುಂಬೆಳಗು*
[9/15, 7:00 AM] ಅಮು ಭಾವಜೀವಿ: *ಸಾಧನೆಯ ಹಾಡು*
ಬೀಸುತಿದೆ ತಂಗಾಳಿ
ಇಬ್ಬನಿ ಮೆದ್ದ ಎಲೆಗಳ ಸವರಿ
ಬಿರಿದ ಮೊಗ್ಗುಗಳಿಂದ
ಕಂಪದು ತೇಲಿ ಬಂತು ಜೊತೆ ಸೇರಿ
ಉಷೆ ಮೂಡಿ ಬರುವಾಗ
ಮೆಲ್ಲನೆ ಎದ್ದಿತು ಜಗ
ಅಲ್ಲಲ್ಲಿ ಪಂಚಮ ನಾದ
ಸ್ವಾಗತಿಸಿತು ನೀರ ನಿನಾದ
ಮೂಡಣದ ರಂಗಸ್ಥಳದಿ
ಮೆಲ್ಲನೆ ಅರಳಿದ ಸೂರ್ಯ
ಹೊನ್ನ ಕಿರಣಗಳ ಬೀರಿ
ತೆರೆದಿಟ್ಟ ಜಗದ ಆಂತರ್ಯ
ಬದುಕು ಗರಿ ಬಿಚ್ಚಿ ಹಾರಿ
ಕ್ರಮಿಸುತಿದೆ ಹಗಲ ದಾರಿ
ಕಾಯಕದ ಯಾತ್ರೆಯಲಿ
ಜಾತ್ರೆಯಾಗಿದೆ ಬದುಕು
ಬೆಳಗಿದು ಸ್ಪೂರ್ತಿಯ ಚಿಲುಮೆ
ಬದುಕಿದು ಕಾದ ಕುಲುಮೆ
ಬೇಕಾದ ಆಕಾರಕೆ ಹೊಂದಿಸಿ
ಕಟ್ಟಿಕೊಳ್ಳಬೇಕಿದೆ ಬದುಕು
ಮುಂಜಾನೆಯಿದು ಶುಭಾರಂಭ
ಮೈಮರೆಯದಿರು ಬಿಡು ಜಂಭ
ಬಂದಂತೆ ನಡೆದು ದಿನ ದೂಡು
ಸದಾ ಗುನುಗಲಿ ಸಾಧನೆಯ ಹಾಡು
0658ಎಎಂ15092018
*ಅಮು ಭಾವಜೀವಿ*
ಚಿತ್ರದುರ್ಗ
*ಶುಭೋದಯ ಶುಭದಿನ*🌞🌻
[9/17, 5:56 AM] ಅಮು ಭಾವಜೀವಿ: *ನಿಲುವಿಗಿಲ್ಲ ಗೆಲುವು*
ದಿಟ್ಟ ತನವು ಕೆಟ್ಟುಕೂತಿದೆ
ಕಟ್ಟ ಕಡೆಗೆ ಕೈ ಕಟ್ಟಿ ನಿಂತಿದೆ
ಮೂಗಿನ ನೇರದ ನಿರ್ಧಾರ
ಅಸಹಾಯಕನನ್ನಾಗಿಸಿದೆ
ಹಾದಿ ತಪ್ಪುವ ಭೀತಿಯಲ್ಲಿ
ಹೌಹಾರಿ ಚೀರುತ ನಿಂತಿದೆ
ಪ್ರೀತಿಯ ಬಳಿಗೆ ಹೋಗಿ
ಜಾತಿಯ ಸುಳಿಗೆ ಸಿಕ್ಕು
ಬದಲಾವಣೆಯ ಹೆಜ್ಜೆ
ಬಲಹೀನವಾಗಿ ಸತ್ತು ಬಿದ್ದಿದೆ
ಲಜ್ಜೆಗೇಡಿ ಲಂಚಾವತಾರ
ಪ್ರತಿಭೆಯನು ತುಳಿದಿದೆ
ಅಪ್ಪ ಹಾಕಿದ ಆಲದ ಮರ
ನೇಣು ಬಿಗಿಯಲು ಗೋಣಿಗೆ ಹಗ್ಗ ಹಾಕಿದೆ
ಅಸತ್ಯದ ಅಲಂಕಾರದ ಮುಂದೆ
ಸತ್ಯವೆಂಬುದು ಕುರೂಪಿ
ಸಮತೆಯ ಸೋಗಿನಲ್ಲಿ ಸದ್ದು ಮಾಡಿದೆ
ಅಸಮಾನತೆಯ ಬಹುರೂಪಿ
ಗಾಂಧಿ ಎದೆಗೆ ಗುಂಡಿಟ್ಟು
ನಾಂದಿ ಹಾಡಿತು ಅಸಹನೆ
ಚಿಂತನೆಯನೇ ಅಂತ್ಯವಾಗಿಸಿತು
ಛದ್ಮವೇಷದವರ ವರ್ತನೆ
ಈ ನೆಲದಿ ಇನ್ನೆಲ್ಲಿ ಹೋರಾಟ
ಎಲ್ಲ ಬರೀ ಕೆಸರೆರಚಾಟ
ನಿಲುವಿಗಿಲ್ಲಿ ಗೆಲುವು ಕಷ್ಟ
ನಿಜವೆಲ್ಲ ಏರಿ ಕೂತಿದೆ ಚಟ್ಟ
0552ಎಎಂ17092018
*ಅಮು ಭಾವಜೀವಿ*
ಚಿತ್ರದುರ್ಗ
[9/18, 9:01 AM] ಅಮು ಭಾವಜೀವಿ: *ಮಗುವಾಗಿ ನಗುವ ಸಮಯ*
ಸಾಗರದ ಸಮತಲದ ಮೇಲೆ
ಮೂಡಿದೆ ವರ್ಣ ಚಿತ್ತಾರ
ಬಾನ ಬೀದಿಯ ತುಂಬಾ
ಹೊಂಬಣ್ಣದಿ ನಗುವ ನೇಸರ
ಹಕ್ಕಿಗಳ ಕಲರವ ಸದ್ದು
ಕೇಳಲು ಆಹಾ ಎಷ್ಟೊಂದು ಮುದ್ದು
ತೆರೆಗಳ ಏರಿಳಿತದ ವೈಯಾರ
ನಿಸರ್ಗದ ಮಡಿಲ ಶೃಂಗಾರ
ಮೂಡಣದ ಕಡಲಿದು
ಪ್ರಕೃತಿಯ ಸೊಬಗು
ಕಣ್ಣು ಹಾಯಿಸಿದಷ್ಟು
ವಿಶಾಲ ಭಾವದ ಮೆರುಗು
ಹಸಿರಿಲ್ಲ ಸುಮವಿಲ್ಲ
ದುಂಬಿ ಝೇಂಕಾರ ಮೊದಲಿಲ್ಲ
ಬರೀ ಕಡಲ ಭೋರ್ಗರೆತ
ದಡ ಸೇರುವ ಧಾವಂತ
ಮುಂಜಾನೆಯಿದು ನಿತ್ಯ
ಮೈ ನವಿರೇಳಿಸುವ ಸತ್ಯವು
ಮನದ ಭಾವಕೆ ರೆಕ್ಕೆ ಹಚ್ಚಿ
ನಭಕೆ ಚಿಮ್ಮಿಸುವ ವಿಶ್ವಾಸವು
ಸವಿಯಬೇಕು ಈ ನಿಸರ್ಗ ವೈಭವ
ಕಾಣಬೇಕು ಸಮಚಿತ್ತ ಭಾವ
ಮಗುವಾಗಿ ನಗುವ ಸಮಯ
ಪ್ರಕೃತಿಯಿದು ಒಂದು ವಿಸ್ಮಯ
0854ಎಎಂ180918
*ಅಮು ಭಾವಜೀವಿ*
ಚಿತ್ರದುರ್ಗ
*ಶುಭೋದಯ ಶುಭದಿನ*
[9/18, 6:14 PM] ಅಮು ಭಾವಜೀವಿ: *ನಿನ್ನ ಬೆರಳ ತುದಿಯಲ್ಲಿ*
ಓ ಹೆಣ್ಣೇ
ನೀ ಸೌಂದರ್ಯ ಲಹರಿ
ನಿಸರ್ಗ ಕೆತ್ತಿದ ಕುಸುರಿ
ನೀ ನಕ್ಕರೆ ಜಗ ನಗುವುದು
ನೀ ಅತ್ತರೆ ಜಗ ಮರುಗುವುದು
ನಿನ್ನ ಸೊಬಗಿಗೆ ಮರುಳಾಗಿ
ನಿತ್ಯ ನಿನ್ನನೇ ಸುತ್ತುತಲಿಹುದು
ಅಂದದಿ ನಿನಗೆ ನೀ ಸಾಟಿ
ಆ ಪ್ರಕೃತಿ ನೀಡದು ಪೈಪೋಟಿ
ನೀನೊಂದು ಚೆಲುವಿನ ಪ್ರತಿಮೆ
ನಿನ್ನ ನಿಲುಕದು ಯಾವ ಉಪಮೆ
ನಿನ್ನ ಬಳುಕನು ಕಂಡು
ನದಿ ನಡೆಯುವುದ ಕಲಿಯಿತು
ನಿನ್ನ ವೈಯಾರವ ಕಂಡು
ಲತೆಯೂ ಕೂಡ ಮರುಗಿತು
ನಿನ್ನ ಚಂಚಲತೆಯ ಚೂರು
ಕಲಿತು ಜಿಂಕೆ ಜಿಗಿದಾಡಿತು
ನಿನ್ನ ನಾಟ್ಯದ ನೂಪುರದಿ
ನವಿಲೊಂದು ಪಾಠ ಕಲಿಯಿತು
ನಿನ್ನೊಲವು ಪ್ರಕೃತಿಗೆ ಮಾದರಿ
ನಿನ್ನ ಛಲಕೊಲಿಯಿತು ಆ ಗುರಿ
ನಿನ್ನ ಬೆರಳ ತುದಿಯಲ್ಲಿ
ಜಗ ನಡೆವುದು ಖುಷಿಯಲ್ಲೀ
ಸೌಂದರ್ಯದ ಮಹಾ ಕಾವ್ಯ ನೀನು
ಆಂತರ್ಯದ ಗಾಂಭೀರ್ಯವು ನೀನು
ಜಗ ಸಂಸ್ಕರಿಸಿದ ಪುತ್ಥಳಿ ನೀನು
ನಿನ್ನಂದವ ಹೊಗಳುವ ಕವಿ ನಾನು
0429ಪಿಎಂ18092018
*ಅಮು ಭಾವಜೀವಿ*
ಜಗಳೂರು
ಶುಭ ಸಂಜೆ ಸ್ನೇಹಿತರೇ
[9/19, 9:08 AM] ಅಮು ಭಾವಜೀವಿ: *ಕನಸ ಕೊಂದರೆಲ್ಲ*
ಮೋರಿ ನೀರಿಗೂ ಮೋಹ ಬಂದಿದೆ
ತನ್ನೊಳಗೂ ತಾವರೆ ಅರಳಲಿ ಎಂದು
ಆದರೇಕೋ ಒಂದು ಜೀವವೂ
ಬಯಸದು ನನ್ನ ಸ್ನೇಹ ಬೇಕೆಂದು
ಊರಿನ ಎಲ್ಲಾ ಕೊಳೆಯ ಹೊತ್ತು
ಬಂದುದೇ ನನಗೆ ಬಾರಿ ಕುತ್ತು
ಹಿಂದೆ ನಾನು ಕೂಡ ಚಂದವಿದ್ದೆ
ಬಳಸಿ ಬಳಸಿ ನಾನು ಕೊಚ್ಚೆಯಾದೆ
ನನ್ನ ಬದುಕನೇ ನಾಶ ಮಾಡಿ
ಮೂಗು ಮುಚ್ಚಿಕೊಂಡು ನಡೆವರು
ಹಂದಿಗೊಂದೇ ನಾನು ಇಷ್ಟ
ಇನ್ಯಾರೂ ಕೇಳರು ನನ್ನ ಕಷ್ಟ
ಕಪ್ಪು ಬಣ್ಣವ ಮೈಗೆ ಮೆತ್ತಿಕೊಂಡು
ಎಲ್ಲೋ ಹರಿದು ಹೋಗಿ ನಿಂತು
ಸುತ್ತಲೆಲ್ಲ ಗಬ್ಬು ನಾತ ಬೀರುವೆನೆಂಬ
ಅಪಕೀರ್ತಿ ಮಾತ್ರ ನನಗಂಟಿದೆ
ನನ್ನ ಕನಸ ಕೊಂದರೆಲ್ಲ
ನಾಗರೀಕರೆನಿಸಿಕೊಂಡವರು
ನನ್ನ ಗುಣವ ಅವಗುಣವಾಗಿಸಿ
ಆ ಸೇವೆಯನ್ನು ಗೌಣವಾಗಿಸಿದರು
ನನಗೂ ಕೂಡ ನ್ಯಾಯ ಕೊಡಿಸಿ
ಎಲ್ಲರೊಂದಿಗೂ ನಾನಿರಬೇಕು
ನನಗೆ ಈ ನರಕ ಬೇಡ
ನನ್ನ ದೂರುವವರ ನಾ ಸೇರಬೇಕು
0858ಎಎಂ19092018
*ಅಮು ಭಾವಜೀವಿ*
ಚಿತ್ರದುರ್ಗ
ಶುಭೋದಯ ಸ್ನೇಹಿತರೇ
[9/19, 4:43 PM] ಅಮು ಭಾವಜೀವಿ: *ಕಂಗೆಟ್ಟ ಬದುಕು*
ಏಕೆ ಮುನಿದೆ ಮೇಘವೇ
ಮಳೆ ಸುರಿವ ಮನಸಿಲ್ಲವೇ
ಬಿತ್ತಿದ ಪೈರು ಒಣಗುತಿದೆ
ಕುಡಿವ ನೀರಿಗೆ ಆಹಾಕಾರವಿದೆ
ಕೆರೆ ತೊರೆಗಳೆಲ್ಲ ಬತ್ತಿ
ಬದುಕು ಭೀಕರವಾಗಿದೆ
ಬೆಂದ ಒಡಲಿಗೆ ಇಲ್ಲಿ
ತಂಪನೆರೆಯುವವರಿಲ್ಲ
ಕಾದ ಹೆಂಚಿನಂತೆ ಭೂಮಿ
ಹನಿ ನೀರಿಗೆ ಹಾತೊರೆದಿದೆಯಲ್ಲ
ಗೀರಿದ ಬೆಂಕಿಗೆಲ್ಲವೂ
ಆಹಾರವಾಗಿ ಸುಟ್ಟು ಹಾಕಿ
ಹಸಿವಿಗೆ ಜನಜಾನುವಾರು
ತತ್ತರಿಸಿ ಗುಳೆ ಹೊರಟಿದೆ
ಅಷ್ಟು ಇಷ್ಟು ಇದ್ದ ಭರವಸೆ
ಬರಿದಾಗಿದೆ ಬೊಗಸೆಯಿಂದ ಜಾರಿ
ಉಳಿವಿಗಾಗಿ ಹೋರಾಟ
ಶುರುವಾಗಿದೆ ಕಾಪಾಡು ನೀ ಬಂದು
ಅಲ್ಲೆಲ್ಲೋ ಕೊಚ್ಚಿ ಹೋಗುವ
ಬದಲು ಇಲ್ಲಿ ಬಾಯಿಗೆ ಹನಿಯಾಗು
ಬಯಲುಸೀಮೆಯ ಬದುಕು
ಬರದಿಂದ ಕಂಗೆಟ್ಟಿದೆ ನೀ ಆಸರೆಯಾಗು
0441ಪಿಎಂ19092018
*ಅಮು ಭಾವಜೀವಿ*
ಜಗಳೂರು
[9/21, 7:59 PM] ಅಮು ಭಾವಜೀವಿ: *ಬವಣೆಯ ಕೂಪ*
ಓಡೋ ಮೋಡಗಳೇ
ಬನ್ನಿ ಧರೆಗಿಳಿದು
ಬಿರಿದ ಧರೆಯೊಡಲ
ತಂಪಾಗಿಸು ಮಳೆ ಸುರಿದು
ಬರದ ಉರಿಬಿಸಿಲು
ಬದುಕನ್ನೇ ಸುಡುತಿದೆ
ಗುಟುಕು ನೀರು ಸಿಗದೆ
ಹೋರಾಟವಾಗಿದೆ ಬದುಕೆಲ್ಲವು
ತುತ್ತು ಕೂಳಿಗೂ ಕೊರತೆ ಬಂದು
ಬಾಳು ಬರಡಾಯಿತು
ಇಳೆಯ ಬದುಕೆಲ್ಲವು
ಬವಣೆಗಳ ಕೂಪವಾಯ್ತು
ಜನಜಾನುವಾರುಗಳೆಲ್ಲ
ಹಸಿವು ಬಾಯಾರಿಕೆಗೆ ಸಾಯುತಿವೆ
ಹಸಿರಿಂದ ಕಂಗೊಳಿಸಬೇಕಾದ
ಗಿಡಮರ ಬತ್ತಿ ಹೋಗಿವೆ
ಪರಿಸರ ತಾ ಸಮತೋಲನ ತಪ್ಪಿ
ಬದುಕ ಬವಣೆಗಳು ಬಿಗಿದಪ್ಪಿ
ಭೂಮಿ ನರಕವಾಗುತಿದೆ
ಅದರ ರಕ್ಷಣೆಯ ಹೊಣೆ ಯಾರದೀಗ ?
ನೀ ಸುರಿಯೋ ಒಂದು ಹನಿಯೇ
ನಮಗೀಗ ಸಂಜೀವಿನಿಯು
ಮಳೆಯ ಧರೆಗಿಳಿಸಿದರೆ
ನಿಮಗೆ ನಾವು ಚಿರಋಣಿಯು
0907ಪಿಎಂ23092001
*ಅಮು ಭಾವಜೀವಿ*
[9/23, 7:05 AM] ಅಮು ಭಾವಜೀವಿ: *ಮುಂಜಾನೆಯ ಮಗು*
ಮುಂಜಾನೆಯ ಮಗುವೊಂದು
ಹಗಲಾಗುವ ಕನಸ ಕಂಡು
ಸೂರ್ಯನ ಗೆಳೆತನ ಪಡೆದು
ಕತ್ತಲನು ಆಚೆ ದೂಡಿತು
ಅವರಿಬ್ಬರ ಸ್ನೇಹವ ಕಂಡು
ಹಕ್ಕಿಗಳು ಉಲಿದವು
ಸುಮಗಳು ಅರಳಿದವು
ಸವಿಭಾವದ ಬೆಳಕನುಂಡು
ವಿಶಾಲ ಸಾಗರ ಪ್ರಶಾಂತವಾಗಿ
ಹೊಂಬಣ್ಣವ ಮೈಗೆ ಬಳಿದು
ಶುಭ ಕೋರಿತು ಈರ್ವರಿಗೆ
ಸ್ವಾಗತಿಸಿತು ದಿನ ಹಗಲಿಗೆ
ಕತ್ತಲ ಜಡದಲಿ ಬಿದ್ದ ಜಗ
ಚೈತನ್ಯದಿ ಎದ್ದು ತೊಳೆದು ಮೊಗ
ಕಾಯಕ ದೀಕ್ಷೆಯ ತೊಟ್ಟು
ಕಾಲದ ಹಿಂದೆ ಓಡುತು
ದಿನದಾರಂಭವು ಬಲು ಮೋಜು
ಬಾನಲಿ ತೇಲುವ ರವಿ ಜಹಜು
ನೋಡುವುದೊಂದೇ ನಮ್ಮ ಪುಣ್ಯ
ನೇಸರನೇ ಇಲ್ಲಿ ಅಗ್ರಮಾನ್ಯ
ಮುಂಜಾನೆಯ ಕನಸು ನನಸಾಯ್ತು
ದಿನವದು ಹಗಲಲಿ ಬೆಳೆದಾಯ್ತು
ಸಂಜೆಯ ದಡದತ್ತ ಈ ಪಯಣ
ನಿಸರ್ಗದ ಬದುಕಿಗೆ ಪ್ರೇರಣ
0658ಎಎಂ23092018
*ಅಮು ಭಾವಜೀವಿ*
ಚಿತ್ರದುರ್ಗ
ಶುಭೋದಯ ಶುಭದಿನ
[9/25, 12:55 PM] ಅಮು ಭಾವಜೀವಿ: *ಬಿಡಿಸಲಾಗದ ನಂಟು*
ನಿಸರ್ಗದ ಮಡಿಲಲ್ಲಿ
ನಿನ್ನ ಜೊತೆಯಲ್ಲಿ
ಹೊಳೆ ದಂಡೆ ಮೇಲೆ
ಖುಷಿಯಾಗಿರುವೆ ನಾ ನಲ್ಲೆ
ನಿನ್ನ ತೊಡೆಯ ಮೇಲೆ ಕೂತು
ತೋಳಬಂಧಿಯಲಿ ಅವಿತು
ಕರಗಿ ನೀರಾದೆ ನಾನು
ನನ್ನ ಹಿಡಿದ ರಮಣನಲ್ಲವೇ ನೀನು
ನಿನ್ನ ನೊಸಲ ಮೇಲೆ
ಒಲವ ಮುತ್ತನಿಕ್ಕಲು
ವಶವಾದೆ ಪ್ರೀತಿ ಪಾಶಕೆ
ಇದುವೆ ಪ್ರೇಮದ ಕಾಣಿಕೆ
ನಿನ್ನ ಬೆರಳೊಳಗೆ ನನ್ನ ಬೆರಳಿಟ್ಟು
ಮಾತು ಕೊಡು ನಲ್ಲ ಮನಕೆ
ಜಾತಿಗಿಂತಲೂ ಪ್ರೀತಿ ಮೇಲೆಂದು
ಸಾರಿ ಹೇಳೋಣು ಈ ಕೆಟ್ಟ ಜನಕೆ
ಮಾತೇನು ನಲ್ಲೆ ಬದುಕನೇ ಕೊಡುವೆ
ಏಕೆ ಭಯ ನಮಗೇಕವರ ಗೊಡವೆ
ಪ್ರಕೃತಿಯ ಮಡಿಲಲ್ಲಿ ಒಂದಾಗುವ
ಪ್ರತಿ ಕ್ಷಣವೂ ಪ್ರೀತಿಸುತ ಬಾಳುವ
ನಾವಿಬ್ಬರೂ ಕೂಡಿರಲು ಸ್ವರ್ಗ
ಅದಕೆ ಸಾಕ್ಷಿ ಈ ನಿಸರ್ಗ
ಬಿಡಿಸಲಾಗದ ನಂಟು ನಮ್ಮದು
ಬ್ರಹ್ಮನೇ ಬೆಸೆದ ಗಂಟು ಇದು
1146ಎಎಂ25092018
*ಅಮು ಭಾವಜೀವಿ*
ಚಿತ್ರದುರ್ಗ
[9/25, 3:32 PM] ಅಮು ಭಾವಜೀವಿ: *ಇದೀಗ ನಮ್ಮೂರಲ್ಲಿ ಸುರಿದ ಮಳೆಯ ಕುರಿತು ಬರೆದ ಕವಿತೆ*
'ಬರ'ದ ಮಳೆ
ದಣಿದ ನೆಲಕಿಂದು
ತಣಿದ ಸಂಭ್ರಮ
'ಬರ'ದ ಮಳೆ ಇಂದು
ಬಂದ ಆನಂದದ ಕ್ಷಣ
ಬಿತ್ತಿದೆ ಬೆಳೆ ಬಾಯಾರಿ
ಬಳಲಿರಲು ಜೀವ ಚೇತನವಾಗಿ
ಬಂತೀ ಆಶ್ವಯುಜದ ಮಳೆ
ಒಮ್ಮೆ ನೆನೆಸಿತು ಇಳೆಯ
ಬಿರಿದ ಧರೆಯೊಡಲ ಮುಚ್ಚಿ
ಮತ್ತೆ ಹಸಿರಡುವ ಕನಸ ಬಿತ್ತಿ
ರೈತನ ಮುಖದಲ್ಲಿ ನಗೆ ತಂತು
ಮಾಯದಂತ ಈ ಮಳೆ
ಭೂತಾಯಮ್ಮನ ಒಡಲೀಗ
ತಣಿದು ನೆಮ್ಮದಿ ಪಟ್ಟು
ನಳನಳಿಸುವ ಬೆಳೆಗೀಗ
ಮರುಜೀವ ನೀಡುವ ಖುಷಿಯಲಿದೆ
ಮತ್ತೆ ಮತ್ತೆ ಹೀಗೆ ಬಾ ಮಳೆ
ರೈತರ ಮೊಗದಿ ಹೊಮ್ಮಲಿ ಜೀವಕಳೆ
ಉಜ್ವಲವಾಗಲಿ ಅವನ ನಾಳೆ
ಹಸಿರುಟ್ಟು ನಲಿಯಲಿ ಅವನ ಬೆಳೆ
0339ಪಿಎಂ25092018
*ಅಮು ಭಾವಜೀವಿ*
ಮುಸ್ಟೂರು
[9/26, 9:04 AM] ಅಮು ಭಾವಜೀವಿ: *ನಗು ಮೂಡಲಿ*
ಎಷ್ಟೊಂದು ಆಹ್ಲಾದಕರ
ಮಳೆ ಬಂದ ಈ ಮುಂಜಾನೆ
ಭೂಮಿ ತಾ ತಣಿದ ಘಮಲು
ಸವಿಯುವುದೇ ಖುಷಿಯು
ಬತ್ತಿದ ಬೆಳೆಗಳಿಗೆ ಮತ್ತೆ
ಜೀವ ತುಂಬಿದೆ ಈ ಮಳೆ
ಬೀದಿಗೆ ಬಿದ್ದ ಬದುಕಿನಲೂ
ಮತ್ತೆ ಮೂಡಿದೆ ಜೀವಕಳೆ
ಖಾಲಿಯಾದ ಒಡಲು ತುಂಬಿ
ಹಸಿರಾಗಿಸಿ ಸಂಭ್ರಮಿಸಿದೆ
ಬದುಕುವ ಆ ಕನಸು
ಇನ್ನೊಮ್ಮೆ ಜೀವ ಪಡೆದಿದೆ
ನಿಸರ್ಗದ ಆಶಾಕಿರಣ
ಮಳೆಯ ಈ ಪ್ರೇರಣ
ಮತ್ತೆ ಮತ್ತೆ ಬರುತಿರಲಿ
ದಣಿದೊಡಲ ತಣಿಸುತಲಿರಲಿ
ಬರವದು ದೂರ ಓಡಲಿ
ರೈತನ ಮೊಗದಿ ನಗು ಮೂಡಲಿ
ಹಸಿವಿರದ ಜಗ ನಮ್ಮದಾಗಲಿ
ಹಸಿರು ಎಲ್ಲೆಲ್ಲೂ ಚಿರವಿರಲಿ
0900ಎಎಂ26092018
*ಅಮು ಭಾವಜೀವಿ*
ಚಿತ್ರದುರ್ಗ
*ಶುಭೋದಯ ಶುಭದಿನ*
[9/29, 6:42 AM] ಅಮು ಭಾವಜೀವಿ: *ನೀನೇ ಅಗ್ರಮಾನ್ಯ*
ನಿನ್ನ ಕಂಬನಿಯ ಬಿಂದುವೊಂದು
ಭೂಮಿ ತೂಕದಷ್ಟು
ನನ್ನ ಆಸೆಗಳ ಕೂಟವದು
ಬರೀ ಸಾಸಿವೆಯಷ್ಟು
ಬೇಕೋ ಬೇಡವೋ ನಾನಂತೂ
ಅನ್ಯರ ಅಭಿಪ್ರಾಯಗಳ
ಪ್ರಶ್ನಿಸದೇ ಒಪ್ಪಿಕೊಂಡು
ನರಳುವ ನರಳಾಗಿಹೆನು
ನನ್ನ ಸುಖಕಾಗಿ ನೀನು
ನಿತ್ಯವೂ ದುಡಿದು ದಣಿದರೂ
ಮತ್ತೆ ಮತ್ತೆ ಅದೇ ಕಾಯಕದಲಿ
ಕಳೆದು ಹೋದೆ ನೀನೇಕೆ ಹೀಗೆ ?
ಹೆಣ್ಣಲ್ಲವೆ ನಾನು
ಎಂದಿದ್ದರೂ ನನ್ನ ಮೇಲೆ
ನಿಮ್ಮ ಗೌರವ ಪ್ರತಿಷ್ಠೆಗಳು
ನಿರ್ಧಾರವಾಗುವುವು ಅದಕೆ ಹಾಗೆ
ನಿನಗೂ ಮನಸಿದೆ ತಾನೇ
ನಿನ್ನೊಳಗೂ ಕನಸಿವೆ ತಾನೇ
ಅವನೆಲ್ಲ ಕತ್ತು ಹಿಸುಕಿ ನನ್ನ
ಪ್ರತಿಷ್ಠೆಗೆ ನೀನೇಕೆ ಬಲಿಯಾದೆ
ಎಲ್ಲ ನೋವ ನುಂಗುವುದು
ಹೆಣ್ಣಿನ ಹುಟ್ಟು ಗುಣ
ಪುರುಷ ಪ್ರಧಾನ ಸಮಾಜದಲ್ಲಿ
ನನ್ನದೇನಿದ್ದರೂ ದ್ವಿತೀಯ ಸ್ಥಾನ
ಪ್ರತಿ ಜೀವಿಗೆ ಬದುಕ ಕೊಟ್ಟವಳು
ಜಗದಿ ನೀನೇ ಅದ್ವಿತೀಯ
ನಿನ್ನ ನಿಸ್ವಾರ್ಥ ಸೇವೆಗೆ
ನೀನಾಗಲೇ ಬೇಕು ಅಗ್ರಮಾನ್ಯ
0638ಎಎಂ29092018
*ಅಮು ಭಾವಜೀವಿ*
ಚಿತ್ರದುರ್ಗ
ಶುಭೋದಯ ಶುಭದಿನ