Sunday, November 25, 2018

__END_OF_CONTENT___TAG_OF_NORMAL_*ಹಿರಿಯರಿಲ್ಲದ ಮನೆ* ಹೃದಯ ಭಾರವಾಗಿದೆ ನಂಬಿದ ಕೊಂಡಿಗಳೆಲ್ಲ ಒಂದೊಂದೇ ಕಳಚುತಿರಲು ಮನವು ಕಂಗಾಲಾಗಿದೆ ಹಿರಿಯರು ಇಲ್ಲದ ಮನೆಯಲ್ಲಿ ದಾರಿಯ ತೋರುವವರಿನ್ಯಾರು ಬದುಕಿನ ಈ ಪಯಣದಲಿ ಕೈ ಹಿಡಿದು ನಡೆಸುವವರ್ಯಾರು ಮೇರು ವ್ಯಕ್ತಿತ್ವಗಳೆಲ್ಲ ಕಣ್ಣ ಮುಂದೆಯೇ ಮರೆಯಾಗಿ ಖಾಲಿ ಉಳಿದ ಜಾಗವನ್ನು ತುಂಬಲಿಲ್ಲ ಯಾರೂ ಅವರ ಪರವಾಗಿ ಮಾರ್ಗದರ್ಶಕರಿಲ್ಲದ ಬದುಕು ದಿಕ್ಕುಗೆಟ್ಟು ಕೂತಿದೆ ಕೈಚೆಲ್ಲಿ ಬಂದದ್ದನ್ನೆಲ್ಲಾ ಸ್ವೀಕರಿಸಿ ನಾವು ನಡೆಯಬೇಕವರ ದಾರಿಯಲಿ ಹುಟ್ಟು ಸಾವುಗಳ ಈ ಪಯಣ ಪ್ರತಿ ಜೀವಿಗೂ ನಿಶ್ಚಿತ ಇರುವ ಮೂರು ದಿನದಲ್ಲಿ ಬಾಳಬೇಕು ಹೆಸರುಳಿಯಲು ಶಾಶ್ವತ ನಡೆಯಿರಿ ನೀವು ಮುಂದೆ ಮುಂದೆ ಬರುವೆವು ನಾವೂ ಹಿಂದೆ ಹಿಂದೆ ಇಷ್ಟೇ ನಮ್ಮ ನಿಮ್ಮ ನಂಟು ಉಳಿದುದೆಲ್ಲ ಕನ್ನಡಿಯೊಳಗಿನ ಗಂಟು 0733ಎಎಂ26112018 ಅಮು ಭಾವಜೀವಿ __END_OF_CONTENT__

No comments:

Post a Comment