*ನಿನ್ನ ಪ್ರೀತಿ*
ಈ ಭೀಕರ ಬರದಲ್ಲೂ
ಬರಡಾಗಲಿಲ್ಲ ನಿನ್ನ ಪ್ರೀತಿ
ಸುರಿವ ಬಿಸಿಲಲ್ಲೂ
ದಣಿಯಲಿಲ್ಲ ನಿನ್ನ ಪ್ರೀತಿ
ಅಂತರಂಗದ ಮಾತುಗಳಿಗೆ
ಅರ್ಥ ತಂದು ಕೊಟ್ಟಿತು ನಿನ್ನ ಪ್ರೀತಿ
ಅವಮಾನದ ಬದುಕಿನೊಳಗೆ
ಅಭಿಮಾನದ ಕಳಶವಾಯ್ತು ನಿನ್ನ ಪ್ರೀತಿ
ತೇವವಿರದ ಎದೆನೆಲದಲ್ಲಿ
ಹಸಿರ ಹಾಸಿ ಮೆರೆಸಿತು ನಿನ್ನ ಪ್ರೀತಿ
ತೋಯ್ದ ನನ್ನೀ ಒಡಲಲ್ಲಿ
ಕನಸುಗಳ ಬಿತ್ತಿ ಬೆಳೆಯಿತು ನಿನ್ನ ಪ್ರೀತಿ
ಬೇಸರದ ಒಂಟಿ ಪಯಣಕೆ
ತಂಪು ನೆರಳಾಗಿದ್ದು ನಿನ್ನ ಪ್ರೀತಿ
ಬೆಂದ ನನ್ನ ಬದುಕಿನಲ್ಲಿ
ಹಸಿವ ನೀಗಿ ಕಸುವ ತಂತು ನಿನ್ನ ಪ್ರೀತಿ
ನನ್ನವರ ಕೊಂಕು ಮಾತಿಗೆ
ಕೊರಗುವಾಗ ಕೈ ಹಿಡಿಯಿತು ನಿನ್ನ ಪ್ರೀತಿ
ನನ್ನೊಳಗೂ ಒಬ್ಬ ಸಾಧಕನ
ಹುಟ್ಟು ಹಾಕಿತು ನಿನ್ನ ಪ್ರೀತಿ
ನೀರವ ಬದುಕಿನಲ್ಲಿ
ನಿರಾಳತೆಯ ತಂತು ನಿನ್ನ ಪ್ರೀತಿ
ನೀನಿರದೆ ನಾನಿಲ್ಲ ಎಂಬ
ಭಾವ ಮೂಡಿಸಿತು ನಿನ್ನ ಪ್ರೀತಿ
0914ಎಎಂ02112018
*ಅಮು ಭಾವಜೀವಿ*
ಜಗಳೂರು
No comments:
Post a Comment