[9/22, 7:12 PM] ಅಮು ಭಾವಜೀವಿ ಮುಸ್ಟೂರು: ಶರಣರ ನಲ್ನುಡಿ 1
ಮಾನವನಿಗೆ ಎರಡು ಬಟ್ಟೆಗಳು. ಒಂದು ಹೊಟ್ಟೆಯ ಬಟ್ಟೆ ಇನ್ನೊಂದು ನೆತ್ತಿಯ ಬಟ್ಟೆ . ಹೊಟ್ಟೆಗೆ ಅನ್ನ ನೆತ್ತಿಗೆ ಜ್ಞಾನ ಹಾಕಬೇಕಾಗುತ್ತದೆ . ಹೊಟ್ಟೆ ಖಾಲಿ ಇದ್ದಾಗ ಅಸಿಡಿಟಿ, ಅಲ್ಸರ್ ಇತ್ಯಾದಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ . ಅದರಂತೆ ಖಾಲಿ ತಲೆಯಲ್ಲಿಯೂ ಕೆಲವೊಂದು ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಏಕೆಂದರೆ ಖಾಲಿ ತಲೆ ಸೈತಾನನ ಕಾರ್ಯಾಗಾರ, ಎಂಟಿ ಮೈಂಡ್ ಈಸ್ ಡೆವಿಲ್ಸ್ ವರ್ಕ್ಸ್ ಶಾಪ್. ನೆತ್ತಿಯ ಕಾಯಿಲೆಗಳೆಂದರೆ ಚಿಂತೆ, ಭ್ರಮೆ, ದುರ್ಭಾವನೆ ದುರಾಲೋಚನೆ ಇತ್ಯಾದಿಗಳು . ಕಾರಣ ಖಾಲಿ ಇರುವ ನೆತ್ತಿಯಲ್ಲಿ ಚಿಂತನೆಗಳನ್ನು ತುಂಬಿ ಕೊಳ್ಳಬೇಕಾಗುತ್ತದೆ . ಚಿಂತನ ಅದು ಅದ್ಭುತವಾದ ಶಕ್ತಿ. ಅದನ್ನು ರಭಸವಾಗಿ ಹರಿಯುವಂತಹ ವಾಹಿನಿಗೆ ಹೋಲಿಸಬಹುದು. ಹೀಗೆ ನಿರಂತರವಾಗಿ ಅದು ಹರಿಯುತ್ತಿದ್ದರೆ ಚಿಂತನ ವಾಹಿನಿ ಅನಿಸಿ ಕೊಳ್ಳುತ್ತದೆ. ಚಿಂತನೆಗಳು ಜಡವಾಗುತ್ತಿರುವ ಬದುಕನ್ನು ಚೈತನ್ಯ ಗೊಳಿಸುತ್ತವೆ. ಅನ್ನದಿಂದಲೂ ಚೈತನ್ಯ ಚಿಂತನೆಯಿಂದಲೂ ಚೈತನ್ಯ. ಅನ್ನ ಅಥವಾ ಆಹಾರ ಕೆಲವು ಗಂಟೆಗಳ ನಂತರ ಕರಗಿಹೋಗುತ್ತದೆ ಆದರೆ ಚಿಂತನೆ ಎಂಬ ಅನ್ನದ ರಾಶಿ ಕರಗುವುದೇ ಇಲ್ಲ . ಚಿಂತನೆಗಳು ಸ್ಪಷ್ಟತೆಯನ್ನು ಗಟ್ಟಿತನವನ್ನು ಮತ್ತು ಉತ್ತಮ ಬದುಕನ್ನು ಕಟ್ಟಿಕೊಡುತ್ತವೆ. ಬುದ್ಧಿಜೀವಿಗಳ ನಿಜವಾದ ಆಹಾರವೆಂದರೆ ಚಿಂತನೆಗಳೇ ಆಗಿರುತ್ತೇವೆ . ಚಿಂತಕರ ಶರೀರ ಕೆಲವೊಮ್ಮೆ ಕೃಶವಾಗಿ ಕಾಣುತ್ತಿರಬಹುದು, ಆದರೆ ಅವರ ಚಿಂತನಾ ಶಕ್ತಿ ಅದ್ಭುತವಾಗಿರುತ್ತದೆ . ಅವರು ಚಿಂತನೆ ಆಗಿರುತ್ತಾರೆ. ಚಿಂತನೆ ಅವರ ಶಕ್ತಿಯಾಗಿರುತ್ತದೆ. ಗಟ್ಟಿ ಚಿಂತನೆಗಳು ಜಗತ್ತಿಗೆ, ಜೀವನಕ್ಕೆ ಬೇಕಾಗುತ್ತವೆ ಅಂತಹ ಚಿಂತನೆಗಳೇ ಜಗತ್ತನ್ನು ಆಳುತ್ತವೆ. ಅನ್ನಕ್ಕಾಗಿ ಪರಿತಪಿಸುವವರ ಸಂಖ್ಯೆ ಬಹಳ, ಆದರೆ ಚಿಂತನೆಗಾಗಿ ಕಾತರಿಸುವವರ ಸಂಖ್ಯೆ ವಿರಳ ಹಾಗೆಂದು ಜಗತ್ತಿನಲ್ಲಿ ಚಿಂತಕರೆ ಇಲ್ಲ , ಚಿಂತನೆಗಳೇ ಇಲ್ಲ ಎನ್ನಲಾಗದು. ಪ್ರತಿಯೊಂದು ಚಿಂತನೆಯಲ್ಲಿಯೂ ಮಿಂಚು ಇದೆ , ಹೊಳಪು ಇದೆ. ಮೆದುಳೆಂಬ ಆಗಸದಲ್ಲಿ ಮಿಂಚಿ ಹೋಗುವ ಚಿಂತನೆಗಳನ್ನು ಸೆರೆ ಹಿಡಿಯಬೇಕಾಗುತ್ತದೆ . ಇಲ್ಲದಿದ್ದರೆ ಅವು ಕೈಗೆ ಸಿಗದಂತೆ ಮಿಂಚಿ ಮಾಯವಾಗುತ್ತವೆ.
[9/22, 9:42 PM] ಅಮು ಭಾವಜೀವಿ ಮುಸ್ಟೂರು: ಶರಣರ ನಲ್ನುಡಿ 2
ಸರಕು ಸಾಮಗ್ರಿಗಳಲ್ಲಿ ಸುಖವನ್ನು ಕಾಣಬಯಸುವ ಇಂದಿನ ಮಾನವ ತುಮುಲಗಳಲ್ಲಿ ತೊಳಲಾಡುತ್ತಿದ್ದಾನೆ. ಕೊನೆಯಿರದ ಬಯಕೆಗಳ ಬೆನ್ನು ಹತ್ತಿ ಬದುಕಬೇಕೆನ್ನುವ ಇಂದಿನ ಮಾನವ ಗೊಂದಲದ ಮಡುವಾಗಿದ್ದಾನೆ. ಅವನಿಗೆ ಅವನ ಬಗ್ಗೆಯೇ ನಂಬಿಕೆ ಇಲ್ಲ . ಪರಿಸ್ಥಿತಿ ಹೀಗಿರುವಾಗ ಇತರರನ್ನು ಅರ್ಥಮಾಡಿಕೊಳ್ಳುವುದಿರಲಿ , ತನ್ನ ಮೇಲೆ ತನಗೇ ನಂಬಿಕೆ ಇಲ್ಲ . ತನ್ನನ್ನು ತಾನು ಅರಿಯದವನು ಬದುಕಿನ ಸತ್ಯವನ್ನು ತಿಳಿಯಬೇಕೆಂದು ಬಯಸುವುದಾದರೂ ಹೇಗೆ ? ಹಾಗಾಗಿ ಮಾನವನಿಂದು ಅಸ್ಪಷ್ಟತೆಯಲ್ಲಿ ಮುಳುಗಿಹೋಗಿದ್ದಾನೆ. ಅವನ ಆಲೋಚನೆಯಲ್ಲಿ , ನಿರ್ಧಾರಗಳಲ್ಲಿ ಅಸ್ಪಷ್ಟತೆ ಆವರಿಸಿಕೊಂಡಿದೆ . ಅವನ ನಿರ್ಧಾರಗಳಲ್ಲಿ ನಿಖರತೆ ಇಲ್ಲವಾಗಿದೆ. ನಿರ್ದಿಷ್ಟ ಗುರಿಯ ಕೊರತೆಯೂ ಎದುರಾಗಿದೆ . ಒಂದು ರೀತಿಯಲ್ಲಿ ಅಡಕತ್ತರಿಯಲ್ಲಿ ಸಿಲುಕಿಕೊಂಡಂತಹ ಸ್ಥಿತಿ ಅವನದು . ಇದಕ್ಕೆ ಕಾರಣವೂ ಇಲ್ಲದಿಲ್ಲ ಒಂದು ಕಡೆ ಸಂಪ್ರದಾಯದ ಸೆಳೆತ ಇನ್ನೊಂದು ಕಡೆ ವೈಚಾರಿಕತೆಯ ಮೊರೆತ ಎರಡನ್ನೂ ಕಟ್ಟಿಕೊಳ್ಳುವಂತಿಲ್ಲ ಬಿಡುವಂತೆಯೂ ಇಲ್ಲ. ಇದಾವುದನ್ನು ಆಲೋಚಿಸದವನು ಭೌತಿಕ ವಸ್ತುಗಳಲ್ಲಿ ಸುಖವನ್ನು ಅರಸುತ್ತ ಮುನ್ನಡೆದಿದ್ದಾನೆ. ಅರಿವಿನ ಕೊರತೆ ಇರುವವರು ಒತ್ತಟ್ಟಿಗಿರಲಿ ಪ್ರಜ್ಞಾವಂತರು ವಿವೇಕವಂತರು ವಿಚಾರವಂತರು ಎಂದು ಹಣೆಪಟ್ಟಿ ಹಚ್ಚಿಕೊಂಡವರೂ ಕೂಡ ಗೊಂದಲದ ಗೂಡಾಗಿದ್ದಾರೆ. ಜನರನ್ನು ಜಾಗೃತಿಯತ್ತ ಒಯ್ಯಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವವರು ಅಸ್ಪಷ್ಟತೆಯ ಪರಿಧಿಗೆ ಸಿಕ್ಕಿ ನರಳುತ್ತಿದ್ದಾರೆ. ಇದು ದೊಡ್ಡ ದುರಂತ ತಿಳಿ ಹೇಳುವವನೇ ತಿರುಗುವ ಕಲ್ಲೆಸೆಯುವ ಕೆಲಸ ಮಾಡುತ್ತಿದ್ದಾರೆನೆಂದರೆ ತಿಳುವಳಿಕೆ ಇಲ್ಲದವರ ಪಾಡೇನು? ಅಸ್ಪಷ್ಟತೆ ಮುತ್ತಿ ಕೊಂಡಾಗ ಸ್ಪಷ್ಟ ಮಾರ್ಗದರ್ಶನ ಮಾಡಲು ಅಸಾಧ್ಯ . ಸ್ಪಷ್ಟ ಮಾರ್ಗದರ್ಶನ ಸಾಧ್ಯವಾಗದಿದ್ದಾಗ ಸಮರ್ಥ ನಾಯಕತ್ವವನ್ನು ರೂಪಿಸಲು ಅಸಾಧ್ಯ . ಎಲ್ಲಾ ಕ್ಷೇತ್ರದಲ್ಲೂ ಸಮರ್ಥ ನಾಯಕತ್ವ ಧರ್ಮಗುರು ರಾಜಕಾರಣಿ ಸಾಹಿತಿ-ಕಲಾವಿದ ವಿಜ್ಞಾನಿ ಹೀಗೆ ಜಗತ್ತಿಗೆ ಈಗ ಬೇಕಾಗಿರುವುದು ಸ್ಪಷ್ಟ ಮಾರ್ಗದರ್ಶನ . ಇದು ಸಾಧ್ಯವಾದರೆ ಮಾತ್ರ ಜಗತ್ತು ನೆಮ್ಮದಿಯಿಂದ ಇರಲು ಸಾಧ್ಯ. ಎಲ್ಲಿ ಸ್ಪಷ್ಟತೆ ಇರುತ್ತದೆಯೋ ಅಲ್ಲಿ ಸ್ಪಷ್ಟ ಗುರಿ, ಸ್ಪಷ್ಟ ಗಮನ, ಸ್ಪಷ್ಟ ಉದ್ದೇಶ ಬದುಕಿನ ಪರಮಸುಖ ಯಾವುದೆಂಬುದು ಸ್ಪಷ್ಟವಾಗುತ್ತದೆ . ಆಗ ಮಾನವನ ದಾರಿಯೇ ಬದಲಾಗುತ್ತದೆ. ಅವನು ಸತ್ಯದತ್ತ , ಸರಳತೆಯತ್ತ , ಸಭ್ಯತೆಯತ್ತ ಸೌಹಾರ್ದತೆಯತ್ತ ಸಾಕಾರದತ್ತ ನಡೆಯಬಲ್ಲವನಾಗುತ್ತಾನೆ. ಹೀಗಾಗಿ ಸ್ಪಷ್ಟತೆಯ ಕಡೆಗೆ ಸಮಾಜ ಚಲಿಸಬೇಕಾಗಿದೆ.
[9/22, 10:22 PM] ಅಮು ಭಾವಜೀವಿ ಮುಸ್ಟೂರು: ಶರಣರ ನಲ್ನುಡಿ 3
ಬದುಕನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ದೃಷ್ಟಾಂತಗಳು, ನಿದರ್ಶನಗಳು ,ಕಾದಂಬರಿಗಳು, ಕಥೆಗಳು ಮತ್ತು ಅನುಭವಗಳು ಬೇಕಾಗುತ್ತವೆ. ಕಥೆಗಳು ನಮಗೆ ಭೂತದ ದರ್ಶನವನ್ನು ಮಾಡಿಸುತ್ತವೆ, ಅವು ನಮ್ಮನ್ನು ಕಲ್ಪನಾ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ . ಅನುಭವಗಳು ವರ್ತಮಾನದಲ್ಲಿ ಘಟಿಸುತ್ತಾ ಪಕ್ವಗೊಳಿಸುತ್ತಾ ಹೋಗುತ್ತವೆ. ಹಿಂದಿನ ದೃಷ್ಟಾಂತಗಳನ್ನು ಇಂದಿನ ಅನುಭವಗಳನ್ನು ವರ್ತಮಾನಕ್ಕೆ ಅನ್ವಯಿಸುವಂತೆ ಮಾಡುವುದೇ ಒಂದು ಸಾಹಸ. ಇಲ್ಲದಿದ್ದರೆ ಘಟನೆಗಳು ಘಟನೆಗಳಾಗಿ, ನಿದರ್ಶನಗಳು ನಿದರ್ಶನಗಳಾಗಿ ಕಥೆಗಳು ಕಥೆಗಳಾಗಿ ಉಳಿಯುತ್ತವೆ. ಇವುಗಳನ್ನು ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸಿ ಒಂದು ಸೂಕ್ತವಾದ ಸತ್ಯವನ್ನು ಸಿದ್ಧಾಂತವನ್ನು ಮೌಲ್ಯವನ್ನು ಹೇಳುವುದರಿಂದ ಎಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ. ಹೀಗೆ ಹೇಳುವಾಗ ಅವು ಎಷ್ಟು ಸಮಂಜಸ ಅನ್ನುವುದನ್ನು ಗಮನಿಸಬೇಕಾಗುತ್ತದೆ . ಸ್ಥಾಪಿತ ಸತ್ಯಗಳಿಗಿಂತ ಸಮಕಾಲಿನ ಸತ್ಯಗಳು ನಮ್ಮ ಸಂಗಡ ಸದಾ ಇರುತ್ತವೆ ಎಂಬ ಅರಿವು ಇರಬೇಕಾಗುತ್ತದೆ ಕೇವಲ ಸ್ಥಾಪಿತ ಮೌಲ್ಯಗಳನ್ನು ಪ್ರತಿಪಾದಿಸುವುದಕ್ಕಿಂತ ಸಮಕಾಲಿನ ಸತ್ಯವನ್ನು ಶೋಧಿಸುವ ಮತ್ತು ಅದನ್ನು ಪುನರ್ ಪ್ರತಿಷ್ಠಾಪಿಸುವ ಪ್ರಯತ್ನಗಳು ನಡೆಯಬೇಕಾಗುತ್ತದೆ ಇಲ್ಲದಿದ್ದರೆ ಸ್ಥಾಪಿತ ಮೌಲ್ಯಗಳನ್ನು ಹೇಳಿಕೊಂಡು ಒಂದಷ್ಟು ಹೊಟ್ಟೆಹೊರೆಯುವ ಪ್ರಯತ್ನಕ್ಕೆ ಸೀಮಿತವಾದಂತೆ . ಸ್ಥಾಪಿತ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಹೋಗುವುದು ಪ್ರಸ್ತುತ ಸಂದರ್ಭದಲ್ಲಿ ಅದೇನು ದೊಡ್ಡ ಸಾಹಸ ಅನ್ನಿಸಿಕೊಳ್ಳುವುದಿಲ್ಲ. ಸ್ಥಾಪಿತ ಮೌಲ್ಯಗಳತ್ತ ಗಮನ ಹರಿಸುವವರು ಆಗಿ ಹೋದವರ ಉದಾಹರಣೆಗಳನ್ನು ನೀಡುತ್ತಾ ಹೋಗುತ್ತಾರೆ. ಅವರ ಬೋಧನೆಗಳನ್ನು ಮತ್ತೆ ಮತ್ತೆ ಬೋಧಿಸುತ್ತಾ ಹೋಗುತ್ತಾರೆ. ಉದಾಹರಣೆಗೆ ಬುದ್ದ ಹಾಗೆ ಹೇಳಿದ್ದಾನೆ ಬಸವಣ್ಣ ಹೀಗೆ ಹೇಳಿದ್ದಾನೆ ಇತ್ಯಾದಿ. ಅವರು ಅಂದಿನ ಸಂದರ್ಭಗಳನ್ನು ಕುರಿತು ಹೇಳಿದ್ದಾರೆ. ನಾವು ಇಷ್ಟಕ್ಕೆ ನಿಂತು ಬಿಡುವುದೇ ? ಹೀಗಾದಾಗ ಪ್ರಸ್ತುತ ಸಂದರ್ಭಗಳು ಸತ್ತು ಹೋಗುತ್ತವೆ. ನಾನು ಬುದ್ಧ ಬಸವಣ್ಣ ಗಾಂಧಿ ಅಂಬೇಡ್ಕರ್ ಅವರ ವಿಚಾರಗಳನ್ನು ಮತ್ತೆ ಮತ್ತೆ ಪ್ರತಿಪಾದಿಸಬಾರದೆಂದು ಹೇಳುತ್ತಿಲ್ಲ, ಮೇಲಾಗಿ ಅವುಗಳನ್ನು ಇವತ್ತಿನ ಜಗತ್ತಿಗೆ ಅನ್ವಯಿಸುತ್ತಾ ಇಂದಿನ ಅನುಭವಗಳನ್ನು ಸೇರಿಸುತ್ತಾ ಹೋದಾಗ ಅವರ ವಿಚಾರಗಳು ಹೆಚ್ಚು ಪ್ರಸ್ತುತ ಆಗುತ್ತವೆ. ಇಲ್ಲದಿದ್ದರೆ ಒಂದು ರೀತಿಯಲ್ಲಿ ಕ್ಲೀಷೆಯಾಗುವ ಸಾಧ್ಯತೆ ಇದೆ. ಇದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ನಾವುಗಳು ಚಿಂತನೆ ಮಾಡಬೇಕಾಗುತ್ತದೆ
[9/23, 9:19 PM] ಅಮು ಭಾವಜೀವಿ ಮುಸ್ಟೂರು: ಶ್ರೀ ಶಿವಮೂರ್ತಿ ಮುರುಘಾ ಶರಣರು ನಲ್ನುಡಿ 1. 10 2018
ನಾಡಿನಾದ್ಯಂತ ಬಸವ ಕೇಂದ್ರಗಳ ಮುಖಾಂತರವಾಗಿ ಮತ್ತು ಮುರುಘಾಮಠದ ಮುಖಾಂತರವಾಗಿ ಶರಣ ಸಂಗಮ, ಅಂತಹ ಶರಣ ಸಂಗಮ ಕಳೆದ 28 ವರ್ಷಗಳಿಂದ ನಾಡಿನಾದ್ಯಂತ ನಡೆಯುತ್ತಾ ಬಂದಿರುತ್ತದೆ. ಬೆಂಗಳೂರಿನಲ್ಲಿ ಒಂದು ಶರಣ ಸಂಗಮ ಸ್ವತಂತ್ರ ಹೋರಾಟಗಾರರಾದ ಎಚ್ಎಸ್ ದೊರೆಸ್ವಾಮಿ , ಸಾಹಿತಿ ಸುಮತೀಂದ್ರ ನಾಡಿಗರು ಭೇಟಿಯಾದರು. ನಾಡಿಗರು ನನ್ನನ್ನು ಕುರಿತು ನಿಮ್ಮ ಥೀಸಿಸ್ ವಿಷಯ ಏನು ಎಂದು ಕೇಳಿದರು ನಾನು ನನ್ನ ಥೀಸಿಸ್ ವಿಷಯ ಮಾನವೀಯತೆ ಮತ್ತು ಆಚರಣೆ ಎಂದೆ, ಮುಖ್ಯ ವಿಷಯವೊಂದಿರಬೇಕಲ್ಲ ಎಂದರು. ನಾನು ನಸುನಗುತ್ತಾ ನಾನು ಯಾವ ವಿಶ್ವವಿದ್ಯಾಲಯದ ಮೆಟ್ಟಿಲನ್ನು ಹತ್ತಿದವನಲ್ಲ ಅಂದೆ ,ಅವರು ಸಂಸ್ಕೃತ ಭಾಷೆಯ ಪರಿಚಯ ಇದೆಯೇ ಎಂದರು. ಅಲ್ಪಸ್ವಲ್ಪ ಸಂಪೂರ್ಣವಾಗಿ ಅಧ್ಯಯನ ಮಾಡಿಲ್ಲ ಅಂದೆ ನನ್ನಿಂದ ಸ್ಪಷ್ಟ ನುಡಿಗಳು. ಒಂದು ಭಾಷೆಯನ್ನು ಕಲಿಯುವುದರಿಂದ ಭಾಷೆಗೇನೂ ತೊಂದರೆ ಇಲ್ಲ. ನನಗೆ ಎಂದಿಗೂ ಅದು ಕೀಳರಿಮೆಯಾಗಿ ಕಾಡಲಿಲ್ಲ . ನಾನು ಯಾವುದೇ ಗುರುಕುಲದಲ್ಲಿ ಓದಲಿಲ್ಲ, ವಿಶ್ವವಿದ್ಯಾಲಯಗಳಲ್ಲಿ ಅಭ್ಯಸಿಸಲಿಲ್ಲ. ಮಠ ಪರಂಪರೆಯಂತೆ ಕಾಶಿಗೆ ಹೋಗಿ ಕಲಿಯಲಿಲ್ಲ. ಯಾವುದೇ ಮಂದಿರದಲ್ಲಿ ಅಧ್ಯಯನ ಮಾಡಲಿಲ್ಲ . ಜೀವನದಿಂದ ಕಲಿಯುತ್ತಾ ಹೋಗಿದ್ದೇನೆ ಅದುವೇ ನನ್ನ ಪಾಲಿನ ಪರಮ ಗುರು . ವಿಶ್ವವಿದ್ಯಾಲಯ ಅದು ಮುಕ್ತ ವಿಶ್ವವಿದ್ಯಾಲಯ. ಬದುಕಿನ ಮೂಲದ್ರವ್ಯ ಅನುಭವ ಕಲಿಸುವ ಕ್ರಿಯೆಯಲ್ಲಿ ಅದು ದಿವ್ಯಜ್ಞಾನಿಗಿಂತ ಅಥವಾ ಸಮರ್ಥ ಗುರುವಿಗಿಂತ ಕಡಿಮೆಯೇನಲ್ಲ ಎಂಬುದು ನನ್ನ ಖಚಿತ ಅಭಿಪ್ರಾಯ . ಪಂಡಿತರು ಮಾತ್ರ ಧಾರ್ಮಿಕ ಪೀಠಗಳಿಗೆ ಅಧಿಪತಿಗಳು ಆಗುವ ಪರಂಪರೆ ಬೆಳೆದುಬಂದಿದೆ . ನನಗಾವ ಪಾಂಡಿತ್ಯವೂ ಇರಲಿಲ್ಲ , ಆದರೂ ನಾನು ಉಜ್ವಲ ಪರಂಪರೆಯ ಪೀಠಯೇರಿದೆ. ನಾನು ಸಮಾಜವೆಂಬ ಗ್ರಂಥವನ್ನು ಸದಾ ಅಭ್ಯಸಿಸುವ ನಿಷ್ಠಾವಂತ ವಿದ್ಯಾರ್ಥಿ, ಇದನ್ನು ತಿಳಿದ ನನ್ನ ಗುರುಗಳು ನನ್ನನ್ನು ಈ ಪೀಠಕ್ಕೆ ಆರಿಸಿದರು. ನನಗೆ ಒಂದು ಪೀಠವನ್ನು, ಸಮಾಜವನ್ನು ಮುನ್ನಡೆಸುವ ಶಕ್ತಿ ಸಾಮರ್ಥ್ಯಗಳು ಎಲ್ಲಿಂದಲೋ ಬಂದವೆಂದು ಭಾವಿಸುವ ಅಗತ್ಯವಿಲ್ಲ . ನಾನು ಹೆಚ್ಚು ಹೆಚ್ಚು ಜನಮುಖಿಯಾಗುತ್ತಾ ಹೋದಂತೆ ಅನುಭವಗಳು ಉಂಟಾಗುತ್ತಾ ಹೋದವು . ನನ್ನ ಬದುಕಿನಲ್ಲಿ ಯಾವುದಾದರೂ ಒಂದು ಶಕ್ತಿ ಕೆಲಸ ಮಾಡಿದೆ ಎಂದು ಭಾವಿಸುವುದಾದರೆ ಅದು ಅನುಭವ ಬಲ, ಅದಕ್ಕೆ ಪೂರಕವಾಗಿ ನಿಂತದ್ದು ಅಧ್ಯಯನ ಬಲ ಇದರೊಂದಿಗೆ ಆಧ್ಯಾತ್ಮಿಕ ಬಲ. ಇವು ನನಗೆ ಶಕ್ತಿಯನ್ನು ತಂದುಕೊಟ್ಟವು. ಈ ಅರ್ಥದಲ್ಲಿ ನಾನು ಸ್ವ ನಿರ್ಮಿತ ವ್ಯಕ್ತಿ ,ಅಂದರೆ self-made ಮಾಸ್ಟರ್. ಪ್ರಯತ್ನ ಪಟ್ಟರೆ ಹಣವನ್ನು ದೊರಕಿಸಿಕೊಳ್ಳಬಹುದು ಆದರೆ ಅನುಭವ ಅದಕ್ಕಾಗಿ ಏನೆಲ್ಲ ಪ್ರಯತ್ನ ಮಾಡಬೇಕಾಗುತ್ತದೆ. ಜೀವನವು ಉನ್ನತಮಟ್ಟಕ್ಕೆರುವುದೇ ಅನುಭವಗಳಿಂದ. ನನ್ನ ದೃಷ್ಟಿಯಲ್ಲಿ ಅನುಭವಗಳಿಗಿಂತ ಮಿಗಿಲಾದುದು ಯಾವುದೂ ಇಲ್ಲ . ಮಾನವನ ಬದುಕಿನಲ್ಲಿ ಅತ್ಯಂತತಿಕವಾದುದು ಯಾವುದು ಎಂಬ ಹೇಗೆ ಅನುಭವ ಎಂದು ಧೈರ್ಯವಾಗಿ ಸಮರ್ಥಿಸಬಹುದು . ಶರಣರು ಸಂತರು ಸಮಾಜಸುಧಾರಕರು ಇವರಿಗೆಲ್ಲಾ ಅನುಭವವೇ ಮಾರ್ಗದರ್ಶಕ . ಯಾರ ಬದುಕಿನಲ್ಲಿ ಹೆಚ್ಚು ಅನುಭವಗಳಾಗಿದ್ದಾವೆಯೋ ಅವರು ಸೃಜನಶೀಲರಾಗಿರುತ್ತಾರೆ . ಸಮಾಜ ಸುಧಾರಕರೆನಿಸಿಕೊಳ್ಳುತ್ತಾರೆ. ಅವರೇ ಭವಿತವ್ಯದ ಮಾರ್ಗದರ್ಶಕರು. ನನ್ನ ಬದುಕಿನ ಪ್ರತಿ ಕ್ಷಣವನ್ನು ನಾನು ಲೋಕಾನುಭವ ಸಂಗ್ರಹಕ್ಕಾಗಿ ಖರ್ಚು ಮಾಡಿದ್ದೇನೆ ಒಂದು ಕಡೆ ಕುಳಿತಿದ್ದರೆ ಲೋಕಾನುಭವ ಆಗುತ್ತಿರಲಿಲ್ಲ. ಬದುಕು ಅನಾವರಣಗೊಳ್ಳುತ್ತಿರಲಿಲ್ಲ. ಬದುಕನ್ನು ಅನಾವರಣಗೊಳಿಸಿದ ಶಕ್ತಿಯೇ ಈ ಲೋಕಾನುಭವ ಅದಕ್ಕಾಗಿ ಹಾತೊರೆದಿದ್ದೇನೆ ಹಂಬಲಿಸಿದ್ದೇನೆ.
[9/24, 7:24 PM] ಅಮು ಭಾವಜೀವಿ ಮುಸ್ಟೂರು: 17 10 2011
ಶರಣರ ನಲ್ನುಡಿ
ನನ್ನ ಗೆಳತಿ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಳು. ಐದು ಪ್ರಶ್ನೆಗಳಿಗೆ ಉತ್ತರ ಬರೆದಾಗಿತ್ತು. ಆರನೆಯ ಮತ್ತು ಕಟ್ಟಕಡೆಯ ಪ್ರಶ್ನೆಗೆ ಉತ್ತರಿಸುವಾಗ ಜಾಗೃತದಳದ ಅವರ ಕೈಗೆ ಸಿಕ್ಕಿಬಿಟ್ಟಳು. ಕೂಡಲೇ ಅವರು ಆಕೆಯನ್ನು ಡಿಬಾರ್ ಮಾಡಿದರು. ಆಕೆ ಚಿಂತಾಕ್ರಾಂತರಾಗಿದ್ದಾಳೆ, ತನ್ನ ಮನೆಯವರಿಗೆ ತಾನು ಡಿಬಾರ್ ಆದ ವಿಚಾರವನ್ನು ಹಾಗೆ ತಿಳಿಸಿರುವುದಿಲ್ಲ . ಸತ್ತ ಬಿಟ್ಟರೆ ನನ್ನ ಸಮಸ್ಯೆ ಶಾಶ್ವತವಾಗಿ ಪರಿಹಾರ ಆಗುತ್ತದೆ ಎಂದು ಭಾವಿಸಿದ್ದಾಳೆ. ಇದಕ್ಕೆ ನಿಮ್ಮ ಪರಿಹಾರವೇನು ಎಂದು ಡಿಬಾರ್ ಆದ ವಿದ್ಯಾರ್ಥಿನಿಯ ಗೆಳತಿ ನನ್ನ ಮೊಬೈಲಿಗೆ ಕರೆಮಾಡಿ ಕೇಳಿದಳು . ಸಾಯುವ ತೀರ್ಮಾನ ಕೈಬಿಡಲು ನಾನು ಯುವತಿಗೆ ಸೂಚಿಸಿದೆ. ಅವರ ತಂದೆ ತಾಯಿಗಳಿಗೆ ನಾನು ಸಮಾಧಾನ ಹೇಳುತ್ತೇನೆಂದೆ. ವಿದ್ಯಾರ್ಥಿನಿಗೆ ಮತ್ತೊಂದು ಅವಕಾಶ ತೆಗೆದುಕೊಂಡು ಪಾಸು ಮಾಡಲು ಸೂಚಿಸಿದೆ.
ಅವನೊಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿ ಸಂಪೂರ್ಣವಾಗಿ ತನ್ನ ಅಧ್ಯಯನವನ್ನು ಮುಗಿಸಿದ್ದಾನೆ. ಅಧ್ಯಯನ ಮುಗಿಸಿದ್ದರೂ ಆತಂಕದ ಸ್ಥಿತಿಯನ್ನು ಅನುಭವಿಸುತ್ತಿದ್ದಾನೆ. ಆತನಿಗಿನ್ನೂ ನೌಕರಿ ಸಿಕ್ಕಿಲ್ಲ, ನೌಕರಿಯನ್ನು ಹುಡುಕಿಕೊಂಡು ತನ್ನ ಜೀವನವನ್ನು ಸುಸೂತ್ರವಾಗಿ ನಿರ್ವಹಿಸುವುದರಿಂದ ವಂಚಿತನಾಗಿದ್ದಾನೆ. ಅವನು ತುಸು ವಿಚಿತ್ರವಾಗಿ ಆಲೋಚಿಸುವ ಸ್ವಭಾವದವನಾಗಿದ್ದಾನೆ. ಆತ ಒಂದು ದಿನ ದಾವಣಗೆರೆಯಲ್ಲಿ ನಾನು ಉಳಿದುಕೊಂಡಿದ್ದ ಮನೆಗೆ ಬಂದ, ನನ್ನೊಟ್ಟಿಗೆ ಖಾಸಗಿಯಾಗಿ ಭೇಟಿ ಮಾಡಲು ಇಚ್ಛಿಸಿದ ನಾನು ಅದಕ್ಕೆ ಅವಕಾಶ ಕಲ್ಪಿಸಿಕೊಟ್ಟೆ. ಅವನು ಹೀಗೆ ಹೇಳುತ್ತಾ ಹೋದ, ಭಾರತದ ಶಕ್ತಿ ತಟಸ್ಥವಾಗಿದೆ, ಇದಕ್ಕೆ ಕಾರಣವೇನೆಂದರೆ ಶತ್ರು ರಾಷ್ಟ್ರದವರು ನಮ್ಮ ರಾಷ್ಟ್ರಕ್ಕೆ ಮಾಟ ಮಾಡಿಸಿದ್ದಾರೆ. ಆದ್ದರಿಂದ ನಮ್ಮ ದೇಶದಲ್ಲಿ ಭಯೋತ್ಪಾದನೆ, ವಿಛಿದ್ರಕಾರಿ ಶಕ್ತಿಗಳು ಅಟ್ಟಹಾಸ ನಡೆಸಿವೆ ಎಂದ. ನನಗೆ ಅವನ ವಿಚಾರವನ್ನು ಕೇಳಿ ವಿಚಿತ್ರವೆನಿಸಿತು. ನೀನೊಬ್ಬ ತಂತ್ರಜ್ಞಾನದ ವಿದ್ಯಾರ್ಥಿಯಾಗಿದ್ದು ಇಷ್ಟೊಂದು ಅತಾರ್ಕಿಕವಾಗಿ ಅವೈಜ್ಞಾನಿಕವಾಗಿ ಆಲೋಚಿಸುತ್ತಿರುವೆಯಲ್ಲಾ ಎಂದು ಆತನನ್ನು ಪ್ರಶ್ನಿಸಿದೆ . ಆತ ಕೊಟ್ಟ ಉತ್ತರ ನಾನು ಇಂತಿಂಥ ಸಂದರ್ಭದಲ್ಲಿ ಹೀಗೀಗೆ ಆಗುತ್ತದೆ ಎಂದು ಅಧಿಕಾರಿಗಳು ಮತ್ತು ಧಾರ್ಮಿಕ ವ್ಯಕ್ತಿಗಳಿಗೆ ತಿಳಿಸಿದ್ದೆ. ಅದರಂತೆ ದುರ್ಘಟನೆಗಳು ನಡೆದಿವೆ. ಇದು ನಡೆಯಬಾರದು ಎಂದರೆ ಮಠಾಧೀಶರೆಲ್ಲಾ ಸೇರಿಕೊಂಡು ಇದರ ಉಪಶಮನಕ್ಕಾಗಿ ಬಹುದೊಡ್ಡ ಯಜ್ಞವನ್ನು ಮಾಡಿಸಬೇಕಾಗುತ್ತದೆ ಎಂದು ತಿಳಿಸಿದ. ಇದೆಂಥಾ ಭ್ರಮೆ, ಇಂದಿನ ಯುವ ಪೀಳಿಗೆ ಇಂತಹ ತೊಳಲಾಟದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಆಧುನಿಕ ಮಾನವ ಹತ್ತು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾನೆ. ದೂರದರ್ಶನ ನೋಡುತ್ತಾ ಅತಿಯಾದ ವರ್ತನೆಗೆ ಒಳಗಾಗುವುದು , ಒಂದೇ ಒಂದು ನಿಂದನೆಯ ನುಡಿಗೆ ನಿದ್ರೆಯನ್ನು ಕೆಡಿಸಿಕೊಳ್ಳುವುದು, ಬೇರೆಯವರ ವರ್ತನೆಯಿಂದ ಉದ್ವೇಗಕ್ಕೆ ಒಳಗಾಗುವುದು, ನಡೆದು ಹೋದ ಘಟನೆಯನ್ನು ನೆನೆಸಿಕೊಳ್ಳುತ್ತಾ ನಿರಾಸೆಯ ಅಂಚಿಗೆ ಬದುಕನ್ನು ತಳ್ಳಿ ಕೊಳ್ಳುವುದು, ಕೆಲಸದಲ್ಲಿ ಸಫಲತೆ ಸಿಗಲಿಲ್ಲವೆಂದು ಸಾವಿಗೆ ಒಳಗಾಗುವುದು, ಶರೀರವನ್ನು ಕಾಡುತ್ತಿರುವ ಯಾವುದೋ ಒಂದು ವೇದನೆಯಿಂದ ಜೀವನೋತ್ಸಾಹವನ್ನು ಕಳೆದುಕೊಳ್ಳುವುದು ಮುಂತಾಗಿ. ಮುಖಂಡರಾದವರಿಗೆ ಹಿಂಬಾಲಕರಿಲ್ಲವೆಂಬ ಹತಾಶೆ, ತಮಗಿಂತ ಸ್ಥಿತಿವಂತರನ್ನು ನೋಡಿ ತಾನು ಅವರಂತೆ ಆಗಲಿಲ್ಲ ಎಂಬ ಕೊರಗು ಒಂದಲ್ಲ ಎರಡಲ್ಲ ನೂರಾರು ಸಮಸ್ಯೆಗಳು. ಇವುಗಳ ಸುಳಿಯಲ್ಲಿ ಬದುಕನ್ನು ಬಂಧಿಸಿ ಕೊಂಡವರಿದ್ದಾರೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದೆ ಆದರೆ ತಮ್ಮ ಮೇಲೆ ತಮಗೆ ಭರವಸೆ ಇಲ್ಲ. ಆ ಭರವಸೆ ಬೇಕಾಗುತ್ತದೆ.
[9/24, 7:45 PM] ಅಮು ಭಾವಜೀವಿ ಮುಸ್ಟೂರು: 18 10 2018
ಶರಣರ ನಲ್ನುಡಿ
ಸರಕು ಸಾಮಗ್ರಿಗಳಲ್ಲಿ ಸುಖವನ್ನು ಕಾಣಬಯಸುವ ಇಂದಿನ ಮಾನವ ತುಮುಲಗಳಲ್ಲಿ ತೊಳಲಾಡುತ್ತಿದ್ದಾನೆ. ಕೊನೆಯಿರದ ಬಯಕೆಗಳ ಬೆನ್ನು ಹತ್ತಿ ಬದುಕಬೇಕೆನ್ನುವ ಇಂದಿನ ಮಾನವ ಗೊಂದಲದ ಮಡುವಾಗಿದ್ದಾನೆ. ಅವನಿಗೆ ಅವನ ಬಗ್ಗೆ ನಂಬಿಕೆ ಇಲ್ಲ. ಪರಿಸ್ಥಿತಿ ಹೀಗಿರುವಾಗ ಇತರರನ್ನು ಅರ್ಥಮಾಡಿಕೊಳ್ಳುವುದಿರಲಿ ತನ್ನ ಮೇಲೆ ತನಗೆ ನಂಬಿಕೆ ಇಲ್ಲ. ತನ್ನನ್ನು ತಾನು ಅರಿಯದವನು ಬದುಕಿನ ಸತ್ಯವನ್ನು ತಿಳಿಯಬೇಕೆಂದು ಬಯಸುವುದಾದರೂ ಹೇಗೆ. ಹಾಗಾಗಿ ಮಾನವನಿಂದು ಅಸ್ಪಷ್ಟತೆಯಲ್ಲಿ ಮುಳುಗಿಹೋಗಿದ್ದಾನೆ. ಅವನ ಆಲೋಚನೆಯಲ್ಲಿ, ನಿರ್ಧಾರಗಳಲ್ಲಿ ಅಸ್ಪಷ್ಟತೆ ಆವರಿಸಿಕೊಂಡಿದೆ. ಅವನು ನಿರ್ಧಾರಗಳಲ್ಲಿ ನಿಖರತೆ ಇಲ್ಲವಾಗಿದೆ. ನಿರ್ದಿಷ್ಟ ಗುರಿಯ ಕೊರತೆಯು ಎದುರಾಗಿದೆ. ಒಂದು ರೀತಿಯಲ್ಲಿ ಅಡಕತ್ತರಿಯಲ್ಲಿ ಸಿಲುಕಿಕೊಂಡಂತಹ ಸ್ಥಿತಿ ಅವನದು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಒಂದು ಕಡೆ ಸಂಪ್ರದಾಯದ ಸೆಳೆತ, ಇನ್ನೊಂದುಕಡೆ ವೈಚಾರಿಕತೆಯ ಮೊರೆತ, ಎರಡನ್ನು ಕಟ್ಟಿಕೊಳ್ಳುವಂತೆಯೂ ಇಲ್ಲ ಬಿಡುವಂತೆಯೂ ಇಲ್ಲ. ಇದಾವುದನ್ನು ಆಲೋಚಿಸದವನು ಭೌತಿಕ ವಸ್ತುಗಳಲ್ಲಿ ಸುಖವನ್ನು ಅರಸುತ್ತಾ ಮುನ್ನಡೆದಿದ್ದಾನೆ. ಅರಿವಿನ ಕೊರತೆ ಇರುವವರು ಒತ್ತಟ್ಟಿಗಿರಲಿ, ಪ್ರಜ್ಞಾವಂತರು, ವಿವೇಕವಂತರು, ವಿಚಾರವಂತರು ಎಂದು ಹಣೆಪಟ್ಟಿ ಹಚ್ಚಿಕೊಂಡವರೂ ಕೂಡ ಗೊಂದಲದ ಗೂಡಾಗಿದ್ದಾರೆ. ಜನರನ್ನು ಜಾಗೃತಿಯತ್ತ ಕೊಂಡಯ್ಯ ಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವವರು, ಅಸ್ಪಷ್ಟತೆಯ ಪರಿಧಿಗೆ ಸಿಕ್ಕು ನರಳುತ್ತಿದ್ದಾರೆ. ಇದು ದೊಡ್ಡ ದುರಂತ. ತಿಳಿ ಹೇಳುವವನೇ ತಿಳಿಗೊಳಕ್ಕೆ ಕಲ್ಲೆಸೆಯುವ ಕೆಲಸ ಮಾಡುತ್ತಿದ್ದಾನೆ ಎಂದರೆ ತಿಳುವಳಿಕೆ ಇಲ್ಲದವರ ಪಾಡೇನು. ಅಸ್ಪಷ್ಟತೆ ಮುತ್ತಿ ಕಂಡಾಗ ಸ್ಪಷ್ಟ ಮಾರ್ಗದರ್ಶನ ಮಾಡಲು ಅಸಾಧ್ಯ. ಸ್ಪಷ್ಟ ಮಾರ್ಗದರ್ಶನ ಸಾಧ್ಯವಾಗದಿದ್ದಾಗ ಸಮರ್ಥ ನಾಯಕತ್ವವನ್ನು ರೂಪಿಸಲು ಅಸಾಧ್ಯ. ಎಲ್ಲಾ ಕ್ಷೇತ್ರದಲ್ಲೂ ಸಮರ್ಥ ನಾಯಕತ್ವ, ಧರ್ಮಗುರು, ರಾಜಕಾರಣಿ ಸಾಹಿತಿ ವಿಜ್ಞಾನಿ ಹೀಗೆ ಜಗತ್ತಿಗೆ ಬೇಕಾಗಿರುವುದು ಸ್ಪಷ್ಟ ಮಾರ್ಗದರ್ಶನ. ಇದು ಸಾಧ್ಯವಾದರೆ ಮಾತ್ರ ಜಗತ್ತು ನೆಮ್ಮದಿಯಿಂದ ಇರಲು ಸಾಧ್ಯ. ಎಲ್ಲಿ ಸ್ಪಷ್ಟತೆ ಇರುತ್ತದೆಯೋ ಅಲ್ಲಿ ಸ್ಪಷ್ಟ ಗುರಿ , ಸ್ಪಷ್ಟ ಗಮನ ಸ್ಪಷ್ಟ ಉದ್ದೇಶ ಬದುಕಿನ ಪರಮಸುಖ ಯಾವುದೆಂಬುದು ಸ್ಪಷ್ಟವಾಗುತ್ತದೆ. ಆಗ ಮಾನವನ ದಾರಿಯೇ ಬದಲಾಗುತ್ತದೆ. ಅವನು ಸತ್ಯದತ್ತ, ಸರಳತೆಯತ್ತ, ಸಭ್ಯತೆಯತ್ತ, ಸೌಹಾರ್ದತೆಯತ್ತ, ಸಹಕಾರದತ್ತ ನಡೆಯಬಲ್ಲವನಾಗಿರುತ್ತಾನೆ. ಹೀಗಾಗಿ ಸ್ಪಷ್ಟತೆಯ ಕಡೆಗೆ ಸಮಾಜ ಚಲಿಸಬೇಕಾಗಿದೆ.
[9/24, 8:02 PM] ಅಮು ಭಾವಜೀವಿ ಮುಸ್ಟೂರು: 19 10 2018
ಶರಣರ ನಲ್ನುಡಿ
ಹೊರ ಜಗತ್ತಿಗೆ ಬೆಳಕನ್ನು ನೀಡಲು ಪ್ರಕೃತಿದತ್ತವಾದ ಸೂರ್ಯ-ಚಂದ್ರ ಹಾಗು ನಕ್ಷತ್ರಗಳಿವೆ. ಇವುಗಳು ಇಲ್ಲದ ಸಂದರ್ಭದಲ್ಲಿ ಬೆಳಕಿಗಾಗಿ ಮಾನವನು ಹಣತೆ, ಮೊಂಬತ್ತಿ, ವಿದ್ಯುತ್ ಬಲ್ಬು ಇತ್ಯಾದಿಗಳನ್ನು ಸೃಷ್ಟಿಸಿಕೊಂಡಿದ್ದಾನೆ. ಪ್ರಕೃತಿದತ್ತವಾದ ಮತ್ತು ಮಾನವ ನಿರ್ಮಿತವಾದ ಬೆಳಕಿನ ವ್ಯವಸ್ಥೆಯಿಂದ ಜಗತ್ತಿನ ಜೀವನ ಪರಿಪೂರ್ಣವಾಗುತ್ತದೆ ಎಂದು ಭಾವಿಸುವುದು ಸೂಕ್ತವಲ್ಲ. ಏಕೆಂದರೆ ನಮ್ಮ ಕಣ್ಣಿಗೆ ಕಾಣದ ಒಳಜಗತ್ತು ಒಂದಿದೆ. ಅದನ್ನು ಬೆಳಗಿಸಲು ಬೆಳಕು ಬೇಕು. ಆ ಬೆಳಕೇ ಚಿಂತನೆಗಳು. ಅಂತರಂಗದ ಅರಿವಿಗೆ ದಾರಿದೀಪವಾಗಬಲ್ಲ ಸಾಮರ್ಥ್ಯ ಚಿಂತನೆಗಳಿಗೆ ಇದೆ. ಸಮಯಸ್ಫೂರ್ತಿಯಿಂದಲೂ ಜೀವನದಲ್ಲಿ ಎದುರಾಗುವ ಅಂತಹ ವಿವಿಧ ಅನುಭವಗಳಿಂದಲೂ ವಿಚಾರಗಳು ತೂರಿಬರುತ್ತವೆ. ತೂರಿಬಂದ ಚಿಂತನೆಗಳು ಮಾನವನ ಅಂತರಂಗದ ವಿಕಾಸಕ್ಕೆ ಸೂಕ್ತವಾದ ಬೆಳಕಿನ ಕಿರಣಗಳಾಗುತ್ತವೆ.ಇಂತ ಚಿಂತನೆಗಳು ಇಲ್ಲದಿರುವಂತಹ ಸಂದರ್ಭದಲ್ಲಿ ಅವನ ಬದುಕು ತುಂಬಾ ಸಂಕೀರ್ಣವಾಗುತ್ತದೆ. ಮಾನವ ಸದಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಡೆದು ಹೋಗುವಾಗ ಅವನ ಒಡಲಾಳದಿಂದ ವಿಚಾರ ವಾಹಿನಿ ಹರಿಯುತ್ತಾ ಹೋಗುತ್ತದೆ. ಹರಿದುಬಂದ ಗಟ್ಟಿ ಚಿಂತನೆಗಳು ಧರ್ಮ, ನ್ಯಾಯ, ಸತ್ಯ ಅಹಿಂಸೆ, ಹೀಗೆ ಯಾವುದೇ ವಿಚಾರಕ್ಕೆ ಸಂಬಂಧ ಪಟ್ಟಿದ್ದರೂ ಅವು ಒಂದೊಂದು ಸಂದೇಶವನ್ನು ನೀಡುತ್ತವೆ. ಈ ಸಂದೇಶಗಳು ಮಾನವ ಬದುಕಿಗೆ ಸಹಕಾರಿಯಾಗುತ್ತವೆ. ಮಾರ್ಗದರ್ಶನ ನೀಡುತ್ತವೆ. ಒಮ್ಮೊಮ್ಮೆ ಸ್ನೇಹಿತರು ನಮ್ಮನ್ನು ಅಗಲುವಂತಹ ಸಂದರ್ಭವಿದ್ದರೂ, ನಮ್ಮೊಳಗೆ ವಿಚಾರ ವಾಹಿನಿ ಹರಿಯುತ್ತಿದ್ದರೆ ಆ ಚಿಂತನೆಗಳೇ ನಮ್ಮ ಒಡನಾಡಿಗಳಾಗುವ ಸಾಧ್ಯತೆಗಳಿವೆ. ಒಬ್ಬರೇ ಇದ್ದರೆ ಅದು ಒಂಟಿತನ ಎನಿಸಿಕೊಳ್ಳುತ್ತದೆ. ನಾನು ಒಂಟಿ ಆಗಿದ್ದೇನೆ ಒಂಟಿತನ ನನ್ನನ್ನು ಕಾಡುತ್ತದೆ ಎಂದು ಭಾವಿಸಿ ಕೊಳ್ಳುವುದಕ್ಕಿಂತಲೂ ನನ್ನ ಜೊತೆಯಲ್ಲಿ ಸದಾಕಾಲ ವಿಚಾರಗಳು ಇರುತ್ತವೆ, ಅವನು ನನ್ನ ಬದುಕಿಗೆ ಪ್ರೇರಣೆ ನೀಡುತ್ತವೆ ಎಂಬ ಆಲೋಚನೆ ಮೂಡಿದಾಗ ಈ ಜಗತ್ತಿನಲ್ಲಿ ಯಾರೂ ಒಂಟಿಯಲ್ಲ. ಒಂಟಿತನದ ಬದುಕು ಅವರದ್ದಾಗುವುದಿಲ್ಲ. ವಿಚಾರಗಳು ಮತ್ತು ಚಿಂತನೆಗಳು ಯಾವುದೇ ವ್ಯಕ್ತಿಯನ್ನು ಒಂಟಿಯಾಗಿಸುವುದಿಲ್ಲ. ಚಿಂತನೆಗಳು ಮೂಡದ ವ್ಯಕ್ತಿಯು ಚಿಂತೆಯ ದಾಸನಾಗಿ ಬದುಕನ್ನು ಬರಡಾಗಿಸಿಕೊಳ್ಳುತ್ತಾನೆ. ವಿಚಾರಗಳು ಅಥವಾ ಚಿಂತನೆಗಳು ಸಲಹೆಗಾರರಾಗಿ, ಸಂಬಂಧಿಕರಾಗಿ, ಒಡನಾಡಿಗಳಾಗಿ ನಮ್ಮನ್ನು ಕೈಹಿಡಿದು ನಡೆಸುತ್ತವೆ. ಯಶಸ್ವಿ ಬದುಕಿನ ಗುಟ್ಟನ್ನು ಉಸುರುತ್ತವೆ. ಲವಲವಿಕೆಯಿಂದ ಕ್ರಿಯಾಶೀಲತೆಯಿಂದ ಅತ್ಯುತ್ಸಾಹದಿಂದ ಬದುಕನ್ನು ಗಟ್ಟಿಗೊಳಿಸುತ್ತವೆ.
[9/24, 8:23 PM] ಅಮು ಭಾವಜೀವಿ ಮುಸ್ಟೂರು: ವೇಷ್ಟಿ ಮತ್ತು ಸಮಷ್ಟಿ ಜೀವನದಲ್ಲಿ ಸಮಾಧಾನ ಪಟ್ಟುಕೊಳ್ಳಬಹುದಾದದ್ದು ಎಂದರೆ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುವುದು. ಒಂದು ಉದಾಹರಣೆ ನಮ್ಮ ಶ್ರೀಮಠದಲ್ಲಿ ಪ್ರತಿ ತಿಂಗಳು 5ನೇ ತಾರೀಖಿನಂದು ಒಬ್ಬೊಬ್ಬ ಶರಣರ ಸ್ಮರಣೋತ್ಸವ ಅದರೊಟ್ಟಿಗೆ ಸರಳ ಸಾಮೂಹಿಕ ವಿವಾಹಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ.5 ನೇ ತಾರೀಖಿನಂದು ಅಮಾವಾಸ್ಯೆ ಬಂದುಬಿಟ್ಟಿತ್ತು. ನಾವು ಏರ್ಪಡಿಸುವ ಮದುವೆ ಸಮಯಕ್ಕೆ ರಾಹುಕಾಲವೂ ಸೇರಿಕೊಂಡಿತು. ಕಾರ್ಯಕ್ರಮದಲ್ಲಿ ಯಾವ ಬದಲಾವಣೆಯನ್ನೂ ಮಾಡಲಿಲ್ಲ. ಜನರಿಗೆ ಇದೆಲ್ಲ ಗೊತ್ತಿದ್ದೂ ಯಾವ ಅಂಜಿಕೆಯಿಲ್ಲದೆ ಮದುವೆಗೆ ಸಿದ್ಧರಾದರು. ಆ ದಿನ 103 ಜೋಡಿಗಳ ಮದುವೆ ಇದು ಸಾಮಾನ್ಯ ಮಾತಲ್ಲ. ಒಬ್ಬಿಬ್ಬ ಪ್ರಜ್ಞಾವಂತರು, ಪಂಚಾಂಗ ಪ್ರಜ್ಞೆಯನ್ನು ಮೀರಿ ಮದುವೆಯಾದ ಪ್ರಸಂಗ. ಜನಸಾಮಾನ್ಯರು ಮತ್ತು ಮೂಢನಂಬಿಕೆಗಳಲ್ಲಿ ತೊಳಲಾಡುತ್ತಿರುವವರು ಬಸವಾದಿ ಶರಣರ ಧೋರಣೆಯ ವಚನ ಮಾಂಗಲ್ಯಕ್ಕೆ ಬದ್ಧರಾದದ್ದು ಆಶಾದಾಯಕ. ನಾನು ನಾಡಿನಾದ್ಯಂತ ಸುತ್ತಿದ್ದೇನೆ, ಜನಸಾಮಾನ್ಯರೊಡನೆ ಬೆರೆತಿದ್ದೇನೆ, ಅವರ ಸುಖ-ದುಃಖವನ್ನು ಹಂಚಿಕೊಂಡಿದ್ದೇನೆ ಇದು ಹೇಳಿಕೆಯ ಮಾತಲ್ಲ, ನಮ್ಮ ಜನಕ್ಕೆ ಜ್ಞಾನದ ಮತ್ತು ವೈಚಾರಿಕತೆಯ ಹಸಿವು ಇದೆ. ಅವರು ಬಡವರಿರಬಹುದು, ಅನಕ್ಷರಸ್ಥರಿರಬಹುದು ಆದರೆ ಅವರ ಅರಿವಿನ ದಾಹಕ್ಕೆ ಬಡತನವಿಲ್ಲ. ಹೇಳಿದ ವಿಚಾರಗಳನ್ನು ಸಂಗ್ರಹಿಸುತ್ತಾರೆ, ಸಾಧ್ಯವಾದ ಮಟ್ಟಿಗೆ ಸರಿದಾರಿಯಲ್ಲಿ ನಡೆಯುತ್ತೇವೆ ಎಂದು ಭಾವಿಸುತ್ತಾರೆ ಸದ್ಯಕ್ಕೆ ಇಷ್ಟು ಸ್ಪಂದನ ಸಾಕು. ಏಕೆಂದರೆ ಬದಲಾವಣೆ ಎಂಬುದು ಪವಾಡವಲ್ಲ. ಬದಲಾವಣೆ ಪವಾಡ ವಾಗಲೂಬಾರದು. ಜನರು ವಚನ ಕೊಟ್ಟಾಕ್ಷಣ ಬದಲಾವಣೆ ಆಗಿಯೇ ಬಿಟ್ಟಿತು ಎಂದು ಭ್ರಮಿಸಬಾರದು. ನಾವು ಮಾಡಬೇಕಾದದ್ದು ಇಷ್ಟೇ ಜನರನ್ನು ಕೈಹಿಡಿದು ಮುನ್ನಡೆಸ ಬೇಕಾದುದು. ಆ ಜವಾಬ್ದಾರಿ ಪ್ರಜ್ಞಾವಂತ ಮಠಾಧೀಶರು ಮತ್ತು ವಿಚಾರವಂತರ ಮೇಲೆ ಇದೆ. ಧರ್ಮಗುರುಗಳಾದವರು ತಿಳಿ ಹೇಳಿದಾಗ ಜನರು ಒಲ್ಲೆನೆನ್ನುವುದಿಲ್ಲ. ಅದನ್ನು ಅರ್ಥ ಮಾಡಿಕೊಂಡು ಧರ್ಮಗುರುಗಳಾದವರು ಜನರನ್ನು ಸರಿದಾರಿಗೆ ಹಚ್ಚುವ ಕಳಕಳಿಯನ್ನು ಹಾಗೂ ಉತ್ಸಾಹವನ್ನು ತೋರಬೇಕಾಗುತ್ತದೆ. ವಿಮರ್ಶೆ ಮಾಡುತ್ತಲೇ ಸಮಾಜದ ಓರೆ ಕೋರೆಗಳನ್ನು ತಿದ್ದುವ ತೀಡುವ ಪ್ರಯತ್ನ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಬಸವತತ್ವ ಮಹಾವಿದ್ಯಾಲಯದ ಸ್ಥಾಪನೆ. ತತ್ವದ ಆಧಾರದ ಮೇಲೆ ಸಾಧಕರನ್ನು ತರಬೇತಿಗೊಳಿಸುವ ಪ್ರಯತ್ನ ನೂರಾರು ಸಾಧಕರು ಇದರಿಂದ ಹೊರಬಂದಿದ್ದಾರೆ. ಜನಾಂಗದ ಸಂಘಟನೆಯನ್ನು ಮಾಡುತ್ತಿದ್ದಾರೆ. ತಮ್ಮ ಜನಾಂಗಕ್ಕೆ ಬೇಕಾಗುವಂತಹ ಅಕ್ಷರವನ್ನು ಸ್ವಾಭಿಮಾನವನ್ನು ತುಂಬುವ ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದಾರೆ. ಒಂದು ಹಂತದಲ್ಲಿ ಧಾರ್ಮಿಕ ವಿಕೇಂದ್ರಿಕರಣ ಬಸವಣ್ಣನವರ ಕಾಲದಲ್ಲಿ ಜಾತಿಗಳ ಧ್ರುವೀಕರಣ ನಡೆಯಿತು 21ನೇ ಶತಮಾನದಲ್ಲಿ ಈ ರೀತಿಯಾಗಿರುವಂತಹ ಧಾರ್ಮಿಕ ವಿಕೇಂದ್ರಿಕರಣ ನಡೆಯುತ್ತಿರುವುದಕ್ಕೆ ಸಂತೋಷವೆನಿಸುತ್ತದೆ.
[9/24, 8:49 PM] ಅಮು ಭಾವಜೀವಿ ಮುಸ್ಟೂರು: 21 10 2018
ಶರಣರ ನಲ್ನುಡಿ
ಯಾವುದೇ ಧರ್ಮ ತನ್ನ ನೈಜ ಮತ್ತು ಸರಳ ಆಚರಣೆಗಳನ್ನು ಕಳೆದುಕೊಂಡಾಗ ಅದು ನೆಪ ಮಾತ್ರ ಧರ್ಮವಾಗಿ ಜಡತ್ವಕ್ಕೆ ಸರಿಯುತ್ತದೆ.ಅದರ ಸುತ್ತ ಮೂಢನಂಬಿಕೆಗಳು ಕಂದಾಚಾರಗಳು ವಿಜೃಂಭಿಸುತ್ತವೆ. ಅದು ಸಾಮಾನ್ಯರನ್ನು ವ್ಯವಸ್ಥಿತವಾಗಿ ತುಳಿಯುವ ಸಾಧನವಾಗುತ್ತದೆ. ಧರ್ಮದ ಮೂಲ ಆಶಯ ಮೂಲೆಗುಂಪಾಗುತ್ತದೆ. ಹೀಗಾಗಿ ಅರ್ಥವಿರದ ಆಚರಣೆ ವ್ಯರ್ಥವಾಗುತ್ತದೆ. ಶರಣರು ಹೇಳುವಂತೆ ಅರಿವಿಲ್ಲದವನಿಗೆ ಅರ್ಚನೆ ಸಲ್ಲದು. ಅರ್ಚನೆಗಾಗಿಯೇ ಅರಿವು ಅಲ್ಲ, ಅರ್ಚನೆ ಮತ್ತು ಅರಿವು ಎರಡೂ ಸೇರಿದಾಗ ಬದುಕು ಆನಂದಮಯ. ಜಗತ್ತಿನಲ್ಲಿ ಹಲವಾರು ಸ್ವತಂತ್ರ ಧರ್ಮಗಳಿವೆ. ಅವು ತಮ್ಮ ಅಸ್ತಿತ್ವವನ್ನು ಕಾಯ್ದುಕೊಂಡು ಹೋಗುತ್ತಿವೆ. ಅವುಗಳಲ್ಲಿ ಬಸವಾದಿ ಶರಣ ಪ್ರಣೀತವಾದ ಲಿಂಗಾಯತ ಧರ್ಮ. 12ನೇ ಶತಮಾನದಲ್ಲಿ ಬಸವಣ್ಣನವರು ಧರ್ಮದಲ್ಲಿನ ಅರ್ಥವಿಲ್ಲದ ಆಚರಣೆಗಳನ್ನು ವಿರೋಧಿಸಿ ನೈಜವಾದ, ಸರಳವಾದ ತತ್ವ ಸಿದ್ಧಾಂತವನ್ನು ಪ್ರತಿಪಾದಿಸಿದರು. ಬಸವಣ್ಣನವರು ಶೈವೋಪಾಸನೆಯಿಂದ ಪ್ರಭಾವಿತರಾಗಿ ಬಯಲರೂಪಿ ಶಿವತ್ವದ ಪರಿಕಲ್ಪನೆಯನ್ನು ಕೊಡುತ್ತಾರೆ. ಅದು ಮುಂದೆ ಧರ್ಮದ ಸ್ವರೂಪವನ್ನು ನಂತರದಲ್ಲಿ ಸ್ವತಂತ್ರ ಧರ್ಮದ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಪ್ರಗತಿಪರ ವಿಚಾರಗಳನ್ನು ಒಳಗೊಂಡಿರುವ ಈ ಧರ್ಮದ ಮುಖ್ಯ ಉದ್ದೇಶವೆಂದರೆ ಧರ್ಮ ದೇವರುಗಳ ಗುಡಿಗುಂಡಾರಗಳ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ತಪ್ಪಿಸುವುದೇ ಆಗಿದೆ. ಲಿಂಗಾಯತ ಎಂದರೆ ಜಾತಿಯಲ್ಲ, ಅದು ಬದುಕುವ ವಿಧಾನ. ಅಂಗದ ಮೇಲೆ ಲಿಂಗವನ್ನು ಆಯತ ಮಾಡಿಕೊಂಡು ಆ ಲಿಂಗದ ಗುಣಗಳೊಂದಿಗೆ ಯಾವಾತ ಬದುಕುತ್ತಾನೋ ಅವನೇ ಲಿಂಗಾಯತ. ಇಂತಹವರೇ ಲಿಂಗವನ್ನು ಧರಿಸಬೇಕೆಂಬ ಕಟ್ಟುಪಾಡು ಇಲ್ಲ. ಯಾವುದೇ ದೇಶದವರಾದರೂ, ವರ್ಣದವರಾದರೂ, ಯಾವ ಭಾಷೆಯವರಾದರೂ ಇದನ್ನು ಧರಿಸಿಕೊಳ್ಳಬಹುದಾಗಿದೆ. ಇಷ್ಟಲಿಂಗವು ಜಾತಿಯ ಸಂಕೇತವಲ್ಲ. ಸಮಾಜದಲ್ಲಿ ಮನೆ ಮಾಡಿಕೊಂಡಿದ್ದ ತರತಮ ಭಾವಗಳನ್ನು ನಿವಾರಿಸಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಬಸವಾದಿ ಶರಣರ ಉದ್ದೇಶ ಮತ್ತೊಂದು ಜಾತಿಯನ್ನು ಸೃಷ್ಟಿಸುವುದು ಆಗಿರಲಿಲ್ಲ, ಬದಲಾಗಿ ಜಾತಿ, ವರ್ಗ, ವರ್ಣ, ವಯಸ್ಸು ಮತ್ತು ಲಿಂಗಭೇದಗಳನ್ನು ಮೀರಿದಂತಹ ಒಂದು ವ್ಯವಸ್ಥೆಯ ನಿರ್ಮಾಣ ಅವರದಾಗಿತ್ತು. ಈ ಆಶಯವೇ ಅಧರ್ಮದ ಮೂಲಧಾತು. ಶರಣರು ಮತ್ತು ಜಗತ್ತಿನ ಕೆಲವು ದಾರ್ಶನಿಕರು ಜಾತಿಯನ್ನು ಧರ್ಮವನ್ನಾಗಿಸಿದರೆ ಕೆಲವು ಮೂಲಭೂತವಾದಿಗಳು ಧರ್ಮವನ್ನು ಜಾತಿಯಾಗಿಸಿದರು. ಈ ವಿಪರ್ಯಾಸದಿಂದಾಗಿ ಧರ್ಮವು ಎಷ್ಟು ಬೆಳೆಯಬೇಕಾಗತ್ತೋ ಅಷ್ಟು ಬೆಳೆಯಲಾಗಲಿಲ್ಲ . ಕರ್ಮಠರ ಕೈಗೆ ಸಿಕ್ಕು ಧರ್ಮದಲ್ಲಿನ ಜಾಗತಿಕ ಸತ್ಯ ಪ್ರಗತಿಪರ ಹಾಗೂ ಸಮಾಜವಾದಿ ಚಿಂತನೆಗಳು ಮಸುಕಾದವು. ಶೋಷಣೆಯ ವಿರುದ್ಧವಾಗಿ ಹುಟ್ಟಿದಂತಹ ಒಂದು ಧರ್ಮ ಮತ್ತೆ ಶೋಷಣೆಯ ಕಡೆಗೆ ಮುಖ ಮಾಡಿದ್ದು ಒಂದು ವಿಪರ್ಯಾಸ. ಇದರಿಂದಾಗಿ ಲಿಂಗಾಯತ ಧರ್ಮವು ಯಾರೋ ಕೆಲವರ ಧರ್ಮ ಎಂದು, ಅದೊಂದು ಜಾತಿ ಎಂಬ ಸಂಕುಚಿತ ಭಾವನೆ. ಅಂತ ಸಂಕುಚಿತತೆಯನ್ನು ಕಿತ್ತೊಗೆದರೆ ಧರ್ಮದ ಸಾರ್ವತ್ರೀಕರಣ ಸಾಧ್ಯ. ಯಾವುದೇ ಧರ್ಮ ಜನಪ್ರಿಯ ಧರ್ಮ ಅನಿಸಿಕೊಳ್ಳಬೇಕಾದರೆ ಅದು ತುಂಬಾ ಸರಳವಾದ ಆಚರಣೆಗಳನ್ನು ಒಳಗೊಂಡಿರಬೇಕಾಗುತ್ತದೆ. ಅಂತ ಆಚರಣೆಗಳು ಸತ್ಯಕ್ಕೆ ಸಮೀಪವಾಗಿರಬೇಕು. ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿರಬೇಕು. ಸರ್ವರೂ ಆಚರಿಸುವಂತಿರಬೇಕು. ಆಗ ಆ ಧರ್ಮ ಜಾಗತಿಕ ಧರ್ಮ. ಒಬ್ಬ ವ್ಯಕ್ತಿ ಇಚ್ಚಿಸಿದರೆ ತಾನೇ ಆ ಧರ್ಮದ ಆಚರಣೆಗಳನ್ನು ನಿರ್ವಹಿಸುವಂತೆ ಇರಬೇಕು. ಈ ಎಲ್ಲಾ ಅಂಶಗಳನ್ನು ಒಳಗೊಂಡ ವಿಚಾರ ಪ್ರಧಾನವಾದ ಧರ್ಮವನ್ನು ಬಸವಣ್ಣನವರು ನೀಡಿದರು.
[9/24, 9:11 PM] ಅಮು ಭಾವಜೀವಿ ಮುಸ್ಟೂರು: 22 10 2018
ಶರಣರ ನಲ್ನುಡಿ
ಈ ಬ್ರಹ್ಮಾಂಡದಲ್ಲಿ ಜನಿಸಿದ ಪ್ರತಿಯೊಂದು ಜೀವಿಗೂ ತನ್ನದೇ ಆದ ಜೀವನ ಇದೆ. ಆದರೆ ಒಂದು ಜೀವಿಯಂತೆ ಮತ್ತೊಂದು ಜೀವಿಯ ಜೀವನ ಇರುವುದಿಲ್ಲ. ಒಂದಕ್ಕಿಂತ ಒಂದು ವಿಭಿನ್ನ. ಅದರಂತೆ ಮಾನವ ಜೀವಿಯ ಬದುಕು. ಜೀವನ ಒಂದೇ ಆದರೂ ಜೀವನಶೈಲಿ ವಿಭಿನ್ನವಾದದ್ದು. ಒಬ್ಬರ ಬದುಕಿನಲ್ಲಿ ಒಂದೊಂದರ ಮಹತ್ವ, ನಾವು ಯಾವುದಕ್ಕೆ ಮಹತ್ವ ಕೊಡುತ್ತೇವೆ ಅನ್ನುವುದರ ಮೇಲೆ ಜೀವನಾನುಭವಗಳು ಉಂಟಾಗುತ್ತವೆ. ಕೆಲವರ ದೃಷ್ಟಿಯಲ್ಲಿ ಬದುಕು ಅಮಲು, ಕೆಲವರ ದೃಷ್ಟಿಯಲ್ಲಿ ಮಜಲು, ಕೆಲವರ ದೃಷ್ಟಿಯಲ್ಲಿ ಅದು ಬುಗುಲು, ಇನ್ನು ಕೆಲವರಿಗಂತೂ ಅದು ಎಲ್ಲಿಲ್ಲದ ದಿಗಿಲು ಆದರೆ ನನ್ನಂತಹವರಿಗೆ ಅದು ಸವಾಲು ಸವಾಲು ಸವಾಲು. ಹಣ ಅಧಿಕಾರ ಅಂತಸ್ತುಗಳು ಜೀವನವನ್ನು ಅರಳಿಸುತ್ತದೆ ಎಂಬ ಭ್ರಮೆ ನನಗಿಲ್ಲ. ಪ್ರಗತಿಗಾಗಿ ಒಂದಷ್ಟು ಭೌತಿಕ ಬೆಳವಣಿಗೆ ಬೇಕು ನಿಜ ಆದರೆ ಭೌತಿಕ ದಾಸ್ಯಕ್ಕೆ ನನ್ನನ್ನು ಬಂಧಿಸಿ ಕೊಳ್ಳಬೇಕೆಂಬ ಇಚ್ಛೆ ನನಗಿಲ್ಲ. ಬದುಕಿಗೆ ಅನೇಕರು ಬಂಡವಾಳವನ್ನು ಬಯಸುತ್ತಾರೆ. ನನ್ನದು ಶೂನ್ಯ ಬಂಡವಾಳ ಶೂನ್ಯದಿಂದ ಎದ್ದು ಬಂದವ. ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ನಾನು ಬಡತನದಿಂದ, ಅಜ್ಞಾನದಿಂದ ದರಿದ್ರ ತನದಿಂದ ಮತ್ತು ದಡ್ಡತನದಿಂದ ಎದ್ದು ಬಂದವನು. ಬಹಳಷ್ಟು ವ್ಯಕ್ತಿತ್ವಗಳು ಬುದ್ಧಿವಂತಿಕೆಯಿಂದ ಶ್ರೀಮಂತಿಕೆಯಿಂದ ಎದ್ದು ಬರುತ್ತವೆ ಎಂದು ಕೇಳಿದ್ದೀರಿ. ಕೆಲವರಾದರೂ ನಾನು ಹೇಳಿದಂತೆ ಅಜ್ಞಾನದಿಂದ ಎದ್ದುಬಂದು ಅಚ್ಚರಿ ಮೂಡಿಸುತ್ತಾರೆ. ಹಾಗಾದರೆ ನಾನು ಶೂನ್ಯದಿಂದ ಎದ್ದು ಬಂದಿರುವುದರ ರಹಸ್ಯವೇನು ಎಂಬ ಪ್ರಶ್ನೆ . ಸವಾಲಿನ ಹಾದಿಯಲ್ಲಿ ಕಲ್ಲುಮುಳ್ಳುಗಳು ನಿಂದೆ ಮತ್ತು ಅವಮಾನ, ಅವು ನನಗೆ ಒಂದಷ್ಟು ಗಟ್ಟಿತನವನ್ನು ಕಟ್ಟಿಕೊಟ್ಟಿವೆ. ಬಂದೆರಗುವ ಸಮಸ್ಯೆಗಳನ್ನು ಎದುರಿಸುವ ಧೈರ್ಯವನ್ನು ನೀಡಿವೆ . ಸಂಪ್ರದಾಯಬದ್ಧವಾದ ಬದುಕು ಆಗಿದ್ದಿದ್ದರೆ ಸಲೀಸಾಗಿ ಸಾಗಬಹುದಿತ್ತು. ಇದಕ್ಕೆ ವಿರುದ್ಧವಾದ ದಾರಿ. ಕತ್ತಲೆಯನ್ನು ಕಪ್ಪುಬಣ್ಣವನ್ನು ಕಷ್ಟವನ್ನು ಯಾರೂ ಇಷ್ಟಪಡುವುದಿಲ್ಲ. ನಾನೊಬ್ಬ ಸಹಜವಾದಿ, ಆಶಾವಾದಿ, ಸಮಾಜವಾದಿ, ಸಮತಾವಾದಿ. ಎರಡು ಇರುಳುಗಳ ನಡುವೆ ಒಂದು ಹಗಲು ಉಂಟಾಗುತ್ತದೆ ಎಂಬ ಸತ್ಯ ನನಗೆ ಅರ್ಥವಾಗಿದೆ. ಇದನ್ನು ಅರ್ಥಮಾಡಿಕೊಳ್ಳದ ವರು ಹಗಲನ್ನು ಮಾತ್ರ ಬಯಸುತ್ತಾರೆ. ಇರುಳು ಇಲ್ಲದೆಯೇ ಹಗಲು ಆಗಲು ಸಾಧ್ಯವೇ? ಅದರಂತೆ ಕೆಲವರು ಸುಖವನ್ನು ಮಾತ್ರ ಇಚ್ಛಿಸುತ್ತಾರೆ. ಸುಖದೊಂದಿಗೆ ದುಃಖ ಇರುತ್ತದೆ ಎಂಬುದನ್ನು ಮರೆತೇ ಬಿಡುತ್ತಾರೆ. ಸುಖ ಕಲಿಸಿದ ಪಾಠಕ್ಕಿಂತ ದುಃಖ ಅಥವಾ ಕಷ್ಟವು ಕಲಿಸಿದ ಪಾಠದಿಂದ ಜೀವನವು ವಿಸ್ತೃತ ರೂಪವನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ನನ್ನ ದೃಷ್ಟಿಯಲ್ಲಿ ಜೀವನವು ದೊಡ್ಡದು ಅನ್ನುವುದಕ್ಕಿಂತ ಅದು ನೀಡುವ ಅನುಭವ ದೊಡ್ಡದು. ಜೀವನಾನುಭವಗಳು ಉಂಟಾಗುತ್ತಾ ಹೋದಂತೆ ಪ್ರಬುದ್ಧತೆ ಪ್ರಾಪ್ತವಾಗುತ್ತದೆ. ಬದುಕಿನಲ್ಲಿ ಬದ್ಧತೆ ಮತ್ತು ಪ್ರಬುದ್ಧತೆ ಬಹಳ ಮುಖ್ಯ. ಆರಂಭದಲ್ಲಿ ಬದುಕಿಗಾಗಿ ಬದುಕು ಎಂಬ ವಿಚಾರವಿತ್ತು, ಆದರೆ ಬರುಬರುತ್ತಾ ಬದ್ಧತೆಗಾಗಿ ಬದುಕು, ಪ್ರಬುದ್ಧತೆಗಾಗಿ ಬದುಕು, ಅನುಭವಕ್ಕಾಗಿ ಬದುಕು, ಹೋರಾಟಕ್ಕಾಗಿ ಬದುಕು, ಸಂಕಷ್ಟಗಳ ನಿವಾರಣೆಗಾಗಿ ಬದುಕು, ಪರಿವರ್ತನೆಗಾಗಿ ಬದುಕು, ಪ್ರಯೋಗಕ್ಕಾಗಿ ಬದುಕು ಎಂಬುದು ನನಗೆ ಅರ್ಥವಾಯಿತು. ನನ್ನ ಇಡೀ ಬದುಕಿನಲ್ಲಿ ಪರಿವರ್ತನೆ ಆಗಬೇಕು ಮತ್ತು ಪರಿವರ್ತನೆ ತರಬೇಕು ಎಂಬ ಹಂಬಲ ಎದ್ದುಕಾಣುತ್ತದೆ. ಆ ದೃಷ್ಟಿಯಲ್ಲಿ ಬದುಕೊಂದು ಪ್ರಯೋಗಶಾಲೆ. ಹೊಸ ಹೊಸ ವಿಚಾರಗಳನ್ನು ಸಮಾಜದಲ್ಲಿ ಪ್ರಯೋಗಿಸುತ್ತಾ ಹೋದಂತೆ ಪ್ರತಿಭಟನೆ, ಪ್ರತಿರೋಧ ಎದುರಾದವು. ಆ ಪ್ರತಿಭಟನೆ ಪ್ರತಿರೋಧಗಳು ನನ್ನಲ್ಲಿ ಒಂದು ಗಟ್ಟಿ ವ್ಯಕ್ತಿತ್ವವನ್ನು ನಿರ್ಮಾಣ ಮಾಡಲು ಕಾರಣವಾಗಿವೆ.