Tuesday, October 1, 2024

ಕವನ

ಬದುಕಿನ ಹಾದಿಗೆ ಬೆಳಕನ್ನು ನೀಡಿದೆ
ಹರೆಯದ ಮನಸ್ಸಿಗೆ ಪ್ರೀತಿಯ ನೀಡಿದೆ
ಒಲವಿನ ಗೆಳತಿ ನಿನಗೆ ಏನು ನೀಡಲಿ ಕಾಣಿಕೆ
ಏಕಾಂಗಿತನಕೆ ಸಂಗಾತಿ ನೀನಾಗಿ ಬಂದೆ
ಹೋರಾಟದ ಈ ಪಯಣದಲ್ಲಿ ಜೊತೆಯಾದೆ
ಸಹಜೀವನಕೆ ಪಯಣಿಗಳಾಗು ಅದೇ ಕೋರಿಕೆ

ನನ್ನವರೆಂಬುವರೆಲ್ಲ ತೊರೆದು ಹೋದರು
ನನ್ನದೆಂಬುದನ್ನೆಲ್ಲ ಕಳೆದುಕೊಂಡೆ ಆದರೂ
ನೀ ಸಿಕ್ಕ ಈ ಘಳಿಗೆ ಇನ್ನು ಬರೆದಾಗದು ಬಾಳಜೋಳಿಗೆ
ಆಸೆಗಳ ಚಕ್ರವ್ಯೂಹದೊಳಗೆ ಸಿಲುಕಿ
ನೋವುಗಳ ನೆರಳಲ್ಲಿಯೇ ನಿತ್ಯ ಬದುಕಿ
ನೆಮ್ಮದಿಯ ಅರಸುವಾಗ ನೀ ಬಂದೆ ಬಳಿಗೆ

ಈಗಿಲ್ಲ ಇನ್ನಾವ ಬೇಡಿಕೆ ನನ್ನೊಳಗೆ
ನೀನಿರುವ ಪ್ರತಿಕ್ಷಣವೇ ಹೋಳಿಗೆ
ಬದುಕೆಲ್ಲ ಇನ್ನು ಹಾಯಾದ ಸಂಜೆ ನನಗೆ
ಅಕ್ಕರೆ ತುಂಬಿದ ಮಡಿಲು ಈ ನಿನ್ನದು
ಸವಿಜೇನಿನ ಅಕ್ಷಯ ಪಾತ್ರೆ ಸಿಕ್ಕಿದೆ ಇನ್ನು
ಕಹಿಯನೆಲ್ಲ ಮರೆತು ಬಾಳುವೆ ಇನ್ನು ನಿನ್ನೊಂದಿಗೆ

೦೨೦೫ ಪಿಎಂ ೦೧೦೯೨೦೨೪The 

No comments:

Post a Comment