Friday, September 3, 2021

ಕವನ

ಕನಸುಗಳ ಗೂಡೊಳಗೆ
ಮನದ ಭಾವನೆಗಳಿಗೆ
ತುಸು ಜಾಗವಿದೆ
ಮಿಡಿಯುತಿವೆ ಮಿಸುಕಾಡಿಸದಿರಿ

ನೊಂದ ಭಾವಗಳು ಬೇಯುತ್ತಿವೆ
ಅಂತ್ಯ ಕಾಣದೆ ಸೊರಗಿವೆ
ಮನದ ಭಿತ್ತಿಯ ಮೇಲೆ
ಚಂದದ ಚಿತ್ತಾರ ಬರೆಯಲು ವಿಫಲವಾಗಿವೆ

ನೀನಾಡುವ ಪ್ರತಿ ಮಾತು
ಚೈತನ್ಯ ತುಂಬುವುದು ನನ್ನೊಳಗೆ
ಅಂತರಂಗದ ವಾಸಿ ನೀನು
ಜಗವ ನೋಡುವೆ ನಿನ್ನ ಕಣ್ಣೊಳಗೆ

ಅನುಬಂಧ ಬೆಸೆದ ಈ ನಮ್ಮ ಮಿಲನಕೆ
ಒಲವೊಂದೆ ನಾ ಕೊಡಬಲ್ಲ ಕಾಣಿಕೆ
ಸಂಗಾತಿ ನಿನ್ನ ಈ ಸಂಪ್ರೀತಿಗಾಗಿ
ಜನ್ಮಪೂರ ಮುಡಿಪಿಡುವೆ ನಿನ್ನ ಸೇವೆಗಾಗಿ

ನಿನ್ನೊಳಗೆ ನಾನು ನನ್ನೊಳಗೇ ನೀನು
ಅರ್ಧನಾರೀಶ್ವರ ತತ್ತ್ವ ಅಲ್ಲವೇನು
ಸೋಲು ಗೆಲುವಿನ ಜೀವನವ
ಸುಖಿಸೋಣ ಬಾ ನನ್ನ ಬಾಳ ಸಂಗಾತಿ

೦೧೧೬ಪಿಎಂ೦೨೦೫೨೦೨೧


No comments:

Post a Comment