ಬೆಳದಿಂಗಳ ರಾತ್ರಿಯಲ್ಲಿ
ಕೊರೆವ ಮಾಗಿ ಚಳಿಯಲ್ಲಿ
ಸಂಗಾತಿ ನೀನಿರಲು ಜೊತೆಯಲ್ಲಿ
ಸ್ವರ್ಗಕ್ಕೂ ಕಿಚ್ಚು ಹಚ್ಚುವೆ
ತಂಗಾಳಿಯ ತೇರಲ್ಲಿ
ಹೂಗಂಪಿನ ನಡುವಲ್ಲಿ
ಸೌಂದರ್ಯದ ಸಾಕ್ಷಾತ್ಕಾರದಲ್ಲಿ
ಪ್ರೀತಿಯ ಆರಾಧನೆಗೈಯುವೆ
ವೈಯಾರದ ಲತೆಯಲ್ಲಿ
ಹೊಳೆವ ಇಬ್ಬನಿಯಲ್ಲಿ
ಮೂಡಿದ ಪ್ರತಿಬಿಂಬದಲ್ಲಿ
ನಮ್ಮಿಬ್ಬರ ಚಿತ್ತಾರ ಬಿಡಿಸುವೆ
ಮುಂಜಾನೆಯ ಹೂಬಿಸಿಲಲ್ಲಿ
ಮುಸ್ಸಂಜೆಯ ಹೊಂಬಣ್ಣದಲಿ
ಇರುಳಾವರಿಸುವ ವೇಳೆಯಲ್ಲಿ
ಚುಕ್ಕಿ ಚಂದ್ರಮರಂತೆ ನಾವಲ್ಲವೇ
ಋತುಗಳ ಸಂತೆಯಲ್ಲಿ
ಭಾವದ ಭಾಷೆಯಲ್ಲಿ
ಬದುಕಿನ ಯಾನದಲ್ಲಿ
ನಿನ್ನೊಂದಿಗೆ ನಾ ಸದಾ ಇರುವೆ
ಒಲವು ತಂದ ಈ ಬಂಧನ
ಒಲಿದಂತೆ ಹಾಡುವ ಕವನ
ನಿಮ್ಮಿಬ್ಬರ ಈ ಮಿಲನ
ಪ್ರತಿ ಹೃದಯಕೂ ಸಂಚಲನ
೦೨೨೭ಎಎಂ೦೪೧೨೨೦೨೨
*ಅಮುಭಾವಜೀವಿ ಮುಸ್ಟೂರು*
No comments:
Post a Comment