Thursday, December 29, 2022

ಕವಿತೆ

ನನ್ನದು ಬಡತನ
ನಿನ್ನದು ಹಗೆತನ
ನಿನ್ನಲಿದೆ ಹುಂಬತನ
ನನ್ನದು ಅದಕ್ಕೂ ಮೀರಿದ ಗೆಳೆತನ

ಹಣವೊಂದೇ ಮಾನದಂಡವೇ
ಗುಣವೆಂದೂ ಗೌಣವಲ್ಲವೆ
ಕಾಂಚಾಣದ ಮಾತಿಗೆ ಓಗೊಟ್ಟು
ಸಂಬಂಧಕೆ ನೀಡಿದೆ ಕೊಡಲಿಪೆಟ್ಟು

ಕಿವಿ ಚುಚ್ಚುವ ಮಾತಿಗೆ ಬೆಲೆ
ಸದ್ಗುಣಕಿಲ್ಲ ಇಲ್ಲಿ ನೆಲೆ
ದೂರುವವರಿಗೆ ದಾರಿ ಬಿಟ್ಟು
ದೂರವಿರು ನೀ ದಯವಿಟ್ಟು

ದಿಕ್ಕು ಬದಲಿಸುವವರೆದುರು
ಸೊಕ್ಕಿನಿಂದಲೇ ನಡೆಯಬೇಕು
ರೊಕ್ಕದ ಅಮಲಿರುವವರ 
ಪಕ್ಕಕ್ಕೂ ನೀ ಸುಳಿಯದಿರು

ಬಿಟ್ಟು ಹೋಗುವವರ ಚಿಂತೆ ಬಿಟ್ಟು
ನಿನ್ನ ನಂಬಿ ಬಂದವರ ಪ್ರೀತಿಸು
ಸುಖದಲ್ಲಿ ಮೆರೆಯುವವರ ಬಿಟ್ಟು
ಕಷ್ಟಕ್ಕಾದವರ ನೀ ಆಶ್ರಯಿಸು

೦೩೦೭ಎಎಂ೩೦೧೨೨೦೨೨
*ಅಮುಭಾವಜೀವಿ ಮುಸ್ಟೂರು*

No comments:

Post a Comment