Thursday, December 8, 2022

ಕವನ

*ಹೆಣ್ಣೆಂಬುದೊಂದು ಶಕ್ತಿ*

ಹೆಣ್ಣೆಂಬ ಜನ್ಮ ನಂದು
ಸಹನೆಯಲ್ಲಿ ನಾನೇ ಮುಂದು 

ತಾಯ ಗರ್ಭದಿಂದಲೇ
ನನಗೆ ಸಂಕಷ್ಟ ಶುರು
ಈ ಕ್ರೂರ ಜಗದ ಮುಂದೆ
ಹೋರಾಡಬೇಕು ನಾನಾಗಲು ಪಾರು

ಬದುಕಿನಲ್ಲಿ ಎಷ್ಟೊಂದು ಪಾತ್ರ
ನಿಭಾಯಿಸುವೆ ಅದೇ ನನ್ನ ಸೂತ್ರ
ಹೆಣ್ಣನ್ನು ದೇವರೆನ್ನುವವರ ಜೊತೆ
ಕಿರಾತಕರ ಕ್ರೌರ್ಯಕ್ಕೆ ಬಲಿಯಾಗುವ ವ್ಯಥೆ

ಹೊನ್ನು ಮಣ್ಣಿನ ಜೊತೆಗೆ 
ಹೆಣ್ಣಿಗೂ ಒಂದು ಸ್ಥಾನವಿದೆ
ಮಣ್ಣಿನಂತೆ ಹೆಣ್ಣಿನ ಮೇಲು
ನಿತ್ಯ ಅತ್ಯಾಚಾರದ ಕ್ರೌರ್ಯ ನಡೆದಿದೆ

ತ್ಯಾಗಕ್ಕೆ ಮತ್ತೊಂದು ಹೆಸರು ನಾನು
ಪ್ರೇಮದ ಆ ಮೇರುವೇ ನಾನು
ಮಮತೆ ನನ್ನ ಮಂತ್ರ
ಕರುಣೆಗೆ ಹೆಸರು ನನ್ನ ಕರುಳು ಮಾತ್ರ

ನಿತ್ಯ ದುಡಿವೆ ಹರಿಸಿ ಬೆವರು
ಅದಕ್ಕೆ ನನಗೆ ಸಿಕ್ಕಿದ್ದು ಕಣ್ಣೀರು
ನನ್ನ ಶೀಲದ ಮೇಲೆಯೇ ಎಲ್ಲರ ಕಣ್ಣು
ಅದರಿಂದ ನನ್ನ ಬದುಕಾಗಿದೆ ಹುಣ್ಣು

ವರದಕ್ಷಿಣೆಗೆ ಬಲಿ ನಾನು
ಬದುಕಿನುದ್ದಕ್ಕೂ ಅಡಿಯಾಳಾಗಿಹೆನು
ಆದರೂ ಛಲಬಿಡದೆ ಸಾಧಿಸುತಿಹೆನು
ಹೆಣ್ಣೆಂಬುದು ಒಂದು ಶಕ್ತಿ ತೋರಿಹೆನು

08032014

*ಅಮು ಭಾವಜೀವಿ*

ಶೋಭ ಎನ್ ಹೆಗಡೆ ಅವರ ಪ್ರತಿಕ್ರಿಯೆ 
ಅದ್ಭುತವಾಗಿ ಹೆಣ್ಣಿನ ಬದುಕಿನಾಳದ ನೋವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವಿರಿ ..ಅಮೋಘವಾಗಿದೆ .

ಮಾವಿನಕುಳಿ ಶ್ರೀನಿವಾಸ ಅವರ ಪ್ರತಿಕ್ರಿಯೆ 

ಹೆಣ್ಣು ಅದ್ಭುತ ಶಕ್ತಿ ಕುರಿತು ಮಲಗಿದ್ದವರನ್ನೂ ಬಡಿದೆಬ್ಬಿಸುವ ಕವಿತೆಯ ಸಾಲುಗಳ ಸೊಗಸು ಅರ್ಥಪೂರ್ಣ, ಮನನೀಯ...!

No comments:

Post a Comment