Friday, December 9, 2022

ಕವನ

#ಅಮುಭಾವರಸಾಯನ ೫೧

ಯಾರು ನಿನ್ನವರು ಇಲ್ಲಿ
ಜೊತೆಗಿದ್ದು ನಗು ತರಿಸುವವರೋ
ಅಳುವಾಗ ಕಣ್ಣೀರ ಬರಿಸುವವರೋ
ದಣಿದ ಜೀವಕ್ಕೆ ನೆರಳಾಗಿ ನಿಲ್ಲುವವರೋ

ಸಂಬಂಧಗಳ ಸಂಕೋಲೆಯೊಳಗೆ
ಸಹಿಸಲಾಗದ ಕಿಚ್ಚು ಹಚ್ಚುವವರಿಗೆ
ಬೆನ್ನೆಲುಬಾಗಿ ನಿಂತು ಬಂಧಗಳ
ಕಳಚುವವರೇ ಹೆಚ್ಚು ನಿಮ್ಮ ಸುತ್ತಮುತ್ತ

ನಂಬಿಕೆಗೆ ಕೊಡಲಿಯ ಬಿಸಿ
ಅಪನಂಬಿಕೆಯೇ ಸತ್ಯವೆಂದು ನಂಬಿಸಿ
ಅವಹೇಳನ ಮಾಡಿ ಅಳಿಸುವವರು
ನಿನ್ನ ಬಂಧುಗಳು ಹೇಗಾಗುವರು ?

ಯಾರನ್ನು ನಂಬಿ ಬಂದಿಲ್ಲ ಇಲ್ಲಿ
ಯಾರಿಗಾಗಿ ಬದುಕಬೇಕಾಗಿಲ್ಲ ಬಾಳಲ್ಲಿ
ನೀ ನಂಬಿರುವ ಹಾದಿಯಲ್ಲಿ ನಡೆದುಬಿಡು ಸಾಕು
ಹುಂಬ ಜನರ ನಂಬಿಸುವ ಅಗತ್ಯವಿಲ್ಲ ಇಲ್ಲಿ

ಯಾರು ಇಲ್ಲದಿದ್ದರೂ ಬದುಕಬಹುದು
ಭರವಸೆ ಇಲ್ಲದಿದ್ದರೆ ಬದುಕುವೆ ಹೇಗೆ
ಸೋಲಿಸಿ ಬೀಳಿಸಿದವರ ಎದುರಲ್ಲಿಯೇ
ಎದ್ದು ನಿಂತು ಗೆದ್ದು ತೋರಿಸು ಸಾಕು

೦೫೨೪ಎಎಂ೧೦೧೨೨೦೨೨
*ಅಮುಭಾವಜೀವಿ ಮುಸ್ಟೂರು*
 

No comments:

Post a Comment