#ಮರೆತೇ #ಬಿಡುವರು
ಬಡವ ನಿನ್ನ ಹೆಸರ ಹೇಳಿಕೊಂಡು
ಅವರೆಲ್ಲ ತಮ್ಮ
ಬಡತನವ ನೀಗಿಸಿಕೊಂಡು
ನಿನ್ನನ್ನು ಮರೆತೇಬಿಟ್ಟರು
ಅಧಿಕಾರದ ಮದವೇರಿಸಿಕೊಂಡು
ಮತ್ತೊಮ್ಮೆ ನಿನ್ನ ನೆನಪಾಗುವುದು
ಚುನಾವಣೆಯ ಹಿಂದೆ ಮುಂದೆ
ಅಲ್ಲಿಯವರೆಗೂ ನಿನ್ನ ಕೂಳು
ನೀನೇ ದುಡಿದು ತಿನ್ನಬೇಕು
ಬಿಸಿಲಾದರೇನು ಮಳೆ ಚಳಿಗಳ ಹಂಗು ತೊರೆದು
ಮತ್ತೆ ನಿನ್ನೆದುರು ಬಂದು ಕೈಮುಗಿಯುವರು
ಕಾಲಿಗೆ ಬಿದ್ದು ನಮಸ್ಕರಿಸುವರು
ನೀ ಕೊಡುವ ಮತ ಬಿಕ್ಷೆ ಪಡೆದು ಮತ್ತೆ
ಸುಲಿಗೆಗೆ ನಿಲ್ಲುವರು ನಿನ್ನದೇ ಹೆಸರೇಳಿಕೊಂಡು
ರಾಜಕೀಯದ ದೊಂಬರಾಟದಲ್ಲಿ
ಬಡವ ಬಡತನವೆಂಬ ದಾಳಗಳು
ಉರುಳುತ್ತ ಉರುಳಿಸುತ್ತಾ ಕಾಯಿ ನಡೆದರೇನೇ
ಅವರ ಕಮಾಯಿ ಹೆಚ್ಚುವುದು ಖಜಾನೆ ಖಾಲಿಯಾಗುವುದು
ಇಲ್ಲಿ ನಿಜ ಬಡವರಿಗಿಂತ
ಬಡತನದ ಸೋಗಿನಲ್ಲಿರುವವರಿಗೆ
ಎಲ್ಲವೂ ಸಿಕ್ಕುವುದು ದಕ್ಕುವುದು
ಪ್ರಾಮಾಣಿಕರು ಇಲ್ಲಿ ಯಾರಿಲ್ಲ
ಅಮಾಯಕರ ಯಾಮಾರಿಸುವವರೇ ಎಲ್ಲ
೧೦೩೬ಪಿಎಂ೦೭೦೬೨೦೨೪
#ಅಪ್ಪಾಜಿ #ಅಮು #ಮುಸ್ಟೂರು
No comments:
Post a Comment