ಎಡವಿ ಬಿದ್ದಿದೆ ಬದುಕು
ಕೈ ಹಿಡಿದು ಎತ್ತಲು ಯಾರಿಲ್ಲ
ಬಿದ್ದ ರಭಸಕ್ಕೆ ತುಂಬಾ ನೋವು
ಸಂತೈಸಲು ಯಾರಿಲ್ಲ ಅದು ಇನ್ನೂ ನೋವು
ನೋಡುತ್ತಾ ಓಡುವವರು ನಗುವಾಗ
ಅವಮಾನದಿಂದ ತಲೆ ತಗ್ಗಿಸುವುದೋ
ಸಾಂತ್ವನ ಹೇಳದ ಮೇಲೆ ನಗುವ
ಕುಹಕದ ಇರಿತ ಅತಿ ಘೋರ ಯಾತನೆ
ನಡೆಯುವವನು ಎಡುವುದು ಸಹಜ
ಬಿದ್ದದ್ದೇ ತಪ್ಪೆನ್ನುವ ಮನುಜ
ಸೋಲನ್ನು ಸಂಭ್ರಮಿಸುವರು
ಮನದ ವೇದನೆಗೆ ಮುಲಾಮು ಹಚ್ಚರು
ಬಿದ್ದವನಿಗೆ ಗೊತ್ತು ಎದ್ದು ನಿಲ್ಲುವ ತಾಕತ್ತು
ಯಾರು ಇಲ್ಲ ಎಂಬ ಸತ್ಯ ಅರಿವಾದಾಗ
ಕ್ಷಣ ನಿಮಿಷ ನಂತರ ಎದ್ದೇಳಲೇ ಬೇಕು
ಬಿದ್ದ ಜಾಗದಲ್ಲಿ ಇದ್ದುಬಿಡಲಾಗದಲ್ಲ
ಮಾನವೀಯತೆ ಮರೆತವರೆದುರು
ಮೌನವಾಗಿ ಯುದ್ಧ ಮಾಡಿ ಗೆಲ್ಲಬೇಕು
ಅವಮಾನಕಿಂತ ನೋವೆಲ್ಲಾ ಲೆಕ್ಕವಲ್ಲ
ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು
1234ಪಿಎಂ16052024
*ಅಮು ಭಾವಜೀವಿ ಮುಸ್ಟೂರು*
ತುಮಕೂರು
ಒಣಗಿ ನಿಂತ ಮರದಲಿ
ಗೂಡು ಹೇಗೆ ಕಟ್ಟಲಿ
ನೆರಳಿಲ್ಲದೆ ನರಳುತಿರುವೆ
ಬಿಸಿಲ ಬೇಗೆ ತಂದವರಾರೋ ?
ಹಿಂದೆ ಎಷ್ಟು ಹಸಿರಿತ್ತು
ಬುವಿಯಲ್ಲಿ ಕಾನನವೇ ತುಂಬಿತ್ತು
ನೆನೆದಾಗಲೆಲ್ಲ ಮಳೆ ಬರುತ್ತಿತ್ತು
ಈಗ ಬರೀ ಬಿಸಿಲೊಂದು ಉಳಿಯಿತು
ದಾರಿಹೋಕರು ದಣಿದು ಕುಳಿತು
ಎಲ್ಲೆಲ್ಲೂ ಹಚ್ಚ ಹಸಿರಿನ ಉಡುಗೆ ತೊಟ್ಟು
ಸಂಭ್ರಮಿಸುತಿಹಳು ಪ್ರಕೃತಿ ದೇವತೆ
ಮುಂಗಾರಿನಭಿಷೇಕಕ್ಕೆ ಪುಳಕಗೊಂಡು
ನಲಿಯುತಿಹಳು ಧರಣಿ ಮಾತೆ
ಬೇಸಿಗೆಯ ಉರಿತಾಪಕ್ಕೆ ನಲುಗಿ
ದಣಿದು ಕೂತಿದ್ದು ನಿಸರ್ಗದ ಮಡಿಲು
*ಹಾಯ್ಕು*
ಬಿಸಿಲು ಈಗ
ತಣ್ಣಗಾಯ್ತು; ಖುಷಿಯೋ
ಭೂಮಿ ಬದುಕು
ಮೊದಲ ಮಳೆ
ತಣಿಸಿತು;ಧರೆಯು
ಸಮೃದ್ಧ ತಾಣ
ಸುಮವರಳಿ
ದುಂಬಿ ದಂಡು; ಭ್ರಮಿಸಿ
ಜೇನು ಹೀರಿತು
ಬಿರಿದ ನೆಲ
ಮೈದುಂಬಿ; ಹಸಿರುಟ್ಟ
ದಿನ ಹಬ್ಬವು
ಬಿಸಿಲ ಭಯ
ಇನ್ನಿಲ್ಲ; ಭೂತಾಯಿಗೆ
ಮಳೆಯೊಸಗೆ
ಖಗಮೃಗಕೆ
ಬಾಯಾರಿಕೆ ಇನ್ನಿಲ್ಲ
ಸಂತೃಪ್ತ ಭಾವ
೧೨೨೭ಪಿಎಂ೧೯೦೫೨೦೨೪
*ಅಮು ಭಾವಜೀವಿ ಮುಸ್ಟೂರು*
No comments:
Post a Comment