*ಕವಿ ಕಳೆದು ಹೋಗಲು*
ಕಲ್ಪನೆಯ ಅಮಲೇರಿದಾಗ
ಭಾವದ ನಶೆಯಲ್ಲಿ ತೇಲಿ
ಕವಿ ಕಳೆದು ಹೋಗಲು
ಕವಿತೆಗಾಯ್ತು ಜನನ
ತಾ ಕಂಡ ಅನುಭವವ
ತನ್ನದೇ ಧಾಟಿಯಲಿ ಮಿಡಿವ
ಅತಿವೃಷ್ಟಿ ಅನಾವೃಷ್ಟಿ ಎಲ್ಲಕೂ
ಕವಿತೆ ಕಟ್ಟುವ ಸಮರ್ಥನೀತ
ಅವಳೊಲವಿನ ನಶೆಯೇರಲು
ಸೌಂದರ್ಯವೂ ನಾಚುವಂತೆ
ಪದಲಾಲಿತ್ಯದಿ ಸಿಂಗರಿಸುವ
ನಿಪುಣ ರಸಿಕ ಮಹಾಶಯನೀತ
ಕುಂಚದ ಚಿತ್ರಗಳಿಗೂ
ಶಿಲ್ಪದ ಭಾವಗಳಿಗೂ
ವರ್ಣನೆಯ ಮತ್ತಷ್ಟು
ಬಣ್ಣ ಬಳಿವ ಚಿತ್ರಕಾರನೀತ
ಎಲ್ಲ ನೋವುಗಳಿಗೆ ದನಿಯಾಗಿ
ಈ ಸೃಷ್ಟಿ ಸಂಭ್ರಮದ ಪ್ರತಿಧ್ವನಿಯಾಗಿ
ಎಲ್ಲ ತಲ್ಲಣಗಳ ತಳಮಳ ನಡುವೆಯೂ
ಭಾವದಿಬ್ಬಣ ಹೊರಟ ದಾರ್ಶನಿಕನೀತ
ಆಸ್ವಾದಿಸುವ ಮನಗಳೆದೆಯಲಿ
ಭಾವನಶೆಯೇರಿಸುವ ಪ್ರಚೋದಕನೀತ
ಅದಕೆ ಕಾವ್ಯಮಯ ಜಗವೆಲ್ಲ
ಕವಿಭಾವಕೆ ಕೊನೆಯಿಲ್ಲ
0857ಎಎಂ15062018
*ಅಮು ಭಾವಜೀವಿ*
ಚಿತ್ರದುರ್ಗ
ಉಮ ಒಡೆಯರ್ ಅವರ ಪ್ರತಿಕ್ರಿಯೆ
ವ್ಹಾ ಅದ್ಭುತವಾದ ರಚನೆ 👌👌👌👌👌💐💐💐💐
ವಿಶ್ವನಾಥ ಅವರ ಪ್ರತಿಕ್ರಿಯೆ
ಕವಿಯ ಸುಂದರವಾದಂತಹ ಬಾವನೆಗಳೆ ಕವಿತೆಗಳು
ಪ್ರೇಮಾರ್ಜುನ ಐರಣಿ ಅವರ ಪ್ರತಿಕ್ರಿಯೆ
ನಮಸ್ತೇ ಭಾವಜೀವಿ ಸರ್
ಕವಿಯ ಕಲ್ಪನೆಯನ್ನು ಸುಂದರವಾಗಿ ಚಿತ್ರಣ ಮಾಡಿದ್ದಿರಿ 👌👌👌
ಕವಿಗೆ ಕವಿತೆ ಬರೆಯುವ ಅಮಲು ಬಂದಾಗ ಮಾತ್ರ ರಸ ಭರಿತವಾದ ಕವಿತೆಗಳು ಹೊರ ಬರಲು ಸಾದ್ಯ
ಆವಗಲೆ ಕವಿತೆಗಳ ಜನನ👌👌👌
ಕವಿ ಪಟ್ಟ ಅನುಭವಗಳನ್ನು ಬರವಣಿಗೆ ಮೂಲಕ
ತಂದರೆ ಮುಂದಿನ ಪೀಳಿಗೆಗೆ ಸಹಕಾರಿ ಅಲ್ವಾ ಸರ್
ಕವಿಯಾದವರು ಹೇಗೆ ಬರೆಯಬೇಕು ಎಂಬುದನ್ನು ಸುಂದರವಾಗಿ ತಿಳಿಸಿಕೊಟ್ಟಿದ್ದಿರಿ ಸರ್ ಧನ್ಯವಾದಗಳು
🌹 *ಪ್ರೇಮಾರ್ಜುನ* 🌹
ಶೇಖ್ ಸರ್ ಅವರ ಪ್ರತಿಕ್ರಿಯೆ
ಕವಿಯನ್ನು ಕವಿಯಾಗಿ ಕವಿಗಳಿಗೆ ಕಾವ್ಯ ರೂಪದಲ್ಲಿ ರೂಪಿಸಿ ತೋರಿಸಿದ್ದೀರಿ,
ಧನ್ಯವಾದಗಳು ಅಮುಭಾವಜೀವಿಯವರೆ...👌👌💐💐👍👍
ಗಿರೀಶ್ ಸಿ ಅವರ ಪ್ರತಿಕ್ರಿಯೆ
ಅಮು ಅವರ ಕಲ್ಪನೆಗೆ ಅವರೇ ಸಾಟಿ.. ಅದೂ ನಶೆಯಂತ ವಿಷಯ ಸಿಕ್ಕರೆ...😇😇.
ಕವನ ಸೂಪರ್ರಾಗಿದೆ. 👏👏👏
ಶಶಿರೇಖ ಮೇಡಂ ಅವರ ಪ್ರತಿಕ್ರಿಯೆ
ಕವಿತೆಯ ಅಮಲಲಿ ತೇಲಿ ಭಾವದ ನಶೆಯಲಿ ಮಿಂದು ಕವಿತೆಗೆ ಜನುಮ ನೀಡಿದ ಭಾವ ಸೂಪರ್ ಅಮು ಸರ್ ನಿಮ್ ಬರಹಗಳು ನಂಗ್ ತುಂಬಾ ಇಷ್ಟ ಆಗ್ತವೆ ಸರ್👌👌
ಚಂದ್ರು ನಿಟ್ಟೂರು ಅವರ ಪ್ರತಿಕ್ರಿಯೆ
*ನಶೆಯ ವಿಷಯಕ್ಕೆ ಅಮುಭಾವ ಜೀವಿ...ಹೀಗೆ ಬರೆಯುವರಲ್ಲ..ಇನ್ನೂ ನಶೆಯೇ ಏರಿದರೆ ಮತ್ತೇಗೆ ಬರೆಯಬಲ್ಲರು.....ಲೀಲಜಾಲ ಬರಹ..ಅಭಿನಂದನೆಗಳು*
ದೇವಿದಾಸ್ ಅವರ ಪ್ರತಿಕ್ರಿಯೆ
*ಅಮು ಸರ್* ಕವಿ ಕಳೆದು ಹೋಗಲು..ಕಲ್ಪನೆಯ ಅಮಲು ಎನ್ನುತ್ತ...ಕವಿಭಾವಕ್ಕೆ ಕೊನೆಯಿಲ್ಲ..ಎಂಬ ಸಾರವಿರುವ ಕವನ ಉತ್ತಮ ಸಾಲುಗಳನ್ನು ಹೊಂದಿದೆ.
🙏
ಶರಶ್ಚಂದ್ರ ಕುಪ್ಪಿಗುಡ್ಡರ ಅವರ ಪ್ರತಿಕ್ರಿಯೆ
ಕವಿಯ ಕಲ್ಪನೆಯು ಅದಮ್ಯವಿರುವ ಕುರಿತು ಚಿತ್ರಣ ಮೂಡಿಸಿದ್ದು,ಅತ್ಯಂತ ಕಾಳಜೀಯ ಕವಿತೆ.