ಗಜಲ್
ಒಡಲ ವೇದನೆ ಕಡಲಾಗಿದೆ ನನ್ನೊಳಗೆ
ಮುಂಗಾರು ಸುರಿದರೂ ಬರವಿದೆ ನನ್ನೊಳಗೆ
ಎಲ್ಲ ಹಸಿರಾಗಿ ನಲಿಯುತಿರುವಾಗ
ಹಸಿವು ನೀಗದಾಗಿದೆ ನನ್ನೊಳಗೆ
ಒಂಟಿ ಹಕ್ಕಿ ಕೂಗುವ ಹಾಡು
ನೋವನ್ನು ಹೆಕ್ಕಿ ಹೆಕ್ಕಿ ತೆಗೆದಿದೆ ನನ್ನೊಳಗೆ
ಉಕ್ಕಿ ಹರಿಯುವ ನೀರಿನ ಪ್ರವಾಹಕೆ
ಉತ್ಸಾಹವೇ ಕೊಚ್ಚಿ ಹೋಗಿದೆ ನನ್ನೊಳಗೆ
ಅಮುವಿನ ಆತ್ಮವಿಶ್ವಾಸವನೇ
ಕಳೆದು ಶ್ವಾಸವಿರದಂತಾಗಿದೆ ನನ್ನೊಳಗೆ
1238ಪಿಎಂ12062018
*ಅಮು ಭಾವಜೀವಿ*
No comments:
Post a Comment