*ಹೇಗೆ ಸಾಗಲಿ ಮುಂದೆ*
ಇಂದೇಕೋ ಮನ ನೊಂದಿದೆ
ಬದುಕನ್ನೇ ಕಷ್ಟ ಎಂದಿದೆ
ಏಕೋ ಎಂದಿನ ಲವಲವಿಕೆ
ಇಂದು ಈ ಮನಕಿಲ್ಲ
ಸೋಲಿನ ಭೀತಿಯಲ್ಲಿಯೇ
ದಿನ ಪ್ರಾರಂಭವಾಯ್ತಲ್ಲ
ಹಂಗಿಸುವ ಮಾತುಗಳು
ಮತ್ತೆ ಮತ್ತೆ ಚುಚ್ಚುತಿವೆ
ಕಂಡ ಕನಸುಗಳ್ಯಾವವೂ
ನನಸಾಗದೇ ಸೊರಗಿವೆ
ಒತ್ತಡದ ಬದುಕಿನಲ್ಲಿ
ಸಡಗರವದು ಏಕಿಲ್ಲ
ಸಂಗಡಿಗರ ಪಿತೂರಿಗೆ
ಎದೆಬಡಿತವೇ ನಿಲ್ಲುವಂತಾಯ್ತಲ್ಲ
ಕರ್ತವ್ಯ ಜವಾಬ್ದಾರಿಗಳ
ಜಂಜಾಟದಲ್ಲಿ ನಗುವೇ ಮರೆತೋಯ್ತು
ನಡೆವ ಹಾದಿಯ ಏಳುಬೀಳು
ಜೀವನೋತ್ಸಾಹವನೇ ನುಂಗಿತು
ಹೇಗೆ ಸಾಗಲಿ ಮುಂದೆ ನಾನು
ಯಾರ ಬೆಂಬಲವಿಲ್ಲದೆ ಇನ್ನು
ಸೋಲುಗಳನೇ ಸವಾಲಾಗಿಸಿಕೊಳ್ಳಲೇ
ಸೋಲಿಗೆ ಬದುಕ ಸಮಾಪ್ತಿಗೊಳಿಸಲೇ
0842ಎಎಂ13062018
*ಅಮು ಭಾವಜೀವಿ*
ಚಿತ್ರದುರ್ಗ
[6/13, 5:04 PM] +91 97408 27761: Haag madbedi sir, mumnuggi, mumde jayavide...👌👌👌👍🏻
[6/13, 5:06 PM] +91 79758 35266: ಸೋಲು ಗೆಲುವಿನ ಸೋಪಾನ ವಾಗಬೇಕೆ ವಿನಹ ಸೋಲಿಗೆ ಶರಣಾಗಿ ಬದುಕು ಬಲಿಯಾಗಬಾರದು..
[6/13, 6:16 PM] +91 79758 35266: ಪ್ರತಿ ಒಬ್ಬರಿಗು ಇರುತ್ತೆ ಸರ್ ಅದ್ನ ಹೆದರ್ಸ್ಬೇಕು.
[6/13, 6:17 PM] +91 79758 35266: ಸತ್ತರೆ ಎಲ್ಲ ಪರಿಹಾರ ಸಿಗುತ್ತಾ. ಹೇಡಿ ಅಂತಾರೆ.. ಸೋ ಬಂದದ್ದೆಲ್ಲ ಬರಲಿ ಭಗವಂತನ ದಯೆ ಒಂದಿರಲಿ ಅಂತ ಮುನ್ನಡೆಯಿರಿ
[6/13, 6:31 PM] +91 79758 35266: ಧನ್ಯವಾದಗಳು ಸರ್ ನಿಮ್ಮ ನಿರ್ಧಾರ ಬದಲಾಯಿಸಿ ಮತ್ತು ಭಾವನಾತಿತ ವಾಗಿ ಯೋಚಿಸಿ ನಿಮ್ಮನಂಬಿ ಇರೋ ಜೀವಗಳ ಬಗ್ಗೆ ಯೋಚನೆ ಮಾಡಿ.. ಮತ್ತು ದೃಢ ಸಂಕಲ್ಪ ಮಾಡಿ ಯಾವ ಕಷ್ಟ ಬಂದ್ರು ಕುಗ್ಗಲ್ಲ ಎನ್ ಬಂದ್ರು ಹೆದರಿಸ್ತೀನಿ ಮತ್ತು ಕಷ್ಟ ಗಳೇ ನನ್ನ ನೋಡಿ ದೂರ ಹೋಗುತ್ತೆ
[6/13, 6:34 PM] ಭುವನ ಬೈಲಹೊಂಗಲ: ಅಣ್ಣ ಏನಾಯ್ತು?
[6/13, 6:35 PM] +91 90367 44678: ನಿಂದಕರಿರ ಬೇಕಯ್ಯ ನಿಂದಕರು ಹಂದಿಯಾಗೆ ಅಂತ ಹೇಳಿಲ್ವ ಸಾರ್, ನೀವು ನಗುನ ಬೇರೆ ಅವರ ಬಳಿ ಕೆಳೋಕಿಂತ, ನಿಮ್ಮಲ್ಲಿ ನಿಮ್ಮನೆಯವರಲ್ಲಿ ಹುಡುಕಿ. ಕಣ್ಣೀರು ಕಾಣದ ಕಣ್ಣಿಇದೆಯೇ, ನೆರಳು ನೀಡದ ಮರವಿದೆಯೇ
[6/13, 6:36 PM] +91 90367 44678: Sir aagle Namma usiraatada pakvate namage gottagodu, samsyena solve maadokade hodaaga aduke oarihaara naavu samasye baggene yochane maadtidre adu innu doddadaagutte gaayada tara
[6/13, 6:39 PM] +91 90367 44678: ಕುಲುಮೆಯಲ್ಲಿ ಬೆಂದಾಗಲೇ ಚಿನ್ನಕ್ಕೆ, ಕಬ್ಬಿಣಕ್ಕೆ ರೂಪ, ನೂರಾರು ಪೆಟ್ಟು ಬಿದ್ದರೇನೇ ಕಲ್ಲು ಕೂಡ ದೇವ, ಇನ್ನು ದೆವಾರನ್ನೇ ಕೆತ್ತುವ ಮಾನವ ತನ್ನ ತಾನು ಕೆತ್ತಿಕೋ ಬೇಕು ಎಷ್ಟೇ ಪೆಟ್ಟಾದರೂ
[6/13, 6:39 PM] ಭುವನ ಬೈಲಹೊಂಗಲ: ಆ ಒತ್ತಡ ಶಾಶ್ವತ ಅಲ್ಲ ಅಲ್ವಾ? ನಾನು ನಿಮ್ಮ ತರ ಯೋಚನೆ ಮಾಡಿದ್ದರೆ ಈ ದಿನ ನಿಮ್ಮ ತಂಗಿಯಾಗಿ ಇರ್ತಾ ಇರಲಿಲ್ಲ.ಮೋಡ ಸರಿದ ಮೇಲೆ ಸೂರ್ಯ ಹೊರಬರಲೇ ಬೇಕು.ನೀವು ಆ ಸೂರ್ಯನ ತರಹ
[6/13, 6:41 PM] ಭುವನ ಬೈಲಹೊಂಗಲ: ನಾವೆಲ್ಲರೂ ಯಾವತ್ತು ನಿಮ್ಮ ಜೊತೆ ಸದಾ ಇದ್ದೆವೆ.
[6/13, 5:28 PM] ಪರ್ವೀನ್ ತಾಜ್: ಸೂಪರ್ ಸರ್
[6/13, 5:28 PM] ಪರ್ವೀನ್ ತಾಜ್: ಕೊನೆಯ ಸಾಲು ಬದಲಾಯಿಸಿ ಸರ್
[6/13, 6:17 PM] ಪರ್ವೀನ್ ತಾಜ್: ಅದು ಎಲ್ಲರ ಜೀವನದಲ್ಲೂ ಇರುತ್ತೆ ಸರ್
ಬೇಜಾರು ಮಾಡಿಕೊಳ್ಳಬೇಡಿ
[6/13, 6:17 PM] ಪರ್ವೀನ್ ತಾಜ್: ಬೇಜಾರಾದಾಗ ಕವಿತೆ ಬರೆಯಿರಿ ಸರ್
[6/13, 6:17 PM] ಪರ್ವೀನ್ ತಾಜ್: ಮನಸ್ಸು ಪ್ರಶಾಂತವಾಗಿರುತ್ತೆ
[6/13, 7:08 PM] ಪರ್ವೀನ್ ತಾಜ್: ನನ್ನ ಬೆಂಬಲ ನಿಮಗೆ ಸದಾ ಇರುತ್ತೆ ಸರ್
No comments:
Post a Comment