*ಭಾವವು ಅರಳಿ*
ಕಾರ್ಮೋಡ ಕವಿದು
ನೆನಪ ಸೋನೆ ಸುರಿದು
ಎದೆ ತಣಿಸಿದೆ ಮುಂಗಾರು
ಮಣ್ಣೊಳಗಿನ ಕನಸು
ಮೊಳಕೆಯೊಡೆಯಲು ಸೊಗಸು
ಬದುಕೆಲ್ಲವು ಹಸಿರುಮಯ
ಒಲವ ತಂಗಾಳಿ ತೀಡಿ
ಮನದ ಪೈರು ನಲಿದಾಡಿ
ಸಂಭ್ರಮಿಸಿದೆ ಹೃದಯ
ಭಾವಗಳ ಹೂವರಳಿ
ಕಲ್ಪನೆಯ ದುಂಬಿ ಬಂದು
ಕವಿತೆ ಹಾಡಿದೆ ಮನಸು
ಖುಷಿಯ ನದಿಯು ಉಕ್ಕಿ
ಸುಖದ ಸರೋವರ ತುಂಬಿ
ನೆಮ್ಮದಿಯ ತಾವರೆ ನಲಿದಿದೆ
ಬದುಕೊಂದು ಪ್ರಕೃತಿ ಧಾಮ
ಅದರ ಚೆಲುವೆ ನಮ್ಮ ಈ ಪ್ರೇಮ
ನೋವೆಂಬುದಿಲ್ಲ ಅನುಬಂಧಕೆ
0631ಪಿಎಂ10062018
*ಅಮು ಭಾವಜೀವಿ*
ಚಿತ್ರದುರ್ಗ
No comments:
Post a Comment