Sunday, June 17, 2018

*ಮುಂಗಾರಿನ ಸ್ಪರ್ಶಕೆ*

ಜಗವೇ ನಲಿಯುತಿದೆ
ಮುಂಗಾರಿನ ಸ್ಪರ್ಶಕೆ
ನದಿ ತೊರೆಗಳು ಉಕ್ಕುತಿವೆ
ಮಳೆ ಬಂದ ಹರ್ಷಕೆ

ಭೂತಾಯಿಯ ಒಡಲೀಗ
ಹಸಿರೊದ್ದು ಸಂಭ್ರಮಿಸಿದೆ
ಜಲಪಾತಗಳ ಆ ಸೌಂದರ್ಯಕೆ
ಇಲ್ಲಿ ಸಾಟಿ ಯಾವುದಿದೆ

ಉರಿ ಬಿಸಿಲು ಮರೆಯಾಗಿ
ತಣ್ಣನೆಯ ಗಾಳಿ ತೀಡಿ
ನವೋನ್ಮೇಶಶಾಲಿಯಾಗಿ
ಪ್ರಕೃತಿ ನಲಿದಿದೆ ನೋಡಿ

ಅಹಂಕಾರ ಅದಕಿಲ್ಲ
ಅಲಂಕಾರವೇ ಅದಕೆಲ್ಲ
ನಿಸರ್ಗದ ಮನೆಯಲ್ಲಿ
ಸ್ವರ್ಗಮಯ ಎಲ್ಲ

ಇಳೆ ಮಳೆಯ ಅನುಬಂಧ
ಸಕಲ ಜೀವಕೂ ಆನಂದ
ಮಳೆಯೇ ಬದುಕಿನ ಆಧಾರ
ಅದು ಇರಲಿ ಹೀಗೆ ನಿರಂತರ

0649ಎಎಂ12062018
*ಅಮು ಭಾವಜೀವಿ*
ಶಶಿ ವಸಂತ ಅವರ ಪ್ರತಿಕ್ರಿಯೆ

ಅಮು ಭಾವಜೀವಿ ಅವರ ಮುಂಗಾರಿನ ಸ್ಪರ್ಶಕೆ....
ಓದಿದ ತಕ್ಷಣ ನಮ್ಮಲಿಹ ಕೊಂಚ ಅಹಂ ಕೂಡ ನಾಚುವಂತ ಕವನ. ಬಹಳ ಸೊಗಸಾಗಿ ಬರೆದಿರುವಿರಿ.👌👌👌

ಪ್ರಕೃತಿಯಲಿ ನಿತ್ಯ ನಡೆಯುವ ಅನೇಕ ವಿಸ್ಮಯಗಳಿಗೆ ಯಾವ ಅಹಂಕಾರವೂ ಇಲ್ಲ.
ನಿಮ್ಮ ಭಾವ ಸುಂದರ.
ಶುಭವಾಗಲಿ🌷🌷🌷🌷

No comments:

Post a Comment