Sunday, November 20, 2022

ಕವನ

ನೀ ಕಲಿಸಿ ಬಿಟ್ಟು ಹೋದ
ಪಾಠದ ಪುಟಗಳು ಈಗ
ಪರೀಕ್ಷೆಯ ತಂದೊಡ್ಡಿವೆ
ನಿರೀಕ್ಷೆಯ ಹುಸಿ ಮಾಡಿವೆ

ನಿನ್ನ ಕುರಿತಾದ ಅದೆಷ್ಟೋ ಸತ್ಯಗಳು 
ನನ್ನಲ್ಲೇ ಹುದುಗಿ ಹೋಗಿವೆ
ನೀ ಮಾಡಿದ ಅವಮಾನಗಳು 
ನನ್ನಲ್ಲಿನ ಸ್ವಾಭಿಮಾನವ ಬಡಿದೆಬ್ಬಿಸಿವೆ

ಭಾವನೆಗಳ ಜೊತೆ ಆಟವಾಡಿ 
ಬದುಕನ್ನೇ ಸಂಕಷ್ಟಕ್ಕೀಡು ಮಾಡಿದೆ
ನಂಬಿಕೆಯ ಕತ್ತು ಹಿಚುಕಿ
ಅಪನಂಬಿಕೆಯಲ್ಲಿ ನೀ ಗೆದ್ದು ಬೀಗಿದೆ

ನಿಮ್ಮೆಲ್ಲ ಕೃತ್ಯಗಳಿಗೂ ಉತ್ತರ
ಕೊಡುವ ಸಮಯ ಬಂದೇ ಬರುವುದು
ಮೇಲಿನವನಿರುವನೆಂಬ ವಿಶ್ವಾಸ
ನನ್ನಲಿನ್ನು ಭರವಸೆಯ ಉಳಿಸಿಹುದು

ನೀ ಹೊರಿಸಿದ ಎಲ್ಲಾ ಆರೋಪಗಳ ಅಂಕ
ಪರದೆ ಸರಿದಾಗ ಸತ್ಯ ತಿಳಿಯುವುದು
ನೀ ಕೊಟ್ಟ ನೋವುಗಳ ಸಹಿಸಿಕೊಂಡಿರುವೆ
ನನ್ನ ಸ್ಥಾನಕ್ಕೆ ನೀ ಬಂದಾಗ ಅರಿವಾಗುವುದು

೧೦೩೭ಪಿಎಕ೨೦೧೧೨೦೨೨
*ಅಮುಭಾವಜೀವಿ ಮುಸ್ಟೂರು*

No comments:

Post a Comment