*ನಾನಾಗ ಬೇಕಿತ್ತು ಮೊಬೈಲ್*
ನಾನಾಗಬೇಕಿತ್ತು ಮೊಬೈಲ್ನನ್ನ ನೋಡಿ ಮಾಡುತ್ತಿದ್ದರೆಲ್ಲ ಸ್ಮೈಲ್
ನಾನೊಂದು ಪುಟ್ಟ ಮಗು
ನನ್ನೊಳಗೆ ಇತ್ತು ಎಷ್ಟೊಂದು ನಗು
ಅಪ್ಪ ಅಮ್ಮನ ಅಕ್ಕರೆಯ ಕೂಸು
ನಾನಾಗಿರಲು ಎಷ್ಟೊಂದು ಸೊಗಸು
ಹಾಗಾಗಲಿಲ್ಲ ನೋಡಿಲ್ಲಿ
ನನ್ನನ್ನು ಕೂಡಿ ಹಾಕಿದರು ಕೋಣೆಯಲ್ಲಿ
ಹಿಡಿದರು ಮೊಬೈಲು ಕೈಯಲ್ಲಿ
ಮುಳುಗಿದರು ಅವರದೇ ಲೋಕದಲ್ಲಿ
ಸಂದೇಶಗಳಿಗೂ ಉತ್ತರಿಸುವರು
ವಿಡಿಯೋ ಕಂಡು ಸ್ಪಂದಿಸುವರು
ಕ್ಷಣವು ಬಿಟ್ಟಿರದೆ ಅಂಟಿಕೊಂಡಿಹರು
ನಿತ್ಯವೂ ಎಷ್ಟೊಂದು ಕಾಳಜಿ ಮಾಡುವರು
ನನ್ನನ್ನು ನೋಡಿ ರೇಗುವರು
ಆಟ ಪಾಠದಿ ನನ್ನೊಂದಿಗೆ ಸೇರದಾದರು
ನಾನಿಲ್ಲದಿದ್ದರೂ ಸಹಿಸುವರು
ಅದು ಕ್ಷಣ ಮರೆಯಾದರೂ ತಲ್ಲಣಿಸುವರು
ಜೀವವಿರುವ ನನಗಿಂತಲೂ
ಜೀವವಿರದ ಮೊಬೈಲೇ ಮೇಲು
ಅದಕ್ಕೆ ನಾನಾಗಬೇಕು ಮೊಬೈಲು
ಆಗ ನನ್ನ ನೋಡಿ ಮಾಡುವರೆಲ್ಲ ಸ್ಮೈಲ್
೦೩೨೫ಪಿಎಂ೧೬೧೦೨೦೧೬
*ಅಮುಭಾವಜೀವಿ ಮುಸ್ಟೂರು*
No comments:
Post a Comment